ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನಗರಸಭೆ ಮಳಿಗೆಗಳ ಹರಾಜು ಪ್ರಕ್ರಿಯೆ ಮುಂದೂಡಿದ ಆಯುಕ್ತ ಮನ್ಸೂರ್ ಅಲಿ : ಪ್ರತಿಭಟನೆಗೆ ಇಳಿದ ದಲಿತ ಮುಖಂಡರು

ಏ.5ರಂದು ನಡೆಯಬೇಕಿದ್ದ ಚಿಕ್ಕಬಳ್ಳಾಪುರ ನಗರಸಭೆಯ 98 ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ವಿಚಾರದಲ್ಲಿ ಎರಡು ದಿನಗಳಿಂದ ನಡೆಯುತ್ತಿದ್ದ ಹೈಡ್ರಾ ಮಾಗೆ ತೆರೆ ಬಿದ್ದಿದ್ದು ಹರಾಜು ಪ್ರಕ್ರಿಯೆ ಮುಂದೂಡಿ ಪೌರಾಯುಕ್ತ ಮನ್ಸೂರ್ ಅಲಿ ಆದೇಶ ಹೊರಡಿಸಿದ್ದಾರೆ. ಹರಾಜು ಪ್ರಕಿಯೆ ಮುಂದೂಡುತ್ತಾರೆ ಎಂಬ ಸುಳಿವು ಗುರುವಾರ ವೇ ಹರಿದಾಡಿತ್ತು

ಬರೋಬ್ಬರಿ ಮೂರು ದಶಕಗಳಿಂದ ಹರಾಜು ಪ್ರಕ್ರಿಯೆ ನಡೆಸಿರಲಿಲ್ಲ

ನಗರಾಡಳಿತದ ಎದುರು ದಲಿತ ಸಂಘಟನೆ ಮುಖಂಡರು ಹರಾಜು ಪ್ರಕ್ರಿಯೆ ಮುಂದೂಡಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.

Profile Ashok Nayak Apr 4, 2025 9:33 PM

ಚಿಕ್ಕಬಳ್ಳಾಪುರ: ಏ.5ರಂದು ನಡೆಯಬೇಕಿದ್ದ ಚಿಕ್ಕಬಳ್ಳಾಪುರ ನಗರಸಭೆಯ 98 ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ವಿಚಾರದಲ್ಲಿ ಎರಡು ದಿನಗಳಿಂದ ನಡೆಯುತ್ತಿದ್ದ ಹೈಡ್ರಾ ಮಾಗೆ ತೆರೆ ಬಿದ್ದಿದ್ದು ಹರಾಜು ಪ್ರಕ್ರಿಯೆ ಮುಂದೂಡಿ ಪೌರಾಯುಕ್ತ ಮನ್ಸೂರ್ ಅಲಿ ಆದೇಶ ಹೊರಡಿಸಿದ್ದಾರೆ. ಹರಾಜು ಪ್ರಕಿಯೆ ಮುಂದೂಡುತ್ತಾರೆ ಎಂಬ ಸುಳಿವು ಗುರುವಾರ ವೇ ಹರಿದಾಡಿತ್ತು.ಈ ಸಂಬಂಧ ಎಚ್ಚೆತ್ತ ದಲಿತ ಸಂಘಟನೆಗಳು ಮತ್ತು ಮುಖಂಡರು ಶುಕ್ರವಾರ ನಗರಸಭೆ ಆವರಣದಲ್ಲಿ ಹರಾಜು ಪ್ರಕ್ರಿಯೆ ನಡೆಸುವಂತೆ ಒತ್ತಾಯಿಸಿ, ತಮಟೆ ಚಳವಳಿ ಕೂಡ ನಡೆಸಿದರು.

ಈ ವೇಳೆ ಮಾತನಾಡಿದ ದಸಂಸ ರಾಜ್ಯ ಮುಖಂಡ ಸಂದೇಶ್ ನಗರಸಭೆ ಆಯುಕ್ತರು ಪ್ರಭಾವಿಗಳ ಒತ್ತಡಕ್ಕೆ ಮಣಿಯಬಾರದು. ನಿಗದಿ ಪಡಿಸಿದ ದಿನಾಂಕ ಮತ್ತು ಸಮಯಕ್ಕೆ ಸರಿಯಾಗಿ ಹರಾಜು ಪ್ರಕ್ರಿಯೆ ನಡೆಸಬೇಕು ಎಂದು ಆಯುಕ್ತರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ: Chikkaballapur News: ಎರಡು ಸಲ ಕಳ್ಳತನ ಮಾಡಿದರೆ ಶಿಕ್ಷೆ ಪ್ರಮಾಣ ದ್ವಿಗುಣವಾಗಲಿದೆ

ಏನಿದು ಸಮಸ್ಯೆ
ಚಿಕ್ಕಬಳ್ಳಾಪುರ ನಗರಸಭೆಗೆ ಸೇರಿದ 99 ವಾಣಿಜ್ಯ ಮಳಿಗೆಗಳಿದ್ದು ಬರೋಬ್ಬರಿ ಮೂರು ದಶಕಗಳಿಂದ ಹರಾಜು ಪ್ರಕ್ರಿಯೆ ನಡೆಸಿರಲಿಲ್ಲ. ಇದರಿಂದ ನಗರಸಭೆಗೆ ಆದಾಯವಿಲ್ಲದೆ ಕೋಟ್ಯಾಂತರ ರೂಪಾಯಿ ನಷ್ಟವುಂಟಾಗುತ್ತಿದೆ ಎಂದು ಮನಗಂಡ ಈಗಿನ ನಗರಾಡ ಳಿತವು ೯೯ ವಾಣಿಜ್ಯ ಮಳಿಗೆಗಳನ್ನು ಸರಕಾರಿ ನಿಯಮಾವಳಿಯಂತೆ ಹರಾಜು ಪ್ರಕ್ರಿಯೆ ನಡೆಸಲೇಬೇಕು ಅನ್ನೋ ತೀರ್ಮಾನಕ್ಕೆ ಬಂದು ಇದೇ ಏಪ್ರಿಲ್ 5 ರಂದು ಬಹಿರಂಗ ಹರಾಜು ಮಾಡಲು ಪ್ರಕಟಣೆ ಹೊರಡಿಸಿ ಪ್ರಚಾರ ಸಹ ಮಾಡಿತ್ತು.

ಯಾವಾಗ ಆಯುಕ್ತರು ಪ್ರಕಟಣೆ ಹೊರಡಿಸಿ ಹರಾಜಿಗೆ ಮುಂದಾದರೋ ಆಗ ಆ ಮಳಿಗೆ ಗಳಲ್ಲಿ ಈಗಾಗಲೇ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳೆಲ್ಲಾ ಒಟ್ಟಾಗಿ ಹರಾಜು ಆಗದಂತೆ ತಡೆಯಲು ಶುರುಮಾಡಿದ್ದು ರಾಜಕೀಯ ಕೆಸರೆರೆಚಾಟ ಪ್ರಾರಂಭವಾಗಿ ಪರ ವಿರೋಧಗಳು ವ್ಯಕ್ತವಾದವು. ಗುರುವಾರ ರಾತ್ರಿ ಇದೇ ವಿಚಾರದಲ್ಲಿ ನಗರಸಭೆ ಅಧ್ಯಕ್ಷ ಗಜೇಂದ್ರ, ಉಪಾಧ್ಯಕ್ಷ ನಾಗರಾಜ್ ಮತ್ತು ಇತರೆ ನಗರಸಭೆ ಸದಸ್ಯರು ಹಾಗೂ ಪೌರಾಯುಕ್ತ ಮನ್ಸೂರ್ ಆಲಿ ನಡುವೆ ಇದೇ ವಿಚಾರದಲ್ಲಿ ಒಮ್ಮತ ಮೂಡದೆ ರಾತ್ರಿ 11 ಗಂಟೆಯಾ ದರೂ ವಾಗ್ವಾದವೇ ಮುಂದುವರೆದಿತ್ತು.

ಹರಾಜು ಪ್ರಕ್ರಿಯೆ ಯಾವ ಕಾರಣಕ್ಕೂ ನಿಲ್ಲಬಾರದು. ನಿಗದಿತ ದಿನಾಂಕದಂದು ನಡೆಯ ಲೇಬೇಕು ಎಂದು ಅಧ್ಯಕ್ಷರು ಪಟ್ಟು ಹಿಡಿದರು. ಆದರೆ ರಾಜಕೀಯ ಒತ್ತಡಗಳು ಹೆಚ್ಚಾ ಗಿದ್ದರಿಂದ ಪೌರಾಯುಕ್ತ ಮನ್ಸೂರ್ ಆಲಿ ಕೊನೆಗೂ ಹರಾಜು ಪ್ರಕ್ರಿಯೆಯನ್ನು ಇದೇ ಏಪ್ರಿಲ್ ೧೬ ಕ್ಕೆ ಮುಂದೂಡಿ ಆದೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯಾವಾಗ ಹರಾಜು ಪ್ರಕ್ರಿಯೆ ಮುಂದೂಡಿರುವ ವಿಚಾರ ದಲಿತ ಸಂಘಟನೆಗಳು ಮತ್ತು ಮಳಿಗೆಗಳ ಹರಾಜಿಗೆ ಕಾದಿದ್ದ ದಲಿತ ಸಮುದಾಯದ ವ್ಯಾಪಾರಿಗಳಿಗೆ ತಿಳಿಯಿತೋ, ದಲಿತರಿಗೆ ಮೀಸಲು ನೀಡುವುದನ್ನು ತಪ್ಪಿಸುವ ಉದ್ದೇಶದಿಂದಲೇ  ಹರಾಜು ಪ್ರಕ್ರಿಯೆ ಮುಂದೂಡಿದ್ದಾರೆ. ದಲಿತರಿಗೆ ಅನ್ಯಾಯ ಆಗಿದೆ ಎಂದು ನಗರಸಭೆ ಕಚೇರಿ ಎದುರು ತಮಟೆ ಚಳುವಳಿ ನಡೆಸಿ ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ವಿಶೇಷವೆಂದರೆ ದಲಿತ ಸಂಘಟನೆಗಳ ಪ್ರತಿಭಟನೆ ಯಲ್ಲಿ ನಗರಸಭೆ ಅಧ್ಯಕ್ಷ ಗಜೇಂದ್ರ, ಉಪಾಧ್ಯಕ್ಷ ನಾಗರಾಜ್ ಸೇರಿದಂತೆ ಹಲವು ಸದಸ್ಯರು ಭಾಗಿಯಾಗಿದ್ದು ಆಯುಕ್ತರ ನಡೆಯ ಮೇಲೆ ಅನುಮಾನ ಮೂಡುವಂತೆ ಮಾಡಿದೆ.

ದಲಿತ ಮುಖಂಡ ಸಂದೇಶ್ ಮಾತನಾಡಿ ಮಾ.೩ರಂದು ನಗರಸಭೆ ಆಯುಕ್ತರು ಸಂತೆ ಮೈದಾನದಲ್ಲಿನ ಮಳಿಗೆಗಳ ಹರಾಜಿಗೆ ಸಾರ್ವಜನಿಕ ಪ್ರಕಟಣೆ ಹೊರಡಿಸಿ ಏಪ್ರಿಲ್ ೫ರಂದು ಹರಾಜು ನಡೆಸಲು ತೀರ್ಮಾನ ಮಾಡಿದ್ದರು.ಆದರೆ ಸಂತೆ ಮೈದಾನದ 99 ಮಳಿಗೆಗಳಲ್ಲಿ ಈಗಾಗಲೇ ವ್ಯಾಪಾರ ಮಾಡುತ್ತಿರುವ ಹೆಚ್ಚಿನವರು ಶಾಸಕ ಪ್ರದೀಪ್ ಈಶ್ವರ್ ಸಮುದಾಯಕ್ಕೆ ಸೇರಿದ ಶ್ರೀಮಂತರಿದ್ದಾರೆ.ಇವರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಹರಾಜನ್ನು ನಿಲ್ಲಿಸಲು ಶಾಸಕರು ಜಿಲ್ಲಾಧಿಕಾರಿಗಳ ಮೂಲಕ ಆಯುಕ್ತರಿಗೆ ಒತ್ತಡ ತಂದು ಏ೧೬ಕ್ಕೆ ಮುಂದೂಡಿರುವುದು ದಲಿತ ವಿರೋಧಿ ಧೋರಣೆಯಾಗಿದೆ.ಶನಿವಾರ ಹರಾಜು ಜಡೆಯಲಿಲ್ಲ ಎಂದರೆ ಎಲ್ಲಾ ದಲಿತ ಸಂಘಟನೆಗಳ ಜತೆಗೂಡಿ ಅನಿರ್ಧಿಷ್ಠಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮುಖಂಡ ವೆಂಕಟರೋಣಪ್ಪ ಮಾತನಾಡಿ, ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡಿ, ಒಂದು ತಿಂಗಳ ಪ್ರಕ್ರಿಯೆ ನಡೆಸಲಾಗಿದೆ. ನಗರಸಭೆ ಕಾರ್ಯಕಾರಿಣಿಯಲ್ಲಿ ಒಮ್ಮತದ ತೀರ್ಮಾನ ಕೈಗೊಂಡು ಮೀಸಲಾತಿಗೆ ಅನುಗುಣವಾಗಿ ಹರಾಜು ಹಾಕಲು ಮುಂದಾಗಿತ್ತು.ಆದರೆ ಆಯುಕ್ತರು ಏ.೧೬ಕ್ಕೆ ಮುಂದೂಡಿದ್ದಾರೆ. ಕಾರ್ಯಕಾರಣಿ ಸಮಿತಿ ಪಾಸು ಮಾಡಿರುವ ತೀರ್ಮಾನವನ್ನು ಆಯುಕ್ತರು ಮುಂದೂಡಲು ಬರುತ್ತದೆಯೇ, ಮುಂದೂಡಿದ್ದರೆ ಆಯುಕ್ತರು ಕೂಡ ದಲಿತವಿರೋಧಿ ಆಗುತ್ತಾರೆ ಅವರ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದರು.
*

ನಗರಸಭೆ ಎದುರು ದಲಿತ ಮುಖಂಡರು ಹರಾಜು ಪ್ರಕ್ರಿಯೆ ಮುಂದೂಡಿದ್ದಾರೆ ಎಂದು ಆರೋಪಿಸಿ ತಮಟೆ ಚಳವಳಿ ನಡೆಸಲು ಬಂದಿದ್ದರು. ಮಳಿಗೆಗಳ ಹರಾಜಿನಲ್ಲಿ ಮೀಸಲು ತಪ್ಪಿಸಲು ಮುಂದೂಡಿದ್ದಾರೆ ಎಂದು ಇವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದರಿಂದ ಅವರು ಬಂದಿದ್ದರು. ಅವರಿಗೆ ಸತ್ಯವನ್ನು ತಿಳಿಸಿ ದಿನಾಂಕವಷ್ಟೇ ಮುಂದೂಡಲಾಗಿದೆ. ಏ,೧೬ರಂದು ಹರಾಜು ನಡೆಯಲಿದೆ, ಮೀಸಲಾತಿಗೆ ಅನುಗುಣವಾಗಿಯೇ ಇದು ನಡೆಯ ಲಿದೆ. ಆಡಳಿತಾತ್ಮಕ ಕಾರಣಗಳಿಗಾಗಿ ಮುಂದೂಡಲಾಗಿದೆ ಎಂದು ತಿಳಿಸಲಾಗಿದೆ
-ಮನ್ಸೂರ್ ಅಲಿ ಆಯುಕ್ತರು ನಗರಸಭೆ ಚಿಕ್ಕಬಳ್ಳಾಪುರ