MLA Pradeep Eshwar: ಮುಡಾ ಹಗರಣದ ಮೂಲಕ ಮುಖ್ಯಮಂತ್ರಿಗೆ ಕಳಂಕ ತರುವುದು ಬಿಜೆಪಿ ಹುನ್ನಾರ : ಶಾಸಕ ಪ್ರದೀಪ್ ಈಶ್ವರ್
ಬೆಲೆ ಏರಿಕೆ ಖಂಡಿಸಿ ಬಿಜೆಪಿಯಿಂದ ನಡೆದ ಧರಣಿ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಬಿಜೆಪಿಯವರಿಗೆ ತಾಕತ್ ಇದ್ರೆ ಕೇಂದ್ರ ಸರಕಾರ ಏರಿಸಿರುವ ಪೆಟ್ರೋಲ್ ಡಿಸೇಲ್ ಬೆಲೆ ಇಳಿಸಲು ಹೇಳಿ. ಹೋಗಲಿ ಬಿಜೆಪಿಯವರಿಗೆ ಏನಾದ್ರು ಮಾನ ಮರ್ಯಾದೆ ಇದ್ದರೆ ನಮ್ಮ ಪಾಲಿನ ಜಿ.ಎಸ್.ಟಿ ಹಣ ಕೊಡಿಸಲಿ


ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಮುಡಾ ಹಗರಣದಲ್ಲಿ ಸಿಲುಕಿಸಲು ಬಿಜೆಪಿ ಶತಪ್ರಯತ್ನ ಮಾಡುತ್ತಿದೆ ಆಗುತ್ತಿಲ್ಲ.ಏನಾದರೂ ಮಾಡಿ ಅವರಿಗೆ ಕಳಂಕ ತರಲು ಬಿಜೆಪಿ ಯತ್ನಿಸುತ್ತಿದೆ.ಆದರೆ ಯಾರೂ ಏನ್ ಮಾಡೋದಿಕ್ಕೆ ಆಗಲ್ಲ. ಇ.ಡಿ ಬಿಟ್ಟು ತಾತ್ಕಾ ಲಿಕ ತೊಂದರೆ ನೀಡಬಹುದು ಅಷ್ಟೆ. ಕಾರಣ ಅಹಿಂದ ವರ್ಗದ ಪ್ರಶ್ನಾತೀತ ಪರಮೋಚ್ಚ ನಾಯಕರು ನಮ್ಮ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ಚಿಕ್ಕಬಳ್ಳಾಪುರ ತಾಲೂಕಿನ ಎಸ್.ಗೊಲ್ಲಹಳ್ಳಿ ಗ್ರಾಮಪಂಚಾಯಿಯಲ್ಲಿ ಶುಕ್ರವಾರ ನಡೆದ ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು.
ಇದನ್ನೂ ಓದಿ: Chikkaballapur News: ವಿಧಾನ ಪರಿಷತ್ ಸದಸ್ಯ ಎಂ.ಆರ್ ಸೀತಾರಾಮ್ ಜನ್ಮದಿನ: ಸೇವಾಕಾರ್ಯಗಳ ಮೂಲಕ ಆಚರಣೆ
ಬೆಲೆ ಏರಿಕೆ ಖಂಡಿಸಿ ಬಿಜೆಪಿಯಿಂದ ನಡೆದ ಧರಣಿ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಬಿಜೆಪಿಯವರಿಗೆ ತಾಕತ್ ಇದ್ರೆ ಕೇಂದ್ರ ಸರಕಾರ ಏರಿಸಿ ರುವ ಪೆಟ್ರೋಲ್ ಡಿಸೇಲ್ ಬೆಲೆ ಇಳಿಸಲು ಹೇಳಿ. ಹೋಗಲಿ ಬಿಜೆಪಿಯವರಿಗೆ ಏನಾದ್ರು ಮಾನಮರ್ಯಾದೆ ಇದ್ದರೆ ನಮ್ಮ ಪಾಲಿನ ಜಿ.ಎಸ್.ಟಿ ಹಣ ಕೊಡಿಸಲಿ. ಸದಾ ಸುದ್ದಿಯಲ್ಲಿ ಇರಲಿಕ್ಕಾಗಿಯೇ ಬಿಜೆಪಿಯರು ಧರಣಿ ಹಮ್ಮಿಕೊಂಡಿದ್ದಾರೆ ಎಂದು ವ್ಯೆಂಗ್ಯವಾಡಿದರು.
ಬಿಜೆಪಿಯ ಧರಣಿಯಿಂದ ಜೆ.ಡಿ.ಎಸ್ ದೂರ ಉಳಿದ ವಿಚಾರದ ಪ್ರಸ್ತಾಪಕ್ಕೆ ಉತ್ತರಿಸಿದ ಪ್ರದೀಪ್ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಗು ಇದ್ದಂತೆ. ಅವರಿಗೆ ಏನೂ ಗೊತ್ತಾಗಲ್ಲ. ಯಾರು ಚಾಕಲೇಟ್ ಕೊಡ್ತಾರೆ ಅವರ ಕಡೆ ಹೋಗ್ತಾರೆ. ಹೀಗಾಗಿ ಎಚ್.ಡಿ.ಕೆ ಯದು ಒಳ್ಳೆ ಮನಸ್ಸು ಎನ್ನುವ ಮೂಲಕ ಟಾಂಗ್ ನೀಡಿದರು.