PES University: ಪಿಇಎಸ್ ವಿಶ್ವವಿದ್ಯಾಲಯದಲ್ಲಿ ʼಆತ್ಮತೃಷಾ -2025ʼ ಉದ್ಘಾಟನೆ
PES University: ಬೆಂಗಳೂರು ನಗರದ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಆತ್ಮತೃಷಾ -2025 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಖ್ಯಾತ ಸಂಗೀತ ನಿರ್ದೇಶಕಿ ಸಿ.ಆರ್. ಬಾಬಿ, ನಟಿ ಅಂಕಿತಾ ಅಮರ್, ʼಬಿಗ್ ಬಾಸ್ʼ ವಿಜೇತ, ನಟ ಶೈನ್ ಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಕುರಿತ ವಿವರ ಇಲ್ಲಿದೆ.


ಬೆಂಗಳೂರು: ಬೆಂಗಳೂರು ನಗರದ ಪಿಇಎಸ್ ವಿಶ್ವವಿದ್ಯಾಲಯದಲ್ಲಿ (PES University) ಆತ್ಮತೃಷಾ -2025 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಜ್ಯೋತಿ ಬೆಳಗಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕಿ ಸಿ.ಆರ್. ಬಾಬಿ, ನಟಿ ಅಂಕಿತಾ ಅಮರ್, ʼಬಿಗ್ ಬಾಸ್ʼ ವಿಜೇತ, ನಟ ಶೈನ್ ಶೆಟ್ಟಿ ಅವರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಖ್ಯಾತ ಸಂಗೀತ ನಿರ್ದೇಶಕಿ ಸಿ.ಆರ್. ಬಾಬಿ ಮಾತನಾಡಿ, ʼಪೆರ್ಸಿಸ್ಟೆನ್ಸ್, ಎಕ್ಸೆಲೆನ್ಸ್ ಅಂಡ್ ಸರ್ವಿಸ್ʼ ಗಳ ಮಹತ್ವದ ಕುರಿತು ಮಾತನಾಡಿದರು. ಬಳಿಕ ನಟಿ ಅಂಕಿತಾ ಅಮರ್ ಮಾತನಾಡಿದರು.
ʼಬಿಗ್ ಬಾಸ್ʼ ವಿಜೇತ, ನಟ ಶೈನ್ ಶೆಟ್ಟಿ ಮಾತನಾಡಿ, ಪಿಇಎಸ್ ವಿಶ್ವವಿದ್ಯಾಲಯದ ಫರ್ಫಾರ್ಮಿಂಗ್ ಆರ್ಟ್ಸ್ ವಿಭಾಗದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ತಮ್ಮ ʼಜಸ್ಟ್ ಮ್ಯಾರೀಡ್ʼ ಸಿನಿಮಾದ ಅನುಭವಗಳನ್ನು ಹಂಚಿಕೊಂಡರು. ಇದೇ ವೇಳೆ ʼಪರವಶನಾದೆನುʼ ಮತ್ತು ʼಅಗರ್ ತುಮ್ ಸಾಥ್ ಹೋʼ ಹಾಡುಗಳನ್ನು ಹಾಡಿ ಎಲ್ಲರನ್ನು ರಂಜಿಸಿದರು.
ಈ ಸುದ್ದಿಯನ್ನೂ ಓದಿ | Statement Belt Fashion: ಸಿಂಪಲ್ ಉಡುಗೆಗಳನ್ನು ಆಕರ್ಷಕವಾಗಿಸುವ ಸ್ಟೇಟ್‌ಮೆಂಟ್ ಬೆಲ್ಟ್ಸ್
ಕಾರ್ಯಕ್ರಮದಲ್ಲಿ ಪಿಇಎಸ್ ವಿಶ್ವವಿದ್ಯಾಲಯದ ಕುಲಪತಿ ಡಾ.ಜೆ. ಸೂರ್ಯಪ್ರಸಾದ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಿಇಎಸ್ ವಿಶ್ವವಿದ್ಯಾಲಯದ ಕುಲಸಚಿವ ಡಾ.ಕೆ.ಎಸ್.ಶ್ರೀಧರ್, ಡಾ.ವಿ.ಕೃಷ್ಣ ಪಾಲ್ಗೊಂಡಿದ್ದರು.