ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Michelle Obama : ನನಗೆ ಉತ್ತಮವಾದದ್ದನ್ನು ಆಯ್ಕೆ ಮಾಡಿಕೊಂಡೆ; ವಿಚ್ಛೇದನದ ಕುರಿತು ಮೌನ ಮುರಿದ ಮಿಶೆಲ್‌ ಒಬಾಮಾ

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಹಾಗೂ ಪತ್ನಿ ಮಿಶೆಲ್‌ ಒಬಾಮಾ ಅವರು ಬೇರೆಯಾಗಲಿದ್ದಾರೆ ಎಂಬ ಸುದ್ದಿ ಹಲವು ತಿಂಗಳಿನಿಂದ ಹರಿದಾಡುತ್ತಿದೆ. ಇದೀಗ ಹರಿದಾಡುತ್ತಿರುವ ಊಹಾಪೋಹಗಳಿಗೆ ಮಿಶೆಲ್‌ ಒಬಾಮಾ ಅವರು ಪ್ರತಿಕ್ರಿಯಿಸಿದ್ದಾರೆ. ತಮ್ಮ ವಿಚ್ಛೇದನದ ಸುದ್ದಿಯನ್ನು ಅವರು ತಳ್ಳಿ ಹಾಕಿದ್ದಾರೆ.

ವಿಚ್ಛೇದನದ ಕುರಿತು ಮೌನ ಮುರಿದ ಮಿಶೆಲ್‌ ಒಬಾಮಾ!

Profile Vishakha Bhat Apr 10, 2025 4:58 PM

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಹಾಗೂ ಪತ್ನಿ ಮಿಶೆಲ್‌ ಒಬಾಮಾ ಅವರು ಬೇರೆಯಾಗಲಿದ್ದಾರೆ ಎಂಬ ಸುದ್ದಿ ಹಲವು ತಿಂಗಳಿನಿಂದ ಹರಿದಾಡುತ್ತಿದೆ. ಇದೀಗ ಹರಿದಾಡುತ್ತಿರುವ ಊಹಾಪೋಹಗಳಿಗೆ ಮಿಶೆಲ್‌ ಒಬಾಮಾ ಅವರು ಪ್ರತಿಕ್ರಿಯಿಸಿದ್ದಾರೆ. ತಮ್ಮ ವಿಚ್ಛೇದನದ ಸುದ್ದಿಯನ್ನು ಅವರು ತಳ್ಳಿ ಹಾಕಿದ್ದಾರೆ. ನಟಿ ಸೋಫಿಯಾ ಬುಷ್ ಅವರ ಪಾಡ್‌ಕ್ಯಾಸ್ಟ್ 'ವರ್ಕ್ ಇನ್ ಪ್ರೋಗ್ರೆಸ್' ನಲ್ಲಿ ನಡೆದ ನೇರ ಸಂಭಾಷಣೆಯಲ್ಲಿ, 61 ವರ್ಷದ ಮಿಚೆಲ್ ಒಬಾಮಾ ಅವರು ಮಾತನಾಡಿದ್ದು, ತಮ್ಮ ವೈವಾಹಿಕ ಜೀವನದ ಕುರಿತಾದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಉನ್ನತ ಮಟ್ಟದ ರಾಜಕೀಯ ಕಾರ್ಯಕ್ರಮಗಳಿಗೆ ಗೈರುಹಾಜರಾದ ಬಗ್ಗೆ ಮಾತನಾಡಿ, ವೈವಾಹಿಕ ಭಿನ್ನಾಭಿಪ್ರಾಯದಿಂದ ನಾನು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿಲ್ಲ ಎಂದುಕೊಂಡರೆ ಅದು ತಪ್ಪು. ನನ್ನ ಸ್ವಂತ ಕ್ಯಾಲೆಂಡರ್ ಅನ್ನು ನಿಯಂತ್ರಿಸಲು ನನಗೆ ಈಗ ಅವಕಾಶವಿದೆ" ಎಂದು ಅವರು ಹೇಳಿದರು. "ನಾನು ವರ್ಷಗಳ ಹಿಂದೆಯೇ ಇಂತಹ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಬಹುದಿತ್ತು, ಆದರೆ ನನಗೆ ಆ ಸ್ವಾತಂತ್ರ್ಯವಿರಲಿಲ್ಲ. ಈ ಮೊದಲು ನನ್ನ ಮಕ್ಕಳ ಜೊತೆ ಸಮಯ ಕಳೆಯಲು ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಈ ವರ್ಷದ ಆರಂಭದಲ್ಲಿ ಬರಾಕ್ ಒಬಾಮಾ ಜನವರಿಯಲ್ಲಿ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅವರ ಅಂತ್ಯಕ್ರಿಯೆಯಲ್ಲಿ ಒಬ್ಬರೇ ಭಾಗವಹಿಸಿದ್ದರು. ಅಷ್ಟೇ ಅಲ್ಲದೆ ಡೊನಾಲ್ಡ್‌ ಟ್ರಂಪ್‌ ಅವರ ಪದಗ್ರಹಣ ಕಾರ್ಯಕ್ರಮದಲ್ಲಿಯೂ ಮಿಶೆಲ್‌ ಭಾಗವಹಿಸಿರಲಿಲ್ಲ. ಇದಾದ ಬಳಿಕ ದಂಪತಿಗಳು ವಿಚ್ಛೇದನ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ ಮಿಚೆಲ್ ಅದು ಕೇವಲ ತನ್ನ ವೈಯಕ್ತಿಕ ಮಿತಿಗಳನ್ನು ನಿಗದಿಪಡಿಸುವುದಾಗಿ ಪ್ರತಿಪಾದಿಸಿದರು. ನಾನು ನನಗಾಗಿ, ನನ್ನ ಕುಟುಂಬಕ್ಕಾಗಿ ಸಮಯ ಮೀಸಲಿಡಬೇಕು ಅದಕ್ಕಾಗಿ ಸ್ವಂತ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Donald Trump: ಕ್ಯಾನ್ಸರ್‌ನಿಂದ ಬಳಲುತ್ತಿರುವ ಬಾಲಕನ ಪೊಲೀಸ್ ಆಗುವ ಕನಸನ್ನು ನನಸು ಮಾಡಿದ ಡೊನಾಲ್ಡ್ ಟ್ರಂಪ್!

ಈ ಹಿಂದೆ ಏಪ್ರಿಲ್ 3 ರಂದು ಹ್ಯಾಮಿಲ್ಟನ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಬಾಮ ಅವರು ತಮ್ಮ ವಯಕ್ತಿಕ ಜೀವನದ ಬಗ್ಗೆ ಮಾತನಾಡಿ, ನನ್ನ ಅಧಿಕಾರಾವಧಿಯಲ್ಲಿ ನಾನು ಹಲವು ಸಮಸ್ಯೆಗಳನ್ನು ಎದುರಿಸಿದೆ. ನನಗೆ ಮತ್ತು ನನ್ನ ಹೆಂಡತಿಯ ನಡುವೆ ಕೆಲ ಭಿನ್ನಭಿಪ್ರಾಯಗಳಿದ್ದವು. ನಂತರ ನಾವು ಮಾತನಾಡಿ ಅದನ್ನು ಬಗೆಹರಿಸಿಕೊಂಡೆವು ಎಂದು ಹೇಳಿದ್ದರು.