ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: 95 ಪೈಸೆಗಾಗಿ ಪತ್ರಕರ್ತೆ, ಚಾಲಕನ ನಡುವೆ ವಾಗ್ವಾದ; ವಿಡಿಯೊ ವೈರಲ್

Viral Video: ಪತ್ರಕರ್ತೆ ಶಿವಾಂಗಿ ಶುಕ್ಲಾ ಮತ್ತು ಕ್ಯಾಬ್‌ ಚಾಲಕ ಬರೀ 95 ಪೈಸೆಗಾಗಿ ಜಗಳವಾಡಿದ್ದಾರೆ. ಇಬ್ಬರು ಈ ರೀತಿ ವಾಗ್ವದ ಮಾಡಿಕೊಂಡ ರೀತಿ ನೋಡಿ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ‌. ಚಾಲಕ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಶಿವಾಂಗಿ ಶುಕ್ಲಾ ಆರೋಪಿಸಿದ್ದಾಳೆ. ಇತ್ತ ಚಾಲಕ ಪ್ರತಿಕ್ರಿಯಿಸಿ ಟ್ಯಾಕ್ಸಿ ಶುಲ್ಕ ಪಾವತಿಸಲು ಆಕೆ ನಿರಾಕರಿಸಿದ್ದಾಳೆ ಎಂದು ಹೇಳಿದ್ದಾನೆ.

95 ಪೈಸೆಗಾಗಿ ಕ್ಯಾಬ್ ಡ್ರೈವರ್‌ಗೆ ಬೆದರಿಕೆ ಹಾಕಿದ ಪತ್ರಕರ್ತೆ

Journalist Dispute Over 95 Paise

Profile Pushpa Kumari Mar 23, 2025 7:54 PM

ಲಖನೌ: ಪತ್ರಕರ್ತೆ ಮತ್ತು ಕ್ಯಾಬ್‌ ಚಾಲಕನ ನಡುವೆ ಕೇವಲ 95 ಪೈಸೆಗಾಗಿ ಜಗಳ ನಡೆದ ದೃಶ್ಯವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇಬ್ಬರು ಬರೀ 95 ಪೈಸೆಗಾಗಿ ಈ ರೀತಿ ವಾಗ್ವಾದ ಮಾಡಿಕೊಂಡ ರೀತಿ ನೋಡಿ ನೆಟ್ಟಿಗರೇ ಆಶ್ಚರ್ಯಗೊಂಡಿದ್ದಾರೆ‌. ಚಾಲಕ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದರೆ, ತನಗೆ ಬೆದರಿಕೆ ಹಾಕಿ ಟ್ಯಾಕ್ಸಿ ಶುಲ್ಕ ಪಾವತಿಸಲು ಪತ್ರಕರ್ತೆ ನಿರಾಕರಿಸಿದ್ದಾಳೆ ಎಂದು ಚಾಲಕ ದೂರಿದ್ದಾನೆ (Viral Video). ಈ ವಿಡಿಯೊವನ್ನು ಸಾಮಾಜಿಕ ಕಾರ್ಯಕರ್ತರೊಬ್ಬರು ಹಂಚಿಕೊಂಡಿದ್ದು, ಬಹುತೇಕರು ಕ್ಯಾಬ್ ಚಾಲಕನಿಗೆ ಬೆಂಬಲ ನೀಡಿದ್ದಾರೆ.

ಪತ್ರಕರ್ತೆ ಶಿವಾಂಗಿ ಮತ್ತುಕ್ಯಾಬ್‌ ಚಾಲಕ ಬರೀ  95 ಪೈಸೆಗಾಗಿ ಜಗಳವಾಡಿದ್ದಾರೆ. ಪೂರ್ತಿ ಶುಲ್ಕ ಪಾವತಿ ಮಾಡದೇ ಇರುವುದಕ್ಕೆ ಕ್ಯಾಬ್ ಚಾಲಕ ಶುಕ್ಲಾ ಜತೆ ಪ್ರಶ್ನೆ ಮಾಡಿದ್ದಾನೆ. ಆಕೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ತನ್ನ ಕ್ಯಾಬ್‌ನಲ್ಲಿ ಪ್ರಯಾಣ ಮಾಡಿದ್ದಕ್ಕೆ ಪೂರ್ತಿ ಹಣ ನೀಡಿ ಎಂದು ಕೇಳಿದ್ದಕ್ಕೆ ಬೆದರಿಕೆ ಹಾಕಿದ್ದಾಳೆ. ಈ ಬಗ್ಗೆ ಕೇಳಲು ಹೋದರೆ ಪೊಲೀಸ್ ಕಂಪ್ಲೇಂಟ್ ನೀಡುತ್ತೇನೆ, ನಾನೊಬ್ಬಳು ಪತ್ರಕರ್ತೆ ಎಂದು ನನಗೆ ಧಮ್ಕಿ ಹಾಕಿದ್ದಾಳೆ ಎಂದು ಆರೋಪಿಸಿದ್ದಾನೆ.



ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಪತ್ರಕರ್ತೆ ಶಿವಾಂಗಿ ಶುಕ್ಲಾ ಪ್ರತಿಕ್ರಿಯೆ ನೀಡಿದ್ದು, ಕೆಲಸ ನಿಮಿತ್ತ ಕ್ಯಾಬ್‌ನಲ್ಲಿ ಪ್ರಯಾಣ ಮಾಡಿದ್ದ ವೇಳೆ ಚಾಲಕ ತನ್ನ ಜತೆ ಸರಿಯಾಗಿ ನಡೆದುಕೊಳ್ಳಲಿಲ್ಲ, ತಾನು ಹೇಳಿದ್ದ ಲೊಕೇಶನ್‌ಗೆ ಕ್ಯಾಬ್ ಚಾಲಕ ತಲುಪಿಸಲಿಲ್ಲ. ಹೀಗಾಗಿ ತಾನು ಆತುರದಲ್ಲಿ‌ 129.95 ರೂ. ಶುಲ್ಕವನ್ನು UPI ಮಾಡುವ ಬದಲು ತಪ್ಪಾಗಿ 129 ರೂ ಪಾವತಿಸಿದ್ದೆ. ಇದರಿಂದ ಚಾಲಕ ಕೆರಳಿ ಉಳಿದ 95 ಪೈಸೆಗೆ ಬೇಡಿಕೆ ಇಟ್ಟಿದ್ದ. ಈ ಸಂದರ್ಭದಲ್ಲಿ ಚಾಲಕನ ವರ್ತನೆ ಆತಂಕ ಮೂಡಿ ಸಿತ್ತು, ಸುರಕ್ಷತೆಗೆ ಧಕ್ಕೆ ಉಂಟಾಗಿತ್ತು. ಹಾಗಾಗಿ ತನ್ನ ಮೇಲೆ ಒತ್ತಡ ಹೇರಬೇಡ, ತಾನೊಬ್ಬಳು ಪತ್ರಕರ್ತೆ ಎಂದು ಹೇಳಿದ್ದಾಗಿ ಶಿವಾಂಗಿ ಶುಕ್ಲಾ ತಿಳಿಸಿದ್ದಾಳೆ.

ಈ ಘಟನೆಯನ್ನು ವಿವರಿಸಿದ ಶಿವಾಂಗಿ ಶುಕ್ಲಾ, ತಾನು ಕ್ಯಾಬ್ ಚಾಲಕನಿಗೆ ಬೆದರಿಕೆ ಹಾಕಿಲ್ಲ. ಆದರೆ ಆತ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಈ ಸಂದರ್ಭ ಚಾಲಕ ಸಮವಸ್ತ್ರ ಧರಿಸಿರಲಿಲ್ಲ. ಅಪ್ಲಿಕೇಶನ್ ಪ್ರೊಫೈಲ್ ಚಿತ್ರಕ್ಕೆ ಆತನ ಮುಖ ಸಹ ಹೊಂದಾಣಿಕೆ ಆಗಲಿಲ್ಲ. ಹೀಗಾಗಿ ರೆಕಾರ್ಡಿಂಗ್ ಆರಂಭಿಸಿದಾಗ ಚಾಲಕನ ವರ್ತನೆ ಬದಲಾಯಿತು ಎಂದು ಹೇಳಿದ್ದಾಳೆ. ಈ ವಿಡಿಯೊ ಕಂಡ ಬಹುತೇಕ ಜನರು ಕ್ಯಾಬ್ ಚಾಲಕನಿಗೆಯೇ ಬೆಂಬಲ ನೀಡಿದ್ದಾರೆ.

ಇದನ್ನು ಓದಿ: Viral Video: ಚಲಿಸುತ್ತಿದ್ದ ಟ್ರೇನ್‌ಗೆ ಎಸ್‌ಯುವಿ ಕಾರು ಡಿಕ್ಕಿ; ಸಿಐಎಸ್ಎಫ್ ಪೊಲೀಸರು ಪ್ರಾಣಾಪಾಯದಿಂದ ಪಾರು, ವಿಡಿಯೋ ಇದೆ

ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. 95 ಪೈಸೆ ಪಾವತಿಸಲು ಇಷ್ಟೊಂದು ಅಹಂಕಾರದಿಂದ ನಡೆದುಕೊಂಡು ಬೆದರಿಸುವ ಅಗತ್ಯ ಇರಲಿಲ್ಲ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು ಕ್ಯಾಬ್ ಚಾಲಕ ಸರಿಯಾಗಿಯೇ ಪ್ರಶ್ನಿಸಿದ್ದಾನೆ ಪೈಸೆ ಪೈಸೆಗೂ ಬೆಲೆ ಇದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಕೆಲವರು ಹಣ ಇಲ್ಲದಿದ್ದರೆ ಕ್ಯಾಬ್ ನಲ್ಲಿ ಪ್ರಯಾಣ ಮಾಡುವ ಅಗತ್ಯ ಇರಲಿಲ್ಲ ಎಂದು ಚಾಲಕನ ಪರವಾಗಿ ಬ್ಯಾಟ್‌ ಬೀಸಿದ್ದಾರೆ.