ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Crime News: ಪ್ರೀತಿ ನಿರಾಕರಿಸಿದ ಯುವತಿಯ ಬೈಕ್, ಕಾರುಗಳಿಗೆ ಬೆಂಕಿ ಇಟ್ಟ ರೌಡಿಶೀಟರ್

ರೌಡಿ ಶೀಟರ್ ಆಗಿರುವ ರಾಹುಲ್ ಕಳೆದ 9 ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಕೆಲ ತಿಂಗಳಿಂದ ರಾಹುಲ್‌ನಿಂದ ಅಂತರ ಕಾಯ್ದುಕೊಂಡಿದ್ದಳು. ಇಷ್ಟಕ್ಕೇ ಕೋಪಗೊಂಡ ರಾಹುಲ್, ಪ್ರಿಯತಮೆ ಮನೆಯ ಬಳಿಗೆ ತೆರಳಿ ಆಕೆಯ ಕಾರು, ಬೈಕ್ ಗಳಿಗೆ ಬೆಂಕಿ ಹಚ್ಚಿ ಪುಂಡಾಟ ಮಾಡಿದ್ದಾನೆ.

ಪ್ರೀತಿ ನಿರಾಕರಿಸಿದ ಯುವತಿಯ ಬೈಕ್, ಕಾರುಗಳಿಗೆ ಬೆಂಕಿ ಇಟ್ಟ ರೌಡಿಶೀಟರ್

ಹರೀಶ್‌ ಕೇರ ಹರೀಶ್‌ ಕೇರ Feb 23, 2025 6:09 PM

ಬೆಂಗಳೂರು: ನಗರದಲ್ಲಿ (Bengaluru crime news) ಪಾಗಲ್‌ ಪ್ರೇಮಿಯೊಬ್ಬ ಹುಚ್ಚಾಟ ಮೆರೆದಿದ್ದಾನೆ. ಯುವತಿ ತನ್ನ ಪ್ರೀತಿ ನಿರಾಕರಿಸಿದಳು ಎಂಬ ಕಾರಣದಿಂದ ಪುಂಡನೊಬ್ಬ ಆಕೆಯ ಬೈಕ್, ಕಾರಿಗೆ ಬೆಂಕಿ ಹಚ್ಚಿ ಹುಚ್ಚನಂತೆ ವರ್ತಿಸಿದ್ದಾನೆ. ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ರೌಡಿಶೀಟರ್‌ನ (Rowdy Sheeter) ಈ ಹುಚ್ಚಾಟದಿಂದಾಗಿ ಎರಡು ಕಾರು, ಒಂದು ಬೈಕ್ ಬೆಂಕಿಗೆ ಆಹುತಿಯಾಗಿದೆ.

ರೌಡಿ ಶೀಟರ್ ಆಗಿರುವ ರಾಹುಲ್ ಕಳೆದ 9 ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆತನ ಹಿನ್ನಲೆ ಗೊತ್ತಿದ್ದರೂ ಯುವತಿ ರಾಹುಲ್‌ನನ್ನು ಪ್ರೀತಿಸುತ್ತಿದ್ದಳು. ಆದರೆ ಕೆಲ ತಿಂಗಳಿಂದ ರಾಹುಲ್‌ನಿಂದ ಅಂತರ ಕಾಯ್ದುಕೊಂಡಿದ್ದಳು. ಇಷ್ಟಕ್ಕೇ ಕೋಪಗೊಂಡ ರಾಹುಲ್, ಪ್ರಿಯತಮೆ ಮನೆಯ ಬಳಿಗೆ ತೆರಳಿ ಆಕೆಯ ಕಾರು, ಬೈಕ್ ಗಳಿಗೆ ಬೆಂಕಿ ಹಚ್ಚಿ ಪುಂಡಾಟ ಮಾಡಿದ್ದಾನೆ. ಈ ಘಟನೆಯಿಂದ ಯುವತಿಯ ಕುಟುಂಬಸ್ಥರು ಭಯಭೀತಿಗೊಂಡಿದ್ದಾರೆ. ಈ ಸಂಬಂಧ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಕೇಸ್ ದಾಖಲಿಸಿ, ಆರೋಪಿ ರಾಹುಲ್ ಪತ್ತೆಗೆ ಬಲೆ ಬೀಸಿದ್ದಾರೆ.

ಉದಯಗಿರಿ ಕಲ್ಲು ತೂರಾಟ ಕೇಸ್‌; ಮೈಸೂರಿನಲ್ಲಿ 144 ಸೆಕ್ಷನ್ ಜಾರಿ

ಮೈಸೂರು: ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ಖಂಡಿಸಿ ಸೋಮವಾರ ರಾಷ್ಟ್ರ ಸುರಕ್ಷಾ ಜನಾಂದೋಲನ ಸಮಿತಿಯಿಂದ ಜಾಥಾ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮೈಸೂರು ನಗರ ವ್ಯಾಪ್ತಿಯಲ್ಲಿ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಈ ಸಂಬಂಧ ಮೈಸೂರು ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್ ಅವರು ಆದೇಶ ಹೊರಡಿಸಿದ್ದು, ನಾಳೆ ರಾಷ್ಟ್ರ ಸುರಕ್ಷತಾ ಜನಾಂದೋಲನ ಸಮಿತಿಯಿಂದ ಜಾಥಾ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಇಂದು ಮಧ್ಯರಾತ್ರಿಯಿಂದ ನಾಳೆ ಮಧ್ಯರಾತ್ರಿವರೆಗೆ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿರುವುದಾಗಿ ತಿಳಿಸಿದ್ದಾರೆ.

ಇಂದಿನಿಂದ ನಾಳೆ ಮಧ್ಯರಾತ್ರಿವರೆಗೆ ಮೈಸೂರು ನಗರ ವ್ಯಾಪ್ತಿಯಲ್ಲಿ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಂಡಿರುವುದರಿಂದ ಮೆರವಣಿಗೆ, ಸಭೆ, ಸಮಾರಂಭಕ್ಕೆ ನಿಷೇಧವಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಕೈಗೊಳ್ಳಲಾಗಿದೆ.

ಇದನ್ನೂ ಓದಿ: Belagavi Assault Case: ಕಂಡಕ್ಟರ್‌ ಮೇಲೆ ಹಲ್ಲೆ, ಐವರ ಬಂಧನ, ನಾಲಿಗೆ ಹರಿಬಿಟ್ಟ ʼನಾಲಾಯಕ್‌ʼ ಮುಖಂಡ