ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Modi Thailand Visit: ಥಾಯ್ಲೆಂಡ್‌ ಸರ್ಕಾರದಿಂದ ಪ್ರಧಾನಿ ಮೋದಿಗೆ ಟಿಪಿಟಕ ಉಡುಗೊರೆ; ಏನಿದು? ಏನಿದರ ಮಹತ್ವ?

PM Narendra Modi: 6ನೇ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಭಾಗವಹಿಸಲು ಬ್ಯಾಂಕಾಕ್‌ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಔರ್ಜರಿ ಸ್ವಾಗತ ಸಿಕ್ಕಿದೆ. ಅಲ್ಲಿನ ಪ್ರಧಾನಿ ಪೇಟೊಂಗ್‌ಟಾರ್ನ್ ಶಿನವಾತ್ರ ಅವರೊಂದಿಗೆ ಮೋದಿ ದ್ವಿಪಕ್ಷೀಯ ಮಾತುಕತೆ ನಡೆದಿದ್ದಾರೆ. ಇದೇ ವೇಳೆ ಶಿನವಾತ್ರ ಅವರು ಪವಿತ್ರ ಗ್ರಂಥ ʼವರ್ಲ್ಡ್‌ ಟಿಪಿಟಕʼವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಥಾಯ್ಲೆಂಡ್‌ ಸರ್ಕಾರದಿಂದ ಪ್ರಧಾನಿ ಮೋದಿಗೆ ಟಿಪಿಟಕ ಉಡುಗೊರೆ

Profile Ramesh B Apr 3, 2025 9:11 PM

ಬ್ಯಾಂಕಾಕ್‌: ಪ್ರಧಾನಿ ನರೇಂದ್ರ ಮೋದಿ (PM Narendra Modi) ಗುರುವಾರ (ಏ. 3) ಥಾಯ್ಲೆಂಡ್‌ ಪ್ರವಾಸಕ್ಕೆ ತೆರಳಿದ್ದಾರೆ. ಅಲ್ಲಿನ ಪ್ರಧಾನಿ ಪೇಟೊಂಗ್‌ಟಾರ್ನ್ ಶಿನವಾತ್ರ (Paetongtarn Shinawatra) ಅವರೊಂದಿಗೆ ಮೋದಿ ಮಾತುಕತೆ ನಡೆಸಿದ್ದಾರೆ (Modi Thailand Visit). ಈ ವೇಳೆ ಮೋದಿ ಅವರಿಗೆ ಶಿನವಾತ್ರ ಪವಿತ್ರ ಗ್ರಂಥ ʼವರ್ಲ್ಡ್‌ ಟಿಪಿಟಕʼ (World Tipitaka)ವನ್ನು ಉಡುಗೊರೆಯಾಗಿ ನೀಡಿದ್ದಾರೆ. ಪ್ರಧಾನಿ ಮೋದಿ ಅವರು ಕೈ ಮುಗಿದು ಉಡುಗೊರೆಯನ್ನು ಸ್ವೀಕರಿಸಿದ್ದಾರೆ. ಜತೆಗೆ 'ಬುದ್ಧ ಭೂಮಿ' ಭಾರತದ ಪರವಾಗಿ ಶಿನವಾತ್ರ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಥಾಯ್ಲೆಂಡ್‌ನ ರಾಜ ಭೂಮಿಬೋಲ್ ಅಡುಲ್ಯದೇಜ್ (ರಾಮ IX) ಮತ್ತು ರಾಣಿ ಸಿರಿಕಿತ್ ಅವರ 70 ವರ್ಷಗಳ ಆಳ್ವಿಕೆಯ ಸ್ಮರಣಾರ್ಥವಾಗಿ 2016ರಲ್ಲಿ ಥಾಯ್ ಸರ್ಕಾರವು ಈ ಗ್ರಂಥವನ್ನು ಹೊರತಂದಿದೆ. ಇದು ಬುದ್ಧ ಅವರ ಬೋಧನೆಗಳ ಸಂಕಲನವಾಗಿದ್ದು, ಪಾಲಿ ಟಿಪಿಟಕದ 9 ದಶಲಕ್ಷಕ್ಕೂ ಹೆಚ್ಚು ಉಚ್ಚಾರಾಂಶಗಳ ನಿಖರವಾದ ವಿವರವನ್ನು ಹೊಂದಿದೆ. ಥಾಯ್ಲೆಂಡ್‌ ಸರ್ಕಾರವು ಇದನ್ನು 30ಕ್ಕೂ ಹೆಚ್ಚು ದೇಶಗಳಿಗೆ ಶಾಂತಿಯ ಪ್ರತೀಕದ ಉಡುಗೊರೆಯಾಗಿ ನೀಡುತ್ತಿದೆ.

ಪ್ರಧಾನಿ ಮೋದಿ ಅವರ ಎಕ್ಸ್‌ ಪೋಸ್ಟ್‌ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Modi Thailand Visit : ಬ್ಯಾಂಕಾಕ್ ನೆಲದಲ್ಲಿ ಥಾಯ್ ವರ್ಶನ್‌ ರಾಮಾಯಣ ವೀಕ್ಷಿಸಿದ ಪ್ರಧಾನಿ ನರೇಂದ್ರ ಮೋದಿ

ಮೋದಿ ಹೇಳಿದ್ದೇನು?

"ಥಾಯ್ಲೆಂಡ್‌ ಪ್ರಧಾನಿ ಶಿನವಾತ್ರ ಅವರು ʼತ್ರಿಪಿಟಕʼವನ್ನು ಉಡುಗೊರೆಯಾಗಿ ನೀಡಿದ್ದಾರೆ. 'ಬುದ್ಧ ಭೂಮಿ' ಭಾರತದ ಪರವಾಗಿ, ನಾನು ಇದನ್ನು ಕೈಮುಗಿದು ಸ್ವೀಕರಿಸಿದೆ. ಕಳೆದ ವರ್ಷ ಭಾರತದಿಂದ ಬುದ್ಧನ ಪವಿತ್ರ ಗುರುತನ್ನು ಥಾಯ್ಲೆಂಡ್‌ಗೆ ಕಳುಹಿಸಲಾಗಿತ್ತು. ಲಕ್ಷಾಂತರ ಭಕ್ತರು ಇದರ ದರ್ಶನ ಪಡೆದಿದ್ದಾರೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಬುದ್ಧನ ಪವಿತ್ರ ಕುರುಹನ್ನು ಥಾಯ್ಲೆಂಡ್‌ನಲ್ಲಿ 2024ರ ಮಾರ್ಚ್‌ನಲ್ಲಿ 26 ದಿನಗಳ ಪ್ರದರ್ಶನದ ಇಟ್ಟ ನಂತರ ಭಾರತಕ್ಕೆ ಹಿಂತಿರುಗಿಸಲಾಯಿತು.

ದ್ವಿಪಕ್ಷೀಯ ಸಭೆ

ಗುರುವಾರ ಬೆಳಗ್ಗೆ ಪ್ರಧಾನಿ ಮೋದಿ ಮತ್ತು ಥಾಯ್ ಪ್ರಧಾನಿ ಶಿನವಾತ್ರ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಸಭೆ ನಡೆಸಿದರು. "ಬ್ಯಾಂಕಾಕ್‌ನಲ್ಲಿ ಪ್ರಧಾನಿ ಶಿನವಾತ್ರ ಅವರೊಂದಿಗೆ ಚರ್ಚೆ ನಡೆಸಿದೆವು" ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.



ರಾಮಾಯಣ ವೀಕ್ಷಿಸಿದ ಮೋದಿ

6ನೇ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಭಾಗವಹಿಸಲು ಬ್ಯಾಂಕಾಕ್‌ಗೆ ಬಂದಿಳಿದ ಮೋದಿ ಭಾರತ ಮತ್ತು ಥಾಯ್ಲೆಂಡ್‌ ನಡುವಿನ ಆಳವಾದ ಸಾಂಸ್ಕೃತಿಕ ಸಂಬಂಧಗಳನ್ನು ಸಂಕೇತಿಸುವ ರಾಮಾಯಣದ ಥಾಯ್ ಆವೃತ್ತಿ ‘ರಾಮಕಿಯೆನ್’ ಅನ್ನು ವೀಕ್ಷಿಸಿದರು. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದು, “ಬಿಮ್‌ಸ್ಟೆಕ್ ದೇಶಗಳ ನಾಯಕರನ್ನು ಭೇಟಿ ಮಾಡಲು ಮತ್ತು ಭಾರತೀಯರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸಹಯೋಗವನ್ನು ಮತ್ತಷ್ಟು ಬಲಪಡಿಸಲು ಈ ಭೇಟಿ ಫಲಪ್ರದವಾಗುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.



“ಭಾರತ ಮತ್ತು ಥಾಯ್ಲೆಂಡ್‌ನ ಶತಮಾನಗಳಷ್ಟು ಹಳೆಯ ಸಂಬಂಧಗಳು ನಮ್ಮ ಆಳವಾದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕತೆಯ ಮೂಲಕ ಸಂಪರ್ಕ ಹೊಂದಿವೆ. ಬೌದ್ಧ ಧರ್ಮದ ಹರಡುವಿಕೆಯು ನಮ್ಮವರನ್ನು ಒಂದುಗೂಡಿಸಿದೆ. ಆಯುತಾಯದಿಂದ ನಳಂದದವರೆಗೆ ರಾಮಾಯಣದ ಕಥೆಗಳು ಥಾಯ್ ಜನರ ಜೀವನದ ಒಂದು ಭಾಗವೇ ಆಗಿದೆ” ಎಂದು ಮೋದಿ ಹೇಳಿದ್ದಾರೆ. ಜತೆಗೆ ಭಾರತವು ವಿಸ್ತರಣಾವಾದದಲ್ಲಿ ನಂಬಿಕೆಯಿಟ್ಟಿಲ್ಲ, ಬದಲಾಗಿ ಅಭಿವೃದ್ಧಿ ವಾದದಲ್ಲಿ ನಂಬಿಕೆ ಇಟ್ಟಿದೆ ಎಂದು ಪ್ರತಿಪಾದಿಸಿದ್ದಾರೆ.