Tumkur (Chikkanayanahalli) News: ನಾಲಿಗೆ ಹರಿಬಿಡುವ ಮುನ್ನ ಎಚ್ಚರ : ಅರಳೀಕೆರೆ ಉಮೇಶ್
ಇನ್ನು ಮುಂದೆ ಹಗುರವಾಗಿ ಮಾತನಾಡಿದರೆ ಅದೇ ಭಾಷೆಯಲ್ಲಿ ನಾನು ಮಾತನಾಡುತ್ತೇನೆ ಎಂದು ಅಬ್ಬರಿಸಿದರು. ಇದುವರೆಗೂ ಎಷ್ಟೇ ಟೀಕೆಗಳನ್ನು ಮಾಡಿದರೂ ಸಹನೆಯಿಂದ ಇದ್ದೆವು. ನಮ್ಮ ಸಹನೆಯನ್ನು ದೌರ್ಬಲ್ಯ ಎಂದುಕೊಂಡಿದ್ದರೆ ಇನ್ನು ಮುಂದೆ ಸುಮ್ಮನಿರುವುದಿಲ್ಲ. ಪ್ರತಿ ಟೀಕೆಗೂ ಪ್ರತ್ಯುತ್ತರ ಕೊಡಲೇಬೇಕಾಗುತ್ತದೆ


ಚಿಕ್ಕನಾಯಕನಹಳ್ಳಿ : ನಮ್ಮ ನಾಯಕರ ಬಗ್ಗೆ ಹಗುರವಾಗಿ ಮಾತನಾಡುವ ಮುನ್ನ ನೂರು ಬಾರಿ ಯೋಚಿಸಿ ಮಾತನಾಡುವುದು ನಿಮಗೆ ಒಳಿತು. ಅವರ ವಿರುದ್ದ ನಾಲಿಗೆ ಹರಿಬಿಟ್ಟರೆ ಅದೇ ದಾಟಿ ಯಲ್ಲಿ ನಾನು ಉತ್ತರ ಕೊಡುತ್ತೇನೆ ಎಂದು ಕುಪ್ಪೂರು ಸಹಕಾರ ಸಂಘದ ನಿಕಟ ಪೂರ್ವ ಅಧ್ಯಕ್ಷ ಮತ್ತು ಹಾಲಿ ನಿರ್ದೇಶಕ ಅರಳೀಕೆರೆ ಉಮೇಶ್ ಅವರು ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಿಗೆ ನೇರ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Tumkur (Gubbi)News: ಕಡಬದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ದಸಂಸ ಒತ್ತಾಯ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಸಚಿವ ಮಾಧುಸ್ವಾಮಿ ಅವರ ಬಗ್ಗೆ ಹಗುರ ವಾಗಿ ಮಾತನಾಡುತ್ತಿದ್ದೀರಿ, ಇನ್ನು ಮುಂದೆ ಹಗುರವಾಗಿ ಮಾತನಾಡಿದರೆ ಅದೇ ಭಾಷೆಯಲ್ಲಿ ನಾನು ಮಾತನಾಡುತ್ತೇನೆ ಎಂದು ಅಬ್ಬರಿಸಿದರು. ಇದುವರೆಗೂ ಎಷ್ಟೇ ಟೀಕೆಗಳನ್ನು ಮಾಡಿದರೂ ಸಹನೆಯಿಂದ ಇದ್ದೆವು. ನಮ್ಮ ಸಹನೆಯನ್ನು ದೌರ್ಬಲ್ಯ ಎಂದುಕೊಂಡಿದ್ದರೆ ಇನ್ನು ಮುಂದೆ ಸುಮ್ಮನಿರುವುದಿಲ್ಲ. ಪ್ರತಿ ಟೀಕೆಗೂ ಪ್ರತ್ಯುತ್ತರ ಕೊಡಲೇಬೇಕಾಗುತ್ತದೆ ಎಂದು ಉಮೇಶ್ ಗುಡುಗಿ ದರು.

ಸುದೀರ್ಘ ಹೋರಾಟ ಮಾಡಿ ಬಡವರು, ರೈತರ ಪರವಾಗಿ ಧ್ವನಿ ಎತ್ತಿ ಸರ್ವರಿಗೂ ಸಮಪಾಲು, ಸಮಬಾಳು ಎಂಬಂತೆ ಸರ್ವತೋಮುಖ ಅಭಿವೃದ್ದಿಯ ಆಡಳಿತ ನೀಡಿ ಪರಿಶ್ರಮದಿಂದ ಸಂಘ ವನ್ನು ಬೆಳಸುತ್ತಿದ್ದೇವೆ. ಯಾರಿಗೂ ವಂಚನೆ ಮೋಸ ಮಾಡಿಲ್ಲ ಎಲ್ಲವೂ ಪಾರದರ್ಶಕವಾಗಿಯೇ ವಹಿವಾಟು ನಡೆಸುತ್ತಿಸುತ್ತಿದ್ದೇವೆ. ನಿಮ್ಮಂತೆ 20 ಓಟು 30 ಓಟು ಹಾಕಿಸಿಕೊಂಡು ನಾನು ಗೆದ್ದಿಲ್ಲ. ಬ್ಯಾಂಕ್ ನಡೆಸಿ ಷೇರುದಾರರಿಗೆ ಟೋಪಿ ಹಾಕಿಲ್ಲ. ನಮ್ಮ ನಾಯಕರ ಬಗ್ಗೆ ಮಾತನಾಡುವ ಮುನ್ನ ಹುಷಾರ್ ಎಂದು ಉಮೇಶ್ ಎಚ್ಚರಿಕೆ ಕೊಟ್ಟರು