ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಪತಿಯ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಹಿಳೆ ಸಂಶಯಾಸ್ಪದ ಸಾವು

ಗಂಡನಿಗೆ ಅಕ್ರಮ ಸಂಬಂಧ ಇದೆ, ಮನೆ ಸಮೀಪವೇ ಬೇರೆ ಮಹಿಳೆಗೂ ಮನೆ ಮಾಡಿಕೊಟ್ಟಿದ್ದಾನೆ ಎಂದು ಮಹಿಳೆ ತನ್ನ ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದಳು. ಜನವರಿಯಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿ ಹೇಮಾ ವಿಷ ಕುಡಿದು ಆತ್ಮಹತ್ಯೆಗೂ ಯತ್ನಿಸಿದ್ದಳಂತೆ. ಈ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಪತಿಯ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಹಿಳೆ ಸಂಶಯಾಸ್ಪದ ಸಾವು

ಮೃತ ಹೇಮಾ

ಹರೀಶ್‌ ಕೇರ ಹರೀಶ್‌ ಕೇರ Apr 1, 2025 9:55 AM

ಬೆಂಗಳೂರು: ಬೆಂಗಳೂರಿನಲ್ಲಿ (Bengaluru news) ಗೃಹಿಣಿ ಒಬ್ಬರ ಶವ ಅನುಮಾನಾಸ್ಪದ ರೀತಿಯಲ್ಲಿ (Crime news) ಪತ್ತೆಯಾಗಿದೆ. ಈಕೆಯ ಪತಿಗೆ ಅಕ್ರಮ ಸಂಬಂಧವಿದ್ದು, ಇದಕ್ಕೆ ಅಡ್ಡಿಯಾಗುತ್ತಾಳೆ ಎಂಬ ಕಾರಣದಿಂದ ಪತಿಯೇ ಪತ್ನಿಯನ್ನು ಕೊಂದಿರುವ (Murder Case) ಆರೋಪ ಕೇಳಿ ಬಂದಿದೆ. ಬೆಂಗಳೂರು ನಗರದ ಆಡುಗೋಡಿಯ ನಂಜಪ್ಪ ಲೇಔಟ್‍ನಲ್ಲಿ ಮಹಿಳೆಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಪತಿಯ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಮೃತ ಮಹಿಳೆಯನ್ನು ಹೇಮಾ (44) ಎಂದು ಗುರುತಿಸಲಾಗಿದೆ.

ಗಂಡನಿಗೆ ಅಕ್ರಮ ಸಂಬಂಧ ಇದೆ, ಮನೆ ಸಮೀಪವೇ ಬೇರೆ ಮಹಿಳೆಗೂ ಮನೆ ಮಾಡಿಕೊಟ್ಟಿದ್ದಾನೆ ಎಂದು ಮಹಿಳೆ ತನ್ನ ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದಳು. ಜನವರಿಯಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿ ಹೇಮಾ ವಿಷ ಕುಡಿದು ಆತ್ಮಹತ್ಯೆಗೂ ಯತ್ನಿಸಿದ್ದಳಂತೆ. ಈ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಕಳೆದ ಶನಿವಾರ ಹೇಮಾ ಸಾವನ್ನಪ್ಪಿದ್ದು, ಮಗಳ ವಿದ್ಯಾಭ್ಯಾಸದ ವಿಚಾರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗಂಡ ಹೇಳಿದ್ದ. ಆದರೆ ಹೇಮಾ ನೇಣು ಬಿಗಿದ ಸ್ಥಿತಿಯಲ್ಲಿರೋದನ್ನು ಯಾರು ನೋಡಿಲ್ಲ. ಹೇಮಾ ಮೃತದೇಹವನ್ನು ಆಸ್ಪತ್ರೆಯಲ್ಲಿ ನೋಡಿರೋ ಕುಟುಂಬಸ್ಥರು ಪತಿಯೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಕ್ರಮ ಗಾಂಜಾ ಮಾರಾಟ, ಇಬ್ಬರ ಬಂಧನ

ಚಿಂತಾಮಣಿ: ಅಕ್ರಮ ಗಾಂಜಾ ಮಾರಾಟ ಮಾಡಲು ಬಂದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಗ್ರಾಮಾಂತರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ನಿಸ್ಸಾರ್ ಅಹಮದ್ ಬಿನ್ ನಾಸೀರ್ ಅಹಮದ್.(33 ವರ್ಷ)ಕೈವಾರ ಗ್ರಾಮ, ಚಿಂತಾಮಣಿ ತಾಲ್ಲೂಕು ಫಯಾಜ್ ಪಾಷ ಬಿನ್ ಫಾರೂಕ್ ಪಾಷ (32 ವರ್ಷ) ವಾರ್ಡ್ ನಂ13. ಕೈವಾರ ಗ್ರಾಮ, ಚಿಂತಾಮಣಿ ತಾಲ್ಲೂಕು,ಅರ್ಬಾಜ್ ಖಾನ್ ಬಿನ್ ವಜೀರ್ ಖಾನ್ ಎಂದು ಗುರುತಿಸಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲಾ ಎಸ್ ಪಿ ಕುಶಾಲ್ ಚೌಕ್ಸೆ,ಅಪಾರ ಜಿಲ್ಲಾ ರಕ್ಷಣಾಧಿಕಾರಿ ರಾಜಾ ಇಮಾಮ್ ಖಾಸಿಮ್,ಮಾರ್ಗದರ್ಶನದಲ್ಲಿ ಚಿಂತಾಮಣಿ ಉಪವಿಭಾಗರವರ ಮುರಳೀಧರ ಪಿ.ಡಿ.ವೈ.ಎಸ್.ಪಿ ನೇತೃತ್ವದಲ್ಲಿ,ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಠಾಣೆಯ ಸಿಬ್ಬಂದಿಯವ ರೊಂದಿಗೆ ಕೈವಾರದಲ್ಲಿ ಗಸ್ತು ಮಾಡಿಮಾಡಿಕೊಂಡು ಕೈವಾರ-ಗವಿ ಕಡೆಗೆ ಹೋಗುವ ರಸ್ತೆಯಲ್ಲಿ ಗಸ್ತಿನಲ್ಲಿದ್ದಾಗ ಮಾತೇಶ್ವರ ಇಂಡಿಯನ್ ಗ್ಯಾಸ್‌ ಗೋಡೌನ್ ಹಿಂಭಾಗದಲ್ಲಿರುವ ಸ್ಮಶಾನದ ಬಳಿ ಯಾರೋ ಇಬ್ಬರು ಒಂದು ಕವರ್ ನಲ್ಲಿ ಅಕ್ರಮ ಗಾಂಜಾವನ್ನು ಇಟ್ಟುಕೊಂಡಿದ್ದು ಪೊಲೀಸರು ಇವರನ್ನು ಸೆರೆ ಹಿಡಿದು ಅವರಿಂದ 1 ಕೆ.ಜಿ. 80 ಗ್ರಾಂ ತೂಕವಿದ್ದು ಗಾಂಜಾವನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: Assaulting Case: ಮೀರತ್‌ ಕೊಲೆ ರೀತಿಯಲ್ಲಿ ನಿನ್ನನ್ನೂ ಕೊಂದು ಡ್ರಮ್‌ ಒಳಗೆ ಹಾಕುವೆ; ಪತಿಗೆ ಬೆದರಿಕೆ ಹಾಕಿದ ಪತ್ನಿ, ವಿಡಿಯೋ ಇದೆ