DC vs CSK: ಎಂಎಸ್ ಧೋನಿಯ ಐಪಿಎಲ್ ನಿವೃತ್ತಿ ಬಗ್ಗೆ ಸ್ಪಷ್ಟನೆ ನೀಡಿದ ಸ್ಟೀಫನ್ ಫ್ಲೆಮಿಂಗ್!
ಮಹೇಂದ್ರ ಸಿಂಗ್ ಧೋನಿ ಇನ್ನೂ ಬಲಿಷ್ಠವಾಗಿ ಆಡುತ್ತಿದ್ದು, ನಿವೃತ್ತಿಯ ಬಗ್ಗೆ ನಿರ್ಧರಿಸುವುದು ಅವರ ಕೆಲಸವಲ್ಲ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ ಹೇಳಿದ್ದಾರೆ. ಧೋನಿ ಡೆಲ್ಲಿ ವಿರುದ್ಧ ಏಳನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದರು. ಆದರೂ ಸಿಎಸ್‌ಕೆ ಸೋತಿತ್ತು. ಚೆನ್ನೈನ ಪಿಚ್ ಅತ್ಯಂತ ಸವಾಲಿನ ಪಿಚ್ ಎಂದು ಕೋಚ್ ಹೇಳಿದ್ದಾರೆ.

ಎಂಎಸ್ ಧೋನಿಯ ನಿವೃತ್ತಿ ಬಗ್ಗೆ ಸ್ಟೀಫನ್ ಫ್ಲೆಮಿಂಗ್ ಪ್ರತಿಕ್ರಿಯೆ.

ಚೆನ್ನೈ: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ಮಹೇಂದ್ರ ಸಿಂಗ್ (MS Dhoni) ಧೋನಿ ಇನ್ನೂ ಬಲವಾಗಿ ಆಡುತ್ತಿದ್ದಾರೆ ಮತ್ತು ಮಾಜಿ ನಾಯಕನ ಪ್ರಯಾಣವನ್ನು ಅಂತ್ಯಗೊಳಿಸುವ ಪಾತ್ರವನ್ನು ಅವರಿಗೆ ನೀಡಲಾಗಿಲ್ಲ ಎಂದು ಚೆನ್ನೈ ಸೂಪರ್ ಕಿಂಗ್ಸ್ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ (Stephen Flemming) ಸ್ಪಷ್ಟಪಡಿಸಿದ್ದಾರೆ. ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ವೇಳೆ ಚೆಪಾಕ್ ಸ್ಟೇಡಿಯಂನಲ್ಲಿ ಧೋನಿ ಅವರ ಪೋಷಕರ ಉಪಸ್ಥಿತಿಯು ಅವರ ನಿವೃತ್ತಿಯ ಬಗ್ಗೆ ಮತ್ತೊಮ್ಮೆ ಊಹಾಪೋಹಗಳಿಗೆ ಉತ್ತೇಜನ ನೀಡಿತ್ತು. ಆದೆರೆ, ಡೆಲ್ಲಿ ವಿರುದ್ಧದ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಸಿಎಸ್‌ಕೆ ಹೆಡ್ ಕೋಚ್ ಎಂಎಸ್ ಧೋನಿಯ ನಿವೃತ್ತಿ ಬಗೆಗಿನ ಎಲ್ಲಾ ಊಹಾಪೋಹಗಳನ್ನು ತಳ್ಳಿ ಹಾಕಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 25 ರನ್‌ಗಳಿಂದ ಸೋತ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಟೀಫನ್ ಫ್ಲೆಮಿಂಗ್, "ಇಲ್ಲ, ಅವರ (ಎಂಎಸ್ ಧೋನಿ) ಪ್ರಯಾಣವನ್ನು ಕೊನೆಗೊಳಿಸುವುದು ನನ್ನ ಕೆಲಸವಲ್ಲ. ನನಗೇನೂ ಗೊತ್ತಿಲ್ಲ. ನಾನು ಅವರೊಂದಿಗೆ ಕೆಲಸ ಮಾಡುವುದನ್ನು ಆನಂದಿಸುತ್ತಿದ್ದೇನೆ. ಅವರು ಇನ್ನೂ ಬಲಶಾಲಿಯಾಗಿದ್ದಾರೆ. ಈ ದಿನಗಳಲ್ಲಿ ನಾನು ಕೇಳುವುದೇ ಇಲ್ಲ. ನೀವು ಮಾತ್ರ ಇದರ ಬಗ್ಗೆ ಕೇಳುತ್ತೀರಿ," ಎಂದು ಗರಂ ಆಗಿದ್ದಾರೆ.
ತವರಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಹ್ಯಾಟ್ರಿಕ್ ಸೋಲಿನ ಮುಖಭಂಗ, ಡೆಲ್ಲಿಗೆ ಸತತ ಮೂರನೇ ಜಯ!
ಇದಕ್ಕೂ ಮುನ್ನ ಎಂಎಸ್ ಧೋನಿ ಅವರನ್ನು ಒಂಬತ್ತನೇ ಕ್ರಮಾಂಕಕ್ಕೆ ಕಳುಹಿಸುವ ನಿರ್ಧಾರವನ್ನು ತೀವ್ರವಾಗಿ ಟೀಕಿಸಲಾಗಿತ್ತು ಆದರೆ, ಶನಿವಾರ ಅನುಭವಿ ಕ್ರಿಕೆಟಿಗ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದರು. ಆದಾಗ್ಯೂ, ಅವರು 26 ಎಸೆತಗಳಲ್ಲಿ 30 ರನ್‌ಗಳ ಅಜೇಯ ಇನಿಂಗ್ಸ್ ಆಡಿದರು. ಆದರೂ ಅವರು ಲಯವನ್ನು ಕಂಡುಕೊಳ್ಳಲು ವಿಫಲರಾದರು. ಅಲ್ಲದೆ ತಮ್ಮ ತಂಡವನ್ನು ಹ್ಯಾಟ್ರಿಕ್ ಸೋಲಿನಿಂದ ತಪ್ಪಿಸಲು ಸಾಧ್ಯವಾಗಲಿಲ್ಲ.
ಪಿಚ್ ಬ್ಯಾಟಿಂಗ್‌ಗೆ ಕಠಿಣವಾಗಿತ್ತು
ಸ್ಟೀಫನ್ ಫ್ಲೆಮಿಂಗ್ ಎಂಎಸ್ ಧೋನಿಯವರನ್ನು ಸಮರ್ಥಿಸಿಕೊಂಡರು ಮತ್ತು ಆ ಸಮಯದಲ್ಲಿ ಬ್ಯಾಟಿಂಗ್ ಮಾಡುವುದು ನಿಜವಾಗಿಯೂ ಕಷ್ಟಕರವಾಗಿತ್ತು ಎಂದು ಹೇಳಿದರು. "ಅವರು ಉತ್ಸಾಹ ತೋರಿಸಿದರು. ಅವರು ಕ್ರೀಸ್ ತಲುಪಿದಾಗ, ಚೆಂಡು ಸ್ವಲ್ಪ ವಿರಾಮದೊಂದಿಗೆ ಬರುತ್ತಿದೆ ಎಂದು ನಾನು ಭಾವಿಸುತ್ತೇನೆ. ಮೊದಲ ಅವಧಿಯಲ್ಲಿ ಬ್ಯಾಟ್ ಮಾಡಲು ಚೆನ್ನಾಗಿರುತ್ತೆ, ಆಮೇಲೆ ಪಿಚ್ ಕ್ರಮೇಣ ನಿಧಾನವಾಗುತ್ತೆ ಅಂತ ಅರ್ಥ ಮಾಡಿಕೊಂಡೆವು," ಎಂದು ತಿಳಿಸಿದ್ದಾರೆ.
IPL 2025: ಚೆನ್ನೈ ಸೂಪರ್ ಕಿಂಗ್ಸ್‌ನ ಹ್ಯಾಟ್ರಿಕ್ ಸೋಲಿಗೆ ಕಾರಣ ತಿಳಿಸಿದ ಋತುರಾಜ್ ಗಾಯಕ್ವಾಡ್!
"ಅವರು ಸನ್ನಿವೇಶಗಳನ್ನು ಪರಿಗಣಿಸಿ ನಿಜವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿದರು," ಅವರು ಸಿಎಸ್‌ಕೆ ಕೋಚ್ ಹೇಳಿಕೊಂಡಿದ್ದಾರೆ. "ವಿಜಯ್ ಶಂಕರ್ ತಮ್ಮ ಇನಿಂಗ್ಸ್‌ನಲ್ಲಿ ಸಮಯ ಕಂಡುಕೊಳ್ಳಲು ಹೆಣಗಾಡಿದರು. ಆದರೆ 12ರಿಂದ 16 ಓವರ್‌ಗಳ ಆ ಅವಧಿ ಎಲ್ಲರಿಗೂ ಕಷ್ಟಕರವಾಗಿತ್ತು. ಅಲ್ಲಿ ಆಡುವುದು ಖಂಡಿತ ಕಠಿಣವಾಗಿತ್ತು. ಅಷ್ಟೇ ಏಕೆ ಪ್ರಯತ್ನ ಪಟ್ಟರೂ ಪಂದ್ಯ ನಮ್ಮ ಕೈ ತಪ್ಪುತ್ತಿತ್ತು," ಎಂದು ಮಾಹಿತಿ ನೀಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್‌ಗೆ 25 ರನ್ ಸೋಲು
ಶನಿವಾರ ಇಲ್ಲಿನ ಎಂಎ ಚಿದಂಬರಂ ಕ್ರಿಕೆಟ್ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 184 ರನ್ ಗುರಿ ಹಿಂಬಾಲಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ವಿಜಯ್ ಶಂಕರ್ (69) ಅವರ ಅರ್ಧಶತಕದ ಹೊರತಾಗಿಯೂ ಚೆನ್ನೈ ಸೂಪರ್ ಕಿಂಗ್ಸ್, ಇನ್ನುಳಿದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ ನಿಗದಿತ 20 ಓವರ್‌ಗಳಿಗೆ 5 ವಿಕೆಟ್ ನಷ್ಟಕ್ಕೆ 158 ರನ್‌ಗಳಿಗೆ ಸೀಮಿತವಾಯಿತು ಹಾಗೂ ತವರು ಅಭಿಮಾನಿಗಳ ಎದುರು ಚೆನ್ನೈ ಸೂಪರ್ ಕಿಂಗ್ಸ್ ಮತ್ತೊಮ್ಮೆ ಸೋಲಿನ ಆಘಾತ ಅನುಭವಿಸಿತು.