ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MLA Pradeep Eshwar Interview: ಬಿಜೆಪಿಯವರ ಷಡ್ಯಂತ್ರಕ್ಕೆ ಬಗ್ಗಲ್ಲ: ಪ್ರದೀಪ್‌ ಈಶ್ವರ್

ಶಾಸಕನಾಗಿ ಆಯ್ಕೆಯಾದ ಒಂದೂವರೆ ವರ್ಷ ಕಳೆಯುವುದರೊಳಗೆ ನಾನು ಬಲಿಜ ಸಮು ದಾಯ ನಾಯಕನಾಗಿ ರಾಜ್ಯಾದ್ಯಂತ ಗುರುತಿಸಿಕೊಂಡಿದ್ದೇನೆ. ಇದನ್ನು ಅರಗಿಸಿ ಕೊಳ್ಳಲು ಆಗದೆ, ಬಿಜೆಪಿಯವರು ಷಡ್ಯಂತ್ರ ರೂಪಿಸಿದ್ದಾರೆ. ಬಿಜೆಪಿಯ ಯಾವುದೇ ನಾಯಕ ಷಡ್ಯಂತ್ರ ರೂಪಿಸಿದರೂ, ನಾನು ಬಗ್ಗುವುದಿಲ್ಲ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

ಬಿಜೆಪಿಯವರ ಷಡ್ಯಂತ್ರಕ್ಕೆ ಬಗ್ಗಲ್ಲ: ಪ್ರದೀಪ್‌ ಈಶ್ವರ್

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್

Profile Ashok Nayak Mar 17, 2025 10:00 AM

ವಿಶ್ವವಾಣಿ- ವಿಶೇಷ ಸಂದರ್ಶನ

ಶಾಸಕನಾಗಿ ಆಯ್ಕೆಯಾದ ಒಂದೂವರೆ ವರ್ಷ ಕಳೆಯುವುದರೊಳಗೆ ನಾನು ಬಲಿಜ ಸಮುದಾಯ ನಾಯಕನಾಗಿ ರಾಜ್ಯಾದ್ಯಂತ ಗುರುತಿಸಿಕೊಂಡಿದ್ದೇನೆ. ಇದನ್ನು ಅರಗಿಸಿ ಕೊಳ್ಳಲು ಆಗದೇ, ಬಿಜೆಪಿಯವರು ಷಡ್ಯಂತ್ರ ರೂಪಿಸಿದ್ದಾರೆ. ಬಿಜೆಪಿಯ ಯಾವುದೇ ನಾಯಕ ಷಡ್ಯಂತ್ರ ರೂಪಿಸಿದರೂ ಅದಕ್ಕೂ ನಾನು ಬಗ್ಗುವುದಿಲ್ಲ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಸ್ಪಷ್ಟ ಮಾತುಗಳನ್ನು ಹೇಳಿದ್ದಾರೆ.

ಶಾಸಕನಾಗಿ ಆಯ್ಕೆಯಾದ ಒಂದೂವರೆ ವರ್ಷ ಕಳೆಯುವುದರೊಳಗೆ ನಾನು ಬಲಿಜ ಸಮುದಾಯ ನಾಯಕನಾಗಿ ರಾಜ್ಯಾದ್ಯಂತ ಗುರುತಿಸಿಕೊಂಡಿದ್ದೇನೆ. ಇದನ್ನು ಅರಗಿಸಿ ಕೊಳ್ಳಲು ಆಗದೆ, ಬಿಜೆಪಿಯವರು ಷಡ್ಯಂತ್ರ ರೂಪಿಸಿದ್ದಾರೆ. ಬಿಜೆಪಿಯ ಯಾವುದೇ ನಾಯಕ ಷಡ್ಯಂತ್ರ ರೂಪಿಸಿದರೂ, ನಾನು ಬಗ್ಗುವುದಿಲ್ಲ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

ಶುಕ್ರವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹಾಗೂ ಬಿಜೆಪಿ ಸಂಸದ ಪಿ.ಸಿ. ಮೋಹನ್ ನಡುವೆ ನಡೆದ ವಾಕ್ಸಮರ ಭಾರಿ ವೈರಲ್ ಆಗುತ್ತಿದೆ. ಆದರೆ ಏಕಾಏಕಿ ಈ ರೀತಿ ಪ್ರದೀಪ್ ವಿರುದ್ಧ ಮುಗಿಬೀಳಲು ಕಾರಣವೇನು? ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಎನ್ನುವ ಬಗ್ಗೆ ‘ವಿಶ್ವವಾಣಿ’ಯೊಂದಿಗೆ ಪ್ರದೀಪ್ ಈಶ್ವರ್ ಮಾತನಾಡಿದ್ದಾರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ.

ಇದನ್ನೂ ಓದಿ: MLA Pradeep Eshwar: ಬಿ ಖಾತಾ ಅಭಿಯಾನ ಎರಡನೇ ದಿನವಾದ ಶುಕ್ರವಾರ 871 ಮಂದಿ ಅರ್ಜಿ ಸಲ್ಲಿಕೆ

ಕಾರ್ಯಕ್ರಮದಲ್ಲಿ ಸಹನೆ ಕಳೆದುಕೊಂಡಿದ್ದೇಕೆ..?

- ಎಂ.ಆರ್. ಸೀತಾರಾಂ ಅವರು ತೆರಳುವ ತನಕ ಸುಮ್ಮನಿದ್ದು, ಅವರು ಹೋಗುತ್ತಿದ್ದಂತೆ ಬಿಜೆಪಿ ಪರ ಘೋಷಣೆ ಶುರು ಮಾಡಿದ್ದು ಸುರೇಶ್ ಅವರು. ಅಲ್ಲಿಗೆ ನಿಲ್ಲದೇ, ಬಲಿಜಿಗರಿಗೆ ಮೀಸಲು ನೀಡಿದ್ದು ಬಿಜೆಪಿ ಸರಕಾರ ಎಂದು ಹೊಗಳಲು ಶುರು ಮಾಡಿದರು. ಬಳಿಕ ಬಂದ ವೇಣುಗೋಪಾಲ್ ಎನ್ನುವವರು, ಸಮುದಾಯ, ಧಾರ್ಮಿಕ ವಿಷಯವನ್ನು ಚರ್ಚಿಸುವು ದಕ್ಕಿಂತ ಹೆಚ್ಚಾಗಿ ಮೋದಿ, ಬಿಜೆಪಿ ಎಂದು ಮಾತನಾಡಿಕೊಂಡು ಹೋದರು. ಈ ಎಲ್ಲ ಮಾತುಗಳು ವೈಯಕ್ತಿಕವಾಗಿ ಕಿರಿಕಿರಿ ಉಂಟುಮಾಡಿದರೂ, ಸಭಾಮರ್ಯಾದೆಗಾಗಿ ಸುಮ್ಮನೆ ಕುಳಿತಿದ್ದೆ. ಬಳಿಕ ನನಗೆ ಮಾತನಾಡಲು ಆಹ್ವಾನಿಸಿದಾಗ, ನಾನು ಮಾತನಾಡು ತ್ತಿದ್ದಂತೆ, ಒಂದು ಗುಂಪು ನನ್ನ ಹಾಗೂ ಕಾಂಗ್ರೆಸ್ ಸರಕಾರದ ವಿರುದ್ಧ ಮಾತನಾಡಲು ಶುರು ಮಾಡಿದರು. ಐದಾರು ನಿಮಿಷ ನಾನು ಸಮಾಧಾನವಾಗಿಯೇ ಎಲ್ಲರನ್ನು ಕೂರಿಸಲು ಪ್ರಯತ್ನಿಸಿದೆ. ಆದರೆ ಅವರು ಪುನಃ ಅದೇ ಚಾಳಿ ಮುಂದುವರಿಸಿದ್ದರಿಂದ ನಾನೂ ಸಹನೆ ಕಳೆದು ಕೊಂಡು, ‘ರೀ ಕೂತ್ಕೊಳ್ಳಿ.. ರಾಜ್ಯದಲ್ಲಿರುವುದು ಸಿದ್ದರಾಮಯ್ಯ ಸರಕಾರ.. ನಿಮ್ಮಪ್ಪನ ಸರಕಾರವಲ್ಲ’ ಎಂದು ಹೇಳಿ ಮೈಕ್ ಬದಿಗಿಟ್ಟು ಸಭೆಯಿಂದ ನಿರ್ಗಮಿಸಿದೆ.

ಅಷ್ಟಕ್ಕೂ ಅಂದು ಆಗಿದ್ದೇನು?

ಕೈವಾರ ತಾತಯ್ಯ ಅವರ ಜಯಂತಿಯ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿ ಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಾನು, ಸಂಸದ ಪಿ.ಸಿ. ಮೋಹನ್, ಪರಿಷತ್‌ ನ ಹಿರಿಯ ಸದಸ್ಯರಾದ ಎಂ.ಆರ್. ಸೀತಾರಾಂ ಸೇರಿದಂತೆ ಸಮುದಾಯದ ಹಲವು ಗಣ್ಯರು ಭಾಗವಹಿಸಿದ್ದೆವು. ಈ ವೇಳೆ ವೈಯಕ್ತಿಕ ಕಾರಣ ನಿಮಿತ್ತ ಸೀತಾರಾಂ ಅವರು ಪುಷ್ಪನಮನ ಸಲ್ಲಿಸಿದ ಬಳಿಕ, ಭಾಷಣ ಮಾಡಿ ಹೊರಟರು. ಅವರು ಹೋಗುತ್ತಿದ್ದಂತೆ ಪಿ.ಸಿ. ಮೋಹನ್ ಆಪ್ತ ಸುರೇಶ್ ಎನ್ನುವವರು ಬಿಜೆಪಿ ಪರ ಘೋಷಣೆ ಕೂಗಲು ಶುರು ಮಾಡಿದರು. ಸರಕಾರಿ ಕಾರ್ಯಕ್ರಮದಲ್ಲಿ ಪಕ್ಷದ ಪರವಾಗಿ ಘೋಷಣೆ ಬೇಡವೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರು ಆತನನ್ನು ಕೂರಿಸಿದರು. ಬಳಿಕ ಇಡೀ ಕಾರ್ಯಕ್ರಮದಲ್ಲಿ ಹಲವು ನಾಯಕರು ತಾತಯ್ಯ ಅವರ ಸ್ಮರಣೆ ಮಾಡುವುದಕ್ಕಿಂತ ಬಿಜೆಪಿ ಹಾಗೂ ಬಿಜೆಪಿ ನಾಯಕರ ಜಪ ಮಾಡಿದ್ದು ಸಭಾ ಮರ್ಯಾದೆಗೆ ಧಕ್ಕೆಯಾಯಿತು.

ನೀವು ಸಹನೆ ಕಳೆದುಕೊಂಡಿದ್ದೇಕೆ?

ಎಂ.ಆರ್. ಸೀತಾರಾಂ ಅವರು ತೆರಳುವ ತನಕ ಸುಮ್ಮನಿದ್ದು, ಅವರು ಹೋಗುತ್ತಿದ್ದಂತೆ ಬಿಜೆಪಿ ಪರ ಘೋಷಣೆ ಶುರು ಮಾಡಿದ್ದು ಸುರೇಶ್ ಅವರು. ಅಲ್ಲಿಗೆ ನಿಲ್ಲದೇ, ಬಲಿಜಗರಿಗೆ ಮೀಸಲು ನೀಡಿದ್ದು ಬಿಜೆಪಿ ಸರಕಾರ ಎಂದು ಹೊಗಳಲು ಶುರು ಮಾಡಿದರು. ಬಳಿಕ ಬಂದ ವೇಣು ಗೋಪಾಲ್ ಎನ್ನುವವರು, ಸಮುದಾಯ, ಧಾರ್ಮಿಕ ವಿಷಯವನ್ನು ಚರ್ಚಿಸುವು ದಕ್ಕಿಂತ ಹೆಚ್ಚಾಗಿ ಮೋದಿ, ಬಿಜೆಪಿ ಎಂದು ಮಾತಾಡಿಕೊಂಡು ಹೋದರು. ಈ ಎಲ್ಲ ಮಾತುಗಳು ವೈಯಕ್ತಿಕವಾಗಿ ಕಿರಿಕಿರಿ ಉಂಟು ಮಾಡಿದರೂ, ಸಭಾ ಮರ್ಯಾದೆಗಾಗಿ ಸುಮ್ಮನೆ ಕೂತ್ತಿದೆ. ಅದಾದ ಬಳಿಕ ನನಗೆ ಮಾತನಾಡಲು ಆಹ್ವಾನಿಸಿದಾಗ, ನಾನು ಮಾತ ನಾಡುತ್ತಿದ್ದಂತೆ ಒಂದು ಗುಂಪು ನನ್ನ ಮೇಲೆ ಹಾಗೂ ಕಾಂಗ್ರೆಸ್ ಸರಕಾರದ ವಿರುದ್ಧ ಮಾತನಾಡಲು ಶುರು ಮಾಡಿದರು. ಸುಮಾರು ಐದಾರು ನಿಮಿಷ ನಾನು ಸಮಾಧಾನ ವಾಗಿಯೇ ಎಲ್ಲರನ್ನು ಕೂರಿಸಲು ಪ್ರಯತ್ನಿಸಿದೆ. ಆದರೆ ಅವರು ಪುನಃ ಅದೇ ಛಾಳಿಯನ್ನು ಮುಂದು ವರೆಸಿದ್ದರಿಂದ ನಾನೂ ಸಹನೆ ಕಳೆದುಕೊಂಡು, ‘ರೀ ಕುತ್ಕೊಳ್ಳಿ.. ರಾಜ್ಯ ದಲ್ಲಿರುವುದು ಸಿದ್ದರಾಮಯ್ಯ ಸರಕಾರ.. ನಿಮ್ಮಪ್ಪನ ಸರಕಾರವಲ್ಲ’ ಎಂದು ಹೇಳಿ ಮೈಕ್ ಬದಿಗಿಟ್ಟು ಸಭೆಯಿಂದ ನಿರ್ಗಮಿಸಿದೆ.

ಆ ಕಾರ್ಯಕ್ರಮದಲ್ಲಿ ನಿಮ್ಮ ವಿರುದ್ಧ ಮುಗಿಬಿದ್ದಿದ್ದು ಏಕೆ?

ಕೈವಾರ ತಾತಯ್ಯ ಅವರ ಕಾರ್ಯಕ್ರಮ ಪಕ್ಷಾತೀತ ಕಾರ್ಯಕ್ರಮ. ಆದರೆ ಪಿ.ಸಿ.ಮೋಹನ್ ಅವರು ತಾವು ಬಲಿಜ ನಾಯಕ ಎಂದು ತೋರಿಸಿಕೊಳ್ಳುವ ಉತ್ಸಾಹದಲ್ಲಿ ನನ್ನನ್ನು ‘ಟಾರ್ಗೆಟ್’ ಮಾಡಿ ನನ್ನ ವಿರುದ್ಧ ಈ ರೀತಿ ಮುಗಿಬೀಳುವಂತೆ ಮಾಡಿದ್ದಾರೆ. ಈ ವಿಷಯ ವನ್ನು ಸೂಕ್ಷ್ಮವಾಗಿ ಗಮನಿಸಿದರೆ, ನಾನು ಶಾಸಕನಾಗಿ ಆಯ್ಕೆಯಾಗುವ ಮೊದಲು, ಪಿ.ಸಿ. ಮೋಹನ್ ತಾವೊಬ್ಬರೇ ಬಲಿಜ ಸಮುದಾಯದ ನಾಯಕ, ಹಿಂದುಳಿದ ವರ್ಗಗಳ ನಾಯಕ ಎಂದು ತೋರಿಸಿಕೊಂಡು ಕೇಂದ್ರ ಸರಕಾರದಲ್ಲಿ ಸಚಿವ ಸ್ಥಾನ ಪಡೆಯುವ ಪ್ರಯತ್ನ ದಲ್ಲಿದ್ದರು. ಮೋಹನ್ ಪ್ರಕಾರ, ಇಡೀ ಬಲಿಜ ಸಮುದಾಯ ಅವರ ಪರವಾಗಿದೆ ಎನ್ನುವ ಭಾವನೆಯಿದೆ. ಆದರೆ ನಾನು ಶಾಸಕನಾಗಿ, ಸಮುದಾಯದ ಮನೆಮಗನಾಗಿ ಬೆಳೆಯುತ್ತಿರು ವುದರಿಂದ ಅವರಿಗೆ ‘ಅಭದ್ರತೆ’ ಕಾಡುತ್ತಿದೆ. ಈಗಾಗಲೇ ಬಲಿಜಿಗರು ಪ್ರದೀಪ್ ಜತೆ ಇದ್ದಾರೆ. ಭವಿಷ್ಯದಲ್ಲಿ ಇಡೀ ಸಮುದಾಯ ಪ್ರದೀಪ್ ಮೂಲಕ ಕಾಂಗ್ರೆಸ್‌ಗೆ ಹೋಗುತ್ತಾರೆ ಎನ್ನುವ ಆತಂಕದಿಂದ ಈ ರೀತಿ ಮಾಡುತ್ತಿದ್ದಾರೆ.

ಮೋಹನ್ ಅವರಿಗೆ ನಿಮ್ಮನ್ನು ನೋಡಿದರೆ ಆತಂಕವೇಕೆ?

ನಾನು ಶಾಸಕನಾಗಿ ಆಯ್ಕೆಯಾದ ಬಳಿಕ ರಾಜ್ಯದ ಯಾವುದೇ ಭಾಗದಲ್ಲಿ ಸಮುದಾಯದ ಕಾರ್ಯಕ್ರಮ ನಡೆದರೂ ನನ್ನನ್ನು ಕರೆಯುತ್ತಾರೆ. ಮೊದಲ ಬಾರಿ ಚಿಕ್ಕಬಳ್ಳಾಪುರದಿಂದ ಆಯ್ಕೆಯಾಗಿದ್ದರೂ, ಕೋಲಾರ, ರಾಯಚೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳಿಗೆ ನನ್ನನ್ನು ಆಹ್ವಾನಿಸಿದ್ದಾರೆ. ಇದರಿಂದ ದಿನದಿಂದ ದಿನಕ್ಕೆ ಸಮು ದಾಯದಲ್ಲಿ ನನ್ನ ಪ್ರಾಬಲ್ಯ ಹೆಚ್ಚಾಗುತ್ತಿದೆ. ಇದನ್ನು ಸಹಿಸಲು ಆಗದೇ ಮೋಹನ್ ಅವರು ಈ ರೀತಿ ಮಾಡುತ್ತಿದ್ದಾರೆ. ಇನ್ನು ಕರ್ನಾಟಕದಲ್ಲಿರುವ ಬಲಿಜಿಗರು ಮಾತ್ರವಲ್ಲದೇ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿರುವವರು ನನ್ನೊಂದಿಗೆ ಆತ್ಮೀಯವಾಗಿದ್ದಾರೆ. ಈ ಹಿಂದೆ ಹೈದರಾಬಾದ್‌ನಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಚಂದ್ರಬಾಬು ನಾಯ್ಡು ಹಾಗೂ

ರೇವಂತ್ ರೆಡ್ಡಿ ಅವರ ವೇದಿಕೆಯಲ್ಲಿ ನನ್ನನ್ನು ಆಹ್ವಾನಿಸಿದ್ದರು. ನನ್ನನ್ನು ಸಮು ದಾಯದ ಸ್ಟಾರ್ ರೀತಿ ಬಿಂಬಿಸುತ್ತಿದ್ದಾರೆ. ಇದು ಮೋಹನ್ ಅವರಿಗೆ ಸಹಿಸಲು ಸಾಧ್ಯ ವಾಗುತ್ತಿಲ್ಲ. ನಿನ್ನೆ ಮೊನ್ನೆ ಬಂದವರು ‘ಹಿರೋ’ ಆಗುತ್ತಿದ್ದಾರೆ ಎನ್ನುವ ಅಸಮಾಧಾನ ಮೊದಲಿನಿಂದಲೂ ಇತ್ತು. ಆ ಅಸಮಧಾನ ಶುಕ್ರವಾರದ ಕಾರ್ಯಕ್ರಮದಲ್ಲಿ ಸ್ಫೋಟ ಗೊಂಡಿದೆ.

ಸಮುದಾಯದಲ್ಲಿ ನಿಮಗೆ ಸಿಗುತ್ತಿರುವ ಸ್ಟಾರ್‌ಗಿರಿಗೆ ಅಸೂಯೆಯೇ?

ಈ ಮಾತು ನೂರಕ್ಕೆ ನೂರು ಸತ್ಯ. ಅಸೂಯೆಯಿಂದಲೇ ಈ ರೀತಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ. ಇಡೀ ಕಾರ್ಯಕ್ರಮವನ್ನು ಗಮನಿಸಿದರೆ, ನಾನು ಎಲ್ಲಿಯೂ ರಾಜಕೀಯ ಮಾತಾಡಿಲ್ಲ. ಆದರೆ ಅವರ ಕಡೆಯವರೇ, ಬಿಜೆಪಿ, ಮೋದಿ, ಯಡಿಯೂರಪ್ಪ ಎಂದು ಹೇಳಿಕೊಂಡಿದ್ದರು. ಹಾಗೇ ನೋಡಿದರೆ, ನನಗೆ ಭಾಷಣ ಮಾಡಲೇ ಬಿಡದಿರುವಾಗ ರಾಜಕೀಯ ಮಾತನಾಡಲು ಹೇಗೆ ಸಾಧ್ಯ? ನನಗೆ ಸಮುದಾಯದ ಬಗ್ಗೆ ಮಾತನಾಡಬೇಕು ಎನ್ನುವ ಉದ್ದೇಶವಿತ್ತು. ಆದರೆ ಅದಕ್ಕೆ ಅಡ್ಡಿಪಡಿಸಿದರು.

‘ನಿಮ್ಮಪ್ಪನ ಸರಕಾರವಿಲ್ಲ’ ಎನ್ನುವ ಪದವೇ ಈಗಿನ ವಿವಾದ ಎನಿಸುವುದಿಲ್ಲವೇ?

ಇದರಲ್ಲಿ 2 ವಿಷಯಗಳಿವೆ. ಮೊದಲಿಗೆ ನಾನು 5 ನಿಮಿಷ ಎಲ್ಲರನ್ನೂ ಸಮಾಧಾನ ವಾಗಿ ಕೂತು ಕೊಳ್ಳುವಂತೆ ಮನವಿ ಮಾಡಿದೆ. ಆದರೆ ಯಾರೊಬ್ಬರೂ ನನ್ನ ಮಾತು ಕೇಳಲಿಲ್ಲ. ಆದ್ದರಿಂದ ನನಗೂ ಸಹನೆಯ ಮಟ್ಟ ದಾಟಿದ ಮೇಲೆ ಆ ಪದ ಪ್ರಯೋಗ ಮಾಡಿದ್ದೇನೆ. ಎರಡನೇಯದ್ದಾಗಿ, ಬಿಜೆಪಿ ನಾಯಕರು ವೇದಿಕೆಯ ಮೇಲೆ ಪುಂಖಾನುಪುಂಖವಾಗಿ ಯಡಿಯೂರಪ್ಪ, ಬಿಜೆಪಿ ಸರಕಾರ, ಮೋದಿ ಎಂದು ಮಾತನಾಡಬಹುದು. ಆದರೆ ನಾನು ರಾಜ್ಯದಲ್ಲಿರುವುದು ಕಾಂಗ್ರೆಸ್ ಸರಕಾರ ಎಂದ ಕೂಡಲೇ ಕೋಪಿಸಿಕೊಳ್ಳುವುದೇಕೆ? ನನ್ನ ಶೈಲಿಯಲ್ಲಿ ಮಾತನಾಡಿದ್ದೇನೆ ಅಷ್ಟೆ.

ಪ್ರಲ್ಹಾದ್ ಜೋಶಿ ಅವರು ಸಭ್ಯತೆಯ ಬಗ್ಗೆ ಮಾತಾಡಿದ್ದಾರೆ?

ಗೌರವಾನಿತ್ವ ಪ್ರಲ್ಹಾದ್ ಜೋಶಿ ಅವರು ನನಗೆ ಸಭ್ಯತೆ ಪಾಠ ಮಾಡಲು ಬಂದಿದ್ದಾರೆ. ನನಗೆ ಪಾಠ ಮಾಡುವ ಮೊದಲು, ಅವರ ಪಕ್ಷದ ಬಸನಗೌಡ ಪಾಟೀಲ್ ಯತ್ನಾಳ್, ಸಿ.ಟಿ. ರವಿ ಅವರಿಗೆ ಮಾಡಲಿ. ಬಳಿಕ ಬೇಕಿದ್ದರೆ ನನನಗೆ ಮಾಡಲಿ. ಇನ್ನು ‘ನಿಮ್ಮಪ್ಪನ ಸರಕಾರ’ ಎಂದು ಬಳಸಿರುವ ಬಗ್ಗೆ ಮಾತಾಡಿದ್ದಾರೆ. ಆದರೆ, ಈ ಪದವನ್ನು ಬಳಸಿರುವುದು ನಾನೇ ಮೊದಲಲ್ಲ ಎನ್ನುವುದನ್ನು ಪ್ರಲ್ಹಾದ್ ಜೋಶಿ ಅವರು ಅರ್ಥಮಾಡಿಕೊಳ್ಳಬೇಕು. ಅವರ ಪಕ್ಷ ರವಿ, ಯತ್ನಾಳ್ ಶಬ್ದ ಕೋಶದ ತುಂಬೆಲ್ಲ ಇದೇ ಶಬ್ದಗಳು ತುಂಬಿವೆ ಎನ್ನುವುದನ್ನು ನೆನಪಿಸಲು ಬಯಸುವೆ. ಬಲಿಜ ಸಮುದಾಯದ ಏಕೈಕ ಶಾಸಕನಾಗಿರುವ ನನ್ನನ್ನು ಚಿರಂ ಜೀವಿ ಅವರು ಎರಡು ಬಾರಿ ಅಭಿನಂದಿಸಿದ್ದಾರೆ. ಆಂಧ್ರಪ್ರದೇಶ, ತೆಲಂಗಾಣ, ತಮಿಳು ನಾಡಿನ ನನ್ನ ಸಮುದಾ ಯದ ಬಂಧುಗಳು ನನ್ನೊಂದಿಗೆ ಬರುತ್ತಿದ್ದಾರೆ. ಇದನ್ನು ಸಹಿಸಲು ಆಗದೇ ಪಿ.ಸಿ. ಮೋಹನ್ ಈ ರೀತಿ ಮಾಡಿದ್ದಾರೆ.

ಪಿ.ಸಿ. ಮೋಹನ್ ಈ ಹಿಂದೆ ತಾವೊಬ್ಬರೇ ಬಲಿಜ ಸಮುದಾಯದ ಮುಖಂಡ, ಹಿಂದುಳಿದ ವರ್ಗಗಳ ನಾಯಕ ಎಂದು ತೋರಿಸಿಕೊಂಡು ಕೇಂದ್ರ ಸರಕಾರದಲ್ಲಿ ಸಚಿವ ಸ್ಥಾನ ಪಡೆ ಯುವ ಪ್ರಯತ್ನದಲ್ಲಿದ್ದರು. ಆದರೆ ನಾನು ಶಾಸಕನಾಗಿ, ಸಮುದಾಯದ ಮನೆಮಗನಾಗಿ ಬೆಳೆಯುತ್ತಿರುವುದರಿಂದ ಅವರಿಗೆ ‘ಅಭದ್ರತೆ’ ಕಾಡುತ್ತಿದೆ.

ಈಗಾಗಲೇ ಬಲಿಜಿಗರು ಪ್ರದೀಪ್ ಜತೆ ಇದ್ದಾರೆ. ಭವಿಷ್ಯದಲ್ಲಿ ಇಡೀ ಸಮುದಾಯ ಪ್ರದೀಪ್ ಮೂಲಕ ಕಾಂಗ್ರೆಸ್‌ಗೆ ಹೋಗುತ್ತಾರೆ ಎನ್ನುವ ಆತಂಕದಿಂದ ಈ ರೀತಿ ಮಾಡುತ್ತಿದ್ದಾರೆ.

- ಪ್ರದೀಪ್ ಈಶ್ವರ್ ಶಾಸಕ

*

ಮೊದಲ ಬಾರಿಗೆ ಶಾಸಕನಾದರೂ, ರಾಜ್ಯಾದ್ಯಂತ ನಡೆಯುವ ಬಲಿಜ ಸಮುದಾಯದ ಕಾರ್ಯಕ್ರಮಗಳಿಗೆ ನನ್ನನ್ನು ಕರೆಯುತ್ತಿರುವುದು ಬಿಜೆಪಿಗೆ ಅಭದ್ರತೆ ಮೂಡಿದೆ.

ನಾನು ರಾಜಕೀಯವಾಗಿ ಬೆಳೆಯುತ್ತಿರುವುದನ್ನು ನೋಡಿ ಈ ರೀತಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ.

ಕಾರ್ಯಕ್ರಮದಲ್ಲಿ ನಾನು ರಾಜಕೀಯ ಮಾತಾಡಿಲ್ಲ. ಆದರೆ ಅವರ ಕಡೆ ಯವರೇ, ಬಿಜೆಪಿ, ಮೋದಿ, ಯಡಿಯೂರಪ್ಪ ಎಂದು ಹೇಳಿಕೊಂಡಿದ್ದರು.

ನನಗೆ ಭಾಷಣ ಮಾಡಲೇ ಬಿಡದಿರುವಾಗ ರಾಜಕೀಯ ಮಾತನಾಡಲು ಹೇಗೆ ಸಾಧ್ಯ? ನನಗೆ ಸಮುದಾ ಯದ ಬಗ್ಗೆ ಮಾತನಾಡಬೇಕು ಎನ್ನುವ ಉದ್ದೇಶವಿತ್ತು.

ಪ್ರಲ್ಹಾದ್ ಜೋಶಿ ಅವರು ನನಗೆ ಸಭ್ಯತೆ ಪಾಠ ಮಾಡುವ ಮೊದಲು ಅವರ ಪಕ್ಷದ ಬಸನಗೌಡ ಪಾಟೀಲ್ ಯತ್ನಾಳ್, ಸಿ.ಟಿ. ರವಿ ಅವರಿಗೆ ಮಾಡಲಿ. ಬಳಿಕ ಬೇಕಿದ್ದರೆ ನನಗೆ ಮಾಡಲಿ.