Chikkaballapur News: ಶಾಂತಿಯನ್ನು ಮೈಗೂಡಿಸಿಕೊಳ್ಳುವಂತೆ ಸಲಹೆ ನೀಡಿ, ಎಲ್ಲರ ಜೀವನದಲ್ಲಿ ಸುಖ ಶಾಂತಿ ನೆಲೆಸಲಿ
ಈದ್ಗಾ ಮೈದಾನಕ್ಕೆ ಮಾಜಿ ಶಾಸಕರಾದ ಕೆ.ಪಿ ಬಚ್ಚೆಗೌಡ ಆಗಮಿಸಿ ರಂಜಾನ್ ಹಬ್ಬದ ಶುಭ ಕೋರಿದರು ಕಳೆದ 30 ವರ್ಷಗಳಿಂದ ಸತತವಾಗಿ ಈದ್ಗಾ ಮೈದಾನಲ್ಲಿ ಬಂದು ಪ್ರೀತಿ ಹಂಚಿಕೊಳ್ಳುತ್ತಿದ್ದು ಎಲ್ಲರೂ ಪ್ರೀತಿ ಸೌಹಾರ್ದತೆ ಬದುಕು ಬಾಳುವ ಮೊಲಕ ಶಾಂತಿ ಸಂದೇಶ ಸಾರೂಣ ಎಂದರು.


ಚಿಕ್ಕಬಳ್ಳಾಪುರ: ಶಾಂತಿ,ದಾನ ಧರ್ಮದ ಸಂದೇಶವನ್ನು ಸಾರುವ ರಂಜಾನ್ ಹಬ್ಬವನ್ನು ವಿಶೇಷ ಪ್ರಾರ್ಥನೆ ಮೂಲಕ ಜಿಲ್ಲಾದ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಿದ ಮುಸ್ಲಿಮರು ಒಂದು ಮಾಸದ ಕಠಿಣ ಉಪವಾಸಕ್ಕೆ ಸೋಮವಾರ ತೆರೆ ಎಳೆದರು. ಹಬ್ಬದ ಅಂಗವಾಗಿ ಬಿ.ಬಿ.ರಸ್ತೆಯ ಜೂನಿಯರ್ ಕಾಲೇಜು ಮುಂಭಾಗದ ಮಸ್ಜೀದೆ-ಖುರ್ದ್ ಬಳಿ ಜಮಾಯಿಸಿದ ಮುಸ್ಲಿಮರು ಅಲ್ಲಿಂದ ಸಾಮೂಹಿಕ ಜಮಾತ್ ಮೆರವಣಿಗೆಯೊಂದಿಗೆ ಹೊರಟು ಪ್ರಶಾಂತ ನಗರದಲ್ಲಿನ ಈದ್ಗಾ ಮೈದಾನದಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ.ಸಲ್ಲಿಸಿದರು. ಸಾಮೂಹಿಕ ಪ್ರಾರ್ಥನೆ ನಂತರ ಧರ್ಮ ಗುರುಗಳಾದ ಮೌಲಾ ನಾ ಮನ್ಸೂರ್ ರವರು ತಿಂಗಳ ಉಪವಾಸದ ಹಾಗೂ ರಂಜಾನ್ ಹಬ್ಬದ ವೈಶಿಷ್ಟತೆ, ಸಂಬಂಧಿಕ ರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳಬೇಕು, ನೆರೆಹೊರೆಯವರಿಗೆ ಕಷ್ಟ ಗಳು ಬಂದಾಗ ಅವರಿಗೆ ಸಹಾಯ ಹಸ್ತ ನೀಡುವ ಬಗ್ಗೆ ವಿಶೇಷ ಪ್ರವಚನ ನೀಡಿದರು. ಅಲ್ಲದೆ ಇಸ್ಲಾಂ ಧರ್ಮವು ಸಾರುವ ದಾನ ಧರ್ಮಗಳನ್ನು, ಶಾಂತಿಯನ್ನು ಮೈಗೂಡಿಸಿಕೊಳ್ಳುವಂತೆ ಸಲಹೆ ನೀಡಿ, ಎಲ್ಲರ ಜೀವನದಲ್ಲಿ ಸುಖ ಶಾಂತಿ ನೆಲೆಸಲೆಂದು ದೇವರಲ್ಲಿ ಪ್ರಾರ್ಥಿಸಿದರು.
ಈದ್ಗಾ ಮೈದಾನಕ್ಕೆ ಮಾಜಿ ಶಾಸಕರಾದ ಕೆ.ಪಿ ಬಚ್ಚೆಗೌಡ ಆಗಮಿಸಿ ರಂಜಾನ್ ಹಬ್ಬದ ಶುಭ ಕೋರಿದರು ಕಳೆದ 30 ವರ್ಷಗಳಿಂದ ಸತತವಾಗಿ ಈದ್ಗಾ ಮೈದಾನಲ್ಲಿ ಬಂದು ಪ್ರೀತಿ ಹಂಚಿಕೊಳ್ಳು ತ್ತಿದ್ದು ಎಲ್ಲರೂ ಪ್ರೀತಿ ಸೌಹಾರ್ದತೆ ಬದುಕು ಬಾಳುವ ಮೊಲಕ ಶಾಂತಿ ಸಂದೇಶ ಸಾರೂಣ ಎಂದರು.
ವಕೀಲ ಕೆ.ಎಂ.ಮುನೇಗೌಡ,ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯ ಕೋರಿದರು.ಬೆಳಗ್ಗೆ ಈದ್ಗಾ ಮೈದಾನದಲ್ಲಿ ಧರ್ಮಗುರುವಿನ ನೇತೃತ್ವದಲ್ಲಿ ಜರುಗಿದ ಪ್ರಾರ್ಥನೆಯಲ್ಲಿ ಭಾಗವಹಿಸಿದ ಮುಸ್ಲಿಮರು ಅಲ್ಲಾಹನನ್ನು ಸ್ಮರಿಸಿದರು. ಇನ್ನು ಬೆಳಗ್ಗೆಯಿಂದಲೇ ಆರಂಭವಾದ ವಿಶೇಷ ಪ್ರಾರ್ಥನೆಗಳ ನಂತರ ಪರಸ್ಪರ ಹಬ್ಬದ ಶುಭಾ ಶಯಗಳನ್ನು ವಿನಿಮಯ ಮಾಡಿಕೊಂಡರು ಅಲ್ಲದೆ ನಾನಾ ಕಡೆಗಳಿಂದ ಆಗಮಿಸಿದ್ದ ಸಂಬಂಧಿ ಕರು ಮಿತ್ರರೊಂದಿಗೆ ವಿವಿಧ ರೀತಿಯ ಆಹಾರ ಖಾದ್ಯಗಳನ್ನು ಸವಿದು ಸಂಭ್ರಮಿಸಿದರು.ಮುಸ್ಲಿಂ ಭಾಂದವರು ಒಂದು ತಿಂಗಳು ಉಪವಾಸ ಆಚರಿಸಿದ ಬಳಿಕ ಜಕಾತ್, ಫಿತ್ರ ದಾನ ಮಾಡಿದರು. ಶ್ವೇತವಸ್ತ್ರ ಧರಿಸಿ ಗುಂಪು ಗುಂಪಾಗಿ ಮಸೀದಿಗಳತ್ತ ಬಂದ ಮುಸ್ಲಿಮರು ಮೊದಲು ಸಿಹಿ ಹಂಚಿ, ಪರಸ್ಪರ ಆಲಿಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು. ಸಾಂಪ್ರದಾಯಿಕ ಪೋಷಾಕುಗಳಲ್ಲಿ ಕಂಗೊಳಿಸುತ್ತಿದ್ದ ಮಕ್ಕಳು ಹಬ್ಬದ ಸಂಭ್ರಮವನ್ನೂ ಇನ್ನಷ್ಟು ಹೆಚ್ಚಿಸಿದ್ದರು.
*
ಮುಸಲ್ಮಾನ್ ಬಾಂಧವರು ಒಂದು ತಿಂಗಳ ಕಠಿಣ ಉಪವಾಸ ಮುಗಿಸಿ ಹಬ್ಬದಂದು ದೇವರ ಕೃಪೆಗೆ ಪಾತ್ರರಾಗಿದ್ದು ಶಾಂತಿ ಪ್ರೀತಿ ಸಹಬಾಳ್ವೆಯ ಬದುಕು ಸಾಗಿಸೋಣ ಅಶಾಂತಿಯ ವಾತಾವರಣ ನಿರ್ಮಾಣ ಮಾಡುವವರಿಗೆ ದೇವರು ಒಳ್ಳೆಯ ಬುದ್ಧಿ ನೀಡಲಿ,ದೇವರು ಎಲ್ಲರ ಬದುಕು ಬಂಗಾರ ಮಾಡಲಿ ಎಲ್ಲರ ಬಾಳಲ್ಲಿ ಸುಖ ಸಮೃದ್ದಿ ಶಾಂತಿ ಸೌಹಾರ್ದತೆ ನೀಡಲೆಂದು ದೇವರಲ್ಲಿ ಪ್ರಾರ್ಥಿಸು ತ್ತೇನೆ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯಗಳು.
ಜೆ ನಾಗರಾಜ್, ಉಪಾಧ್ಯಕ್ಷರು ನಗರಸಭೆ ಚಿಕ್ಕಬಳ್ಳಾಪುರ.