Viral Video: ನಾಯಿಯ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದ ಕಿಡಿಗೇಡಿ ಚಾಲಕ; ನೆಟ್ಟಿಗರಿಂದ ಆಕ್ರೋಶ
ಮಲಗಿದ್ದ ನಾಯಿಯನ್ನು ಹಿಂಸಾತ್ಮಕವಾಗಿ ಕೊಂದರೂ ಒಂಚೂರೂ ಪಶ್ಚಾತಾಪವಿಲ್ಲದೆ ಕಾರು ಚಾಲಕನು ಸ್ಥಳೀಯರೊಂದಿಗೆ ವಾಗ್ವಾದ ನಡೆಸುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಈ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಮುಗ್ದ ಜೀವಿಯ ಪ್ರಾಣಕ್ಕೆ ಕುತ್ತು ತಂದ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಮನವಿ ಮಾಡಿಕೊಂಡಿದ್ದಾರೆ.

dog viral video

ಹೊಸದಿಲ್ಲಿ: ಮಲಗಿದ್ದ ಬೀದಿ ನಾಯಿಯ ಮೇಲೆ ದುಷ್ಕರ್ಮಿಯೊಬ್ಬ ಕಾರು ಹತ್ತಿಸಿ ಕ್ರೌರ್ಯ ಮೆರೆದ ಘಟನೆ ದಿಲ್ಲಿಯಲ್ಲಿ ನಡೆದಿದೆ. ಈ ಕೃತ್ಯವನ್ನು ಕಾರು ಚಾಲಕನು ಉದ್ದೇಶ ಪೂರ್ವಕವಾಗಿಯೇ ಮಾಡಿದ್ದು, ಬೀದಿ ನಾಯಿಯು ನರಳಾಡಿ ಕೊನೆಯುಸಿರೆಳೆದಿದೆ. ಮಲಗಿದ್ದ ನಾಯಿಯನ್ನು ಹಿಂಸಾತ್ಮಕವಾಗಿ ಕೊಂದರೂ ಒಂಚೂರೂ ಪಶ್ಚಾತಾಪವಿಲ್ಲದೆ ಕಾರು ಚಾಲಕನು ಸ್ಥಳೀಯರೊಂದಿಗೆ ವಾಗ್ವಾದ ನಡೆಸುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಈ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ (Viral Video). ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಯಾಗಿದ್ದು ಮುಗ್ದ ಜೀವಿಯ ಪ್ರಾಣಕ್ಕೆ ಕುತ್ತು ತಂದ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಮನವಿ ಮಾಡಿಕೊಂಡಿದ್ದಾರೆ.
ಬೀದಿ ನಾಯಿಯ ಮೇಲೆ ಕಾರು ಹತ್ತಿಸಿ ಅಮಾನವೀಯವಾಗಿ ನಡೆಸಿಕೊಳ್ಳುವ ಸಾಕಷ್ಟು ಘಟನೆಗಳು ಇತ್ತೀಚೆಗೆ ನಡೆಯುತ್ತಿವೆ. ಅದೇ ರೀತಿ ಇಲ್ಲೂ ರಸ್ತೆ ಪಕ್ಕದಲ್ಲಿ ತನ್ನ ಪಾಡಿಗೆ ಮಲಗಿದ್ದ ನಾಯಿಯ ಮೇಲೆ ಕಾರು ಹತ್ತಿಸಿ ಈ ವ್ಯಕ್ತಿ ದರ್ಪ ಮೆರೆದಿದ್ದಾನೆ. ಈ ವೇಳೆ ಕಾರಿನ ಚಕ್ರಕ್ಕೆ ಸಿಕ್ಕ ನಾಯಿಯು ಒದ್ದಾಡಿ ಸ್ಥಳ ದಲ್ಲೇ ಪ್ರಾಣಬಿಟ್ಟಿದೆ. ಬೀದಿ ನಾಯಿಯಾದ ಕಾರಣ ಈ ಬಗ್ಗೆ ಯಾರು ಧ್ವನಿ ಎತ್ತುವುದಿಲ್ಲ ಎಂದು ಭಾವಿಸಿದ್ದ ವ್ಯಕ್ತಿಯನ್ನು ಮಹಿಳೆಯೊಬ್ಬರು ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ನಿನಗೆ ನಾಯಿ ಕಾಣಿಸುತ್ತಿಲ್ವಾ? ನೀನೇನಾದ್ರು ಕುರುಡನಾ? ಎಂದು ಮಹಿಳೆ ಪ್ರಶ್ನೆಗಳ ಮೂಲಕವೇ ತನ್ನ ಆಕ್ರೋಶ ಹೊರಹಾಕಿದ್ದಾಳೆ. ಇದಕ್ಕೆ ಕಾರು ಚಾಲಕ ಕೂಡ ಸುಮ್ಮನಾಗದೆ ವಾಗ್ವಾದಕ್ಕೆ ಇಳಿದಿದ್ದಾನೆ.
ಕಾರು ಡಿಕ್ಕಿ ಹೊಡೆದು ನಾಯಿಯ ಸಾವಿಗೆ ಕಾರಣವಾದರೂ ಒಂಚೂರು ಪಶ್ಚಾತಾಪ ಇಲ್ಲದೆ ಮಹಿಳೆ ಜತೆ ಗಲಾಟೆ ಮಾಡಿದ್ದಾನೆ. ನನಗೆ ಕಣ್ಣು ಕಾಣೊಲ್ಲ. ಅದಕ್ಕೆ ಏನಿವಾಗ? ಬೇಕಾದ್ರೆ ನನ್ನ ಫೋಟೊ ತಗೊ. ನಾಯಿ ಮೇಲೆ ಕಾರು ಚಲಾಯಿಸಿದರೆ ಏನಾಯ್ತು? ಎಂದು ವಾಗ್ವಾದ ಮಾಡಿ ಆ ಸ್ಥಳದಿಂದ ಹೊರಟು ಹೋಗಿದ್ದಾನೆ. streetdogofBombay ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೊ ಹಂಚಿಕೊಳ್ಳಲಾಗಿದ್ದು, ಈ ಅಮಾನವೀಯ ಕೃತ್ಯ ಎಸಗಿದ್ದ ಈ ವ್ಯಕ್ತಿ ಬಗ್ಗೆ ಬಳಕೆದಾರರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ.
ಇದನ್ನು ಓದಿ: Viral Video: ನಡುರಾತ್ರಿಯಲ್ಲಿ ಬರ್ತಾಳೆ..ಡೋರ್ ತಟ್ಟುತ್ತಾಳೆ- ಮಹಿಳೆಯ ಶಾಕಿಂಗ್ ವಿಡಿಯೋ ವೈರಲ್
ನೆಟ್ಟಿಗರೊಬ್ಬರು ನಿನಗೆ ಕಣ್ಣಿದ್ದರೂ ಮನವೀಯತೆ ಇಲ್ಲದ ನೀನು ಕಟುಕ ನಿಗೆ ಸಮ ಎಂದು ಟ್ವೀಟ್ ಮಾಡಿದ್ದಾರೆ. ಉದ್ದೇಶ ಪೂರ್ವಕವಾಗಿಯೇ ನಾಯಿಯ ಮೇಲೆ ಕಾರು ಚಲಾಯಿಸಿ ಸಾಯಿಸಿದ್ದಾನೆ ಕಾರು ಚಾಲಕನಿಗೆ ಮಾನವೀಯತೆಯೇ ಇಲ್ಲ ಎಂದು ಮತ್ತೊಬ್ಬ ನೆಟ್ಟಿಗರು ಕಿಡಿಕಾರಿದ್ದಾರೆ. ತನ್ನ ಪಾಡಿಗೆ ಮಲಗಿದ್ದ ನಾಯಿ ಮೇಲೆ ವಿಕೃತಿ ಮೆರೆದ ಕಾರು ಚಾಲಕನಿಗೆ ಸರಿಯಾದ ಶಿಕ್ಷೆಯಾಗಬೇಕು. ಉದ್ದೇಶ ಪೂರ್ವಕ ವಾಗಿಯೇ ಕಾರಿನ ಮಾಲೀಕ ಈ ಕೃತ್ಯವನ್ನು ಎಸಗಿದ್ದಾನೆ ಎಂದು ಪ್ರಾಣಿ ಪ್ರಿಯರು ಆರೋಪ ಮಾಡಿದ್ದು ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.