ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

‌Dr K V Rajendra Interview: ವಿದೇಶಿ ಪ್ರವಾಸಿಗರೇ ಕೈಟ್‌ ಟಾರ್ಗೆಟ್

ಮುಂದಿನ ಎರಡ್ಮೂರು ವರ್ಷಗಳಲ್ಲಿ ಕರ್ನಾಟಕಕ್ಕೆ ಒಂದು ಲಕ್ಷಕ್ಕೂ ಹೆಚ್ಚು ವಿದೇಶಿಗ ರನ್ನು ಸೆಳೆಯುವ ಗುರಿ ಹೊಂದಿದ್ದೇವೆ. ಕೈಟ್ ಸಮಾವೇಶದಲ್ಲಿ ರಾಜ್ಯ, ಹೊರರಾಜ್ಯ ಹಾಗೂ ಹೊರ ದೇಶದ ಟೂರ್ ಆಪರೇಟರ್‌ಗಳ ಸಮ್ಮಿಲನದಿಂದ ಈ ಗುರಿ ತಲುಪಲು ಸಹಾಯವಾಗಲಿದೆ ಎಂದು ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ವಿ.ರಾಜೇಂದ್ರ ಅವರು ವಿಶ್ವವಾಣಿ ವಿಶೇಷ ಸಂದರ್ಶನದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ.

ವಿದೇಶಿ ಪ್ರವಾಸಿಗರೇ ಕೈಟ್‌ ಟಾರ್ಗೆಟ್

Profile Ashok Nayak Feb 26, 2025 4:04 PM

ಮುಂದಿನ ಎರಡ್ಮೂರು ವರ್ಷಗಳಲ್ಲಿ ಕರ್ನಾಟಕಕ್ಕೆ ಒಂದು ಲಕ್ಷಕ್ಕೂ ಹೆಚ್ಚು ವಿದೇಶಿಗ ರನ್ನು ಸೆಳೆಯುವ ಗುರಿ ಹೊಂದಿದ್ದೇವೆ. ಕೈಟ್ ಸಮಾವೇಶದಲ್ಲಿ ರಾಜ್ಯ, ಹೊರರಾಜ್ಯ ಹಾಗೂ ಹೊರದೇಶದ ಟೂರ್ ಆಪರೇಟರ್‌ಗಳ ಸಮ್ಮಿಲನದಿಂದ ಈ ಗುರಿ ತಲುಪಲು ಸಹಾಯವಾಗಲಿದೆ ಎಂದು ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ವಿ.ರಾಜೇಂದ್ರ ಅವರು ವಿಶ್ವವಾಣಿ ವಿಶೇಷ ಸಂದರ್ಶನದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ.

ಕೈಟ್ ಸಮಾವೇಶದ ಉದ್ದೇಶವೇನು?

ಕರ್ನಾಟಕ ಇಂಟರ್‌ನ್ಯಾಷನಲ್ ಟ್ರಾವೆಲ್ ಎಕ್ಸ್‌ಪೋವನ್ನು ಪ್ರವಾಸೋದ್ಯಮ ಇಲಾಖೆ ಹಮ್ಮಿಕೊಳ್ಳುತ್ತಿದೆ. ಕರ್ನಾಟಕದ ಪ್ರವಾಸಿ ತಾಣಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೋರಿಸಲು ಹಾಗೂ ನಮ್ಮಲ್ಲಿರುವ ಭಿನ್ನ-ವಿಭಿನ್ನ ಪ್ರವಾಸಿ ತಾಣಗಳನ್ನು ಪರಿಚಯಿಸಲು ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದು ಎರಡನೇ ಎಕ್ಸ್ ಪೋ ಆಗಿದ್ದು, ಪ್ರವಾಸಿ ತಾಣಗಳನ್ನು ಪರಿಚಯಿಸುವ ಜತೆಜತೆಗೆ ಕರ್ನಾಟಕದಲ್ಲಿರುವ ಟೂರ್ ಆಪರೇಟರ್‌ ಗಳೊಂದಿಗೆ ಅಂತಾರಾಷ್ಟ್ರೀಯ, ರಾಷ್ಟ್ರೀಯ ಟೂರ್ ಆಪರೇಟರ್‌ಗಳನ್ನು ಪರಿಚಯಿಸುವು ದಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಪ್ರವಾಸಿಗರನ್ನು ಸೆಳೆಯಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: M Srinivas Interview: ಕರ್ನಾಟಕನೇ ಒಂದು ಜಗತ್ತು; ಅದನ್ನು ವಿಶ್ವಕ್ಕೆ ತೋರಿಸಬೇಕಿದೆ

ಈ ಸಮಾವೇಶಕ್ಕೆ ಯಾವ ಯಾವ ದೇಶಗಳಿಂದ ಬರುತ್ತಿದ್ದಾರೆ?

ಕೈಟ್‌ನಲ್ಲಿ ಭಾಗವಹಿಸುವ ಬಗ್ಗೆ 300ಕ್ಕೂ ಹೆಚ್ಚು ಪ್ರವಾಸಿ ಉದ್ಯಮದಲ್ಲಿರುವ ಆಸಕ್ತರು ವಿವಿಧ ದೇಶಗಳಿಂದ ಅರ್ಜಿ ಸಲ್ಲಿಸಿದ್ದರು. ಆದರೆ ಆಯ್ಕೆ ಸಮಿತಿಯೂ ಆಯ್ದ ಅಂತಾ ರಾಷ್ಟ್ರೀಯ ಟೂರ್ ಆಪರೇಟರ್‌ಗಳಿಗೆ ಅವಕಾಶ ನೀಡಲಾಗಿದೆ. ಸುಮಾರು 36 ದೇಶಗಳ ಟೂರ್ ಆಪರೇಟರ್‌ಗಳು ಬರುತ್ತಿದ್ದಾರೆ. ಅಮೆರಿಕ, ರಷ್ಯಾ, ಕೀನ್ಯಾ, ಆಫ್ರಿಕಾ ದೇಶ, ಜಪಾನ್, ಫ್ರಾನ್ಸ್, ಯುಕೆ ಸೇರಿದಂತೆ ಹಲವು ದೇಶಗಳ ಸ್ಟೇಕ್ ಹೋಲ್ಡರ‍್ಸ್ ಬರುತ್ತಿದ್ದಾರೆ.

15ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಮಾಧ್ಯಮಗಳು, ಇನ್ಲುಯೆನ್ಸರ್‌ಗಳನ್ನು ಆಯ್ಕೆ ಮಾಡಲಾಗಿದೆ. ಇನ್ನು ದೇಶಿಯವಾಗಿ 120ಕ್ಕೂ ಹೆಚ್ಚು ಉದ್ಯಮಿಗಳು, 233 ಟೂರ್ ಆಪರೇಟರ್‌ಗಳು ಭಾಗವಹಿಸುತ್ತಿದ್ದಾರೆ. ಒಟ್ಟಾರೆ 370ಕ್ಕೂ ಹೆಚ್ಚು ಪ್ರವಾಸಿ ಉದ್ಯಮದ ವಿವಿಧ ಕ್ಷೇತ್ರದ ಉದ್ಯಮಿಗಳು ಬರುತ್ತಿದ್ದಾರೆ.

ಆಗಮಿಸುವವರಿಗೆ ‘ಕರ್ನಾಟಕ ದರ್ಶನ’ ಹೇಗೆ ಮಾಡಿಸುತ್ತೀರಾ?

ರಾಜ್ಯಕ್ಕೆ ಆಗಮಿಸುತ್ತಿರುವ 120ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಉದ್ಯಮಿಗಳು ಹಾಗೂ ರಾಜ್ಯದ 233 ರಾಜ್ಯದ ಟೂರ್ ಆಪರೇಟರ್‌ಗಳಿಗೆ ನಾವು ಕರ್ನಾಟಕ ದರ್ಶನವನ್ನು ಮಾಡಿಸುವುದಕ್ಕಾಗಿ ಫ್ಯಾಮ್ ಟೂರ್ ಆರಂಭಿಸಿದ್ದೇವೆ. ಈಗಾಗಲೇ ವಿದೇಶಿ ಪ್ರವಾಸಿಗರನ್ನು ಎರಡರಿಂದ ಐದು ದಿನಗಳ ಅವಿಗೆ ಪ್ರವಾಸ ಮಾಡಿಸಲಾಗಿದೆ. ಇಲ್ಲಿರುವ ಹೋಟೆಲ್, ರೆಸಾರ್ಟ್, ಸಾಹಸಮಯಿ ಸ್ಥಳಗಳನ್ನು ತೋರಿಸುತ್ತಿದ್ದೇವೆ. ಇದರೊಂದಿಗೆ ನಮ್ಮಲ್ಲಿರುವ ಹೋಟೆಲ್‌ಗಳ ಸೌಲಭ್ಯ, ಸುರಕ್ಷತೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ಮಾಹಿತಿ ನೀಡಲಾಗಿದೆ. ವಿದೇಶಿ ಪ್ರವಾಸಿಗರು ಈಗಾಗಲೇ ಬಹುತೇಕ ಟ್ರಿಪ್ ಮುಗಿಸಿದ್ದು, ಕಾರ್ಯ ಕ್ರಮದ ಬಳಿಕ ದೇಶಿ ಟೂರ್ ಆಪರೇಟರ್‌ಗಳಿಗೆ ಆಯೋಜಿಸಲಾಗುವುದು. ಕರ್ನಾಟಕದಲ್ಲಿ ಏನಿದೆ ಎನ್ನುವುದನ್ನು ಬಾಯಿ ಮಾತಲ್ಲಿ ಹೇಳುವ ಬದಲು, ಕಣ್ಣಾರೆ ತೋರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಇದರಿಂದ ರಾಜ್ಯದಲ್ಲಿರುವ ವೈವಿಧ್ಯಮಯ ಸ್ಥಳಗಳನ್ನು ಪರಿಚಯಿಸಲು ಸಾಧ್ಯವಾಗುತ್ತದೆ.

ಸಮಾವೇಶದಿಂದ ಏನೆಲ್ಲ ನಿರೀಕ್ಷೆ ಮಾಡುತ್ತಿದ್ದೀರಾ?

ಯಾವುದೇ ಅಂತಾರಾಷ್ಟ್ರೀಯ ಪ್ರವಾಸಿಗರು ಒಂದು ವರ್ಷದ ಮೊದಲು ಆಲೋಚನೆ ಮಾಡುತ್ತಾರೆ. ಆದ್ದರಿಂದ ಇಂದಿನ ಎಕ್ಸ್‌ಪೋದ ಬಳಿಕ ನಾಳೆಯೇ ಪ್ರವಾಸಿಗರು ಬರುವು ದಿಲ್ಲ. ಅಂತಾರಾಷ್ಟ್ರೀಯ ಪ್ರವಾಸಿಗರಿಂದ ಪ್ರತಿಕ್ರಿಯೆಗೆ ಕನಿಷ್ಠ ಒಂದೆರೆಡು ವರ್ಷ ಬೇಕಾಗುತ್ತದೆ. ಈ ಸಮಾವೇಶದಲ್ಲಿ 350 ಹೊರರಾಜ್ಯ, ಹೊರದೇಶದ ಟೂರ್ ಆಪರೇಟರ್ಗಳು, 150 ರಾಜ್ಯದ ಸ್ಟೇಕ್ ಹೋಲ್ಡರ್‌ಗಳು ಭಾಗವಹಿಸುವುದರಿಂದ ಸುಮಾರು 14ರಿಂದ 18 ಸಾವಿರ ಸಭೆ ನಡೆಯುವ ನಿರೀಕ್ಷೆಯಿದೆ.

ಈ ಮೂಲಕ ನಮ್ಮಲ್ಲಿರುವ ಅನೇಕ ತಾಣಗಳನ್ನು ಹೊರಜಗತ್ತಿಗೆ ಪರಿಚಯವಾಗುತ್ತದೆ. ಮುಂದಿನ ಒಂದು ವರ್ಷದ ಬಳಿಕ ಕನಿಷ್ಠ ಒಂದು ಲಕ್ಷ ವಿದೇಶಿ ಪ್ರವಾಸಿಗರನ್ನು ಸೆಳೆ ಯುವ ನಿರೀಕ್ಷೆಯಿದೆ. ಕರ್ನಾಟಕ್ಕೆ ಅನೇಕರು ಬ್ಯುಸಿನೆಸ್ ಟ್ರಿಪ್ ಬರುತ್ತಾರೆ. ಆದರೆ ಮುಂದಿನ ದಿನಗಳಲ್ಲಿಈ ಬ್ಯುಸಿನೆಸ್ ಟ್ರಿಪ್ ಜತೆಗೆ ಪ್ರವಾಸಕ್ಕೂ ಸಮಯ ಮಾಡಿಕೊಂಡು ಬರುವಂತೆ ಮಾಡಬೇಕಿದೆ. ದೇಶಿಯ ಪ್ರವಾಸಿಗರನ್ನು ಸೆಳೆಯುವ ರಾಜ್ಯಗಳ ಪೈಕಿ ಕರ್ನಾ ಟಕವು ಟಾಪ್ ನಾಲ್ಕನೇ ಸ್ಥಾನದಲ್ಲಿದ್ದು, ಅದನ್ನು ಟಾಪ್ 3ಗೆ ಏರಿಕೆ ಮಾಡಬೇಕು ಎನ್ನುವ ಗುರಿಯಿದೆ. ಇದೇ ರೀತಿ ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಸೆಳೆಯುವ ವಿಷಯ ದಲ್ಲಿಯೂ ಟಾಪ್ 3ನಲ್ಲಿರಬೇಕು ಎನ್ನುವ ಗುರಿ ಇದೆ.ಪ್ರವಾಸಿಗರನ್ನು ಸೆಳೆಯುವುದು ನಿರಂತರ ಪ್ರಕ್ರಿಯೆಯಾಗಿದ್ದು, ಮುಂದಿನ ಮೂರು ವರ್ಷಗಳಲ್ಲಿ ಇದರ ಫಲಿತಾಂಶ ಸಿಗುವವಿಶ್ವಾಸವಿದೆ.

ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕಿರುವ ಸವಾಲು ಹಾಗೂ ಲಾಭಗಳೇನು?

- ಮೊದಲಿಗೆ ನಮ್ಮ ಶಕ್ತಿಯ ಬಗ್ಗೆ ನೋಡುವುದಾದರೆ, ಕರ್ನಾಟಕದಲ್ಲಿ ಮರುಭೂಮಿ ಹಾಗೂ ಹಿಮ ಬಿಟ್ಟರೆ ಇನ್ನುಳಿದ ಎಲ್ಲ ರೀತಿಯ ಪ್ರವಾಸೋದ್ಯಮದ ಸ್ಥಳಗಳು ನಮ್ಮಲ್ಲಿವೆ. ಇದರೊಂದಿಗೆ ಯುನೆಸ್ಕೋ ಗುರುತಿಸಿರುವ ನಾಲ್ಕು ಪಾರಂಪರಿಕ ತಾಣಗಳು ನಮ್ಮಲ್ಲಿವೆ. ಇದರೊಂದಿಗೆ ಎರಡು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಹಲವು ದೇಶಿಯ ವಿಮಾನ ಗಳಿವೆ. ಬಹುತೇಕ ಪ್ರವಾಸಿ ತಾಣಗಳಿಗೆ ರೈಲು ಹಾಗೂ ರಸ್ತೆ ಸಂಪರ್ಕವಿದೆ.

ಇನ್ನು ಸವಾಲುಗಳ ಬಗ್ಗೆ ನೋಡುವುದಾದರೆ, ಕಲ್ಯಾಣ-ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗದ ಪ್ರವಾಸಿ ತಾಣಗಳಿಗೆ ಇನ್ನಷ್ಟು ಒತ್ತು ನೀಡಬೇಕಿದೆ. ಅಂತಾರಾ ಷ್ಟ್ರೀಯಪ್ರವಾಸಿಗರನ್ನು ಸೆಳೆಯಲು ಕನಿಷ್ಠ ತ್ರಿಸ್ಟಾರ್ ಹೋಟೆಲ್‌ಗಳ ಅಗತ್ಯವಿದ್ದು, ಖಾಸಗಿ ಪಾಲುದಾರರೊಂದಿಗೆ ಸೇರಿ ಇವುಗಳನ್ನು ಆರಂಭಿಸಬೇಕಿದೆ. ಪ್ರತಿಯೊಂದನ್ನು ಸರಕಾರವೇ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಖಾಸಗಿ ಪಾಲುದಾರಿಗೆ ಈ ಹಂತದಲ್ಲಿ ಮುಖ್ಯವಾಗುತ್ತದೆ.

ಅಭಿವೃದ್ಧಿ ನಿಗಮದಿಂದ ಯಾವೆಲ್ಲ ಪ್ಯಾಕೇಜ್ ಗಳನ್ನು ಆರಂಭಿಸಲಾಗಿದೆ?

- ಕೆಎಸ್‌ಟಿಡಿಸಿ ವತಿಯಿಂದ ಈಗಾಗಲೇ ನೂರಕ್ಕೂ ಹೆಚ್ಚು ಪ್ಯಾಕೇಜ್‌ಗಳನ್ನು ಆರಂಭಿಸ ಲಾಗಿದೆ. ಆದರೆ ಈ ಟೂರ್ ಪ್ಯಾಕೇಜ್‌ಗೆ ಹೆಚ್ಚಿನ ಪ್ರಚಾರದ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ನಿರ್ದಿಷ್ಟ ಪ್ಯಾಕೇಜ್‌ಗಿಂತ ಕಸ್ಟಮೈಸ್ಡ್ ಪ್ಯಾಕೇಜ್ ಗಳನ್ನು ಜನ ಕೇಳುತ್ತಿದ್ದಾರೆ. ಆದ್ದರಿಂದ ಆ ನಿಟ್ಟಿನಲ್ಲಿಯೂ ನಿಗಮ ಕಾರ್ಯನಿರ್ವಹಿಸಬೇಕಿದೆ. ಇನ್ನು ಐದು ದಶಕಗಳ ಇತಿಹಾಸವಿರುವ ನಿಗಮದಲ್ಲಿ ಕೆಲವೊಂದಷ್ಟು ಬದಲಾವಣೆ ಮಾಡಬೇಕಿದೆ. ಈ ಸಂಬಂಧ ಬಜೆಟ್‌ನಲ್ಲಿ ಅನುದಾನ ಕೇಳಲಾಗಿದೆ. ಸರಕಾರದಿಂದ ಅನುದಾನದ ನಿರೀಕ್ಷೆಯಲ್ಲಿದ್ದೇವೆ.

*

ಕೆಎಸ್‌ಟಿಡಿಸಿ ರಾಜ್ಯದಲ್ಲಿ ನಡೆಸುತ್ತಿರುವ ಹೋಟೆಲ್‌ಗಳು ಪ್ರಮುಖವಾಗಿ ಮಧ್ಯಮ
ವರ್ಗಕ್ಕೆ ಸಹಾಯವಾಗುತ್ತಿವೆ. ಮಧ್ಯಮ ವರ್ಗದವರಿಗೆ ಪ್ರವಾಸಿ ತಾಣಗಳನ್ನು ತೋರಿಸುವ ಉದ್ದೇಶದಿಂದ ಜನರಿಗೆಕೈಗೆಟಕುವ ದರಲ್ಲಿ ನಮ್ಮ ಪ್ಯಾಕೇಜ್‌ಗಳಿವೆ. ಮುಂದಿನ ದಿನಗಳಲ್ಲಿ ಹೊಸದಾಗಿ ನಾಲ್ಕು ಹೋಟೆಲ್ ಗಳನ್ನು ಆರಂಭಿಸುವಯೋಚನೆ ಇದೆ.

- ಡಾ.ಕೆ.ವಿ.ರಾಜೇಂದ್ರ

ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ

ಪ್ರವಾಸೋದ್ಯಮ ಇಲಾಖೆ ನಿದೇರ್ಶಕರು