Tumkur News: ಪೌರಕಾರ್ಮಿಕರು ನಗರದ ಸ್ವಚ್ಛತೆ ಕಾಪಾಡಿ ನಮ್ಮೆಲ್ಲರ ಆರೋಗ್ಯ ಕಾಪಾಡುತ್ತಾರೆ: ಟಿ.ಬಿ.ಜಯಚಂದ್ರ
ನಗರಸಭೆ ಆವರಣದಲ್ಲಿ ಯುಗಾದಿ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮದ್ ಅವರ ಜೆಡ್‌ಬಿಎಸ್ ಗ್ರೂಪ್ ವತಿಯಿಂದ ನಗರಸಭೆ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಬಾರಿ ಯುಗಾದಿ ಹಾಗೂ ರಂಜಾನ್ ಹಬ್ಬ ವಿಶೇಷವಾಗಿದೆ.

ಜೆಡ್‌ಬಿಎಸ್ ಗ್ರೂಪ್ ವತಿಯಿಂದ ನಗರಸಭೆ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮವನ್ನು ಶಾಸಕ ಟಿ.ಬಿ.ಜಯಚಂದ್ರ ಉದ್ಘಾಟಿಸಿದರು.

ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮದ್ ಅವರಿಂದ ಪೌರಕಾರ್ಮಿಕರಿಗೆ ಹೊಸ ಬಟ್ಟೆ ವಿತರಣೆ
ಶಿರಾ: ನಗರದ ಸೌಂದರ್ಯ ಕಾಪಾಡಲು ಪೌರಕಾರ್ಮಿಕರು ಹಗಲಿರುಳು ನಗರದಲ್ಲಿ ಸ್ವಚ್ಛತೆ ಮಾಡಿ ನಮ್ಮೆಲ್ಲರ ಆರೋಗ್ಯ ಕಾಪಾಡುತ್ತಾರೆ. ಅವರ ಕಾರ್ಯಕ್ಕೆ ನಾವೆಲ್ಲರೂ ಶ್ಲಾಘಿಸಬೇಕು ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು. ಅವರು ನಗರಸಭೆ ಆವರಣದಲ್ಲಿ ಯುಗಾದಿ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮದ್ ಅವರ ಜೆಡ್‌ಬಿಎಸ್ ಗ್ರೂಪ್ ವತಿಯಿಂದ ನಗರಸಭೆ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಬಾರಿ ಯುಗಾದಿ ಹಾಗೂ ರಂಜಾನ್ ಹಬ್ಬ ವಿಶೇಷವಾಗಿದೆ. ಏಕೆಂದರೆ ಒಂದು ದಿನ ಮುಂದೆ ರಂಜಾನ್ ಬಂದಿದ್ದು ಭಾವೈಕ್ಯತೆಯ ಸಂಕೇತವಾಗಿದೆ ಎಂದ ಅವರು ನಗರದ ಸ್ವಚ್ಛತೆ ಕಾಪಾಡಿ ನಗರದ ಸೌಂದರ್ಯ ಕಾಪಾಡುವ ಪೌರಕಾರ್ಮಿಕರಿಗೆ ಯುಗಾದಿ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ಹೊಸಬಟ್ಟೆ ವಿತರಿಸಿರುವುದು ಮೆಚ್ಚುವಂತದ್ದು ಅಂತಹ ಕಾರ್ಯವನ್ನು ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮದ್ ಹಾಗೂ ಅವರ ಸಹೋದರ ಬುರಾನ್ ಮೊಹಮದ್ ಮಾಡುತ್ತಿದ್ದಾರೆ. ಇವರ ತಂದೆಯವರಾದ ಕೆ.ಪ್ಯಾರು ಅವರೂ ಸಹ ನಗರಸಭೆ ಅಧ್ಯಕ್ಷರಾಗಿದ್ದರು. ಅವರೂ ಸಹ ಉತ್ತಮ ಸೇವಾ ಮನೋಭಾವವನ್ನು ಹೊಂದಿದ್ದರು. ಅವರಂತೆ ಮಕ್ಕಳೂ ಸಹ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದಾರೆ. ಇಂತಹ ಪುಣ್ಯದ ಕೆಲಸವನ್ನು ಇನ್ನೂ ಹೆಚ್ಚಿಗೆ ಮಾಡಿದರೆ ದೇವರು ಮೆಚ್ಚುತ್ತಾನೆ ಎಂದರು.
ಇದನ್ನೂ ಓದಿ: Tumkur (Chikkanayanahalli) News: ನಾಲಿಗೆ ಹರಿಬಿಡುವ ಮುನ್ನ ಎಚ್ಚರ : ಅರಳೀಕೆರೆ ಉಮೇಶ್
- ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮದ್ ಮಾತನಾಡಿ ಪೌರಕಾರ್ಮಿಕರು ನಗರದ ಸ್ವಚ್ಛತೆ ಕಾಪಾಡುವ ಮಹತ್ಕಾರ್ಯ ಮಾಡುತ್ತಾರೆ. ಅವರಿಗೆ ನಾವು ಎಷ್ಟೇ ಧನ್ಯವಾದ ಹೇಳಿದರೂ ಸಾಕಾಗುವುದಿಲ್ಲ. ಅವರು ಸಂತೋಷದಿಂದ ಯುಗಾದಿ ಹಬ್ಬವನ್ನು ಆಚರಿಸಲಿ ಎಂಬ ಆಶಯ ದಿಂದ ನಾವು ವೈಯಕ್ತಿಕವಾಗಿ ಯುಗಾದಿ ಹಾಗೂ ರಂಜಾನ್ ಹಬ್ಬಕ್ಕೆ ಹೊಸ ಬಟ್ಟೆಯನ್ನು ನೀಡಿದ್ದೇವೆ. ಎಲ್ಲರಿಗೂ ಯುಗಾದಿ ಹಾಗೂ ರಂಜಾನ್ ಹಬ್ಬದ ಶುಭಾಶಯಗಳು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಲಕ್ಷ್ಮೀಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಅಜಯ್ ಕುಮಾರ್, ಪೌರಾಯುಕ್ತ ರುದ್ರೇಶ್.ಕೆ., ನಗರಸಭೆ ಸದಸ್ಯರಾದ, ಬುರಾನ್ ಮಹಮೂದ್, ಉಮಾ ವಿಜಯ ರಾಜ್, ಫರ್ಮನ್, ತೇಜು ಭಾನು ಪ್ರಕಾಶ್, ಆರ್.ರಾಮು, ಬಿ.ಎಂ.ರಾಧಾಕೃಷ್ಣ, ದ್ರುವ ಕುಮಾರ್, ಮಹೇಶ್, ಆಶ್ರಯ ಸಮಿತಿ ಸದಸ್ಯರಾದ ವಾಜರಹಳ್ಳಿ ರಮೇಶ್, ನೂರುದ್ದಿನ್, ವಿಜಯಕುಮಾರ್, ಮಜರ್, ಮುಖಂಡರಾದ ಬರಗೂರು ನಟರಾಜ್, ಶ್ರೀ ರಂಗ ಸೇರಿದಂತೆ ಹಲವರು ಹಾಜರಿದ್ದರು.