ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

David Coleman Headley: ಮುಂಬೈ ದಾಳಿಯ ರೂವಾರಿ ಡೇವಿಡ್ ಕೋಲ್ಮನ್ ಹೆಡ್ಲಿ ಯಾರು? ಈತನಿಗೂ ರಾಣಾಗೂ ಇರುವ ನಂಟೇನು?

26/11 ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವ್ವುರ್ ಹುಸೇನ್ ರಾಣಾನನ್ನು ಅಮೆರಿಕದಿಂದ ಗಡಿಪಾರು ಮಾಡಿ ಭಾರತಕ್ಕೆ ಹಸ್ತಾಂತರಿಸಲಾಗಿದೆ. ಆತನ ಸಹಚರ ಡೇವಿಡ್ ಕೋಲ್ಮನ್ ಹೆಡ್ಲಿ ಇದೀಗ ಮುನ್ನಲೆಗೆ ಬಂದಿದ್ದಾನೆ. . 2008 ರಲ್ಲಿ ಮುಂಬೈನಲ್ಲಿ 20 ಭದ್ರತಾ ಸಿಬ್ಬಂದಿ ಮತ್ತು 26 ವಿದೇಶಿಯರು ಸೇರಿದಂತೆ 166 ಜನರ ಸಾವಿಗೆ ಕಾರಣವಾದ ಬಾಂಬ್ ಸ್ಫೋಟಗಳಲ್ಲಿ ಹೆಡ್ಲಿ ಪ್ರಮುಖ ಸಂಚುಕೋರನಾಗಿದ್ದ.

ಮುಂಬೈ ದಾಳಿಯ ರೂವಾರಿ ಡೇವಿಡ್ ಕೋಲ್ಮನ್ ಹೆಡ್ಲಿ ಯಾರು?

Profile Vishakha Bhat Apr 10, 2025 11:25 AM

ವಾಷಿಂಗ್ಟನ್:‌ 26/11 ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವ್ವುರ್ ಹುಸೇನ್ ರಾಣಾನನ್ನು ಅಮೆರಿಕದಿಂದ ಗಡಿಪಾರು ಮಾಡಿ ಭಾರತಕ್ಕೆ ಹಸ್ತಾಂತರಿಸಲಾಗಿದೆ. ಆತನ ಸಹಚರ ಡೇವಿಡ್ ಕೋಲ್ಮನ್ ಹೆಡ್ಲಿ (David Coleman Headley) ಇದೀಗ ಮುನ್ನಲೆಗೆ ಬಂದಿದ್ದಾನೆ. . 2008 ರಲ್ಲಿ ಮುಂಬೈನಲ್ಲಿ 20 ಭದ್ರತಾ ಸಿಬ್ಬಂದಿ ಮತ್ತು 26 ವಿದೇಶಿಯರು ಸೇರಿದಂತೆ 166 ಜನರ ಸಾವಿಗೆ ಕಾರಣವಾದ ಬಾಂಬ್ ಸ್ಫೋಟಗಳಲ್ಲಿ ಹೆಡ್ಲಿ ಪ್ರಮುಖ ಸಂಚುಕೋರನಾಗಿದ್ದ. ಹೆಡ್ಲಿ ಹಾಗೂ ತಹವ್ವುರ್ ಹುಸೇನ್ ರಾಣಾ ಇಬ್ಬರೂ ಆತ್ಮೀಯರಾಗಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿತ್ತು.

ತಹವ್ವೂರ್ ರಾಣಾ 26/11 ನರಮೇಧಕ್ಕೆ ಮುನ್ನ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ 231 ಬಾರಿ ಡೇವಿಡ್ ಕೋಲ್‍ಮನ್ ಹೆಡ್ಲಿಯನ್ನು ಸಂಪರ್ಕಿಸಿದ್ದ ಎಂದು ತಿಳಿದು ಬಂದಿದೆ. ದಾಳಿಗೆ ಮುನ್ನ ಅಂತಿಮ ಭೇಟಿ ವೇಳೆ 66 ಕರೆಗಳನ್ನು ಮಾಡಿದ್ದ ಎನ್ನುವುದನ್ನೂ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ.

ಡೇವಿಡ್ ಕೋಲ್ಮನ್ ಹೆಡ್ಲಿ ಯಾರು?

ಪಾಕಿಸ್ತಾನಿ ಮೂಲದ ಅಮೆರಿಕನ್‌ ಆಗಿರುವ ಹೆಡ್ಲಿ, ಈಗಾಗಲೇ ಮುಂಬೈ ದಾಳಿಯಲ್ಲಿ ತನ್ನ ಪಾತ್ರವಿರುವುದನ್ನು ಒಪ್ಪಿಕೊಂಡಿದ್ದಾನೆ. ಭಯೋತ್ಪಾದನೆ ಸಂಬಂಧಿತ ಅಪರಾಧಗಳಿಗಾಗಿ ಪ್ರಸ್ತುತ ಅಮೆರಿಕದ ಜೈಲಿನಲ್ಲಿ 35 ವರ್ಷಗಳ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ. ಭಾರತವು ಆತನನ್ನು ಹಸ್ತಾಂತರಿಸುವಂತೆ ಪದೇ ಪದೇ ಕೋರಿದ್ದರೂ, ಅಮೆರಿಕದ ಅಧಿಕಾರಿಗಳು ನಿರಾಕರಿಸಿದ್ದಾರೆ. ಹೆಡ್ಲಿ ತಂದೆ ದಾವೂದ್ ಸಯೀದ್ ಗಿಲಾನಿಯಾಗಿ ಸಯೀದ್ ಸಲೀಂ ಗಿಲಾನಿ ಪಾಕಿಸ್ತಾನದ ಪ್ರಮುಖ ರಾಜತಾಂತ್ರಿಕನಾಗಿ ಕಾರ್ಯನಿರ್ವಹಿಸುತ್ತಿದ್ದರು.

ಹೆಡ್ಲಿ ತನ್ನ ಆರಂಭಿಕ ವರ್ಷಗಳನ್ನು ಪಾಕಿಸ್ತಾನದಲ್ಲಿ ಕಳೆದನು ಮತ್ತು ನಂತರ ಒಂದು ಬೋರ್ಡಿಂಗ್ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪಡೆದು ಅಮೆರಿಕಕ್ಕೆ ತೆರಳಿ, ಫಿಲಡೆಲ್ಫಿಯಾದ ತನ್ನ ಕುಟುಂಬದ ಪಬ್‌ನಲ್ಲಿ ಬಾರ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದನು. ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ (ಎಲ್‌ಇಟಿ) ಜೊತೆ ಸಂಪರ್ಕವನ್ನು ಸಾಧಿಸಿದ. ನಂತರ 1998 ರಲ್ಲಿ, ಪಾಕಿಸ್ತಾನದಿಂದ ಅಮೆರಿಕಕ್ಕೆ ಹೆರಾಯಿನ್ ಕಳ್ಳಸಾಗಣೆ ಮಾಡಿದ್ದಕ್ಕಾಗಿ ಆತನಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಬಿಡುಗಡೆಯಾದ ನಂತರ, ಹೆಡ್ಲಿ ಯುಎಸ್ ಡ್ರಗ್ ಎನ್‌ಫೋರ್ಸ್‌ಮೆಂಟ್ ಅಡ್ಮಿನಿಸ್ಟ್ರೇಷನ್ (DEA) ನೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದನು, ಪಾಕಿಸ್ತಾನದಲ್ಲಿ ರಹಸ್ಯ ಕಣ್ಗಾವಲು ಕಾರ್ಯಾಚರಣೆಗಳನ್ನು ನಡೆಸಿದ.

ಈ ಸುದ್ದಿಯನ್ನೂ ಓದಿ: Tahawwur Rana: ತಹವ್ವುರ್ ರಾಣಾ ಭಾರತಕ್ಕೆ ಹಸ್ತಾಂತರ; ತಿಹಾರ್‌ ಜೈಲಿಗೆ ಶಿಫ್ಟ್‌ ಸಾಧ್ಯತೆ

ನಂತರ 2002 ರಿಂದ 2005 ರ ನಡುವೆ ಹೆಡ್ಲಿ ಪಾಕಿಸ್ತಾನದಲ್ಲಿ ಐದು ಎಲ್‌ಇಟಿ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿದ್ದ. ಇದಾದ ನಂತರ, 2008 ರ ಮುಂಬೈ ದಾಳಿಗೆ ಕಾರಣವಾಗುವ ಕಣ್ಗಾವಲು ನಡೆಸಲು ಲಷ್ಕರ್ ಕಮಾಂಡರ್‌ಗಳ ಸೂಚನೆಯ ಮೇರೆಗೆ ಅವನು ಹಲವಾರು ಬಾರಿ ಭಾರತಕ್ಕೆ (ಐದರಿಂದ ಎಂಟು ಬಾರಿ) ಪ್ರಯಾಣ ಬೆಳೆಸಿದ್ದ. ತಹವ್ವುರ್ ಹುಸೇನ್ ರಾಣಾನ ಆತ್ಮೀಯನಾಗಿದ್ದ ಹೆಡ್ಲಿ, ಮುಂಬೈ ದಾಳಿ ವೇಳೆಗೆ ಈತನ ಸಂಪರ್ಕದಲ್ಲಿದ್ದ ಎಂದು ತಿಳಿದು ಬಂದಿದೆ.