Viral Video: ಕುಡಿದ ಮತ್ತಿನಲ್ಲಿ ಪೊಲೀಸ್ ಮೇಲೆ ಹಲ್ಲೆ ನಡೆಸಿದ ಕುಡುಕರು; ಕೊನೆಗೆ ಆಗಿದ್ದೇನು?
ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಗಳು ಕರ್ತವ್ಯದಲ್ಲಿದ್ದ ಎಸ್‍ಐ ಅನ್ನು ನಕಲಿ ಪೊಲೀಸ್ ಎಂದು ತಿಳಿದು ಹಲ್ಲೆ ನಡೆಸಿದ್ದಾರೆ. ಅಲ್ಲದೇ ಇದನ್ನು ವಿಡಿಯೊ ಮಾಡಿದ್ದಾರೆ. ಇವರನ್ನು ಪೊಲೀಸರು ಬಂಧಿಸಿ ಸಾರ್ವಜನಿಕವಾಗಿ ಮೆರವಣಿಗೆ ಮಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ.
![police viral news](https://cdn-vishwavani-prod.hindverse.com/media/images/police_viral_news.max-1280x720.jpg)
![Profile](https://vishwavani.news/static/img/user.png)
ಇಂದೋರ್: ಕುಡಿದ ಮತ್ತಿನಲ್ಲಿ ಕುಡುಕರಿಬ್ಬರು ಕರ್ತವ್ಯದಲ್ಲಿದ್ದ ಸಬ್ ಇನ್ಸ್‌ಪೆಕ್ಟರ್‌ಗೆ ಕಿರುಕುಳ ನೀಡಿ ಹಲ್ಲೆ ಮಾಡಿದ ಘಟನೆಯೊಂದು ನಡೆದಿದೆ. ಈ ಆರೋಪದ ಮೇಲೆ ಇಂದೋರ್‌ನ ಬಂಗಂಗಾ ಪೊಲೀಸರು ಗುರುವಾರ(ಫೆಬ್ರವರಿ 6) ಇಬ್ಬರನ್ನು ಬಂಧಿಸಿದ್ದಾರೆ. ಶಂಕಿತರನ್ನು ಆ ಪ್ರದೇಶದಲ್ಲಿ ಸಾರ್ವಜನಿಕವಾಗಿ ಮೆರವಣಿಗೆ ಮಾಡಲಾಯಿತು. ಈ ಮೆರವಣಿಗೆಯ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ. ಕುಡುಕರು ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದನ್ನು ವಿಡಿಯೊ ಮಾಡಿ ಹರಿಬಿಟ್ಟಿದ್ದಾರೆ. ಈ ವಿಡಿಯೊ ಗುರುವಾರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವಿಡಿಯೊದಲ್ಲಿ, ಕುಡಿದು ಟೈಟ್ ಆಗಿದ್ದವರು ಸಬ್ ಇನ್ಸ್‌ಪೆಕ್ಟರ್ ಅನ್ನು ನಕಲಿ ಪೊಲೀಸ್ ಎಂದು ಆರೋಪಿಸಿದ್ದಾರೆ ಮತ್ತು ಸಬ್ ಇನ್ಸ್‌ಪೆಕ್ಟರ್ ಅನ್ನು ಬಲವಂತವಾಗಿ ತಮ್ಮ ಕಾರಿನಲ್ಲಿ ಕರೆದುಕೊಂಡು ಪೊಲೀಸ್ ಠಾಣೆಗೆ ಕರೆದು ಹೋದಾಗ ಅಲ್ಲಿದ್ದ ಪೊಲೀಸರು ಶಾಕ್ ಆಗಿದ್ದಾರೆ. ನಂತರ ಪೊಲೀಸರು ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಿದ್ದಾರೆ.
Indore News: Indore के पुलिस अफसर की पिटाई करने वालों की हुई जमकर खातिरदारी, बीच सड़क पर चिल्ला रहे थे आरोपी !#indore #Viralvideo pic.twitter.com/r4KNApFrs5
— MP Tak (@MPTakOfficial) February 6, 2025
ಮಾಹಿತಿಯ ಪ್ರಕಾರ, ಸಂತ್ರಸ್ತ ಸಬ್ ಇನ್ಸ್‌ಪೆಕ್ಟರ್ ಟಿ.ಇಕ್ಕಾ ಮಂಗಳವಾರ (ಫೆಬ್ರವರಿ 4) ಮಧ್ಯರಾತ್ರಿಯಿಂದ ಬುಧವಾರ ಬೆಳಿಗ್ಗೆ 8 ಗಂಟೆ ತನಕ ಬಂಗಂಗಾ ಪೊಲೀಸ್ ಠಾಣೆ ಪ್ರದೇಶದ ಭೋನ್ಸಲಾ ಗ್ರಾಮದಲ್ಲಿ ಕರ್ತವ್ಯದಲ್ಲಿದ್ದರು. ಮುಂಜಾನೆ 5 ಗಂಟೆ ಸುಮಾರಿಗೆ ಕಾರೊಂದು ಅವರ ಬಳಿ ಬಂದಿತಂತೆ. ಅದರಲ್ಲಿದ್ದ ನಾಲ್ವರು ಪುರುಷರು ಎಸ್ಐ ಅನ್ನು ನಿಂದಿಸಿದ್ದಲ್ಲದೇ, ನಕಲಿ ಪೊಲೀಸ್ ಎಂದು ರಸ್ತೆಯ ಮಧ್ಯದಲ್ಲಿ ಎಸ್‍ಐ ಮೇಲೆ ಹಲ್ಲೆ ನಡೆಸಿ, ವೈರ್ ಲೆಸ್ ಸೆಟ್ ಮತ್ತು ಟೋಪಿಯನ್ನು ಕಸಿದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಇವೆಲ್ಲವನ್ನು ಅವರು ವಿಡಿಯೊ ಮಾಡಿದ್ದಾರೆ.
ನಂತರ ಆರೋಪಿಗಳು ಎಸ್ಐ ಅನ್ನು ಬಲವಂತವಾಗಿ ತಮ್ಮ ಕಾರಿನಲ್ಲಿ ಕರೆದೊಯ್ದು ಬಂಗಂಗಾ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಆದರೆ ಅವರು ಠಾಣೆ ಸಮೀಪಿಸುತ್ತಿದ್ದಂತೆ, ಅವರಲ್ಲಿ ಇಬ್ಬರು ಹೊರಗೆ ಹಾರಿ ಓಡಿಹೋದರು. ಆದರೆ ಪೊಲೀಸರು ಇನ್ನಿಬ್ಬರನ್ನು ಹಿಡಿದಿದ್ದಾರೆ. ಸರ್ಕಾರಿ ಅಧಿಕಾರಿಯ ಮೇಲೆ ಹಲ್ಲೆ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಆರೋಪಿಗಳಾದ ರವಿ, ವಿಕಾಸ್ ದಾಬಿ, ಅರವಿಂದ್ ಮತ್ತು ವಿಕಾಸ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಬಂಗಂಗಾ ಪೊಲೀಸ್ ಠಾಣೆಯ ಉಸ್ತುವಾರಿ ಸಿಯಾರಾಮ್ ಸಿಂಗ್ ಗುರ್ಜರ್ ಖಚಿತಪಡಿಸಿದ್ದಾರೆ. ರವಿ ಮತ್ತು ವಿಕಾಸ್ ಅವರನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಈ ಸುದ್ದಿಯನ್ನೂ ಓದಿ:Viral News: ಡಿಪಾರ್ಟ್‌ಮೆಂಟ್‌ನವರ ಕಿರುಕುಳ ಸಹಿಸಲಾಗದೆ ಸಹಾಯವಾಣಿಗೆ ಕರೆ ಮಾಡಿದ ಪೊಲೀಸ್ ಅಧಿಕಾರಿ
ಪೊಲೀಸ್ ಅಧಿಕಾರಿಗಳ ಕಿರುಕುಳದಿಂದ ತಪ್ಪಿಸಿಕೊಳ್ಳಲು ಪೊಲೀಸ್ ಅಧಿಕಾರಿಯೊಬ್ಬರು 112ಕ್ಕೆ ಕರೆ ಮಾಡಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಝಾನ್ಸಿಯ ಪೊಲೀಸ್ ಲೈನ್‍ನಲ್ಲಿ ನಡೆದಿದೆ. ಪೊಲೀಸ್ ಅಧಿಕಾರಿ ಕರೆ ಮಾಡಿ ಪೊಲೀಸ್ ಲೈನ್‍ನಲ್ಲಿ ಹೈಡ್ರಾಮಾ ಶುರು ಮಾಡಿದ್ದಾರೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್ ಆಗಿತ್ತು.
ಇಲಾಖೆಯ ಹಿರಿಯರು ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮೋಹಿತ್ ಯಾದವ್ ವಿಡಿಯೊದಲ್ಲಿ ಆರೋಪಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅವರು ಅನುಭವಿಸಿದ ಕಷ್ಟವನ್ನು ಹೇಳಿಕೊಂಡಿದ್ದಾರೆ. ಅಪರಾಧ ವಿಭಾಗದಲ್ಲಿ ನಿಯೋಜಿತರಾಗಿರುವ ಇನ್ಸ್‌ಪೆಕ್ಟರ್ ಮೋಹಿತ್ ಯಾದವ್ ಅವರು ಹಿರಿಯ ಅಧಿಕಾರಿಗಳಿಂದ ಕಿರುಕುಳವನ್ನು ಎದುರಿಸಿದ ನಂತರ ಸಹಾಯಕ್ಕಾಗಿ ಡಯಲ್ 112 ಗೆ ಕರೆ ಮಾಡಿದ್ದಾರೆ ಎಂದು ವರದಿಯಾಗಿತ್ತು.