ನೂತನ ಡಿವೈಎಸ್ಪಿ ಕಛೇರಿ ಉದ್ಘಾಟಿಸಿದ ಜಿಲ್ಲಾ ರಕ್ಷಣಾಧಿಕಾರಿ ಕುಶಾಲ್ ಚೌಕ್ಸೆ
ಶುಕ್ರವಾರ ಬೆಳಗ್ಗೆ ಡಿವೈಎಸ್ಪಿ ಮುರಳಿಧರ್ ಮತ್ತು ಸಿಬ್ಬಂದಿ ವಿಶೇಷ ಪೂಜೆಗಳನ್ನು ಸಲ್ಲಿಸಿದ ನಂತರ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕುಶಾಲ್ ಚೌಕ್ಸೆರವರು ವಿಶೇಷ ಪೂಜೆಗಳನ್ನು ಸಲ್ಲಿಸಿ ನೂತನ ಡಿವೈಎಸ್ಪಿ ಕಚೇರಿ ಉದ್ಘಾಟನೆ ಮಾಡಿ ಶುಭ ಹಾರೈಸಿದರು

ನಗರದಲ್ಲಿ ನೂತನವಾಗಿ ಪ್ರಾರಂಭವಾಗುತ್ತಿರುವ ಚಿಂತಾಮಣಿ ಉಪವಿಭಾಗದ ಡಿವೈಎಸ್ಪಿ ಕಛೇರಿಯನ್ನು ಚಿಕ್ಕಬಳ್ಳಾಪುರ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಕುಶಾಲ್ ಚೌಕ್ಸೆ ಉದ್ಘಾಟನೆ ಮಾಡಿ ಶುಭ ಹಾರೈಸಿದರು.

ಚಿಂತಾಮಣಿ : ನಗರದಲ್ಲಿ ನೂತನವಾಗಿ ಪ್ರಾರಂಭವಾಗುತ್ತಿರುವ ಚಿಂತಾಮಣಿ ಉಪ ವಿಭಾಗದ ಡಿವೈಎಸ್ಪಿ ಕಚೇರಿಯನ್ನು ಚಿಕ್ಕಬಳ್ಳಾಪುರ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಕುಶಾಲ್ ಚೌಕ್ಸೆ ಉದ್ಘಾಟನೆ ಮಾಡಿ ಶುಭ ಹಾರೈಸಿದರು. ಚಿಂತಾಮಣಿ ನಗರದ ಹಳೇ ತಾಲೂಕು ಕಛೇರಿ ಬಳಿ ಇದ್ದ ಡಿವೈಎಸ್ಪಿ ಕಚೇರಿಯನ್ನು ಸರ್ಕಾರಿ ಅಸ್ಪತ್ರೆ ನಿರ್ಮಾಣ ಕಾಮಗಾರಿಗೆ ಬಿಟ್ಟುಕೊಟ್ಟಿರುವುದರಿಂದ ಇದೀಗ ಚಿಂತಾಮಣಿ ನಗರದ ನಗರ ಪೋಲೀಸ್ ಠಾಣೆ ಹಿಂಭಾಗದಲ್ಲಿದ್ದ ಪೋಲೀಸ್ ವಸತಿ ಗೃಹಗಳ ಬಳಿ ನೂತನವಾಗಿ ಡಿವೈಎಸ್ಪಿ ಕಚೇರಿ ಯನ್ನು ತಾತ್ಕಾಲಿಕವಾಗಿ ಆರಂಭ ಮಾಡಿದ್ದು, ಶುಕ್ರವಾರ ಬೆಳಗ್ಗೆ ಡಿವೈಎಸ್ಪಿ ಮುರಳಿಧರ್ ಮತ್ತು ಸಿಬ್ಬಂದಿ ವಿಶೇಷ ಪೂಜೆಗಳನ್ನು ಸಲ್ಲಿಸಿದ ನಂತರ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕುಶಾಲ್ ಚೌಕ್ಸೆರವರು ವಿಶೇಷ ಪೂಜೆಗಳನ್ನು ಸಲ್ಲಿಸಿ ನೂತನ ಡಿವೈಎಸ್ಪಿ ಕಚೇರಿ ಉದ್ಘಾಟನೆ ಮಾಡಿ ಶುಭ ಹಾರೈಸಿದರು.
ಇದನ್ನೂ ಓದಿ: Chikkaballapur News: ಎರಡು ಸಲ ಕಳ್ಳತನ ಮಾಡಿದರೆ ಶಿಕ್ಷೆ ಪ್ರಮಾಣ ದ್ವಿಗುಣವಾಗಲಿದೆ
ಈ ಸಂದರ್ಭದಲ್ಲಿ ನಗರ ಠಾಣೆ ಇನ್ಸೆಕ್ಟರ್ ವಿಜಿ ಕುಮಾರ್, ಗ್ರಾಮಾಂತರ ಠಾಣೆ ಇನ್ನೆ ಕ್ಟರ್ ಶಿವರಾಜ್,ಶಿಡ್ಲಘಟ್ಟ ಸರ್ಕಲ್ ಇನ್ಸೆ ಕ್ಟರ್ ಶ್ರೀನಿವಾಸ್, ಸಬ್ ಇನ್ಸೆಕ್ಟರ್ ವೆಂಕಟರಮಣಪ್ಪ, ದಿಬ್ಬರಹಳ್ಳಿ ಸಬ್ ಇನ್ಸೆಕ್ಟರ್ ಶಾಮಲಾ ಮತ್ತು ವೆಂಕರಮಣ ಗ್ರಾಮಾಂತರ ಠಾಣೆಯ ಸಬ್ ಇನ್ಸೆಕ್ಟರ್ ಮಮತಾ,ಪದ್ಮ, ನಗರ ಠಾಣೆ ಸಬ್ ಇನ್ಸೆಕ್ಟರ್ ರಮೇಶ್, ಪ್ರಕಾಶ್, ಶಾಬ್ದದ್ದಿನ್, ಶಂಕರಪ್ಪ ಸೇರಿದಂತೆ ಎಲ್ಲಾ ಪೊಲೀಸ್ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.