Viral Video: ಪರಭಾಷಿಗರನ್ನು ಮಾತೃಭಾಷೆಯಲ್ಲಿ ಬೈಯುವ ಖಯಾಲಿ ಇದ್ಯಾ? ಹಾಗಿದ್ರೆ ಈ ವಿಡಿಯೊ ನೀವು ನೋಡ್ಲೇಬೇಕು!
ಭಾರತಕ್ಕೆ ಭೇಟಿ ನೀಡಿದ ಕೊರಿಯಾದ ಯೂಟ್ಯೂಬರ್ ಒಬ್ಬಳು ಸ್ಥಳೀಯ ಅಂಗಡಿಯವನು ತನ್ನನ್ನು ದಿಟ್ಟಿಸಿ ನೋಡಿದ್ದಾನೆ ಎಂದು ಹೇಳುತ್ತಾ ಆತನ ಬಗ್ಗೆ ಕೊರಿಯನ್ ಭಾಷೆಯಲ್ಲಿ ಆರೋಪ ಮಾಡಿದ್ದಾಳೆ. ಆದರೆ ಆತ ಆಕೆಯ ಆರೋಪಗಳಿಗೆ ತಕ್ಕ ಉತ್ತರ ಕೊರಿಯನ್ ಭಾಷೆಯಲ್ಲಿ ನೀಡಿದ್ದನ್ನು ಕಂಡು ಆಕೆ ಒಮ್ಮೆಲೆ ದಂಗಾಗಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.


ನವದೆಹಲಿ:ವಿದೇಶಿಗರನ್ನು ನಮ್ಮ ದೇಶದಲ್ಲಿ ನೋಡಿದಾಗ ಅವರ ವಿಭಿನ್ನ ರೂಪ, ಹಾವಭಾವ, ಡ್ರೆಸ್ಸಿಂಗ್ ಸ್ಟೈಲ್ ಅನ್ನು ನೋಡಿ ಕೆಲವರು ಅವರನ್ನು ಒಮ್ಮೆ ದಿಟ್ಟಿಸಿ ನೋಡುತ್ತಾರೆ. ಅಲ್ಲದೇ ಕೆಲವೊಮ್ಮೆ ಅವರಿಗೆ ಅರ್ಥ ಆಗೋದಿಲ್ಲ ಎಂಬ ಆತ್ಮವಿಶ್ವಾಸದಿಂದ ನಮ್ಮ ಮಾತೃಭಾಷೆಯಲ್ಲಿ ಅವರ ಬಗ್ಗೆ ಕಮೆಂಟ್ ಮಾಡುವುದೋ ಅಥವಾ ಬೈಯುವುದನ್ನು ಮಾಡುತ್ತೇವೆ. ಅಂತಹದ್ದೇ ಒಂದು ಘಟನೆಯ ವಿಡಿಯೊ ವೈರಲ್ ಆಗುತ್ತಿದೆ. ಭಾರತಕ್ಕೆ ಭೇಟಿ ನೀಡಿದ ಕೊರಿಯಾದ ಯೂಟ್ಯೂಬರ್ ಒಬ್ಬಳು ಸ್ಥಳೀಯ ಅಂಗಡಿಯವನು ತನ್ನನ್ನು ದಿಟ್ಟಿಸಿ ನೋಡಿದ್ದಾನೆ ಎಂದು ಆರೋಪಿಸಿದ್ದಾಳೆ. ವಿಡಿಯೊದುದ್ದಕ್ಕೂ ಸಂಪೂರ್ಣವಾಗಿ ಕೊರಿಯನ್ ಭಾಷೆಯಲ್ಲಿ ಮಾತನಾಡಿದ ಅವಳು, ಆ ವ್ಯಕ್ತಿಗೆ ತನ್ನ ಮಾತುಗಳು ಅರ್ಥವಾಗುವುದಿಲ್ಲ ಎಂದು ಭಾವಿಸಿ ಘಟನೆಯನ್ನು ಆತ್ಮವಿಶ್ವಾಸದಿಂದ ರೆಕಾರ್ಡ್ ಮಾಡಿದ್ದಾಳೆ. ಆದರೆ ನಂತರ ನಡೆದ ಅನಿರೀಕ್ಷಿತ ತಿರುವು ನೋಡಿ ಆಕೆ ಶಾಕ್ ಆಗಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ವೈರಲ್ ಆದ ವಿಡಿಯೊದಲ್ಲಿ ಆಕೆ "ಹೇಯ್, ನೀನೇಕೆ ನನ್ನತ್ತ ನೋಡುತ್ತಿರುವೆ? ನೀನು ನನ್ನನ್ನು ಇಷ್ಟಪಡುತ್ತೀದ್ದೀಯಾ?" ಎಂದು ಕೇಳುತ್ತಾ ತನ್ನ ಕ್ಯಾಮೆರಾವನ್ನು ಆ ವ್ಯಕ್ತಿಯ ಕಡೆಗೆ ತಿರುಗಿಸಿ ಕೇಳಿದ್ದಾಳೆ. ಅವಳಿಗೆ ಆಶ್ಚರ್ಯವಾಗುವಂತೆ, ಆ ವ್ಯಕ್ತಿ ಕೊರಿಯನ್ ಭಾಷೆಯಲ್ಲಿ ಉತ್ತರಿಸಿದ್ದಾನೆ ಮತ್ತು ಅವನು ಹತ್ತಿರದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ತನ್ನ ಅಂಗಡಿಯ ಹೊರಗೆ ಸುಮ್ಮನೆ ನಿಂತಿರುವುದಾಗಿ ಕೊರಿಯನ್ ಭಾಷೆಯಲ್ಲಿ ತಿಳಿಸಿದ್ದಾನೆ. ಅವನು ಕೊರಿಯನ್ ಭಾಷೆ ಮಾತನಾಡುವುದನ್ನು ಕಂಡು ಮಹಿಳಾ ಯೂಟ್ಯೂಬರ್ ಸಿಕ್ಕಾಪಟ್ಟೆ ಶಾಕ್ ಆಗಿದ್ದಾಳೆ.
ಆತನಿಗೆ ಕೊರಿಯನ್ ಭಾಷೆ ತಿಳಿದಿಲ್ಲ ಎಂದು ಭಾವಿಸಿ ಅವಳು ವಿಡಿಯೊ ಮಾಡಿದ್ದಾಳೆ. ಆದರೆ ಅವನು ಅವಳಿಗೆ ಶಾಕ್ ನೀಡುವಂತೆ ಕೊರಿಯನ್ ಭಾಷೆಯಲ್ಲಿ ಮಾತನಾಡಿದ್ದಾನೆ. ಅವನ ಬಳಿ ಕೊರಿಯನ್ ಭಾಷೆ ಹೇಗೆ ಕಲಿತೆ ಎಂದು ಕೇಳಿದ್ದಾಳೆ. ಅದಕ್ಕೆ ಆತ ತಾನು ಕೊರಿಯಾದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ, ಅದರಿಂದ ಈ ಭಾಷೆಯನ್ನು ಕಲಿಯಲು ಸಾಧ್ಯವಾಯಿತು ಎಂದು ಹೇಳಿದ್ದಾನೆ. ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡುವಾಗ ಅವಳು ಅವನ ಮೇಲೆ ಸುಳ್ಳು ಆರೋಪ ಮಾಡಿರುವುದಕ್ಕೆ ಆಕೆ ಆತನ ಬಳಿ ಕ್ಷಮೆಯಾಚಿಸಿದ್ದಾಳೆ.
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಿದೇಶಿ ಮಹಿಳೆಗೆ ಈ ದೇಶದ ಪುರುಷರ ಬಗ್ಗೆ ನಕಾರಾತ್ಮಕ ಹೇಳಿಕೆ ನೀಡಲು ಅವಕಾಶ ನೀಡದ ಭಾರತೀಯ ವ್ಯಕ್ತಿಯ ಬಗ್ಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹಾಗೂ ನೆಟ್ಟಿಗರು ವ್ಯಕ್ತಿ ಕೊರಿಯನ್ ಭಾಷೆ ಮಾತನಾಡುವುದನ್ನು ಕಂಡು ಮಹಿಳೆಯಂತೆ ಶಾಕ್ ಆಗಿರುದಾಗಿ ತಿಳಿಸಿದ್ದಾರೆ. "ಭಾರತದಲ್ಲಿ ಕೊರಿಯನ್ ಮಾತನಾಡುವ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆಗಳು ಕಡಿಮೆ “ ಎಂದು ಒಬ್ಬರು ಹೇಳಿದ್ದಾರೆ. "ಅಂಕಲ್ ಈ ಕ್ಷಣಕ್ಕಾಗಿ ತಮ್ಮ ಜೀವನದಲ್ಲಿ ಕಾಯುತ್ತಿದ್ದರು" ಎಂದು ಮೊತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. "ಬ್ರೋ ಡ್ಯುಲಿಂಗೊದಲ್ಲಿ ಎಲ್ಲಾ ಸವಾಲುಗಳನ್ನು ಪೂರ್ಣಗೊಳಿಸಿದೆ" ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಪ್ರವಾಸಿಗನ ಕಂಜೂಸ್ ಬುದ್ಧಿ ನೋಡಿ ಬಿದ್ದು ಬಿದ್ದು ನಕ್ಕ ನೆಟ್ಟಿಗರು; ವೈರಲ್ ವಿಡಿಯೊ!
ಕೊರಿಯನ್ ಪತಿ-ಇಂಡಿಯನ್ ಪತ್ನಿ ಸಂಭಾಷಣೆ
ಕೊರಿಯನ್ ಪತಿಯೊಬ್ಬರು ತಮ್ಮ ಭಾರತೀಯ ಪತ್ನಿಯೊಂದಿಗೆ ಹಿಂದಿ ಭಾಷೆಯ ಸವಾಲನ್ನು ಸ್ವೀಕರಿಸುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಪತ್ನಿ ತೋರಿಸಿದ ವಸ್ತುಗಳನ್ನು ಹಿಂದಿಯಲ್ಲಿ ಹೇಳುವ ಕೊರಿಯನ್ ಪತಿಯ ಮಾತಿಗೆ ಜನರು ಬಿದ್ದು ಬಿದ್ದು ನಕ್ಕಿದ್ದಾರೆ.