ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Chikkaballapur News: ಪಶುಸಂಗೋಪನೆ ವೃದ್ಧಿಗೆ 40 ಲಕ್ಷ ವೆಚ್ಚದಲ್ಲಿ ನೂತನ ಪಾಲಿ ಕ್ಲಿನಿಕ್ ಕಟ್ಟಡ ನಿರ್ಮಾಣವಾಗುತ್ತಿದೆ : ಶಾಸಕ ಪುಟ್ಟಸ್ವಾಮಿಗೌಡ

ಪಶು ಇಲಾಖೆಯ ವೈದ್ಯರುಗಳು ರೈತರ ಕರೆ ಬಂದ ಕೂಡಲೇ ಹಳ್ಳಿಗೆ ಹೋಗಿ ಜಾನುವಾರುಗಳಿಗೆ ಲಸಿಕೆಗಳನ್ನು ನೀಡುವ ಮೂಲಕ ಅವು ಗಳನ್ನು ಸಾವಿನ ದವಡೆಯಿಂದ ರಕ್ಷಿಸಬೇಕು. ಈ ಮೂಲಕ ರೈತರಿಗೆ ಉಂಟಾಗುವ ಆರ್ಥಿಕ ನಷ್ಟವನ್ನು ತಪ್ಪಿಸಬೇಕು.ಯಾವುದೇ ಕಾರಣಕ್ಕೂ ವೈದ್ಯರು ನಿರ್ಲಕ್ಷ್ಯ ವಹಿಸಬಾರದು

ಪಾಲಿ ಕ್ಲಿನಿಕ್ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ

ಪಶುಸಂಗೋಪನೆ ವೃದ್ಧಿಗೆ ೪೦ ಲಕ್ಷ ವೆಚ್ಚದಲ್ಲಿ ನೂತನ ಪಾಲಿ ಕ್ಲಿನಿಕ್ ಕಟ್ಟಡ ನಿರ್ಮಾಣವಾಗುತ್ತಿದೆ ಎಂದು ಶಾಸಕ ಪುಟ್ಟಸ್ವಾಮಿಗೌಡ ತಿಳಿಸಿದರು.

Profile Ashok Nayak Mar 2, 2025 10:21 PM

ಗೌರಿಬಿದನೂರು: ತಾಲ್ಲೂಕಿನ ಜನತೆ ಹೆಚ್ಚಾಗಿ ಹೈನುಗಾರಿಕೆ ಹಾಗೂ ಬೇಸಾಯವನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದು,ರೈತರಿಗೆ ಅನುಕೂಲವಾಗಲೆಂದು  ಹಿಂದಿನ ಅಧಿ ವೇಶನದಲ್ಲಿ ಸರ್ಕಾರದ ಗಮನಕ್ಕೆ ತಂದಿದ್ದಷ್ಟೇ ಅಲ್ಲದೆ ಪಶು ಸಂಗೋಪನಾ ಸಚಿವರು ಸುಮಾರು ನಲವತ್ತು ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಿ ಪಾಲಿ ಕ್ಲಿನಿಕ್ ನಿರ್ಮಿಸಲು ಸಹಕರಿಸಿದ್ದಾರೆ ಎಂದು ಶಾಸಕ ಕೆಎಚ್ ಪುಟ್ಟಸ್ವಾಮಿಗೌಡರು ತಿಳಿಸಿದರು. ನಗರದ ಪಶು ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಪಾಲಿ ಕ್ಲಿನಿಕ್ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರೆವೇರಿಸಿ ಅವರು ಮಾತನಾಡಿದರು.

ಇದನ್ನೂ ಓದಿ: Chikkaballapur News: ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಆಟೋಟಗಳಲ್ಲಿ ಭಾಗಿಯಾಗಿ ಸಹಬಾಳ್ವೆಯಿಂದ ಆಟವಾಡಲು ಮುಂದಾಗಬೇಕು

ಇತ್ತೀಚಿಗೆ ಜಾನುವಾರುಗಳನ್ನು ನಾನಾ ರೀತಿಯ ಸಾಂಕ್ರಾಮಿಕ ರೋಗಗಳು ಹೆಚ್ಚು ಬಾಧಿ ಸುತ್ತಿರುವುದು ಗಮನಕ್ಕೆ ಬಂದಿದೆ. ಪಶು ಇಲಾಖೆಯ ವೈದ್ಯರುಗಳು ರೈತರ ಕರೆ ಬಂದ ಕೂಡಲೇ ಹಳ್ಳಿಗೆ ಹೋಗಿ ಜಾನುವಾರುಗಳಿಗೆ ಲಸಿಕೆಗಳನ್ನು ನೀಡುವ ಮೂಲಕ ಅವು ಗಳನ್ನು ಸಾವಿನ ದವಡೆಯಿಂದ ರಕ್ಷಿಸಬೇಕು. ಈ ಮೂಲಕ ರೈತರಿಗೆ ಉಂಟಾಗುವ ಆರ್ಥಿಕ ನಷ್ಟವನ್ನು ತಪ್ಪಿಸಬೇಕು.ಯಾವುದೇ ಕಾರಣಕ್ಕೂ ವೈದ್ಯರು ನಿರ್ಲಕ್ಷ್ಯ ವಹಿಸಬಾರದು. ಕರ್ತವ್ಯ ಲೋಪವನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಈ ಸಂಧರ್ಭದಲ್ಲಿ ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ ಮಾರುತಿ, ನಗರಸಭೆಯ ಸದಸ್ಯರಾದ ಶಬನಾ ಅಸ್ಲಾಂ,ಕೋಚಿಮುಲ್‌ನ ನಿರ್ದೇಶಕ ಡಾ ಕಾಂತರಾಜು, ವೈದ್ಯಾಧಿಕಾರಿಗಳಾದ ಡಾ ರೋಹಿತ್,ಡಾ ವಿಕಾಸ್,  ಕೃಷಿಕ ಸಮಾಜದ ಅಧ್ಯಕ್ಷ ಪ್ರಭಾಕರ ರೆಡ್ಡಿ,ವೆಂಕಟರಾಮರೆಡ್ಡಿ,ನಾಮನಿರ್ದೇಶಿತ ಸದಸ್ಯ ಡಿ.ಜೆ ಚಂದ್ರಮೋಹನ್,ಬಸಪ್ಪರೆಡ್ಡಿ,ಕೆ ನಂಜುAಡಪ್ಪ,ಅಶ್ವತ್ಥರೆಡ್ಡಿ,ಜಿಎಲ್ ಅಶ್ವತ್ಥ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.