Friday, 13th December 2024

ವಿವಾದಿತ ದೃಶ್ಯಕ್ಕೆ ಕತ್ತರಿ ಹಾಕುತ್ತೇವೆ: ಪೊಗರು ಚಿತ್ರ ನಿರ್ದೇಶಕರಿಂದ ವಿವಾದಕ್ಕೆ ತೆರೆ

ಬೆಂಗಳೂರು: ಪೊಗರು ಚಿತ್ರ ವಿವಾದ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿದ ನಿರ್ದೇಶಕ ನಂದಕಿಶೋರ್, ಯಾವುದೇ ಸಮು ದಾಯಕ್ಕೆ ನೋವುಂಟು ಮಾಡುವ ಉದ್ದೇಶವಿಲ್ಲ. ಬ್ರಾಹ್ಮಣರಿಗೆ ಅವಮಾನ ಮಾಡಬೇಕು ಎಂಬ ಉದ್ದೇಶವೂ ಇಲ್ಲ. ಆಕ್ಷೇ ಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕಲಾಗುವುದು. ಇನ್ನು ಮುಂದೆ ಇಂತಹ ತಪ್ಪುಗಳಾಗದಂತೆ ಎಚ್ಚರ ವಹಿಸುತ್ತೇವೆ. ಸಮುದಾಯದ ಬಗ್ಗೆ ನನಗೆ ಗೌರವವಿದೆ ಎಂದಿದ್ದಾರೆ.

ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದೇ ವಿಚಾರವಾಗಿ ಹೋರಾಟ ನಡೆಸುವುದಾಗಿ ಬ್ರಾಹ್ಮಣ ಸಮುದಾಯದ ಸಂಘದ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಎಚ್ಚರಿಕೆ ನಿಡಿದ್ದರು.

ಆದಷ್ಟು ಶೀಘ್ರದಲ್ಲಿ ವಿವಾದಿತ ದೃಶ್ಯಗಳನ್ನು ತೆಗೆಯುತ್ತೇವೆ. ತಾಂತ್ರಿಕವಾಗಿ ಏನೆಲ್ಲ ಬದಲಾವಣೆಗಳು ಆಗಬೇಕೋ ಅದೆಲ್ಲ ವನ್ನೂ ಮಾಡುತ್ತೇವೆ. ಆದರೆ ಸ್ವಲ್ಪ ಕಾಲಾವಕಾಶ ನೀಡಬೇಕು. ವಿವಾದಿತ ದೃಶ್ಯಕ್ಕೆ ಕತ್ತರಿ ಹಾಕುತ್ತೇವೆ ಎಂದು ತಿಳಿಸಿದರು.