Viral Video: ಸೌಟು ಹಿಡಿದುಕೊಂಡು ಈ ಯುವತಿ ಮಾಡಿದ್ದೇನು ಗೊತ್ತಾ? ವಿಡಿಯೊ ನೋಡಿ
ಮಾರುಕಟ್ಟೆಯಲ್ಲಿ ಹಲವು ವಿಧದ ಬಿಂದಿಗಳು ದೊರೆಯುವಾಗ ಸೋಶಿಯಲ್ ಮೀಡಿಯಾದಲ್ಲಿ ಯುವತಿಯೊಬ್ಬಳು ಅಡುಗೆಗೆ ಬಳಸುವ ಸೌಟು ಬಳಸಿ ಬಿಂದಿ ಹಚ್ಚಿಕೊಂಡಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರು ಆಕೆಯ ಹ್ಯಾಕ್ ಅನ್ನು ಮೆಚ್ಚಿಕೊಂಡಿದ್ದಾರೆ.


ನವದೆಹಲಿ: ಬಿಂದಿ ಎಂದರೆ ಬಹುತೇಕ ಮಹಿಳೆಯರಿಗೆ ಅಚ್ಚುಮೆಚ್ಚು. ಇತ್ತೀಚೆಗಷ್ಟೇ ಗಂಡ ಬಿಂದಿ ತಂದುಕೊಡಲಿಲ್ಲವೆಂದು ಬೇಸತ್ತ ಹೆಂಡತಿ ಕೋರ್ಟ್ ಮೆಟ್ಟಿಲೇರಿದ ಘಟನೆ ನಡೆದಿತ್ತು. ಉಡುಪಿಗೆ ತಕ್ಕ ಹಾಗೇ ಬಿಂದಿ ಧರಿಸುವ ಕ್ರೇಜ್ ಕೆಲವರಿಗಿರುತ್ತದೆ. ಈಗ ಮಾರುಕಟ್ಟೆ ನಾನಾ ವಿನ್ಯಾಸದ ಬಿಂದಿಗಳು ಕೂಡ ಸಿಗುತ್ತವೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಯುವತಿಯೊಬ್ಬಳು ಬಿಂದಿ ಧರಿಸಲು ಹೊಸ ಹ್ಯಾಕ್ ಅನ್ನು ತಿಳಿಸಿಕೊಟ್ಟಿದ್ದಾಳೆ. ಅಡುಗೆ ಮನೆಯ ಸೌಟು ಬಳಸಿ ಆಕೆ ಬಿಂದಿ ಹಾಕಿಕೊಂಡ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ಈ ವಿಡಿಯೊದಲ್ಲಿ ಯುವತಿ ರೆಡಿಮೇಡ್ ಸ್ಟಿಕ್ಕರ್ ಪ್ಯಾಕ್‍ಗಳು ಅಥವಾ ಕುಂಕುಮಗಳನ್ನು ಬಳಸುವ ಬದಲು ಅಡುಗೆ ಮನೆಯ ಸೌಟು ಹಿಡಿದುಕೊಂಡು ಹಣೆಗೆ ಬಿಂದಿಯನ್ನು ಹಚ್ಚಿಕೊಂಡಿದ್ದಾಳೆ. ಹಣೆಯ ಮೇಲೆ ಬಿಂದಿ ಡಿಸೈನ್ ಬಿಡಿಸಲು ಆಕೆ ಗುಲಾಬಿ ಬಣ್ಣದ ಪುಡಿ ಮತ್ತು ಸೌಟ್ ಅನ್ನು ಬಳಸಿದ್ದಾಳೆ. ನೆಟ್ಟಿಗರು ಇದನ್ನು ಕಂಡು ಸಖತ್ ಥ್ರಿಲ್ ಆಗಿದ್ದಾರೆ.
ಅತಿರಾ ಬಾಲಾಜಿ ಈ ವಿಡಿಯೊವನ್ನು ಪೋಸ್ಟ್ ಮಾಡಿದ್ದಾಳೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ ಅವಳು ತನ್ನ ಕೈಯಲ್ಲಿ ಸೌಟು ಹಿಡಿದು ಅದನ್ನು ಹಣೆಯ ಮೇಲೆ ಇಟ್ಟು, ನಂತರ ಅವಳು ಗುಲಾಬಿ ಬಣ್ಣದ ಪುಡಿಯನ್ನು ಅದರ ಮೇಲೆ ಹಾಕಿ ಕೈಯಿಂದ ಉಜ್ಜಿದ್ದಾಳೆ. ಅವಳ ಈ ಬಿಂದಿಯ ವಿನ್ಯಾಸ ಸಖತ್ ಆಗಿತ್ತು. ಈ ವಿಡಿಯೊ ಇನ್‌ಸ್ಟಾಗ್ರಾಂನಲ್ಲಿ ಸಾವಿರಾರು ವ್ಯೂವ್ಸ್ ಗಳಿಸಿದೆ. ವಿಶೇಷವೆಂದರೆ, ಸುಮಾರು 10,000 ಬಳಕೆದಾರರು ಇದನ್ನು ಲೈಕ್ ಮಾಡಿದ್ದಾರೆ. ಈಕೆಯ ಬಿಂದಿ ಹ್ಯಾಕ್ ಅನ್ನು ಅನೇಕರು ಮೆಚ್ಚಿಕೊಂಡಿದ್ದಾರೆ.
ಈ ಹ್ಯಾಕ್‍ನ ಅಗತ್ಯ ಏನು ಎಂದು ಕೆಲವರು ಪ್ರಶ್ನಿಸಿದ್ದಾರೆ. ಕಾರ್ಡ್‍ನಿಂದ ಸುಲಭವಾಗಿ ತೆಗೆದು ಹಣೆಯ ಮೇಲೆ ಅಂಟಿಸಿಕೊಳ್ಳಬಹುದಾದ ಸಾಂಪ್ರದಾಯಿಕ ಬಿಂದಿಗಳಲ್ಲಿ ಏನಾದರೂ ಸಮಸ್ಯೆ ಇದೆಯೇ ಎಂದು ಕೆಲವರು ಪ್ರಶ್ನಿಸಿದ್ದಾರೆ. ಕೆಲವರು ಆಕೆಯ ಕೆಲಸವನ್ನು ನೋಡಿ ನಕ್ಕಿದ್ದಾರೆ. "ನೀವು ಇಲ್ಲಿ ಏನನ್ನು ಸಾಧಿಸಲು ಪ್ರಯತ್ನಿಸುತ್ತಿದ್ದೀರಿ?" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೇ ಕೆಲವರು ಅವಳ ಕೆಲಸವನ್ನು ಹೊಗಳಿ "ಸೂಪರ್ ಚೇಚಿ (ಸಹೋದರಿ)" ಎಂದು ಬರೆದಿದ್ದಾರೆ.
ಈ ಸುದ್ದಿಯನ್ನೂ ಓದಿ: Divorce Case: ಬಿಂದಿಗಾಗಿ ಡಿವೋರ್ಸ್ ಕೇಳಿ ಕೋರ್ಟ್ ಮೆಟ್ಟಿಲೇರಿದ ಪತ್ನಿ!
ಇನ್ನು ಕೆಲವು ದಿನಗಳ ಹಿಂದೆಯಷ್ಟೇ ಬಿಂದಿ ವಿಚಾರಕ್ಕೆ ದಂಪತಿ ನಡುವೆ ವಿರಸ ಮೂಡಿ ಡಿವೋರ್ಸ್‌ವರೆಗೆ ತಲುಪಿದ ಘಟನೆ ವರದಿಯಾಗಿತ್ತು. ಕಲರ್ ಕಲರ್ ಬಿಂದಿ ತಂದು ಕೊಡಲಿಲ್ಲ ಎಂದು ಕೋಪಗೊಂಡ ಮಹಿಳೆಯೊಬ್ಬಳು ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಳು. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.