Wednesday, 11th December 2024

ಅಡ್ಡಪಲ್ಲಕ್ಕಿ ಉತ್ಸವ

ಕೊಲ್ಹಾರ: ಪಟ್ಟಣದ ಆರಾಧ್ಯ ದೈವ ರಾಜಗುರು ಹಿರೇಪಟ್ಟದೇವರ ಶೀಲವಂತ ಹಿರೇಮಠದ ಗುರುಸಿದ್ಧೇಶ್ವರ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಉತ್ಸವ ಗುರುವಾರ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಮುಂಜಾನೆ 10 ಗಂಟೆಗೆ ಶ್ರೀಮಠದಿಂದ ಹೊರಟ ಮೆರವಣಿಗೆ ಪಟ್ಟಣದ ಪ್ರಮುಖ ವೃತ್ತಗಳ ಮೂಲಕ ಹಾಯ್ದು ಮರಳಿ ಶ್ರೀಮಠಕ್ಕೆ ಆಗಮಿಸಿತು.
ಮಾರ್ಚ್ 8 ರ ಶುಕ್ರವಾರ ಮುಂಜಾನೆ ರುದ್ರಾಭಿಷೇಕ, 1008 ಶಿವಲಿಂಗಗಳ ದರ್ಶನ, ಸಹಸ್ರ ಮುತೈದೆಯರ ಉಡಿ ತುಂಬುವ ಕಾರ್ಯಕ್ರಮ ಹಾಗೂ 11 ಗಂಟೆಗೆ ಜನ ಜಾಗೃತಿ ಧರ್ಮಸಭೆ ಹಾಗೂ ಮಹಾರಥೋತ್ಸವ ಜರುಗುವುದು.

ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಸಹಿತ ಅನೇಕರು ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.