Saturday, 18th May 2024

ಪರಿಷತ್​ ಕಲಾಪದ ವೇಳೆ ಪ್ರಕಾಶ್ ರಾಥೋಡ್ ಮೊಬೈಲಿನಲ್ಲಿ ತಲ್ಲೀನ. ಆಗಿದ್ದೇನು ?

ಬೆಂಗಳೂರು: ವಿಧಾನಪರಿಷತ್​ ಕಲಾಪ ನಡೆಯುತ್ತಿದ್ದರೆ, ಪ್ರತಿಪಕ್ಷ ಸದಸ್ಯ ಪ್ರಕಾಶ್ ರಾಥೋಡ್ ಅವರು ಮೊಬೈಲ್​ನಲ್ಲಿ ಫೋಟೋ ನೋಡುತ್ತ ಡಿಲೀಟ್ ಮಾಡುವುದರಲ್ಲಿ ತಲ್ಲೀನರಾಗಿದ್ದ ಘಟನೆ ಶುಕ್ರವಾರ ಸಂಭವಿಸಿದೆ.

ಕಲಾಪದ ವೇಳೆ ಮೊಬೈಲ್​ನಲ್ಲಿ ಫೋಟೋ ವೀಕ್ಷಿಸಿದ್ದು ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಮಾತನಾಡಿದ ಪ್ರಕಾಶ್ ರಾಠೋಡ್, ನಾನು ನೂರಾರು ಗ್ರೂಪ್​ಗಳಲ್ಲಿ ಇದ್ದೇನೆ. ಸಾವಿರಾರು ವಿಡಿಯೋ ಇವೆ. ಸ್ಟೋರೇಜ್ ಫುಲ್ ಆಗಿತ್ತು. ಅದನ್ನ ಡಿಲೀಟ್ ಮಾಡ್ತಿದ್ದೆ. ಅದು ಅಶ್ಲೀಲ ವಿಡಿಯೋನಾ? ಅನ್ನೋದೂ ನನಗೆ ಗೊತ್ತಿಲ್ಲ.. ನಾನು ಯಾವುದನ್ನೂ ನೋಡದೆ ಬಂದಿರುವ ಮೆಸೇಜ್ ಮತ್ತು ವಿಡಿಯೋ ಡಿಲೀಟ್ ಮಾಡ್ತಿದ್ದೆ ಎಂದರು.

ನಾನು ಅಶ್ಲೀಲ ವಿಡಿಯೋ ನೋಡಿಲ್ಲ, ನೋಡೋದು ಇಲ್ಲ. ಪರಿಷತ್​ನಲ್ಲಿ ನಾನು ಕೇಳಿದ ಪ್ರಶ್ನೆಗೆ ಉತ್ತರ ಕೊಡಬೇಕಿತ್ತು. ಕ್ಲಾರಿಫಿಕೇಷನ್ ಮೇಲೆ ಉತ್ತರ ಕೊಡುವಾಗ ಮಾಹಿತಿ ನೋಡುತ್ತಿದ್ದೆ. ಆಗ ಮೊಬೈಲ್ ಓಪನ್ ಆಗಿದೆ. ನನ್ನ ಮೊಬೈಲ್​ ಸ್ಟೋರೇಜ್​ ಫುಲ್​ ಆಗಿತ್ತು. ನನಗೆ ಯಾರೂ ಅಶ್ಲೀಲ ವಿಡಿಯೋ ಕಳಿಸಿರಲಿಲ್ಲ ಎಂದು ಪ್ರಕಾಶ್ ರಾಥೋಡ್ ಸ್ಪಷ್ಟನೆ ನೀಡಿದರು.

Leave a Reply

Your email address will not be published. Required fields are marked *

error: Content is protected !!