#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Delhi Election 2025: ಬಹುಮತದತ್ತ ಬಿಜೆಪಿ ದಾಪುಗಾಲು; ಆಪ್‌ಗೆ ಬಿಗ್‌ ಶಾಕ್‌!

ದೆಹಲಿಯಲ್ಲಿ ಗದ್ದುಗೆ ಗುದ್ದಾಟ ಜೋರಾಗಿದ್ದು, ಮತ ಎಣಿಕೆ ನಡೆಯುತ್ತಿದೆ. ಬೆಳಗ್ಗೆ ಎಂಟು ಗಂಟೆಯಿಂದಲೇ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಬಿಜೆಪಿ ಮುನ್ನಡೆಯನ್ನು ಸಾಧಿಸಿದೆ. ಎರಡು ಬಾರಿ ದೆಹಲಿಯ ಚುಕ್ಕಾಣಿ ಹಿಡಿದಿದ್ದ ಆಮ್‌ ಆದ್ಮಿ ಭಾರೀ ಹಿನ್ನಡೆಯನ್ನು ಸಾಧಿಸಿದೆ. ಮಾಜಿ ಮುಖ್ಯ ಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಕೂಡ ನವದೆಹಲಿ ಕ್ಷೇತ್ರದಿಂದ ಹಿನ್ನಡೆಯಲ್ಲಿದ್ದಾರೆ.

ದೆಹಲಿಯಲ್ಲಿ ಗದ್ದುಗೆ ಏರುತ್ತಾ ಬಿಜೆಪಿ?

Election Result

Profile Vishakha Bhat Feb 8, 2025 9:26 AM

ನವದೆಹಲಿ: ದೆಹಲಿಯಲ್ಲಿ (Delhi Election 2025) ಗದ್ದುಗೆ ಗುದ್ದಾಟ ಜೋರಾಗಿದ್ದು, ಮತ ಎಣಿಕೆ ನಡೆಯುತ್ತಿದೆ. ಬೆಳಗ್ಗೆ ಎಂಟು ಗಂಟೆಯಿಂದಲೇ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಬಿಜೆಪಿ (BJP) ಮುನ್ನಡೆಯನ್ನು ಸಾಧಿಸಿದೆ. ಎರಡು ಬಾರಿ ದೆಹಲಿಯ ಚುಕ್ಕಾಣಿ ಹಿಡಿದಿದ್ದ ಆಮ್‌ ಆದ್ಮಿ (Aam Admi Party) ಭಾರೀ ಹಿನ್ನಡೆಯನ್ನು ಸಾಧಿಸಿದೆ. ಮಾಜಿ ಮುಖ್ಯ ಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Keriwal) ಕೂಡ ನವದೆಹಲಿ ಕ್ಷೇತ್ರದಿಂದ ಹಿನ್ನಡೆಯಲ್ಲಿದ್ದಾರೆ. 27 ವರ್ಷಗಳ ಹಿಂದೆ ಅಧಿಕಾರಕ್ಕೇರಿದ್ದ ಬಿಜೆಪಿ ಈ ಬಾರಿ ಸರಳ ಬಹುಮತ ಗಳಿಸುವ ಮೂಲಕ ಸರ್ಕಾರವನ್ನು ರಚಿಸುವ ಸಾಧ್ಯತೆ ಕಾಣಿಸುತ್ತಿದೆ.

ದೆಹಲಿಯಲ್ಲಿ ಒಟ್ಟು 70 ಕ್ಷೇತ್ರಗಳಿದ್ದು, ಆಮ್‌ ಆದ್ಮಿ ಪಕ್ಷ ಕೇವಲ 20 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸಿದೆ. ದೆಹಲಿಯಲ್ಲಿ ಈ ಬಾರಿಯೂ ದೆಹಲಿಯ ಮತದಾರ ಕಾಂಗ್ರೆಸ್‌ನ ಕೈ ಹಿಡಿದಂತೆ ಕಾಣಿಸುತ್ತಿಲ್ಲ. ಸದ್ಯ ಬಿಜೆಪಿ 44 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಈ ಬಾರಿ ಆಮ್‌ ಆದ್ಮಿಯ ಘಟಾನುಘಟಿ ನಾಯಕರಿಗೆ ಶಾಕ್‌ ಎದುರಾಗಿದ್ದು, ದೆಹಲಿ ಸಿಎಂ ಅತಿಶಿ ಕಲ್ಕಾಜಿ ಸ್ಥಾನದಿಂದ ಹಿನ್ನಡೆಯಲ್ಲಿದ್ದಾರೆ. ಕಲ್ಕಾಜಿಯಲ್ಲಿ ಬಿಜೆಪಿಯ ರಮೇಶ್‌ ಬಿಧುರಿ ಮುನ್ನಡೆಯನ್ನು ಸಾಧಿಸಿದ್ದಾರೆ. ಇನ್ನು ಆಮ್‌ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ್‌ ಕೇಜ್ರಿವಾಲ್‌ ಅವರು ಪ್ರವೇಶ್‌ ವರ್ಮಾ ಅವರು ಬಿಜೆಪಿಯಿಂದ ಮುನ್ನಡೆಯಲ್ಲಿದ್ದಾರೆ.

ಈ ಸುದ್ದಿಯನ್ನೂ ಓದಿ: Delhi Election 2025: ಚುನಾವಣೆಗೆ ಸಜ್ಜಾದ ದೆಹಲಿ; ಮೂರನೇ ಬಾರಿಗೆ ಹ್ಯಾಟ್ರಿಕ್‌ ಬಾರಿಸುತ್ತಾ ಆಪ್‌?

ಇನ್ನು ಮಾಳವೀಯ ನಗರ ಕ್ಷೇತ್ರದಿಂದ ಎಎಪಿಯ ಸೋಮನಾಥ್ ಭಾರ್ತಿ ಹಿನ್ನಡೆಯಲ್ಲಿದ್ದರೆ, ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜಂಗ್‌ಪುರದಿಂದ ಹಿನ್ನಡೆಯಲ್ಲಿದ್ದಾರೆ. ದೆಹಲಿಯ ಮಾಜಿ ಸಚಿವ ಮತ್ತು ಎಎಪಿ ಅಭ್ಯರ್ಥಿ ಸತ್ಯೇಂದರ್ ಜೈನ್ ಕೂಡ ಹಿನ್ನಡೆಯಲ್ಲಿದ್ದಾರೆ.