ಮಾಜಿ ಸಚಿವ ಕೆ.ಎಂ.ಕೃಷ್ಣಾರೆಡ್ಡಿ ಅವರ 13ನೇ ವರ್ಷದ ಪುಣ್ಯಸ್ಮರಣೆ: ಹಣ್ಣು ಹಂಪಲು ವಿತರಣೆ
ಮಾನವತಾವಾದಿ, ರಾಜಕೀಯ ಮುತ್ಸದಿ,ಮಾಜಿ ಸಮಾಜ ಕಲ್ಯಾಣ ಸಚಿವ ಕೆ.ಎಂ ಕೃಷ್ಣಾರೆಡ್ಡಿ ತಮ್ಮ ಅಧಿಕಾರಾವಾಧಿಯಲ್ಲಿ ಆನೇಕ ಜನಪರ ಕಾರ್ಯಗಳನ್ನು ಮಾಡಿ ಜನರ ಮೆಚ್ಚುಗೆಗೆ ಪಾತ್ರ ರಾಗಿದ್ದರು. ಅಂತಹ ಮಹಾನುಭಾವರ ಆದರ್ಶಗುಣಗಳನ್ನು ಇಂದಿನ ಯುವಕರು ಮೈಗೂಡಿ ಸಿಕೊಂಡು ಅವರ ಹಾದಿಯಲ್ಲಿ ನಡೆಯಬೇಕು.ಅವರು ಕಂಡ ಕನಸುಗಳನ್ನು ಈಡೇರಿಸಲು ಶ್ರಮಿಸಬೇಕು.

ದಿವಗಂತ ಕೆ.ಎಂ.ಕೃಷ್ಣಾರೆಡ್ಡಿ ಸಮಾಜ ಕಲ್ಯಾಣ ಸಚಿವರಾಗಿದ್ದ ಅವಧಿಯಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ತೆರೆದು ಲಕ್ಷಾಂತರ ವಿದ್ಯಾರ್ಥಿಗಳ ಬಾಳಲ್ಲಿ ಬೆಳಕು ಚೆಲ್ಲಿದ ದೂರದೃಷ್ಟಿಯ ನೇತಾರರಾಗಿದ್ದಾರೆ ಎಂದು ನಗರ ಸಭೆ ಸದಸ್ಯ ದೇವಳಂ ಶಂಕರ್ ತಿಳಿಸಿದರು.

ಚಿಂತಾಮಣಿ: ದಿವಗಂತ ಕೆ.ಎಂ.ಕೃಷ್ಣಾರೆಡ್ಡಿ ಸಮಾಜ ಕಲ್ಯಾಣ ಸಚಿವರಾಗಿದ್ದ ಅವಧಿಯಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ತೆರೆದು ಲಕ್ಷಾಂತರ ವಿದ್ಯಾರ್ಥಿಗಳ ಬಾಳಲ್ಲಿ ಬೆಳಕು ಚೆಲ್ಲಿದ ದೂರದೃಷ್ಟಿಯ ನೇತಾರರಾಗಿದ್ದಾರೆ ಎಂದು ನಗರ ಸಭೆ ಸದಸ್ಯ ದೇವಳಂ ಶಂಕರ್ ತಿಳಿಸಿದರು. ಚಿಂತಾಮಣಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ದಿವಗಂತ ಕೆಎಂ ಕೃಷ್ಣ ರೆಡ್ಡಿರವರ 13ನೇ ಪುಣ್ಯಸ್ಮರಣೆ ಅಂಗವಾಗಿ ಹಣ್ಣು ಹಂಪಲಗಳನ್ನು ವಿತರಿಸಿ ಮಾತನಾಡಿದ ಅವರು ದಿವಂಗತ ಕೆ.ಎಂ ಕೃಷ್ಣಾರೆಡ್ಡಿ ರವರು ನಿಧನರಾಗಿ ೧೩ ವರ್ಷ ಕಳೆದಿದ್ದು ದೇವರು ಅವರ ಆತ್ಮಕ್ಕೆ ಶಾಂತಿ ನೀಡಿ ಹಾಗೂ ಈಗ ಜನಗಳಿಗೆ ಒಳ್ಳೆ ಮಳೆ ಬೆಳೆ ಆಗಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಮಾನವತಾವಾದಿ, ರಾಜಕೀಯ ಮುತ್ಸದಿ,ಮಾಜಿ ಸಮಾಜ ಕಲ್ಯಾಣ ಸಚಿವ ಕೆ.ಎಂ ಕೃಷ್ಣಾರೆಡ್ಡಿ ತಮ್ಮ ಅಧಿಕಾರಾವಾಧಿಯಲ್ಲಿ ಆನೇಕ ಜನಪರ ಕಾರ್ಯಗಳನ್ನು ಮಾಡಿ ಜನರ ಮೆಚ್ಚುಗೆಗೆ ಪಾತ್ರ ರಾಗಿದ್ದರು. ಅಂತಹ ಮಹಾನುಭಾವರ ಆದರ್ಶಗುಣಗಳನ್ನು ಇಂದಿನ ಯುವಕರು ಮೈಗೂಡಿ ಸಿಕೊಂಡು ಅವರ ಹಾದಿಯಲ್ಲಿ ನಡೆಯಬೇಕು.ಅವರು ಕಂಡ ಕನಸುಗಳನ್ನು ಈಡೇರಿಸಲು ಶ್ರಮಿಸಬೇಕು.
ಈ ವೇಳೆ ಕೆ ಎಂ ಕೃಷ್ಣಾರೆಡ್ಡಿ ಪುತ್ರ ರಾಜಶೇಖರರೆಡ್ಡಿ,ನಗರ ಸಭೆ ಸದಸ್ಯ ಮಂಜುನಾಥ್ ಮಾಜಿ ನಗರಸಭೆ ಸದಸ್ಯ ಅಬುಗುಂಡು ಶ್ರೀನಿವಾಸ್, ಚಾಂದ್ ಪಾಷಾ, ಲಕ್ಷ್ಮಣ್, ವೆಂಕಟೇಶ್, ಕುಂಟೆಗಡ್ಡೆ ರೆಡ್ಡಪ್ಪ,ಬಾಡಿ ಬಿಲ್ಡರ್ ಶ್ರೀನಿವಾಸ್, ಗಾಜಲ ಶಿವು ಸೇರಿದಂತೆ ಎಲ್ಲಾ ಕೆ ಎಂ ಕೃಷ್ಣಾರೆಡ್ಡಿ ಅಭಿಮಾನಿ ಗಳು ಭಾಗವಹಿಸಿದ್ದರು.