Viral Video: ದೊಡ್ಡ ದೊಡ್ಡ ಬ್ಯಾನರ್ಸ್, ತೆರೆದ ಜೀಪಿನಲ್ಲಿ ರ್ಯಾಲಿ- ಬೀದಿ ಶ್ವಾನಕ್ಕೆ ಭರ್ಜರಿ ಬರ್ತ್ ಡೇ ಭಾಗ್ಯ! ವಿಡಿಯೊ ನೋಡಿ
ಮಧ್ಯಪ್ರದೇಶದ ದೇವಾಸ್‍ನಲ್ಲಿ ಯುವಕರ ಗುಂಪೊಂದು ಬೀದಿ ನಾಯಿಯ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿದೆ. ಅಷ್ಟೇ ಅಲ್ಲದೇ ನಾಯಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುವ ದೊಡ್ಡ ಹೋರ್ಡಿಂಗ್‍ಗಳನ್ನು ಸಹ ಹಾಕಿದ್ದಾರೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿ ಅನೇಕರ ಹೃದಯ ಗೆದ್ದಿದೆ.
![Dog birthday](https://cdn-vishwavani-prod.hindverse.com/media/images/Dog_birthday.max-1280x720.jpg)
![Profile](https://vishwavani.news/static/img/user.png)
ಸಾಮಾನ್ಯವಾಗಿ ಸಾಕು ಪ್ರಾಣಿಗಳನ್ನು ಅತ್ಯಂತ ಪ್ರೀತಿಯಿಂದ ಕಾಣುವವರು ಬಹಳಷ್ಟು ಜನರಿದ್ದಾರೆ. ತಾವು ಸಾಕಿದ ಪ್ರಾಣಿಗಳನ್ನು ತಮ್ಮ ಮನೆಯ ಸದಸ್ಯರಂತೆ ಕಾಣುವವರಿದ್ದಾರೆ. ಆದರೆ ಇಲ್ಲೊಬ್ಬ ಯುವಕ ಬೀದಿ ನಾಯಿಯ ಬರ್ತ್ ಡೇ ಮಾಡಿದ್ದಾನೆ. ಇಲ್ಲೊಂದು ಬೀದಿ ನಾಯಿಗೆ ಯುವಕರ ದೊಡ್ಡ ಅಭಿಮಾನಿ ಬಳಗವೇ ಇದೆ. ಈ ಅಭಿಮಾನಿಗಳಿಂದ ಪ್ರತಿ ವರ್ಷವೂ ಈ ಬೀದಿ ನಾಯಿಯ ಅದ್ದೂರಿ ಬರ್ತ್ ಡೇ ಆಚರಣೆ ಆಗುತ್ತೆ. ಈ ಬಾರಿಯೂ ನಾಯಿಯ ಕೇಕ್ ಕತ್ತರಿಸಿ, ತೆರೆದ ಜೀಪಿನಲ್ಲಿ ಮದುವೆ ಸಂಭ್ರಮದಂತೆ ಮೆರವಣಿಗೆ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ವೈರಲ್ ಆಗಿದೆ.
ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಅಂಶು ಚೌಹಾಣ್ ಪೋಸ್ಟ್ ಮಾಡಿದ ವಿಡಿಯೊ ಸಿಕ್ಕಾಪಟ್ಟೆ ವೈರಲ್ ಆಗಿದೆ.ಈ ವಿಡಿಯೊದಲ್ಲಿ ಅವರು ನಾಯಿಯನ್ನು ಜೀಪ್‍ನಲ್ಲಿ ಕೂರಿಸಿಕೊಂಡು ನಗರದ ಸುತ್ತಲೂ ಕರೆದೊಯ್ಯುವುದು ಕೂಡ ಸೆರೆಯಾಗಿತ್ತು. ನಾಯಿಯ ಕುತ್ತಿಗೆಗೆ ಹೂವಿನ ಹಾರವನ್ನು ಹಾಕಿದ ಯುವಕರ ಗುಂಪು ಕೇಕ್ ಕತ್ತರಿಸಿ ನಾಯಿಗೆ ತಿನ್ನಿಸಿ ತಮ್ಮ ಪ್ರೀತಿಯ ನಾಯಿಗಾಗಿ ಹುಟ್ಟುಹಬ್ಬದ ಹಾಡನ್ನು ಹಾಡಿದ್ದಾರೆ. ಈ ವಿಡಿಯೊಗೆ "ಲುಡೋ ಭಾಯ್‍ಯ ಹುಟ್ಟುಹಬ್ಬದ ಆಚರಣೆ" ಎಂದು ಶೀರ್ಷಿಕೆ ನೀಡಿದ್ದಾರೆ.
ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಅಂಶು ಚೌಹಾಣ್ ಪೋಸ್ಟ್ ಮಾಡಿದ ವಿಡಿಯೊ ಸಿಕ್ಕಾಪಟ್ಟೆ ವೈರಲ್ ಆಗಿದೆ.ಈ ವಿಡಿಯೊದಲ್ಲಿ ಅವರು ನಾಯಿಯನ್ನು ಜೀಪ್‍ನಲ್ಲಿ ಕೂರಿಸಿಕೊಂಡು ನಗರದ ಸುತ್ತಲೂ ಕರೆದೊಯ್ಯುವುದು ಕೂಡ ಸೆರೆಯಾಗಿತ್ತು.ನಾಯಿಯ ಕುತ್ತಿಗೆಗೆ ಹೂವಿನ ಹಾರವನ್ನು ಹಾಕಿದ ಯುವಕರ ಗುಂಪು ಕೇಕ್ ಕತ್ತರಿಸಿ ನಾಯಿಗೆ ತಿನ್ನಿಸಿ ತಮ್ಮ ಪ್ರೀತಿಯ ನಾಯಿಗಾಗಿ ಹುಟ್ಟುಹಬ್ಬದ ಹಾಡನ್ನು ಹಾಡಿದ್ದಾರೆ. ಈ ವಿಡಿಯೊಗೆ "ಲುಡೋ ಭಾಯ್‍ಯ ಹುಟ್ಟುಹಬ್ಬದ ಆಚರಣೆ" ಎಂದು ಶೀರ್ಷಿಕೆ ನೀಡಿದ್ದಾರೆ.
ನಾಯಿಯ ಬಗ್ಗೆ ಅವರಿಗಿರುವ ವಿಶೇಷ ಭಾವನೆಯನ್ನು ಕಂಡು ನೆಟ್ಟಿಗರು ಖುಷಿಯಾಗಿದ್ದಾರೆ. ಅನೇಕರು "ಲುಡೋ ಭಾಯ್" ಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಇನ್ನೊಬ್ಬರು, “ಈ ಹುಡುಗರಿಗೆ ನನ್ನ ಹೃದಯಾಳದಿಂದ ನಮಸ್ಕರಿಸುತ್ತೇನೆ” ಎಂದಿದ್ದಾರೆ, ಮತ್ತೊಬ್ಬರು "ಲುಡೋ ಭಾಯ್ ಜಿಂದಾಬಾದ್" ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ತ್ರಿವೇಣಿ ಸಂಗಮದಲ್ಲಿ ಸಾಕು ನಾಯಿಗೆ ʻಪವಿತ್ರ ಸ್ನಾನ' ಮಾಡಿಸಿದ ವ್ಯಕ್ತಿ; ವಿಡಿಯೊ ನೋಡಿ ನೆಟ್ಟಿಗರು ಫುಲ್ ಫಿದಾ!
ತ್ರಿವೇಣಿ ಸಂಗಮದಲ್ಲಿ ವ್ಯಕ್ತಿಯೊಬ್ಬರು ತಮ್ಮ ಸಾಕು ನಾಯಿಯನ್ನು ಪ್ರಯಾಗ್‌ರಾಜ್‌ನ ಪವಿತ್ರ ನೀರಿನಲ್ಲಿ ಸ್ನಾನ ಮಾಡಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅವರಿಗಿದ್ದ ಪ್ರಾಣಿಪ್ರೇಮವನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. ಸೂಫಿ ಅರೋರಾ ಎಂಬ ವ್ಯಕ್ತಿ ತನ್ನ ಸಾಕುನಾಯಿಯನ್ನು ಹಿಡಿದುಕೊಂಡು ಗಂಗಾ, ಯಮುನಾ ಮತ್ತು ಸರಸ್ವತಿ ಎಂಬ ಮೂರು ಪವಿತ್ರ ನದಿಗಳ ಸಂಗಮದಲ್ಲಿ ಸ್ನಾನ ಮಾಡಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಅರೋರಾ ಅಲ್ಲಿ ತನ್ನ ನಾಯಿಯೊಂದಿಗೆ ಸ್ನಾನ ಮಾಡುವುದನ್ನು ನೋಡಿ ಅಲ್ಲಿದ್ದ ಜನರು ಕೂಡ ಖುಷಿಪಟ್ಟಿದ್ದಾರೆ.ವಿಡಿಯೊದಲ್ಲಿ ಅರೋರಾ ತನ್ನ ನಾಯಿಯನ್ನು ಒಂದು ಕೈಯಲ್ಲಿ ಹಿಡಿದುಕೊಂಡು ಇನ್ನೊಂದು ಕೈಯನ್ನು ಮೇಲಕ್ಕೆತ್ತಿ ನೀರಿನಲ್ಲಿ ಒಂದು ಮುಳುಗು ಹಾಕಿದ್ದಾನೆ. ತ್ರಿವೇಣಿ ಸಂಗಮದಲ್ಲಿ ನಾಯಿಯ ಜೊತೆ ಸ್ನಾನ ಮಾಡುವ ಮೂಲಕ ತನ್ನ ಸಾಕು ನಾಯಿ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾನೆ.
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸೂಫಿ ಅರೋರಾ ನಾಯಿ ಕ್ಯಾಮಿ ಕುಂಭ ಉತ್ಸವದಲ್ಲಿ ಭಾಗವಹಿಸುತ್ತಿರುವುದನ್ನು ತೋರಿಸುವ ವಿಡಿಯೊಗಳು ನೆಟ್ಟಿಗರ ಹೃದಯವನ್ನು ಗೆದ್ದಿತ್ತು. ಶ‍್ವಾನ ಪ್ರಿಯರು ಕಾಮೆಂಟ್ ವಿಭಾಗದಲ್ಲಿ ಹಾರ್ಟ್ ಎಮೋಜಿಗಳೊಂದಿಗೆ ಕಾಮೆಂಟ್ ಮಾಡಿದ್ದಾರೆ ಮತ್ತು ತನ್ನ ಸಾಕುಪ್ರಾಣಿಯನ್ನು ಮಹಾ ಕುಂಭಕ್ಕೆ ಕರೆದೊಯ್ದಿದ್ದಕ್ಕಾಗಿ ವ್ಯಕ್ತಿಯನ್ನು ಹೊಗಳಿದ್ದಾರೆ.