ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MI vs RCB: ಆರ್‌ಸಿಬಿ-ಮುಂಬೈ ಪಂದ್ಯದ ಪಿಚ್‌ ರಿಪೋರ್ಟ್‌, ಹವಾಮಾನ ವರದಿ ಹೇಗಿದೆ?

ಇತ್ತಂಡಗಳು ಇದುವರೆಗೆ ಐಪಿಎಲ್‌ನಲ್ಲಿ ಒಟ್ಟು 33 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಮುಂಬೈ 19 ಪಂದ್ಯ ಗೆದ್ದರೆ, ಆರ್‌ಸಿಬಿ 14 ಪಂದ್ಯ ಜಯಿಸಿದೆ. ಕಳೆದ ಆವೃತ್ತಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಮುಂಬೈ ತಂಡ 7 ವಿಕೆಟ್‌ ಅಂತರದಿಂದ ಗೆದ್ದು ಬೀಗಿತ್ತು.

ಆರ್‌ಸಿಬಿ-ಮುಂಬೈ ಪಂದ್ಯದ ಪಿಚ್‌ ರಿಪೋರ್ಟ್‌, ಹವಾಮಾನ ವರದಿ ಹೇಗಿದೆ?

Profile Abhilash BC Apr 6, 2025 4:27 PM

ಮುಂಬಯಿ: ಹಾಲಿ ಆವೃತ್ತಿಯ ಐಪಿಎಲ್‌(IPL 2025)ನಲ್ಲಿ ತವರಿನ ಪಂದ್ಯವನ್ನು ಹೊರತುಪಡಿಸಿ ಉಳಿದ ಮೂರು ಪಂದ್ಯಗಳಲ್ಲಿ ಸೋಲು ಕಂಡಿರುವ ಮುಂಬೈ ಇಂಡಿಯನ್ಸ್‌(MI vs RCB) ಮತ್ತೊಂದು ತವರಿನ ಪಂದ್ಯವನ್ನಾಡಲು ಸಜ್ಜಾಗಿದೆ. ಸೋಮವಾರ ನಡೆಯುವ ಐಪಿಎಲ್‌ನ 20ನೇ ಪಂದ್ಯದಲ್ಲಿ ಆರ್‌ಸಿಬಿ(RCB) ತಂಡದ ಸವಾಲನ್ನು ಎದುರಿಸಲಿದೆ. ಈ ಪಂದ್ಯದ ಪಿಚ್‌ ರಿಪೋರ್ಟ್‌, ಆಡುವ ಬಳಗ ಮತ್ತು ಹವಾಮಾನ ವರದಿಯ ಮಾಹಿತಿ ಇಲ್ಲಿದೆ.

ಪಿಚ್‌ ರಿಪೋರ್ಟ್‌

ವಾಂಖೇಡೆ ಸಣ್ಣ ಸ್ಟೇಡಿಯಂ ಆದ ಕಾರಣ ದೊಡ್ಡ ಹೊಡೆತಗಳನ್ನು ಸರಾಗವಾಗಿ ಬಾರಿಸಬಹುದು. ಇಲ್ಲಿ ಟಾಸ್‌ ಕೂಡ ನಿರ್ಣಾಯಕ. ದ್ವಿತೀಯ ಇನಿಂಗ್ಸ್‌ ವೇಳೆ ಇಬ್ಬನಿ ಬೀಳುವ ಕಾರಣ ಸ್ಪಿನ್ನರ್‌ಗಳಿಗೆ ಸವಾಲು ಎದುರಾಗಬಹುದು. ಈ ಕ್ರೀಡಾಂಗಣದಲ್ಲಿ ನಡೆದ ಪಂದ್ಯಗಳ ದಾಖಲೆ ನೋಡುವುದಾದರೆ, ಮೊದಲು ಬ್ಯಾಟ್ ಮಾಡಿದ ತಂಡ 54 ಪಂದ್ಯಗಳನ್ನು ಗೆದ್ದಿದ್ದರೆ, ಚೇಸಿಂಗ್ ಮಾಡಿದ ತಂಡ 65 ಪಂದ್ಯಗಳನ್ನು ಗೆದ್ದಿದೆ. ಹೀಗಾಗಿ ಟಾಸ್‌ ಗೆದ್ದ ತಂಡ ಮೊದಲು ಬೌಲಿಂಗ್‌ ಆಯ್ಕೆಗೆ ಒತ್ತು ನೀಡಬಹುದು.

ಹವಾಮಾನ

ಪಂದ್ಯಕ್ಕೆ ಯಾವುದೇ ಮಳೆ ಭೀತಿ ಇಲ್ಲ. ಪಂದ್ಯದ ವೇಳೆ ಗರಿಷ್ಠ ತಾಪಮಾನವು ಸುಮಾರು 34 ಡಿಗ್ರಿ ಗಳಷ್ಟಿದ್ದು, ಆರ್ದ್ರತೆ ಶೇ.45ರಷ್ಟು ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಖಾಮುಖಿ

ಇತ್ತಂಡಗಳು ಇದುವರೆಗೆ ಐಪಿಎಲ್‌ನಲ್ಲಿ ಒಟ್ಟು 33 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಮುಂಬೈ 19 ಪಂದ್ಯ ಗೆದ್ದರೆ, ಆರ್‌ಸಿಬಿ 14 ಪಂದ್ಯ ಜಯಿಸಿದೆ. ಕಳೆದ ಆವೃತ್ತಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಮುಂಬೈ ತಂಡ 7 ವಿಕೆಟ್‌ ಅಂತರದಿಂದ ಗೆದ್ದು ಬೀಗಿತ್ತು.

ಇದನ್ನೂ ಓದಿ IPL 2025 Points Table: ಡೆಲ್ಲಿಗೆ ಅಗ್ರಸ್ಥಾನ, ಏಳಕ್ಕೇರಿದ ರಾಜಸ್ಥಾನ್‌

ಸಂಭಾವ್ಯ ತಂಡಗಳು

ಮುಂಬೈ ಇಂಡಿಯನ್ಸ್‌: ರೋಹಿತ್ ಶರ್ಮಾ, ರಿಯಾನ್ ರಿಕಲ್ಟನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ನಮನ್ ಧೀರ್, ಹಾರ್ದಿಕ್ ಪಾಂಡ್ಯ(ನಾಯಕ), ದೀಪಕ್ ಚಾಹರ್, ಜಸ್‌ಪ್ರೀತ್‌ ಬುಮ್ರಾ, ಟ್ರೆಂಟ್ ಬೌಲ್ಟ್, ಮಿಚೆಲ್ ಸ್ಯಾಂಟ್ನರ್, ವಿಘ್ನೇಶ್ ಪುತ್ತೂರ್‌.

ಆರ್‌ಸಿಬಿ: ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ತ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್.