MLA Pradeep EshwarL ನಮ್ಮೂರಿಗೆ ನಮ್ಮ ಶಾಸಕ ಮೂಲಕ ಜನತೆ ಅನುಭವಿಸುವ ಕಷ್ಟಸುಖಗಳ ಪ್ರತ್ಯಕ್ಷ ದರ್ಶನವಾಗಿದೆ : ಶಾಸಕ ಪ್ರದೀಪ್ ಈಶ್ವರ್
ನಾನು ಬಾಲ್ಯದಿಂದಲೇ ಬಡತನ ಮತ್ತು ಹಸಿವು ಅನುಭವಿಸಿ ಬಂದವನಾದ್ದರಿಂದ ಗ್ರಾಮೀಣ ಪ್ರದೇಶಗಳ ಬಡವರ ಬದುಕು ಬವಣೆ ಅರಿತಿದ್ದೇನೆ. ನಮ್ಮ ಊರಿಗೆ ನಮ್ಮ ಶಾಸಕ ಕಾರ್ಯಕ್ರಮ ವನ್ನು ಮೊದಲು ಮುದ್ದೇನಹಳ್ಳಿ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಹಾಕಿಕೊಂಡು ಸಂಚರಿಸಿದಾಗ ಅಲ್ಲಿಯ ಜನರ ಬದುಕು ನಾ ತಿಳಿದಷ್ಟು ಉತ್ತಮವಾಗಿಲ್ಲ ಎಂದು ಅರಿತೆ.

'ನಮ್ಮೂರಿಗೆ ನಮ್ಮ ಶಾಸಕ' ಅಭಿಯಾನದಡಿ ತಾಲೂಕಿನ ಮಾರಪ್ಪನಹಳ್ಳಿ ಗ್ರಾಮದಲ್ಲಿ ಶಾಸಕ ಪ್ರದೀಪ್ ಈಶ್ವರ್ ಅಧಿಕಾರಿಗಳೊಂದಿಗೆ ನೆಲದಲ್ಲಿ ಕುಳಿತು ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು.

ಚಿಕ್ಕಬಳ್ಳಾಪುರ: ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದ ಮೂಲಕ ನನಗೆ ಕ್ಷೇತ್ರದ ಜನತೆ ಅನುಭವಿಸುವ ಕಷ್ಟಸುಖಗಳ ಪ್ರತ್ಯಕ್ಷ ದರ್ಶನವಾಗಿದೆ.ಹಸಿವು ಮತ್ತು ಬಡತನದ ಬಗ್ಗೆ ಭಾಷಣ ಮಾಡುವುದಕ್ಕೂ ಅನುಭವಿಸಿ ಹೇಳುವುದಕ್ಕೂ ತುಂಬಾ ವ್ಯತ್ಯಾಸವಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು. ತಾಲೂಕಿನ ಎಸ್ ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿಯ ಜಂಗಮಾರಪ್ಪನಹಳ್ಳಿ, ಮಾರಪ್ಪನ ಹಳ್ಳಿ, ಇಟ್ಟಪ್ಪನಹಳ್ಳಿ, ಪೈಯೂರು, ಗೊಂಗಡಿಪುರ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ನಮ್ಮೂ ರಿಗೆ ನಮ್ಮ ಶಾಸಕ ಕಾರ್ಯಕ್ರಮ ದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿದ ನಂತರ ಅವರು ಮಾತನಾಡಿದರು.
ನಾನು ಬಾಲ್ಯದಿಂದಲೇ ಬಡತನ ಮತ್ತು ಹಸಿವು ಅನುಭವಿಸಿ ಬಂದವನಾದ್ದರಿಂದ ಗ್ರಾಮೀಣ ಪ್ರದೇಶಗಳ ಬಡವರ ಬದುಕು ಬವಣೆ ಅರಿತಿದ್ದೇನೆ. ನಮ್ಮ ಊರಿಗೆ ನಮ್ಮ ಶಾಸಕ ಕಾರ್ಯಕ್ರಮವನ್ನು ಮೊದಲು ಮುದ್ದೇನಹಳ್ಳಿ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಹಾಕಿಕೊಂಡು ಸಂಚರಿಸಿದಾಗ ಅಲ್ಲಿಯ ಜನರ ಬದುಕು ನಾ ತಿಳಿದಷ್ಟು ಉತ್ತಮವಾಗಿಲ್ಲ ಎಂದು ಅರಿತೆ.
ಇದನ್ನೂ ಓದಿ: Chikkaballapur News: ಎರಡು ಸಲ ಕಳ್ಳತನ ಮಾಡಿದರೆ ಶಿಕ್ಷೆ ಪ್ರಮಾಣ ದ್ವಿಗುಣವಾಗಲಿದೆ
ಮಂಚೇನಹಳ್ಳಿಯ ಭಾಗದ ಹಳ್ಳಿಗಳಲ್ಲಿ ಸಂಚರಿಸಿದಾಗ ಆ ಜನರ ಬದುಕು ಮತ್ತಷ್ಟು ಕಷ್ಟ ಎಂದು ಅರಿವಾಯಿತು. ಪ್ರಸ್ತುತ ಗೊಲ್ಲಹಳ್ಳಿ ಪಂಚಾಯತಿ ಭಾಗದಲ್ಲಿ ಸಂಚರಿಸಿದಾಗ ಇಲ್ಲಿರುವ ಪರಿಶಿಷ್ಟಜಾತಿ ಜನಾಂಗದವರ ಬದುಕು, ಮೂಲ ಸೌಕರ್ಯಗಳಿಲ್ಲದೆ ಪಡುತ್ತಿರುವ ಯಾತನೆ ಕಂಡಿದ್ದೇನೆ. ಈ ಪಂಚಾಯಿತಿ ಚಿಕ್ಕಬಳ್ಳಾಪುರಕ್ಕೆ ಸಮೀಪದಲ್ಲಿ ದ್ದರೂ ಶುದ್ಧ ಕುಡಿಯುವ ನೀರಿನ ಘಟಕಗಳಿಲ್ಲದೆ ಪರಿತಪಿಸುತ್ತಿದ್ದಾರೆ. ಚರಂಡಿ, ಬೀದಿ ದೀಪ ಇತ್ಯಾದಿ ಮೂಲಸೌಕರ್ಯಗಳಿಂದ ವಂಚಿತರಾಗಿರುವುದನ್ನು ನೋಡಿದಾಗ ನನ್ನ ಮನಸ್ಸಿಗೆ ನೋವಾಗಿದೆ. ಇವನ್ನೆಲ್ಲಾ ಸರಿಪಡಿಸಿಕೊಡುವ ಯೋಜನೆ ಹಾಕಿಕೊಂಡಿದ್ದೇನೆ ಎಂದರು.
ಗುಡಿಸಲು ಮುಕ್ತ ಗ್ರಾಮವಾಗಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಪ್ರತಿ ಗ್ರಾಮ ದಲ್ಲೂ ನಾಲ್ಕಾರು ಗುಡಿಸಲುಗಳು ಇವೆ. ಎಷ್ಟೋ ಜನ ವಾಸಿಸಲು ಮನೆಗಳಿಲ್ಲದೇ ಗುಡಿಸಲುಗಳಲ್ಲೇ ಜೀವನ ಸಾಗಿಸುತ್ತಿದ್ದಾರೆ. ಈ ಜನಕ್ಕೆ ವಸತಿ ಮತ್ತು ಮೂಲಸೌಕರ್ಯ ಕಲ್ಪಿಸಲು ನಾನು ಕಟಿಬದ್ದನಾಗಿದ್ದೇನೆ.
ಅದೇ ರೀತಿ ಕ್ಷೇತ್ರದ ಗ್ರಾಮೀಣ ಪ್ರದೇಶದ ಜನತೆಗೆ ಸರ್ಕಾರದಿಂದ ನ್ಯಾಯಬದ್ಧವಾಗಿ ದೊರೆಯುವ ಸೌಲತ್ತುಗಳನ್ನು ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.ರಸ್ತೆ ನಿರ್ಮಾಣಕ್ಕೆ ಮೊದಲ ಆಧ್ಯತೆ ನೀಡುತ್ತಿದ್ದು, ಬಡವರು ಯಾವ ಕಾರಣಕ್ಕೂ ಪೇಟೆಗೆ ಬಂದು ಸರಕಾರಿ ಕಚೇರಿಗೆ ಅಲೆಯಬಾರದು ಎನ್ನುವ ಉದ್ದೇಶಕ್ಕೆ 36 ಇಲಾಖೆಗಳ ಅಧಿಕಾರಿ ಗಳನ್ನು ಜತೆಗಿಟ್ಟುಕೊಂಡು ಗ್ರಾಮಕ್ಕೆ ಭೇಟಿ ನೀಡುತ್ತಿದ್ದೇನೆ ಎಂದರು.
ಶುಕ್ರವಾರ ಬೆಳಗ್ಗೆ ಏಳು ಗಂಟೆಗೆ ಸರಿಯಾಗಿ ಶಾಸಕ ಪ್ರದೀಪ್ ಈಶ್ವರ್ ಅವರು ತಾಲೂಕಿನ ಗೊಲ್ಲಹಳ್ಳಿ ಪಂಚಾಯಿತಿ ಜಂಗಮಾರಪ್ಪನಹಳ್ಳಿ ಗ್ರಾಮಕ್ಕೆ ಬಂದಾಗ ಪಟಾಕಿ ಸಿಡಿಸಿ ಆರತಿ ನೀಡಿ ತಿಲಕ ಹಚ್ಚಿ ಅದ್ದೂರಿ ಸ್ವಾಗತ ಕೋರಿದರು.
ಶಾಲೆಯ ಆವರಣದಲ್ಲಿ ಕುಳಿತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಶಾಸಕರಿಗೆ ಗ್ರಾಮದ ಜನತೆ ಶುದ್ದಕುಡಿಯುವ ನೀರಿನ ಘಟಕ, ರಸ್ತೆ ಸಮಸ್ಯೆ, ಸ್ಮಶಾನಗಳ ಒತ್ತುವರಿ ಜಾಗ ತೆರುವು, ಚರಂಡಿ, ವಿದ್ಯತ್ ದೀಪ, ವಸತಿ,ನಿವೇಶನ, ಖಾತೆ ಮುಂತಾದ ಸಮಸ್ಯೆ ಗಳನ್ನು ಶಾಸಕರಲ್ಲಿ ಗ್ರಾಮೀಣ ಜನತೆ ತೋಡಿಕೊಂಡರು.
ಸಮಸ್ಯೆ ಹೊತ್ತು ಬಂದ ಜನರನ್ನು ಮನೆಯ ಸದಸ್ಯನಂತೆ ಆತ್ಮೀಯತೆಯಲ್ಲಿ ಮಾತನಾಡಿಸಿ ಕಷ್ಟಗಳನ್ನು ಪರಿಹರಿಸುವ ಭರವಸೆ ನೀಡಿದಾಗ ಅವರ ಕಣ್ಣಾಲಿಗಳು ತೇವಗೊಳ್ಳುತ್ತಿದ್ದವು. ಕಂದಾಯ ಇಲಾಖೆ ಸಮಸ್ಯೆ ಬಂದಾಗ ತಹಶೀಲ್ದಾರ್, ನಿವೇಶನ ಮನೆ ವಿಚಾರ ಬಂದಾಗ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು, ಆರೋಗ್ಯ ಸಮಸ್ಯೆ ಕಂಡಾಗ ಡಿಹೆಚ್‌ಒ, ಡೀಮ್ಡ್ ಫಾರೆಸ್ಟ್ ಕಥೆ ಬಂದಾಗ ಅರಣ್ಯ ಇಲಾಖೆ ಅಧಿಕಾರಿಗೆ,ಪೊಲೀಸ್‌ಠಾಣೆ ಸಮಸ್ಯೆಗಳೂ ದಂಡಿಯಾಗಿ ಕೇಳಿ ಬಂದಾಗ ಅಲ್ಲೇ ಇದ್ದ ಸಬ್ ಇನ್ಸ್ಪೆಕ್ಟರ್ ಶರಣಪ್ಪ ಅವರಿಗೆ ಪರಿಹರಿಸಲು ಸೂಚನೆ ನೀಡುತ್ತಿದ್ದರು.
ಸರಕಾರದಿಂದ ಮನೆ ಕಟ್ಟಿಕೊಳ್ಳಲು ಬರುವ ಅನುದಾನದ ಬಗ್ಗೆ ಮಾತನಾಡಿದ ಅವರು ಒಂದುವರೆ ಎರಡು ಲಕ್ಷದಲ್ಲಿ ಹೇಗೆ ಮನೆಕಟ್ಟಿಕೊಳ್ಳಲು ಸಾಧ್ಯ. ಇದನ್ನೆಲ್ಲಾ ನೋಡಿದಾಗ ನನಗೆ ಅವಕಾಶ ಇದ್ದಿದ್ದರೆ ನಾನೇ ಅವರಿಗೆ ಮನೆಗಳನ್ನು ಕಟ್ಟಿಸಿಕೊಡಬೇಕು ಎಂದು ಅನಿಸುತ್ತದೆ. ಬಡವರ ಕಷ್ಟ ಪರಿಹರಿಸುವ ವ್ಯವಸ್ಥೆ ಬೇಗ ಬರಲಿ ಎಂದು ದೇವರಲ್ಲಿ ಬೇಡುವೆ ಎಂದರು.
ಈ ವೇಳೆ ತಾಲೂಕು ತಹಶೀಲ್ದಾರ್ ಅನಿಲ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಮಂಜುಳಾ,ಎಡಿಎ???ರ್ ವಿವೇಕ್ ಮಹದೇವ್, ಸಿಡಿಪಿಓ ಗಂಗಾಧರ್, ಪಿಡಿಓ ಸತ್ಯಪ್ರಸಾದ್, ಮಂಡಿಕಲ್ ಮತ್ತು ಮಂಚೇನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್, ಮುಖಂಡರಾದ ಜಿ.ಉಮೇಶ್, ರಮೇಶ್ ಬಾಬು, ಮಧು, ವಿನಯ್ ಬಂಗಾರಿ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.