Champions Trophy Anthem Song: ಚಾಂಪಿಯನ್ಸ್ ಟ್ರೋಫಿಯ ಅಧಿಕೃತ ಥೀಮ್ ಸಾಂಗ್ ಬಿಡುಗಡೆ
Champions Trophy Anthem Song: ಭಾರತ ಮತ್ತು ಪಾಕಿಸ್ತಾನ ಎರಡೂ ದೇಶದಲ್ಲಿಯೂ ಅತಿಫ್ ಅಸ್ಲಾಮ್‌ಗೆ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಅತ್ಯಂತ ಜನಪ್ರಿಯ ಬಾಲಿವುಡ್ ಹಿಟ್‌ಗಳಲ್ಲಿ ಆದತ್ (ಕಲಿಯುಗ್), ಪೆಹ್ಲಿ ನಜರ್ ಮೇ ಮತ್ತು ಅಲ್ಲಾ ದುಹೈ (ರೇಸ್), ಹಾಗೆಯೇ ದಿಲ್ ದಿಯಾನ್ ಗಲ್ಲನ್ (ಟೈಗರ್ ಜಿಂದಾ ಹೈ) ಸೇರಿವೆ.
![Champions Trophy hype](https://cdn-vishwavani-prod.hindverse.com/media/images/Champions_Trophy_hype.max-1280x720.jpg)
![Profile](https://vishwavani.news/static/img/user.png)
ದುಬೈ: ಫೆ.19 ರಿಂದ ಪಾಕಿಸ್ತಾನದ ಆತಿಥ್ಯದಲ್ಲಿ ಆರಂಭವಾಗಲಿರುವ ಪ್ರತಿಷ್ಠಿತ ಆರಂಭವಾಗಲಿರುವ ಪ್ರತಿಷ್ಠಿತ ಚಾಂಪಿಯನ್ಸ್ ಟ್ರೋಫಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಧ್ಯೇಯ ಗೀತೆಯನ್ನು (ಥೀಮ್ ಸಾಂಗ್) ಬಿಡುಗಡೆಗೊಳಿಸಿದೆ. 'ಜೀತೋ ಬಾಜಿ ಖೇಲ್ ಕೆ' ಎಂಬುದು ಈ ಹಾಡಿನ(Champions Trophy Anthem Song) ಶೀರ್ಷಿಕೆ. ಪಾಕಿಸ್ತಾನದ ಖ್ಯಾತ ಗಾಯಕ ಅತಿಫ್ ಅಸ್ಲಾಮ್ ಈ ಹಾಡನ್ನು ಹಾಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಎರಡೂ ದೇಶದಲ್ಲಿಯೂ ಅತಿಫ್ ಅಸ್ಲಾಮ್‌ಗೆ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಅತ್ಯಂತ ಜನಪ್ರಿಯ ಬಾಲಿವುಡ್ ಹಿಟ್‌ಗಳಲ್ಲಿ ಆದತ್ (ಕಲಿಯುಗ್), ಪೆಹ್ಲಿ ನಜರ್ ಮೇ ಮತ್ತು ಅಲ್ಲಾ ದುಹೈ (ರೇಸ್), ಹಾಗೆಯೇ ದಿಲ್ ದಿಯಾನ್ ಗಲ್ಲನ್ (ಟೈಗರ್ ಜಿಂದಾ ಹೈ) ಸೇರಿವೆ.
'ನಾನು ಕ್ರಿಕೆಟ್ ಅನ್ನು ತುಂಬಾ ಇಷ್ಟಪಡುತ್ತೇನೆ. ವೇಗದ ಬೌಲರ್ ಆಗಲು ನಾನು ಬಯಸುತ್ತೇನೆ. ಆಟದ ಬಗ್ಗೆ ಉತ್ಸಾಹ ಮತ್ತು ತಿಳುವಳಿಕೆಯನ್ನು ಹೊಂದಿರುವ ನಾನು ಪ್ರೇಕ್ಷಕರ ಚೀಯರ್ಸ್ ಕೇಳಲು ಇಷ್ಟಪಡುತ್ತೇನೆ. ನಾನು ಪಂದ್ಯಗಳಿಗಾಗಿ ಕಾಯುತ್ತಿದ್ದೆ, ವಿಶೇಷವಾಗಿ ಭಾರತ ಮತ್ತು ಪಾಕಿಸ್ತಾನದ ಪಂದ್ಯ. ಈ ಪಂದ್ಯ ಯಾವಾಗಲೂ ಭಾವನೆಗಳು ಮತ್ತು ಭಾವನಾತ್ಮಕ ಮೌಲ್ಯದಿಂದ ಕೂಡಿರುತ್ತದೆ. ಅದಕ್ಕಾಗಿಯೇ ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ 2025 ಅಧಿಕೃತ ಹಾಡಿನ ಭಾಗವಾಗಲು ನಾನು ತುಂಬಾ ಉತ್ಸುಕನಾಗಿದ್ದೇನೆ' ಎಂದು ಅತೀಫ್ ಅಸ್ಲಾಮ್ ಹೇಳಿದ್ದಾರೆ.
The wait is over! 🎉
— ICC (@ICC) February 7, 2025
Sing along to the official song of the #ChampionsTrophy, Jeeto Baazi Khel Ke, featuring the master of melody @itsaadee 🎶🏆 pic.twitter.com/KzwwylN8ki
19 ದಿನಗಳ ಕಾಲ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಫೆಬ್ರವರಿ 19ರಂದು ಹಾಲಿ ಚಾಂಪಿಯನ್ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಕರಾಚಿಯಲ್ಲಿ ಉದ್ಘಾಟನಾ ಪಂದ್ಯ ಆಡುವ ಮೂಲಕ ಪಂದ್ಯಾವಳಿಗೆ ಚಾಲನೆ ಸಿಗಲಿದೆ.
ಭಾರತ ಒಳಗೊಂಡ 3 ಲೀಗ್ ಪಂದ್ಯಗಳು ಮತ್ತು ಒಂದು ಸೆಮಿಫೈನಲ್ ಪಂದ್ಯ ದುಬೈನಲ್ಲಿ ನಿಗದಿಯಾಗಿದೆ. ಟೂರ್ನಿಯ ಉಳಿದ 9 ಲೀಗ್ ಮತ್ತು ಇನ್ನೊಂದು ಸೆಮಿಫೈನಲ್ ಪಂದ್ಯ ಪಾಕಿಸ್ತಾನದ ಕರಾಚಿ, ರಾವಲ್ಪಿಂಡಿ ಮತ್ತು ಲಾಹೋರ್ನಲ್ಲಿ ನಿಗದಿಯಾಗಿವೆ.
ಇದನ್ನೂ ಓದಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದ ಕಮಿನ್ಸ್, ಹ್ಯಾಜಲ್‌ವುಡ್
2ನೇ ಸೆಮಿಫೈನಲ್ ಮಾರ್ಚ್ 2ರಂದು ಲಾಹೋರ್ನಲ್ಲಿ ನಿಗದಿಯಾಗಿದೆ. ಟೂರ್ನಿಯಲ್ಲಿ ಆಡುವ 8 ತಂಡಗಳನ್ನು ತಲಾ 4ರಂತೆ 2 ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ರೌಂಡ್ ರಾಬಿನ್ ಲೀಗ್ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್ಗೇರಲಿವೆ. ಭಾರತದ ಪಂದ್ಯಗಳು ತಟಸ್ಥ ತಾಣವಾದ ದುಬೈನಲ್ಲಿ ನಡೆಯಲಿದೆ.