Chikkaballapur News: ಶಾಸಕ ಪ್ರದೀಪ್ ಈಶ್ವರ್ಮ, ಸಂಸದ ಪಿ.ಸಿ.ಮೋಹನ್ ಬಲಿಜ ಸಮುದಾಯದ ಎರಡು ಕಣ್ಣುಗಳಿದ್ದಂತೆ
ಸಮುದಾಯ ಒಗ್ಗಟ್ಟಿನಿಂದ ಇರುವುದು ಸಹಿಸಲಾರದ ಹಲವರು ಶಾಸಕರು ಮತ್ತು ಸಂಸದರ ನಡುವೆ ತಂದಿಟ್ಟಿದ್ದಾರೆ. ಸುರೇಶ್ ಎಂಬ ವ್ಯಕ್ತಿ ಈ ಹಿಂದೆ ಪಿ.ಸಿ.ಮೋಹನ್ ಅವರ ಬೆಂಬಲಿಗನಾಗಿದ್ದ, ಆದರೆ ಈಗ ಇಲ್ಲ. ಈ ವ್ಯಕ್ತಿ ಅನಗತ್ಯವಾಗಿ ಮಾತ ನಾಡಿದ ಫಲವಾಗಿ ಸಮುದಾಯದ ಮರ್ಯಾದೆ ಬೀದಿಯಲ್ಲಿ ಹರಾಜಾಗುವ ಸ್ಥಿತಿ ನಿರ್ಮಾಣ ವಾಗಿದೆ


ಚಿಕ್ಕಬಳ್ಳಾಪುರ : ಶಾಸಕ ಪ್ರದೀಪ್ ಈಶ್ವರ್ ಮತ್ತು ಸಂಸದ ಪಿ.ಸಿ.ಮೋಹನ್ ಅವರು ಬಲಿಜ ಸಮುದಾಯದ ಎರಡು ಕಣ್ಣುಗಳಿದ್ದಂತೆ. ಇವರಿಬ್ಬರ ನಡುವೆ ಉದ್ದೇಶ ಪೂರ್ವಕವಾಗಿ ವೈಮನಸ್ಯ ತಂದಿಟ್ಟು ಸಮುದಾಯವನ್ನು ನಗೆಪಾಟಿಲಿಗೆ ಗುರಿ ಮಾಡಲಾಗಿದೆ. ಇವರಿಬ್ಬರೂ ಈಗಲೂ ಚೆನ್ನಾ ಗಿಯೇ ಇದ್ದಾರೆ ಎಂದು ಬಲಿಜ ಮುಖಂಡರು ಹೇಳಿದರು. ನಗರದ ಪತ್ರಕರ್ತರ ಭವನದಲ್ಲಿ ಮಂಗಳ ವಾರ ಸುದ್ದಿಗೋಷ್ಟಿ ನಡೆಸಿದ ಕೆಲ ಬಲಿಜ ಮುಖಂಡರು, ಮಾ.14ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕೈವಾರ ತಾತಯ್ಯರ ಜಯಂತ್ಯು ತ್ಸವದಲ್ಲಿ ನಡೆದ ಘಟನೆಯ ಬಗ್ಗೆ ಮಾತ ನಾಡಿದ ಪಿಎಲ್‌ಡಿ ಬ್ಯಾಂಕ್ ನಾಮನಿರ್ದೇಶಿತ ಸದಸ್ಯ ವೆಂಕಟನಾರಾಯಣಪ್ಪ, ಬಲಿಜ ಸಮು ದಾಯ ಒಗ್ಗಟ್ಟಿನಿಂದ ಇದೆ. ತಾತಯ್ಯನವರ ಜಯಂತಿ ಯಲ್ಲಿ ಈ ಅವಾಂತರ ಆಗಬಾರದಿತ್ತು, ಆಗಿದೆ. ಹಾಗಾಗಿ ಒಗ್ಗಟ್ಟಿನಿಂದ ಸಾಗಿ 2ಎ ಮೀಸಲಾತಿ ಪಡೆಯಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ: Chikkaballapur Crime: ಕಾಡ್ಗಿಚ್ಚಿಗೆ ಶ್ರೀಗಂಧದ ಮರಗಳು ಬೆಂಕಿಗಾಹುತಿ ಲಕ್ಷಾಂತರ ರೂಪಾಯಿ ನಷ್ಟದಲ್ಲಿ ರೈತ
ನಂತರ ಮಾತನಾಡಿದ ಶ್ರೀನಿವಾಸ್, ಸಮುದಾಯ ಒಗ್ಗಟ್ಟಿನಿಂದ ಇರುವುದು ಸಹಿಸಲಾರದ ಹಲವರು ಶಾಸಕರು ಮತ್ತು ಸಂಸದರ ನಡುವೆ ತಂದಿಟ್ಟಿದ್ದಾರೆ. ಸುರೇಶ್ ಎಂಬ ವ್ಯಕ್ತಿ ಈ ಹಿಂದೆ ಪಿ.ಸಿ.ಮೋಹನ್ ಅವರ ಬೆಂಬಲಿಗನಾಗಿದ್ದ, ಆದರೆ ಈಗ ಇಲ್ಲ. ಈ ವ್ಯಕ್ತಿ ಅನಗತ್ಯವಾಗಿ ಮಾತ ನಾಡಿದ ಫಲವಾಗಿ ಸಮುದಾಯದ ಮರ್ಯಾದೆ ಬೀದಿಯಲ್ಲಿ ಹರಾಜಾಗುವ ಸ್ಥಿತಿ ನಿರ್ಮಾಣ ವಾಗಿದೆ ಎಂದರು.
ಅಲ್ಲದೆ ಈಗಲೂ ಪಿ.ಸಿ.ಮೋಹನ್ ಅವರು ಮತ್ತು ಪ್ರದೀಪ್‌ಈಶ್ವರ್ ಅವರ ಸಂಬAಧ ಚೆನ್ನಾಗಿದೆ. ಸಮುದಾಯಕ್ಕೆ ಅಗತ್ಯವಿರುವ 2ಎ ಮೀಸಲಾತಿಯನ್ನು ಪ್ರದೀಪ್ ಈಶ್ವರ್ ಅವರು ತಂದೇ ತರು ತ್ತಾರೆ. ಅಷ್ಟೇ ಅಲ್ಲ, ಸಮುದಾಯ ಸೇರಿದಂತೆ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಶಾಸಕರು ಶ್ರಮಿಸುತ್ತಿದ್ದಾರೆ. ತಾತಯ್ಯರ ಜಯಂತಿಯಲ್ಲಿ ನಡೆದ ಘಟನೆ ಅಲ್ಲಿಗೆ ಬಿಡಬೇಕು, ಇನ್ನು ಮುಂದೆ ಸಮುದಾಯದ ಅಭಿವೃದ್ಧಿಯ ಕಡೆ ಗಮನ ಹರಿಸಬೇಕಿದೆ ಎಂದರು.
ಡ್ಯಾನ್ಸ್ ಶ್ರೀನಿವಾಸ್ ಮಾತನಾಡಿ, ಬಲಿಜ ಸಮುದಾಯದಲ್ಲಿ ಒಗ್ಗಟ್ಟು ಕದಡಲು ಪ್ರಯತ್ನ ನಡೆಸ ಲಾಗಿದೆ. ಸುರೇಶ್ ಎಂಬ ವ್ಯಕ್ತಿಯಿಂದಲೇ ಇಷ್ಟೆಲ್ಲ ಅವಾಂತರಗಳು ನಡೆದಿವೆ ಎಂದರು.
ಕಾAಗ್ರೆಸ್ ಜಿಲ್ಲಾ ಪ್ರಧಾನಕಾರ್ಯದರ್ಶಿ ಪ್ರೆಸ್ ಸೂರಿ, ಜೋಳದ ಕಿಟ್ಟಿ ಇದ್ದರು.