virat kohli injury: ದ್ವಿತೀಯ ಪಂದ್ಯಕ್ಕೂ ಕೊಹ್ಲಿ ಅನುಮಾನ?
Virat Kohli: ಕೆಲ ಮೂಲಗಳ ಪ್ರಕಾರ ಕೊಹ್ಲಿ ಫೆ. 9 ರಂದು ಕಟಕ್‌ನಲ್ಲಿ ನಡೆಯುವ ಪಂದ್ಯಕ್ಕೂ ಮುನ್ನ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಆಗಮಿಸಿ ಸ್ಕ್ಯಾನಿಂಗ್‌ಗೆ ಒಳಪಡುವ ಸಾಧ್ಯತೆಗಳಿವೆ. ನಂತರ ಸರಣಿಯ ಮುಂದಿನ ಪಂದ್ಯಗಳಿಗೆ ತಂಡ ಕೂಡಿಕೊಳ್ಳುವ ನಿರೀಕ್ಷೆಯಿದೆ.
ನವದೆಹಲಿ: ಅಭ್ಯಾಸದ ವೇಳೆ ಮೊಣಕಾಲಿನ ಗಾಯದ ಸಮಸ್ಯೆಗೆ ತುತ್ತಾಗಿ ಇಂಗ್ಲೆಂಡ್(IND vs ENG) ವಿರುದ್ಧದ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ಭಾರತ ತಂಡದ ತಾರಾ ಬ್ಯಾಟರ್ ವಿರಾಟ್ ಕೊಹ್ಲಿ(virat kohli injury) ಫಿಟ್ ಆಗಿದ್ದರೂ ದ್ವಿತೀಯ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಕೆಲವೇ ದಿನಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಇರುವ ಕಾರಣದಿಂದ ಬಿಸಿಸಿಐ ಕೊಹ್ಲಿಯನ್ನು ಆತುರದಲ್ಲಿ ಆಡಿಸದಿರಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಬುಧವಾರ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸದ ವೇಳೆ ಕೊಹ್ಲಿ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದರು.
ಗುರುವಾರ ನಡೆದಿದ್ದ ಪಂದ್ಯದ ವೇಳೆ ಕೊಹ್ಲಿ ಕಾಲಿಗೆ ನೋವು ನಿವಾರಕ ಬ್ಯಾಂಡೇಜ್ ಸುತ್ತಿಕೊಂಡು ಡ್ರಸ್ಸಿಂಗ್ ರೋಮ್‌ನಲ್ಲಿ ಕುಳಿತ್ತಿದ್ದರು. ಕೋಚ್ ಗೌತಮ್ ಗಂಭೀರ್ ಮತ್ತು ಫಿಸಿಯೊ ಕಮಲೇಶ್ ಜೈನ್ ಜತೆಯೂ ಕೊಹ್ಲಿ ದೀರ್ಘ ಚರ್ಚೆ ನಡೆಸಿದ್ದರು. ಕೆಲ ಮೂಲಗಳ ಪ್ರಕಾರ ಕೊಹ್ಲಿ ಫೆ. 9 ರಂದು ಕಟಕ್‌ನಲ್ಲಿ ನಡೆಯುವ ಪಂದ್ಯಕ್ಕೂ ಮುನ್ನ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಆಗಮಿಸಿ ಸ್ಕ್ಯಾನಿಂಗ್‌ಗೆ ಒಳಪಡುವ ಸಾಧ್ಯತೆಗಳಿವೆ. ನಂತರ ಸರಣಿಯ ಮುಂದಿನ ಪಂದ್ಯಗಳಿಗೆ ತಂಡ ಕೂಡಿಕೊಳ್ಳುವ ನಿರೀಕ್ಷೆಯಿದೆ.
ಕೊಹ್ಲಿ ಗಾಯದ ಬಗ್ಗೆ ಮೊದಲ ಪಂದ್ಯದ ಬಳಿಕ ಮಾಹಿ ನೀಡಿದ್ದ ಶುಭಮನ್ ಗಿಲ್, 'ಕೊಹ್ಲಿಗೆ ಯಾವುದೇ ಗಂಭೀರ ಸ್ವರೂಪದ ಗಾಯವಾಗಿಲ್ಲ. ಹೀಗಾಗಿ ಅಭಿಮಾನಿಗಳು ಚಿಂತಿಸುವ ಅಗತ್ಯವಿಲ್ಲ. ಸ್ವಲ್ಪ ಮೊಣಕಾಲಿನ ಊತ ಕಾಣಿಸಿಕೊಂಡಿದೆ. ಅವರು ಖಂಡಿತವಾಗಿಯೂ ಎರಡನೇ ಏಕದಿನ ಪಂದ್ಯಕ್ಕೆ ಮರಳಲಿದ್ದಾರೆ' ಎಂದು ಡಿಸ್ನಿ-ಹಾಟ್‌ಸ್ಟಾರ್‌ಗೆ ತಿಳಿಸಿದ್ದರು.
ಭಾರತ ತಂಡ 444 ದಿನಗಳ ನಂತರ ತವರಿನಲ್ಲಿ ಆಡಿದ ಮೊದಲ ಏಕದಿನ ಪಂದ್ಯವಾಗಿದ್ದರಿಂದ ಕೊಹ್ಲಿಯ ಆಟ ನೋಡಲು ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಸ್ಟೇಡಿಯಂಗೆ ಆಗಮಿಸಿದ್ದರು. ಆದರೆ ಕೊಹ್ಲಿ ಆಡದ ಕಾರಣ ಇವರೆಲ್ಲ ಬೇಸರಗೊಂಡರು. ಪಂದ್ಯ ಮುಕ್ತಾಯದ ಬಳಿಕ ಅನೇಕ ಪ್ರೇಕ್ಷಕರು ನಿರಾಸೆಯಲ್ಲಿ ಮಾತನಾಡಿದ ವಿಡಿಯೊ ಕೂಡ ವೈರಲ್ ಆಗಿದೆ.
ಇದನ್ನೂ ಓದಿ IND vs ENG: ಶುಭಮನ್ ಗಿಲ್ ಅಲ್ಲ! ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಲು ಚಿಂತನೆ!
ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಗುರುವಾರ ನಡೆದಿದ್ದ ಮೊದಲನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ ತಂಡ, 47.4 ಓವರ್‌ಗಳಿಗೆ 248 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಆ ಮೂಲಕ ಎದುರಾಳಿ ಭಾರತ ತಂಡಕ್ಕೆ 249 ರನ್‌ಗಳ ಗುರಿಯನ್ನು ನೀಡಿತ್ತು. ಗುರಿ ಹಿಂಬಾಲಿಸಿದ ಭಾರತ ತಂಡ, ಮೂವರು ಬ್ಯಾಟ್ಸ್‌ಮನ್‌ಗಳ ಅರ್ಧಶತಕಗಳ ಬಲದಿಂದ 38.4 ಓವರ್‌ಗಳಿಗೆ 251 ರನ್‌ಗಳನ್ನು ಗಳಿಸಿ ಗೆಲುವಿನ ಗಡಿ ದಾಟಿತು.