Book Release: ಲೇಖಕ ಎಂ.ಜಯಪ್ರಕಾಶ್ ಅವರ ʼನಾ ಕಂಡಂತೆʼ ಪುಸ್ತಕ ಬಿಡುಗಡೆ
Book release: ಲೇಖಕ ಎಂ. ಜಯಪ್ರಕಾಶ್ ಅವರ ಹೊಸ ಕೃತಿ ʼನಾ ಕಂಡಂತೆʼ ಪುಸ್ತಕ ಇತ್ತೀಚೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಮೀಡಿಯಾ ಕೇಂದ್ರದಲ್ಲಿ ಬಿಡುಗಡೆಗೊಂಡಿತು. ಲೇಖಕರು ತಮ್ಮ ಬರವಣಿಗೆಯ ಹಿನ್ನೆಲೆ, ಘಟನೆಗಳಿಗೆ ಸಂಬಂಧಿಸಿದ ತಮ್ಮ ಅನುಭವಗಳು ಮತ್ತು ಆ ಘಟನೆಗಳಿಂದ ತಾವು ಕಂಡುಕೊಂಡ ಒಳನೋಟಗಳನ್ನು ಹಂಚಿಕೊಂಡರು.


ಬೆಂಗಳೂರು: ಲೇಖಕ ಎಂ. ಜಯಪ್ರಕಾಶ್ ಅವರ ಹೊಸ ಕೃತಿ ʼನಾ ಕಂಡಂತೆʼ ಪುಸ್ತಕ ಇತ್ತೀಚೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಮೀಡಿಯಾ ಕೇಂದ್ರದಲ್ಲಿ ಬಿಡುಗಡೆಗೊಂಡಿತು. ಕಾರ್ಯಕ್ರಮವು ಮುಖ್ಯ ಅತಿಥಿಗಳ ಗೌರವ ಮತ್ತು ಸಂಭಾಷಣೆಗಿಂತ ಹೆಚ್ಚಾಗಿ ಸಂವಾದಾತ್ಮಕ ಚರ್ಚೆಗಳ ಸ್ವರೂಪದಲ್ಲಿ ನಡೆಯಿತು. ʼನಾ ಕಂಡಂತೆʼ ಕೃತಿಯು ಶೀರ್ಷಿಕೆಯಂತೆಯೇ ಲೇಖಕ ಎಂ. ಜಯಪ್ರಕಾಶ್ ಅವರು ತಾವು ಕಂಡಂತೆ ಬರೆದ ಬರಹಗಳ ಸಂಗ್ರಹವಾಗಿದೆ. ಇದು ದೈನಂದಿನ ಜೀವನದಲ್ಲಿ ಯಾರಿಗಾದರೂ ಎದುರಾಗುವ ಸಾಮಾನ್ಯ ಭಾವನೆಗಳ ರೂಪವಾಗಿದೆ. ಪುಸ್ತಕದಲ್ಲಿ ಒಟ್ಟು 104 ಘಟನೆಗಳನ್ನು ಚಿತ್ರಿಸಲಾಗಿದ್ದು, ಪ್ರತಿಯೊಂದು ಘಟನೆಯೂ ಚಿಂತನೆಗೆ ಪ್ರೇರೇಪಿಸುವ ವಿಚಾರವಾಗಿದೆ.
ಲೇಖಕರು ತಮ್ಮ ಬರವಣಿಗೆಯ ಹಿನ್ನೆಲೆ, ಘಟನೆಗಳಿಗೆ ಸಂಬಂಧಿಸಿದ ತಮ್ಮ ಅನುಭವಗಳು ಮತ್ತು ಆ ಘಟನೆಗಳಿಂದ ತಾವು ಕಂಡುಕೊಂಡ ಒಳನೋಟಗಳನ್ನು ಹಂಚಿಕೊಂಡರು.
ಈ ಸುದ್ದಿಯನ್ನೂ ಓದಿ | HPCL Recruitment 2025: ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್‌ನಲ್ಲಿದೆ 63 ಹುದ್ದೆ; ಡಿಪ್ಲೊಮಾ ವಿದ್ಯಾರ್ಹತೆ ಹೊಂದಿದವರು ಅಪ್ಲೈ ಮಾಡಿ
ಪುಸ್ತಕ ಬಿಡುಗಡೆ ಸಮಾರಂಭವು ಕೇವಲ ಒಂದು ಪುಸ್ತಕದ ಪರಿಚಯಕ್ಕೆ ಸೀಮಿತವಾಗದೆ, ಜೀವನ ವಿಚಾರದ ಬಗ್ಗೆ ಚರ್ಚಿಸುವ ವೇದಿಕೆಯಾಗಿ ಮಾರ್ಪಟ್ಟಿತು. ಈ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಹಲವು ಗಣ್ಯರು ಉಪಸ್ಥಿತರಿದ್ದರು.