Chikkaballapur News: ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಆಟೋಟಗಳಲ್ಲಿ ಭಾಗಿಯಾಗಿ ಸಹಬಾಳ್ವೆಯಿಂದ ಆಟವಾಡಲು ಮುಂದಾಗಬೇಕು
ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ದೈಹಿಕವಾದ ಕೆಲಸ ಕಾರ್ಯಗಳಿಂದ ದೂರವಾಗಿ ಮೊಬೈಲ್, ಟಿವಿ ನೋಡುವುದರಲ್ಲಿ ತಲ್ಲಿನರಾಗಿರುವುದು ನೋವಿನ ಸಂಗತಿ. ಗ್ರಾಮೀಣ ಪ್ರದೇಶ ಗಳಲ್ಲಿ ನಡೆಯುವ ಆಟೋಟಗಳಲ್ಲಿ ಭಾಗಿಯಾಗಿ ಸಹಬಾಳ್ವೆಯಿಂದ ಆಟವಾಡಲು ಮುಂದಾಗ ಬೇಕು. ಇದರಿಂದ ಯುವ ಸಮೂಹದ ನಡುವೆ ಒಳ್ಳೆಯ ಬಾಂಧವ್ಯ ಬೆಳೆಯ ಲಿದೆ ಎಂದರು.

ಯುವ ಜನತೆ ಶೆಟಲ್ ಸೇರಿದಂತೆ ಇತರೆ ಆಟೋಟಗಳಲ್ಲಿ ಸಕ್ರಿಯವಾಗಿ ತೊಡಗುವುದರಿಂದ ದೈಹಿಕವಾಗಿ ಆರೋಗ್ಯದಿಂದ ಇರಬಹುದಲ್ಲದೆ ಮಾನಸಿಕ ಆರೋಗ್ಯಕ್ಕೂ ನೆರವಾಗಲಿದೆ ಎಂದು ನವಭಾರತ್ ಸ್ಪೋರ್ಟ್ ಕ್ಲಬ್ ಅಧ್ಯಕ್ಷ ಶ್ರೇಣಿಕ್ ತಿಳಿಸಿದರು.

ಗೌರಿಬಿದನೂರು: ಯುವ ಜನತೆ ಶೆಟಲ್ ಸೇರಿದಂತೆ ಇತರೆ ಆಟೋಟಗಳಲ್ಲಿ ಸಕ್ರಿಯವಾಗಿ ತೊಡಗುವುದರಿಂದ ದೈಹಿಕವಾಗಿ ಆರೋಗ್ಯದಿಂದ ಇರಬಹುದಲ್ಲದೆ ಮಾನಸಿಕ ಆರೋಗ್ಯ ಕ್ಕೂ ನೆರವಾಗಲಿದೆ ಎಂದು ನವಭಾರತ್ ಸ್ಪೋರ್ಟ್ ಕ್ಲಬ್ ಅಧ್ಯಕ್ಷ ಶ್ರೇಣಿಕ್ ತಿಳಿಸಿದರು. ನಗರದಲ್ಲಿ ನವಭಾರತ್ ಸ್ಪೋರ್ಟ್ಸ್ ಕ್ಲಬ್‌ನಿಂದ ಏರ್ಪಡಿಸಿದ್ದ ಶೇಟಲ್ ಕಾಕ್ ಪಂದ್ಯವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ದೈಹಿಕ ವಾದ ಕೆಲಸ ಕಾರ್ಯಗಳಿಂದ ದೂರವಾಗಿ ಮೊಬೈಲ್, ಟಿವಿ ನೋಡುವುದರಲ್ಲಿ ತಲ್ಲಿನ ರಾಗಿರುವುದು ನೋವಿನ ಸಂಗತಿ.
ಇದನ್ನೂ ಓದಿ: Chikkaballapur News: ಭೋಗನಂದೀಶ್ವರ ಜಾತ್ರೆಯಲ್ಲಿ ನಿಯಮ ಮೀರಿ ಅಂಗಡಿಗಳಿಂದ ಕಂಡಾಪಟ್ಟೆ ಸುಂಕ ವಸೂಲಿ
ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಆಟೋಟಗಳಲ್ಲಿ ಭಾಗಿಯಾಗಿ ಸಹಬಾಳ್ವೆಯಿಂದ ಆಟವಾಡಲು ಮುಂದಾಗಬೇಕು. ಇದರಿಂದ ಯುವ ಸಮೂಹದ ನಡುವೆ ಒಳ್ಳೆಯ ಬಾಂಧವ್ಯ ಬೆಳೆಯಲಿದೆ ಎಂದರು.
ಪಂದ್ಯದಲ್ಲಿ ಪ್ರಥಮ ಸ್ಥಾನ ಎಮ್. ಎಸ್. ಗುರುಪ್ರಸಾದ್ ಮತ್ತು ಉಜ್ವಲ್ ಪಡೆದರೆ ದ್ವಿತೀಯ ಸ್ಥಾನವನ್ನು ರಾಘವೇಂದ್ರ,ರಾಜೇಶ್ ಮತ್ತು ಜಗನಾಥ್ ರೆಡ್ಡಿ ಪಡೆದುಕೊಂಡರು.
ಪ್ರಥಮ ಸ್ಥಾನ ಪಡೆದ ಆಟಗಾರ ಗುರುಪ್ರಸಾದ್ ಮಾತನಾಡಿ ಕ್ರೀಡೆಗಳಲ್ಲಿ ಭಾಗಿಯಾಗು ವುದು ಅತ್ಯಂತ ಸಂತೋಷದ ಸಂಗತಿ.ಕ್ಲಬ್‌ನ ಎಲ್ಲ ಆಟಗಾರರ ನೆರವಿನಿಂದ ನಾನು ಕಳೆದ ಮೂರು ವರ್ಷಗಳಿಂದ ಆಟದಲ್ಲಿ ಗೆಲುವು ಕಾಣುತ್ತಾ ಬಂದಿರುವೆ ಎಂದರು.
ಈವೇಳೆ ಕೆ.ಕೆ.ರಾಜು. ಧರ್ಮಪ್ರಕಾಶ್ ಶ್ರೀಧರ್. ಪ್ರಶಾಂತ್. ರಾಮಾಂಜಿ, ರಾಘವೇಂದ್ರ ಗುಪ್ತ. ಜಿ.ಕೆ ಶ್ರೀನಿವಾಸ್. ರಾಜು ಇತರರು ಹಾಜರಿದ್ದರು.