ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Trade War: ನಿಲ್ಲುತ್ತಿಲ್ಲ ಸುಂಕ ಸಮರ; ಅಮೆರಿಕ್ಕೆ ಟಕ್ಕರ್‌ ಕೊಡಲು ಶೇ 125 ಕ್ಕೆ ತೆರಿಗೆ ಹೆಚ್ಚಿಸಿದ ಚೀನಾ

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಪ್ರಾರಂಭಿಸಿದ ಸುಂಕ ಸಮರ ಮುಗಿಯುವ ಹಾಗೇ ಕಾಣಿಸುತ್ತಿಲ್ಲ.ಚೀನಾದ ಮೇಲೆ ಟ್ರಂಪ್‌ ವಿಧಿಸಿದ ತೆರಿಗೆಯ ಪ್ರತೀಕಾರವಾಗಿ ಇದೀಗ ಚೀನಾ ಕೂಡಾ ಶೇ 84 ರಿಂದ ಶೇ 125 ಕ್ಕೆ ತೆರಿಗೆಯನ್ನು ಹೆಚ್ಚಿಸಿದೆ.

ಅಮೆರಿಕ್ಕೆ ಟಕ್ಕರ್‌ ಕೊಡಲು ಶೇ 125 ಕ್ಕೆ ತೆರಿಗೆ ಹೆಚ್ಚಿಸಿದ ಚೀನಾ

Profile Vishakha Bhat Apr 11, 2025 3:09 PM

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರು ಪ್ರಾರಂಭಿಸಿದ ಸುಂಕ ಸಮರ ಮುಗಿಯುವ ಹಾಗೇ ಕಾಣಿಸುತ್ತಿಲ್ಲ.ಚೀನಾದ (China) ಮೇಲೆ ಟ್ರಂಪ್‌ ವಿಧಿಸಿದ ತೆರಿಗೆಯ ಪ್ರತೀಕಾರವಾಗಿ ಇದೀಗ ಚೀನಾ ಕೂಡಾ ಶೇ 84 ರಿಂದ ಶೇ 125 ಕ್ಕೆ ತೆರಿಗೆಯನ್ನು ಹೆಚ್ಚಿಸಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಈ ಹೇಳಿಕೆಯನ್ನು ನೀಡಿದ್ದಾರೆ. ಯುರೋಪಿಯನ್‌ ಒಕ್ಕೂಟದಿಂದ ಬಂದ ಬೆಂಬಲದ ಬಳಿಕ ಅಧ್ಯಕ್ಷರಿಂದ ಈ ಹೇಳಿಕೆಗಳು ಬಂದಿವೆ. ಗುರುವಾರ ಟ್ರಂಪ್‌ ಸುಂಕ ವಿರಾಮವನ್ನು ಘೋಷಿಸಿದ್ದು, ಚೀನಾ ಬಿಟ್ಟು ಉಳಿದ ರಾಷ್ಟ್ರಗಳಿಗೆ 90 ದಿನಗಳ ಗಡುವು ನೀಡಿದ್ದರು. ಚೀನಾವನ್ನು ಪರಿಗಣನೆಗೆ ತೆಗೆದುಕೊಳ್ಳದಿರುವುದು ಮಾತ್ರ ಅಲ್ಲದೇ ತೆರಿಗೆಯನ್ನು ಶೇ 125 ರಿಂದ ಶೇ 145 ಕ್ಕೆ ಏರಿಸಿದೆ.

ಇದೀಗ ಚೀನಾ ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಶೇಕಡಾ 84 ರಿಂದ 125 ಕ್ಕೆ ಹೆಚ್ಚಿಸುವುದಾಗಿ ಹೇಳಿದೆ. ಚೀನಾದ ಮೇಲೆ ಅಮೆರಿಕವು ಅಸಹಜವಾಗಿ ಹೆಚ್ಚಿನ ಸುಂಕಗಳನ್ನು ವಿಧಿಸುವುದು ಅಂತರರಾಷ್ಟ್ರೀಯ ವ್ಯಾಪಾರ ನಿಯಮಗಳು, ಮೂಲಭೂತ ಆರ್ಥಿಕ ಕಾನೂನುಗಳನ್ನು ಉಲ್ಲಂಘಿಸುತ್ತದೆ ಎಂದು ಬೀಜಿಂಗ್‌ನ ಸ್ಟೇಟ್ ಕೌನ್ಸಿಲ್ ಸುಂಕ ಆಯೋಗವು ಹಣಕಾಸು ಸಚಿವಾಲಯ ಹಂಚಿಕೊಂಡ ಹೇಳಿಕೆಯಲ್ಲಿ ತಿಳಿಸಿದೆ.

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರಾದ ಮಾವೋ ನಿಂಗ್‌ ದೇಶದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ''ಅಮೆರಿಕದ ಬೆದರಿಕೆಗಳಿಗೆ ಚೀನಾ ಹೆದರೋದಿಲ್ಲ, ಹೆದರಿ ಸುಮ್ಮನೆ ಕೂರೋದಿಲ್ಲ'' ಎಂದಿದ್ದಾರೆ. ಹಾಗೇ 72 ವರ್ಷಗಳಷ್ಟು ಹಳೆಯ ವಿಡಿಯೋ ಹಂಚಿಕೊಂಡಿದ್ದು, ಅಮೆರಿಕದ ಸುಂಕ ಹೇರಿಕೆಗೆ ಟಾಂಗ್‌ ಕೊಟ್ಟಿದ್ದಾರೆ. 1953, ಅಮೆರಿಕದ ಜೊತೆಗೆ ಚೀನಾ ಸಂಘರ್ಷಕ್ಕೆ ಇಳಿದಿದ್ದ ಸಮಯ. ಆಗ ಚೀನಾದ ಮುಂಚೂಣಿ ನಾಯಕನಾಗಿದ್ದ ಮಾವೋ ಜಿದಾಂಗ್‌, ದೇಶ ಮತ್ತು ದೇಶದ ಜನರ ಹೋರಾಟದ ಬಗ್ಗೆ ಮಾತನಾಡಿದ್ದರು. ಅಮೆರಿಕದ ಬೆದರಿಕೆಗಳಿಗೆ ಯಾವತ್ತಿಗೂ ಹೆದರೋದಿಲ್ಲ, ಕೊನೆಯ ಕ್ಷಣದವರೆಗೂ ನಮ್ಮ ಹೋರಾಟ ಜಾರಿಯಲ್ಲಿರುತ್ತದೆ ಎಂದು ಹೇಳಿದ್ದರು.

ಈ ಸುದ್ದಿಯನ್ನೂ ಓದಿ: Donald Trump: ಚೀನಾ ಹೊರತುಪಡಿಸಿ ಉಳಿದೆಲ್ಲ ದೇಶಗಳಿಗೆ 90 ದಿನಗಳ ಸುಂಕ ವಿರಾಮ ಘೋಷಿಸಿದ ಟ್ರಂಪ್‌!

ಅಮೆರಿಕದ ನಡೆಯನ್ನು ವಿರೋಧಿಸಲು ಚೀನಾ ಹಲವು ರಾಷ್ಟ್ರಗಳ ಬಳಿ ಬೆಂಬಲವನ್ನು ಕೋರಿದೆ. ಯುರೋಪಿಯನ್‌ ಒಕ್ಕೂಟ, ಏಷಿಯಾನ್‌ ರಾಷ್ಟ್ರಗಳನ್ನು ಸಂಪರ್ಕಿಸುತ್ತಿರುವ ಚೀನಾ, ಅಮೆರಿಕದ ಟಾರಿಫ್‌ ವಿರುದ್ಧ ನಿಲ್ಲುವಂತೆ ಜೊತೆಯಾಗಿ ಹೋರಾಡಲು ಸಹಕಾರ ಕೋರುತ್ತಿದೆ. ಹಾಗೇ ವಿಶ್ವ ವಾಣಿಜ್ಯ ಸಂಸ್ಥೆಯಲ್ಲಿ ದೂರು ದಾಖಲಿಸೋಕೆ ಸಜ್ಜಾಗಿದೆ.