Viral Video: ಶಾಲಾ ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ! ಭಯಾನಕ ವಿಡಿಯೊ ವೈರಲ್
ಪ್ರಾಂಶುಪಾಲರು ಬೈದರೆಂಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ಮನನೊಂದು ಶಾಲಾ ಕಟ್ಟಡದ ಮೇಲಿನಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲಯಲ್ಲಿ ಈ ಘಟನೆ ನಡೆದಿದ್ದು, ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಹೈದರಾಬಾದ್: ಪ್ರಾಂಶುಪಾಲರು ಬೈದರು ಅನ್ನುವ ಕಾರಣಕ್ಕೆ ಮನನೊಂದ ವಿದ್ಯಾರ್ಥಿಯೋರ್ವ ಶಾಲಾ ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ರಂಗಾರೆಡ್ಡಿ ಜಿಲ್ಲೆಯ ಶಾದ್‌ನಗರ ಖಾಸಗಿ ಶಾಲೆಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ನೀರಜ್ ಎಂದು ಗುರುತಿಸಲಾಗಿದ್ದು ಸದ್ಯ ವಿದ್ಯಾರ್ಥಿ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ದೃಶ್ಯವು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು ಈ ಭಯಾನಕ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್(Viral Video) ಆಗಿದೆ. ಮೃತ ನೀರಜ್, ಬಿಜೆಪಿ ಶಾದ್‌ನಗರ ಪಟ್ಟಣ ಅಧ್ಯಕ್ಷ ಹರಿಭೂಷಣ್ ಅವರ ಪುತ್ರ ಎನ್ನಲಾಗುತ್ತಿದ್ದು, ರಂಗಾರೆಡ್ಡಿ ಜಿಲ್ಲಾ ಶಾದ್ನಗರ್ ಪ್ರೈವೇಟ್ ಶಾಲೆಯಲ್ಲಿ ವಿದ್ಯಾರ್ಥಿ 10ನೇ ತರಗತಿ ಓದುತ್ತಿದ್ದ.
ನೀರಜ್ ಮತ್ತೊಬ್ಬ ವಿದ್ಯಾರ್ಥಿಯೊಂದಿಗೆ ಮಾತನಾಡುತ್ತಿದ್ದಾಗ ಪ್ರಾಂಶುಪಾಲರು ಇಬ್ಬರನ್ನು ಕರೆದು ಬೈದು ಬುದ್ದಿಮಾತು ಹೇಳಿದ್ದಾರೆ. ಇದರಿಂದಲೇ ನೀರಜ್ ನೊಂದು ಆತುರದ ನಿರ್ಧಾರ ಕೈಗೊಂಡಿದ್ದಾನೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ನೀರಜ್ ಅನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯ ಅಸುನೀಗಿದ್ದಾನೆಂದು ವೈದ್ಯರು ಖಚಿತಪಡಿಸಿದ್ದಾರೆ.
ప్రిన్సిపల్ తిట్టాడని పాఠశాల భవనం పై నుండి దూకి పదవ తరగతి విద్యార్థి ఆత్మహత్య
— Telugu Scribe (@TeluguScribe) February 5, 2025
రంగారెడ్డి జిల్లా షాద్ నగర్ ప్రైవేట్
పాఠశాల భవనం పై నుండి దూకి పదవ తరగతి విద్యార్థి ఆత్మహత్య
ప్రిన్సిపల్ తిట్టాడని మనస్థాపన చెందిన విద్యార్థి నీరజ్
బీజేపీ షాద్ నగర్ పట్టణ అధ్యక్షుడు హరి భూషణ్… pic.twitter.com/uaNGgzCGmw
ಸದ್ಯ ಈ ಘಟನೆ ಸಂಚಲನ ಮೂಡಿಸಿದ್ದು, ವಿದ್ಯಾರ್ಥಿನಿ ಸಾವಿನಿಂದ ಕುಟುಂಬಸ್ಥರಿಗೆ ಶಾಕ್ ಉಂಟಾಗಿದ್ದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿ ಕೊಂಡಿರುವ ಸಿಸಿಟಿವಿ ವಿಡಿಯೋ ಸಖತ್ ವೈರಲ್ ಆಗಿದೆ. ಪೊಲೀಸ್ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು ಘಟನೆಯ ಸಮಯದಲ್ಲಿ ಹಾಜರಿದ್ದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯನ್ನು ಪ್ರಶ್ನಿಸುತ್ತಿದ್ದಾರೆ
ಇದನ್ನು ಓದಿ:Viral News: ರೈತನ ದಾರಿಗೆ ಅಡ್ಡ ಬಂದ ಹುಲಿ; ಕೊನೆಗೆ ಆಗಿದ್ದೇನು?
ಕಾಲೇಜು ಆವರಣದಲ್ಲೇ ಆತ್ಮಹತ್ಯೆ ಘಟನೆ ನಡೆದಿರುವುದು ಇಡೀ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಯನ್ನು ಬೆಚ್ಚಿ ಬೀಳಿಸಿದ್ದು ಕಳೆದ ತಿಂಗಳು ಬೆಂಗಳೂರಿನ ಹನುಮಂತನಗರದಲ್ಲಿರುವ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನ ಐದನೇ ಮಹಡಿಯಿಂದ ಹಾರಿ ಏರೋಸ್ಪೇಸ್ ಎಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದ.