ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Delhi Horror: ಬೆಡ್‌ ಬಾಕ್ಸ್‌ನಲ್ಲಿ ಮಹಿಳೆಯ ಕೊಳೆತ ಶವ ಪತ್ತೆ; ಇಬ್ಬರ ಬಂಧನ

ದೆಹಲಿಯ ಶಹದಾರಾದಲ್ಲಿರುವ ಫ್ಲಾಟ್‌ವೊಂದರಲ್ಲಿ ಹಾಸಿಗೆ ಸಂಗ್ರಹಣಾ ವಿಭಾಗದಲ್ಲಿ ಮಹಿಳೆಯ ಕೊಳೆತ ಶವ ಪತ್ತೆಯಾಗಿದೆ. ಶವ ಪತ್ತೆಯಾಗಿ ಒಂದು ದಿನದ ಒಳಗೆ ಪೊಲೀಸರು ಪ್ರಕರಣ ಭೇದಿಸಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ ಮಾಲೀಕ ಹಾಗೂ ಆತನ ಸಹಚರನೊಬ್ಬನನ್ನು ಬಂಧಿಸಲಾಗಿದೆ.

ಬೆಡ್‌ ಬಾಕ್ಸ್‌ನಲ್ಲಿ ಮಹಿಳೆಯ ಕೊಳೆತ  ಶವ ಪತ್ತೆ; ಇಬ್ಬರು ಆರೋಪಿಗಳ ಬಂಧನ

Profile Vishakha Bhat Mar 30, 2025 10:09 AM

ನವದೆಹಲಿ: ದೆಹಲಿಯ ಶಹದಾರಾದಲ್ಲಿರುವ ಫ್ಲಾಟ್‌ವೊಂದರಲ್ಲಿ ಹಾಸಿಗೆ (Delhi Horror) ಸಂಗ್ರಹಣಾ ವಿಭಾಗದಲ್ಲಿ ಮಹಿಳೆಯ ಕೊಳೆತ ಶವ ಪತ್ತೆಯಾಗಿದೆ. ಶವ ಪತ್ತೆಯಾಗಿ ಒಂದು ದಿನದ ಒಳಗೆ ಪೊಲೀಸರು ಪ್ರಕರಣ ಭೇದಿಸಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ ಮಾಲೀಕ ಹಾಗೂ ಆತನ ಸಹಚರನೊಬ್ಬನನ್ನು ಬಂಧಿಸಲಾಗಿದೆ. ಶುಕ್ರವಾರ ವಿವೇಕ್ ವಿಹಾರ್‌ನ ಸತ್ಯಂ ಎನ್‌ಕ್ಲೇವ್‌ನಲ್ಲಿರುವ ಫ್ಲಾಟ್‌ನಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ಅಧಿಕಾರಿಗಳಿಗೆ ಆಘಾತಕಾರಿ ಕರೆ ಬಂದಿತು. ಅಧಿಕಾರಿಗಳು ಸ್ಥಳಕ್ಕೆ ಬಂದಾಗ, ಮನೆ ಹೊರಗಿನಿಂದ ಲಾಕ್ ಆಗಿರುವುದನ್ನು ಕಂಡರು ಆದರೆ ಹಿಂಬಾಗಿಲಿನ ಬಳಿ ರಕ್ತದ ಕಲೆಗಳು ಕಂಡುಬಂದವು. ಒಳಗೆ ಪ್ರವೇಶಿಸಿದಾಗ, ಅವರು ಒಂದು ಭಯಾನಕ ಸಂಗತಿ ಕಂಡು ಬಂದಿದೆ.

ಪೊಲೀಸರು ಮನೆಯೊಳಗೆ ತೆರಳುತ್ತಿದ್ದಂತೆ ಆಘಾತಕಾರಿ ದೃಶ್ಯ ಕಂಡು ಬಂದಿದೆ. ಹಾಸಿಗೆಯಲ್ಲಿ 35 ವರ್ಷದ ಮಹಿಳೆಯ ಕೊಳೆತ ದೇಹವು ಕಂಡು ಬಂದಿದೆ. ಕೊಲೆಯ ತನಿಖೆಗಾಗಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಯಿತು. ತನಿಖೆಯ ಭಾಗವಾಗಿ ಮನೆಯ ಮಾಲೀಕ 65 ವರ್ಷದ ವಿವೇಕಾನಂದ ಮಿಶ್ರಾ ಎಂಬಾತನ್ನು ಆನಂದ್ ವಿಹಾರ್‌ನ ಸೂರಜ್‌ಮಲ್ ಪಾರ್ಕ್ ಬಳಿ ಬಂಧಿಸಿತ್ತು. ವಿಚಾರಣೆಯ ಸಮಯದಲ್ಲಿ, ಮಿಶ್ರಾ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆತನ ಹೇಳಿಕೆ ಮೇರೆಗೆ ಇನ್ನಿಬ್ಬರು ಬಂಧಿಸಲಾಗಿದೆ.

ಲುಧಿಯಾನದ ಅಂಜು ಅಕಾ ಅಂಜಲಿ ಎಂಬ ಮಹಿಳೆಯನ್ನು ಕೊಲೆ ಮಾಡಿರುವುದಾಗಿ ಮಿಶ್ರಾ ಒಪ್ಪಿಕೊಂಡಿದ್ದಾನೆ ಮತ್ತು ಅವನ ಇಬ್ಬರು ಸಹಚರರಾದ ಅಭಯ್ ಕುಮಾರ್ ಝಾ ಅಲಿಯಾಸ್ ಸೋನು ಮತ್ತು ಆಶಿಶ್ ಕುಮಾರ್ ಅವರ ಹೆಸರನ್ನು ಬಹಿರಂಗಪಡಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಿಶ್ರಾ ಬಂಧನದ ನಂತರ, ಶವ ವಿಲೇವಾರಿ ಮಾಡಲು ದೆಹಲಿಗೆ ಬಂದು ಪಹರ್‌ಗಂಜ್‌ನ ಹೋಟೆಲ್‌ನಲ್ಲಿ ತಂಗಿದ್ದ ಸೋನು ಬಿಹಾರಕ್ಕೆ ಪರಾರಿಯಾಗಲು ಯತ್ನಿಸಿದ್ದ. ಪೊಲೀಸ್ ತಂಡವು ಅವನು ಮಗಧ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾನೆಂದು ಪತ್ತೆಹಚ್ಚಿ, ಸರ್ಕಾರಿ ರೈಲ್ವೆ ಪೊಲೀಸರ (ಜಿಆರ್‌ಪಿ) ಸಹಾಯದಿಂದ ಅಲಿಗಢ ನಿಲ್ದಾಣದಲ್ಲಿ ಅವನನ್ನು ಬಂಧಿಸಿತು.

ಈ ಸುದ್ದಿಯನ್ನೂ ಓದಿ: Missing Case: 2023ರಲ್ಲಿಯೇ ಕೊಲೆಯಾಗಿದ್ದಾಳೆಂದು ಭಾವಿಸಲಾಗಿದ್ದ ಮಹಿಳೆ ಮನೆಗೆ ವಾಪಸ್‌, ಆಕೆಯ ಕೊಲೆ ಆರೋಪದ ಮೇಲೆ ಜೈಲಿನಲ್ಲಿರುವ ನಾಲ್ವರು

ಕೊಲೆ ಯೋಜನೆ

ವಿಚಾರಣೆ ಮತ್ತು ಕರೆ ವಿವರಗಳಿಂದ ಅಂಜಲಿಯನ್ನು ಕೊಲ್ಲುವ ಯೋಜನೆಯನ್ನು ಮಿಶ್ರಾ ಮತ್ತು ಸೋನು ರೂಪಿಸಿದ್ದರು ಎಂದು ತಿಳಿದುಬಂದಿದೆ. ಮಾರ್ಚ್ 21 ರಂದು, ಸೋನು ಮತ್ತು ಇನ್ನೊಬ್ಬ ಸಹಚರ ಆಶಿಶ್, ಅಂಜಲಿಯನ್ನು ಲುಧಿಯಾನದಿಂದ ದೆಹಲಿಗೆ ಕರೆತಂದಿದ್ದರು. ನಂತರ ಆಕೆಯನ್ನು ಕೊಲೆ ಮಾಡಲಾಯಿತು. ಮಿಶ್ರಾ ಮತ್ತು ಸೋನು ಈಗ ಪೊಲೀಸ್ ಕಸ್ಟಡಿಯಲ್ಲಿದ್ದರೂ, ಮೂರನೇ ಶಂಕಿತ ಆಶಿಶ್ ಕುಮಾರ್‌ಗಾಗಿ ಇನ್ನೂ ಶೋಧ ಮುಂದುವರೆದಿದೆ. ಕ್ರೂರ ಹತ್ಯೆಯ ಹಿಂದಿನ ನಿಖರವಾದ ಉದ್ದೇಶವನ್ನು ಕಂಡುಹಿಡಿಯಲು ತನಿಖಾಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.