Chikkaballapur News: ಈಡಿಗ ಸಮುದಾಯದ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ಬ್ಯಾಗ್ ವಿತರಣೆ ಕಾರ್ಯಕ್ರಮ
ಸರಕಾರಿ ಶಾಲೆಗಳ ಉಳಿವಿಗೆ ನಾಗರಿಕರು ಶ್ರಮವಹಿಸ ಬೇಕು. ಸರ್ಕಾರಿ ಶಾಲೆಗೆ ದಾಖಲಾಗುವ ಆರ್ಥಿಕವಾಗಿ ಹಿಂದುಳಿದ ಈಡಿಗ ಸಮುದಾಯದ ಮಕ್ಕಳ ಶೈಕ್ಷ ಣಿಕ ಅಭಿವೃದ್ಧಿಗೆ ಕೈಜೋಡಿ ಸಲು ಸದಾ ಸಿದ್ಧ ಎಂದರು. ಮುಂದಿನ ದಿನ ಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸಹಾಯ ಮಾಡಲಾಗುತ್ತದೆ


ಬಾಗೇಪಲ್ಲಿ: ತಾಲ್ಲೂಕು ಈಡಿಗ ಸಮುದಾಯದಲ್ಲಿ ಒಂದರಿಂದ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ಹಾಗೂ ಬ್ಯಾಗ್ ವಿತರಣೆ ಕಾರ್ಯಕ್ರಮ ಪಟ್ಟಣದ ಶಿಕ್ಷಕಿ ಅನಿತಾ ಅವರ ಮನೆಯ ಆವರಣದಲ್ಲಿ ಲೇಖನಿ ಸಾಮಾಗ್ರಿ ವಿತರಣೆ ಕಾರ್ಯಕ್ರಮ ನಡೆಯಿತು. ಶ್ರೀ ಸತ್ಯದರ್ಶನ ಧರ್ಮದತ್ತಿ ಸಂಸ್ಥೆ ಬೆಂಗ ಳೂರು ನಿವಾಸಿಗಳಾದ ತಾಲ್ಲೂಕಿನ ಆರ್ಯ ಈಡಿಗರ ಸಮುದಾಯದ ಸದಸ್ಯರಾದ ನರಸಿಂಹ ಸ್ವಾಮಿ ಹಾಗೂ ಧರ್ಮಪತ್ನಿ ಶ್ರೀಮತಿ ವಿಜಯಲಕ್ಷ್ಮೀ ಹಾಗೂ ಮಗ ಅಮಿತ್ ರವರು ಉತ್ತಮ ಗುಣಮಟ್ಟದ ಶಾಲೆ ಬ್ಯಾಗ್, ನೋಟ್ ಬುಕ್, ಪೆನ್ನು ಮತ್ತು ಜಾಮಿಟ್ರಿ ಬಾಕ್ಸ್‌ಗಳನ್ನು ವಿತರಿಸಿದರು.
ತದನಂತರ ಅವರು ಮಾತನಾಡಿ, ಸರಕಾರಿ ಶಾಲೆಗಳ ಉಳಿವಿಗೆ ನಾಗರಿಕರು ಶ್ರಮವಹಿಸ ಬೇಕು. ಸರ್ಕಾರಿ ಶಾಲೆಗೆ ದಾಖಲಾಗುವ ಆರ್ಥಿಕವಾಗಿ ಹಿಂದುಳಿದ ಈಡಿಗ ಸಮುದಾಯದ ಮಕ್ಕಳ ಶೈಕ್ಷ ಣಿಕ ಅಭಿವೃದ್ಧಿಗೆ ಕೈಜೋಡಿಸಲು ಸದಾ ಸಿದ್ಧ ಎಂದರು. ಮುಂದಿನ ದಿನ ಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸಹಾಯ ಮಾಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಧಾನಿಗಳಿಗೆ ಹೆಚ್.ವೆಂಕಟೇಶ್ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು ಆತ್ಮೀಯ ಸನ್ಮಾನ ಮಾಡಲಾಯಿತು.
ಹೆಚ್.ವೆಂಕಟೇಶ, ಎಂ.ವಿ.ರಾಜಶೇಖರ, ರಮೇಶ್ ಕೊಂಡಪ್ಪ, ಗೋಪಾಲಪ್ಪ, ಮಂಜುಲ, ಅನಿತಾ ಮತ್ತಿತರರು ಹಾಜರಿದ್ದರು.