Chikkaballapur Breaking: ಆಶ್ರಮದ ಮೇಲೆ ಕಣ್ಣು ಹಾಕಿರುವ ರಿಯಲ್ ಎಸ್ಟೇಟ್ ದಂಧೆಕೋರರ ಉಪಟಳ ನಿಲ್ಲಲಿ: ಜ್ಯೋತಿ ಆರೋಪ
ಅಂಗಟ್ಟ ಗ್ರಾಮ 8.5 ಎಕರೆ ಸರ್ಕಾರಿ ಜಮೀನಿನಲ್ಲಿ ಮೇಲೆ ಆಂಧ್ರ ಮೂಲದ ರಿಯಲ್ ಎಸ್ಟೇಟ್ ದಂಧೆಕೋರನ ಕಣ್ಣು ಬಿದ್ದಿದ್ದೇ ತಡ, ಎಲ್ಲಿಲ್ಲದ ದರ್ಪ, ದಬ್ಬಾಳಿಕೆ ಆರಂಭವಾಗಿದೆ. ಅಶಕ್ತ ರಾಗಿರೋ ವೃದ್ಧರನ್ನು ಒಕ್ಕಲೆಬ್ಬಿಸಲು ಏನು ಮಾಡಬೇಕೋ ಅಷ್ಟೂ ಕೆಲಸಗಳು ನಡೆಯುತ್ತಿವೆ. ಸರ್ಕಾರಿ ಭೂಮಿಯ ಉಳಿಸಬೇಕಾದ ಕಂದಾಯ ಇಲಾಖೆ ಅಧಿಕಾರಿಗಳು ಜಾಣಕುರುಡರಂತೆ ವರ್ತಿಸುತ್ತಿದ್ದು, ನ್ಯಾಯಾಲಯದಲ್ಲಿ ಈ ಕುರಿತು ದಾವೆ ಹೂಡಿದ್ದರೂ, ರಾತ್ರೋರಾತ್ರಿ ಮರ ಗಳನ್ನು ಕಟಾವು ಮಾಡಿ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆ

:ಆಶ್ರಮದ ಮೇಲೆ ಕಣ್ಣು ಹಾಕಿರುವ ರಿಯಲ್ ಎಸ್ಟೇಟ್ ದಂಧೆಕೋರರ ಉಪಟಳ ನಿಲ್ಲಿಸಲು ಪೊಲೀಸರು ಮುಂದಾಗಬೇಕು ಎಂದು ಜ್ಯೋತಿ ಆರೋಪ ಮಾಡಿದರು.

ಚಿಕ್ಕಬಳ್ಳಾಪುರ: ನಂದಿಬೆಟ್ಟದ ತಪ್ಪಲಿನಲ್ಲಿರುವ ನೂರಾರು ವರ್ಷಗಳ ಮಠದ ಮೇಲೆ ರಿಯಲ್ ಎಸ್ಟೇಟ್ ದಂಧೆಕೋರರ ಕಣ್ಣುಬಿದ್ದಿದ್ದು, ಇದರಿಂದ ಮಠದಲ್ಲಿರುವ ವೃದ್ಧರಿಗೆ ಕಿರುಕುಳ ನೀಡಿ ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ದಂಧೆಕೋರರ ಪರ ನಿಂತಿದ್ದಾರೆಂದು ಮಠದ ಭಕ್ತೆ ಜ್ಯೋತಿ ಎಂಬಾಕೆ ಕಣ್ಣೀ ರಾಕುವ ಮೂಲಕ ಅಸಹಾಯಕತೆ ವ್ಯಕ್ತಪಡಿಸಿದರು. ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ತಾಲೂಕಿನ ನಂದಿಬೆಟ್ಟದ ತಪ್ಪಲಿನಲ್ಲಿರುವ ಅಂಗಟ್ಟ ಗ್ರಾಮಕ್ಕೆ ಹೊಂದಿಕೊಂಡಿರುವ 8.5 ಎಕರೆ ಸರ್ಕಾರಿ ಜಮೀನಿನ ಪೈಕಿ ಒಂದಿಷ್ಟು ಜಾಗದಲ್ಲಿ ನೂರಾರು ವರ್ಷಗಳ ಹಿಂದೆಯೇ ಮಠ ನಿರ್ಮಿಸಿ ವೃದ್ಧರು, ದಿಕ್ಕಿಲ್ಲದವರಿಗೆ ಆಸರೆಯಾಗಿದೆ. ಅಲ್ಲದೆ ಕಾಲಕಾಲಕ್ಕೆ ಆರಾಧನಾ ಮಹೋತ್ಸವಗಳು, ಪೂಜೆ ಪುನಸ್ಕಾರ ಗಳು ನಡೆಯುತ್ತಿದ್ದು, ಚಿಕ್ಕಬಳ್ಳಾಪುರ ಸೇರಿ ವಿವಿಧ ತಾಲೂಕಿನ ಅಪಾರ ಸಂಖ್ಯೆಯ ಭಕ್ತರೂ ಇದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: Chinnaswamy Stadium: ಚಿನ್ನಸ್ವಾಮಿ ಕ್ರೀಡಾಂಗಣ ಸ್ಟ್ಯಾಂಡ್‌ಗಳಿಗೆ ದಿಗ್ಗಜರ ನಾಮಫಲಕ ಅನಾವರಣ
ಆದರೆ ಅಂಗಟ್ಟ ಗ್ರಾಮ 8.5 ಎಕರೆ ಸರ್ಕಾರಿ ಜಮೀನಿನಲ್ಲಿ ಮೇಲೆ ಆಂಧ್ರ ಮೂಲದ ರಿಯಲ್ ಎಸ್ಟೇಟ್ ದಂಧೆಕೋರನ ಕಣ್ಣು ಬಿದ್ದಿದ್ದೇ ತಡ, ಎಲ್ಲಿಲ್ಲದ ದರ್ಪ, ದಬ್ಬಾಳಿಕೆ ಆರಂಭವಾಗಿದೆ. ಅಶಕ್ತರಾಗಿರೋ ವೃದ್ಧರನ್ನು ಒಕ್ಕಲೆಬ್ಬಿಸಲು ಏನು ಮಾಡಬೇಕೋ ಅಷ್ಟೂ ಕೆಲಸಗಳು ನಡೆಯುತ್ತಿವೆ. ಸರ್ಕಾರಿ ಭೂಮಿಯ ಉಳಿಸಬೇಕಾದ ಕಂದಾಯ ಇಲಾಖೆ ಅಧಿಕಾರಿಗಳು ಜಾಣಕುರುಡರಂತೆ ವರ್ತಿಸುತ್ತಿದ್ದು, ನ್ಯಾಯಾಲಯದಲ್ಲಿ ಈ ಕುರಿತು ದಾವೆ ಹೂಡಿದ್ದರೂ, ರಾತ್ರೋರಾತ್ರಿ ಮರಗಳನ್ನು ಕಟಾವು ಮಾಡಿ ಕಾಂಪೌAಡ್ ನಿರ್ಮಾಣ ಮಾಡಲಾಗುತ್ತಿದೆ. ಪ್ರಶ್ನಿಸಲು ಮುಂದಾಗುವ ದೌರ್ಜನ್ಯ ದಬ್ಬಾಳಿಕೆ ಮಾಡ ಲಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ಮಠದ ಭಕ್ತೆಯೆಂದು ನಾನು ವೃದ್ಧರ ಪರ ನಿಂತು ಹೋರಾಟ ನಡೆಸುತ್ತಿರುವುದರಿಂದ ಆಡಳಿತ ವ್ಯವಸ್ಥೆಯ ಅಸಲೀ ಮುಖ ಇವರಿಗೆ ಪರಿಚಯವಾಗಿದ್ದು, ಇಲ್ಲಿ ಸರ್ಕಾರಿ ಜಮೀ ನಿಗೆ ನಕಲಿ ದಾಖಲೆ ಸೃಷ್ಟಿಸಿ ಕಬಳಿಸುವ ಯತ್ನ ನಡೆಯುತ್ತಿದೆ. ರೆಕಾರ್ಡ್ ರೂಮ್‌ನಲ್ಲಿ ಹಲವು ದಾಖಲೆಗಳೇ ನಾಪತ್ತೆಯಾಗಿದೆ. ಆದರೆ ರಿಯಲ್ ಎಸ್ಟೇಟ್ ದಂಧೆಕೋರರಿಗೆ ಮಾತ್ರ ಎಲ್ಲ ದಾಖಲೆಗಳನ್ನು ನೀಡುವ ಅಧಿಕಾರಿಗಳೇ ಭೂ ಕಬಳಿಸಲು ಪ್ರೋತ್ಸಾಹಿಸುತ್ತಿದ್ದಾರೆ. ವೃದ್ಧರ ಪರವಾಗಿ ನಿಂತಿರುವುದರಿAದ ನನಗೂ ಇನ್ನಿಲ್ಲದ ಕಿರುಕುಳವನ್ನು ನೀಡುತ್ತಿದ್ದಾ ರೆಂದು ಆರೋಪಿಸಿದರು.
ಇನ್ನು ಅಂಗಟ್ಟ ಗ್ರಾ.ಪಂ ಅಧಿಕಾರಿಗಳು, ತಹಸೀಲ್ದಾರ್ ಸೇರಿ ಕಂದಾಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಎಲ್ಲರೂ ರಿಯಲ್ ಎಸ್ಟೇಟ್ ದಂಧೆಕೋರರ ಪರ ನಿಂತಿರುವ ಕಾರಣ ಅಂಗಟ್ಟ ಗ್ರಾಮದಲ್ಲಿರುವ ಮಠ ಮತ್ತು ಸರ್ಕಾರಿ ಜಮೀನು ಉಳಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಶಾಸಕ ಪ್ರದೀಪ್ ಈಶ್ವರ್ ಅವರಿಗಾದರೂ ಹೇಳಿದರೆ ನ್ಯಾಯ ಕೊಡಿಸಬಹುದು ಅಂತ ಶಾಸಕ ಪ್ರದೀಪ್ ಈಶ್ವರ್ ಅವರ ಕಚೇರಿಗೆ ಕರೆ ಮಾಡಿ ದೂರು ನೀಡಲಾಗಿದೆ. ಶಾಸಕರ ಸಹೋದರ ಚೇತನ್ ಎಂಬುವರಿಗೆ ಈ ಸಂಬಂಧ ದೂರು ಕಚೇರಿಗೆ ಕರೆ ಮಾಡಿ ಎಂದು ಜಾರಿಕೊಂಡಿದ್ದಾರಂತೆ ಎಂದರು. ಸಾದಲಿ ಸೀತಮ್ಮ, ಆರ್‌ಎಸ್‌ಎಸ್ ಶ್ರೀನಿವಾಸ್, ರಾಘವೇಂದ್ರ ಜೆಟ್ಟಿ, ಗಂಗಣ್ಣ ಇದ್ದರು.
*
ನಂದಿಬೆಟ್ಟದ ತಪ್ಪಲಿನಲ್ಲಿ ರೆಸಾರ್ಟ್, ಲೇಔಟ್‌ಗಳು ಹೋಟೆಲ್ ನಿರ್ಮಿಸಲು ಮಾತ್ರ ಅಧಿಕಾರಿಗಳು ಪ್ರೋತ್ಸಾಹ ನೀಡುತ್ತಿದ್ದಾರೆ. ಇರುವ ಮಠ ಹಾಗೂ ಸರ್ಕಾರಿ ಭೂಮಿಯನ್ನು ಉಳಿಸಿಕೊಳ್ಳಲು ಮುಂದಾಗದ ಅಧಿಕಾರಿಗಳ ಧೋರಣೆಯಿಂದ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ ಎಂಬ ಅನುಮಾನವು ಮೂಡಿದೆ ಎಂದು ಜ್ಯೋತಿ ದೂರಿದರು. ಇನ್ನಾದರೂ ನೆರೆ ರಾಜ್ಯದಿಂದ ಬಂದು ಸ್ಥಳೀಯರನ್ನು ದೌರ್ಜನ್ಯ ನಡೆಸುತ್ತಿದ್ದು, ಮಠ ದಲ್ಲಿ ನಾಲ್ಕು ಮಂದಿ ಅವಧೂತರ ಸಮಾಧಿಗಳಿದ್ದು, ಇದರಲ್ಲಿ ಈ ಪೈಕೆ ಒಂದು ಸಮಾಧಿ ಯನ್ನು ಕೆಡವಲಾಗಿದೆ. ಇನ್ನಾದರೂ ರಿಯಲ್ ಎಸ್ಟೇಟ್ ದಂಧೆಕೋರರ ವಿರುದ್ಧದ ಹೋರಾಟಕ್ಕೆ ಸ್ಥಳೀಯರು ಕೈಜೋಡಿಸಿ ನ್ಯಾಯ ಒದಗಿಸಬೇಕೆಂದು ಕೋರಿದರು.
*
ಜಿಲ್ಲೆಯಲ್ಲಿ ಕಾನೂನು, ಆಡಳಿತ ಬದುಕೇ ಇಲ್ಲ. ಕಾನೂನು ಸುವ್ಯವಸ್ಥೆಯನ್ನು ಕಾಪಾಡ ಬೇಕಿದ್ದ ಪೊಲೀಸ್ ಇಲಾಖೆ ದಂಧೆಕೋರರಿಗೆ ಬೆಂಬಲವಾಗಿ ನಿಂತಿದೆ ಎಂದು ನೇರವಾಗಿ ಆರೋಪ ಮಾಡಿದ ಜ್ಯೋತಿ, ದೌರ್ಜನ್ಯದ ಕುರಿತು ಪೊಲೀಸರಿಗೆ ದೂರು ನೀಡಿದರೆ ಅದು ಸಿವಿಲ್ ವಿಚಾರ, ಅದನ್ನು ನೀವು ಕೋರ್ಟಿಗೆ ಹೋಗಿ ಎಂದು ನಂದಿ ಪಿಎಸ್‌ಐ ಸೇರಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೂ ಹೇಳಿದರು. ಹಾಗಾಗಿ, ಅವರು ಕೋರ್ಟಿಗೆ ಹೋಗಿ ತಡೆಯಾಜ್ಞೆ ತಂದರೂ ದಂಧೆಕೋರನ ಕಾಟ ತಪ್ಪಲಿಲ್ಲ ಎಂದು ಅಳಲು ತೋಡಿ ಕೊಂಡರು.
ಈ ಬಗ್ಗೆ ನಂದಿ ಪಿಎಸ್‌ಐ ಹರೀಶ್ ಅವರಿಗೆ ಹೇಳಿದರೆ ಅದು ಅವರದ್ದೇ ಜಾಗ, ನೀವು ಹೀಗೆ ಆಡಿದರೆ ನಿಮ್ಮ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದರು. ಪಿಎಸ್‌ಐ ಹರೀಶ್ ಬೆದರಿಕೆ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಅವರಿಗೆ ವಾಟ್ಸಪ್ ಮೂಲಕ ದೂರು ಸಲ್ಲಿಸಿದರೆ ಯಾವುದೇ ಕ್ರಮ ವಹಿಸಿಲ್ಲವಂತೆ. ಆದರೆ ದಂಧೆ ಕೋರರು ಕೇವಲ ಪೋನ್ ಕರೆ ಮಾಡಿದರೂ ಬಂದು ನಿಲ್ಲುತ್ತಿದ್ದಾರಂತೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯೇ ಇಲ್ಲ ಎಂದು ಅಳಲು ತೋಡಿಕೊಂಡರು.