Arvind Kejriwal :ಕೇಜ್ರಿವಾಲ್ ಮನೆ ಮೇಲೆ ಎಸಿಬಿ ರೇಡ್- ಎಲೆಕ್ಷನ್ ರಿಸಲ್ಟ್‌ಗೂ ಮುನ್ನ ಆಪ್‌ಗೆ ಶಾಕ್ !
ಬಿಜೆಪಿ ತಮ್ಮಅಭ್ಯರ್ಥಿಗಳನ್ನು ಸೆಳೆಯಲು ಪ್ರಯತ್ನಿಸುತ್ತಿದೆ ಎಂಬ ಆಮ್ ಆದ್ಮಿ ಪಕ್ಷದ ಆರೋಪದ ಬಗ್ಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಇಂದು ತನಿಖೆಗೆ ಅನುಮತಿ ನೀಡಿದ್ದು, ತನಿಖೆಗೆ ಆದೇಶಿಸಿದ ಕೆಲವೇ ಗಂಟೆಗಳಲ್ಲಿ ಎಸಿಬಿ ಅಧಿಕಾರಿಗಳು ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಮೇಲೆ ದಾಳಿ ನಡೆದಿದೆ.
![Arvind kejriwal (1)](https://cdn-vishwavani-prod.hindverse.com/media/images/Arvind_kejriwal_1.max-1280x720.jpg)
![Profile](https://vishwavani.news/static/img/user.png)
ನವದೆಹಲಿ: ದೆಹಲಿಯಲ್ಲಿ ಫೆ. 5 ರಂದು ಚುನಾವಣೆ ನಡೆದಿದ್ದು, ಫಲಿತಾಂಶಕ್ಕೂ ಮುನ್ನವೇ ಹೈಡ್ರಾಮಾ ನಡೆಯುತ್ತಿದೆ. ಫೆಬ್ರವರಿ 8ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣಾ ಮತಎಣಿಕೆಗೂ ಮುಂಚಿತವಾಗಿ ಬಿಜೆಪಿ ತಮ್ಮ ಅಭ್ಯರ್ಥಿಗಳನ್ನು ಸೆಳೆಯಲು ಪ್ರಯತ್ನಿಸುತ್ತಿದೆ ಎಂಬ ಆಮ್ ಆದ್ಮಿ ಪಕ್ಷದ (AAP) ಆರೋಪದ ಬಗ್ಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಇಂದು ತನಿಖೆಗೆ ಅನುಮತಿ ನೀಡಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳದ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಶುಕ್ರವಾರ ಶಿಫಾರಸು ಮಾಡಿದ್ದಾರೆ . ಎಸಿಬಿ ತನಿಖೆಗೆ ಆದೇಶಿಸಿದ ಕೆಲವೇ ಗಂಟೆಗಳಲ್ಲಿ ಎಸಿಬಿ ಅಧಿಕಾರಿಗಳು ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ನಿವಾಸದ ಮೇಲೆ ದಾಳಿ ನಡೆದಿದೆ.
ದೆಹಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಷ್ಣು ಮಿತ್ತಲ್ ಅವರು ಲೆಫ್ಟಿನೆಂಟ್ ಗವರ್ನರ್ ಕಚೇರಿಗೆ ಸಲ್ಲಿಸಿದ ದೂರಿನ ಆಧಾರದ ಮೇಲೆ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಅವರು ದೆಹಲಿ ಪೊಲೀಸರ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ತನಿಖೆ ಮಾಡುವಂತೆ ನಿರ್ದೇಶಿಸಿದ್ದರು. ಅಧಿಕಾರಿಗಳು ಮನೆಯ ಬಳಿ ತೆರಳುತ್ತಿದ್ದಂತೆ ಕೇಜ್ರಿವಾಲ್ ನಿವಾಸದ ಎದುರು ಹೈಡ್ರಾಮಾ ನಡೆದಿದೆ. ಅವರು ಅಧಿಕಾರಿಗಳಿಗೆ ಮನೆ ಪ್ರವೇಶಿಸಲು ನಿರಾಕರಿಸಿದ್ದರು ಎಂದು ವರದಿಯಾಗಿದೆ.
#Breaking LG orders investigation into the allegations by Kejriwal, Sanjay Singh and Mukesh Ahlawat of buying MLA in 15 Crore.
— Stranger (@amarDgreat) February 7, 2025
Anti-Corruption Bureau (ACB) team arrives at AAP national convenor Arvind Kejriwal's residence.
Kejriwal will not only lose election but invited one… pic.twitter.com/5czDhmFzeJ
ಈ ಸುದ್ದಿಯನ್ನೂ ಓದಿ: Delhi Election 2025: ಅರವಿಂದ್ ಕೇಜ್ರಿವಾಲ್ ಕಾರಿನ ಮೇಲೆ ಬಿಜೆಪಿಯಿಂದ ದಾಳಿ; ಆಪ್ ಆರೋಪಕ್ಕೆ ಕೇಸರಿ ಪಡೆ ತಿರುಗೇಟು
कुछ एजेंसीज दिखा रही हैं कि गाली गलौज पार्टी की 55 से ज़्यादा सीट आ रही हैं।
— Arvind Kejriwal (@ArvindKejriwal) February 6, 2025
पिछले दो घंटे में हमारे 16 उम्मीदवारों के पास फ़ोन आ गए हैं कि “आप” छोड़ के उनकी पार्टी में आ जाओ, मंत्री बना देंगे और हरेक को 15-15 करोड़ देंगे।
अगर इनकी पार्टी की 55 से ज़्यादा सीटें आ रहीं हैं तो…
ಬಿಜೆಪಿ 16 ಅಭ್ಯರ್ಥಿಗಳನ್ನು ಸಚಿವರನ್ನಾಗಿ ಮಾಡಲು 15 ಕೋಟಿ ರೂ.ಗಳ ಆಮಿಷ ಒಡ್ಡಿದೆ ಎಂದು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಸಾಮಾಜಿಕ ಜಾಲತಾಣವಾದ ಎಕ್ಸ್ನಲ್ಲಿ ಆರೋಪಿಸಿದ್ದರು. ಈ ಮೊದಲು ಏಳು ಎಎಪಿ ಅಭ್ಯರ್ಥಿಗಳಿಗೆ ಪಕ್ಷ ಬದಲಾಯಿಸಲು ಬಿಜೆಪಿ ತಲಾ 15 ಕೋಟಿ ರೂ.ಗಳನ್ನು ನೀಡಿದೆ ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಸಂಜಯ್ ಸಿಂಗ್ ಹೇಳಿದ್ದರು.