ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ತಿಗಳ ಸಮುದಾಯದ ಅಭಿವೃದ್ಧಿಗೆ ಶಿಕ್ಷಣ ಮತ್ತು ಸಂಘಟನೆ ಅತ್ಯವಶ್ಯಕ: ಶಿವು ಚಂಗಾವರ

ಅಗ್ನಿವಂಶ, ಕ್ಷತ್ರಿಯ ತಿಗಳ ಸಮುದಾಯದ ಮೂಲಪುರುಷ ಅಗ್ನಿ ಬನ್ನಿರಾಯ ಸ್ವಾಮಿ, ಹಿಂದೂ ಧರ್ಮ ದ 18 ಪುರಾಣಗಳಲ್ಲಿ ೯ ಪುರಾಣಗಳಲ್ಲಿ ಅಗ್ನಿಬನ್ನಿರಾಯರ ಮಹಿಮೆಯನ್ನು ವರ್ಣಿಸಲಾಗಿದೆ. ತಿಗಳ ಸಮುದಾಯದವರು ಶ್ರಮ ಜೀವನಕ್ಕೆ ಹೆಸರುವಾಸಿಯಾಗಿದ್ದು, ಕೃಷಿ ಮಾಡುವ ಮೂಲಕ ಹೂವು, ಹಣ್ಣು, ತರಕಾರಿ, ಸೊಪ್ಪು ಬೆಳೆದು ಮಾರಾಟ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ

ತಿಗಳ ಸಮುದಾಯದವರು ಶ್ರಮ ಜೀವನಕ್ಕೆ ಹೆಸರುವಾಸಿ

ಶಿರಾ ತಾಲ್ಲೂಕಿನ ಯಲಿಯೂರು ಗ್ರಾಮದಲ್ಲಿ ನಡೆದ ಶ್ರೀ ಅಗ್ನಿ ಬನ್ನಿರಾಯಸ್ವಾಮಿ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಶಿರಾ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ ಉದ್ಘಾಟಿಸಿದರು.

Profile Ashok Nayak Mar 30, 2025 11:00 PM

ಶಿರಾ: ತಿಗಳ ಸಮುದಾಯದ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಶಿಕ್ಷಣ ಮತ್ತು ಸಂಘಟನೆ ಅತ್ಯವಶ್ಯಕ ಎಂದು ಸಮಾಜ ಸೇವಕ ಶಿರಾ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾ ವರ ಹೇಳಿದರು. ಅವರು ತಾಲ್ಲೂಕಿನ ಯಲಿಯೂರು ಗ್ರಾಮದಲ್ಲಿ ನಡೆದ ಶ್ರೀ ಅಗ್ನಿ ಬನ್ನಿರಾಯ ಸ್ವಾಮಿ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಗ್ನಿವಂಶ, ಕ್ಷತ್ರಿಯ ತಿಗಳ ಸಮುದಾಯದ ಮೂಲಪುರುಷ ಅಗ್ನಿ ಬನ್ನಿರಾಯ ಸ್ವಾಮಿ, ಹಿಂದೂ ಧರ್ಮದ 18 ಪುರಾಣಗಳಲ್ಲಿ ೯ ಪುರಾಣಗಳಲ್ಲಿ ಅಗ್ನಿಬನ್ನಿರಾಯರ ಮಹಿಮೆಯನ್ನು ವರ್ಣಿಸಲಾಗಿದೆ. ತಿಗಳ ಸಮುದಾಯದವರು ಶ್ರಮ ಜೀವನಕ್ಕೆ ಹೆಸರುವಾಸಿಯಾಗಿದ್ದು, ಕೃಷಿ ಮಾಡುವ ಮೂಲಕ ಹೂವು, ಹಣ್ಣು, ತರಕಾರಿ, ಸೊಪ್ಪು ಬೆಳೆದು ಮಾರಾಟ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದರು.

ಇದನ್ನೂ ಓದಿ: Tumkur News: ತುಮಕೂರು ಜಿಲ್ಲಾ ವಕೀಲರ ಸಂಘದ ಚುನಾವಣೆಗೆ ಹೈಕೋರ್ಟ್‌ ತಡೆಯಾಜ್ಞೆ

ಇದೇ ಸಂದರ್ಭದಲ್ಲಿ ಏ. ೬ ರಂದು ಯಲಿಯೂರು ಗ್ರಾಮದಲ್ಲಿ ನಡೆಯುವ ಶನಿ ಪ್ರಭಾವ ಪೌರಾ ಣಿಕ ನಾಟಕ ಕಲೆ ಪ್ರೋತ್ಸಾಹಿಸಲು ಆರ್ಥಿಕ ಸಹಾಯ ಮಾಡಿದರು. ಆಣೇಕಾರ್ ವೈ.ಸಿ. ಶಿವರಾಜ್ ಮಾತನಾಡಿ ತಿಗಳ ಸಮುದಾಯದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉನ್ನತ ಶಿಕ್ಷಣ ಪಡೆದಾಗ ಮಾತ್ರ ಸಮುದಾಯ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯ ಎಂದರು.

ಯಜಮಾನ್ ರಂಗಪ್ಪ ಮಾತನಾಡಿ ಶಿರಾ ನಗರದಲ್ಲಿ ಈ ಹಿಂದೆ ತಿಗಳ ಸಮುದಾಯದ ಅಭಿವೃದ್ಧಿಗೆ ಕಲ್ಲು ಕೋಟೆ ಸರ್ವೆ ನಂಬರ್‌ ನಲ್ಲಿ 20 ಗುಂಟೆ ಜಮೀನು ನೀಡಿದ್ದು, ಕಂದಾಯ ಇಲಾಖೆಯು ಜಾಗ ಗುರ್ತಿಸಿ ಕೊಡಲು ಮನವಿ ಮಾಡಿದ್ದು, ಮುಂದಿನ ದಿನಗಳಲ್ಲಿ ಸಮಾಜದ ಅಭಿವೃದ್ಧಿ ಕಾಮಗಾರಿ ಗಳು ಸ್ಥಳೀಯ ಶಾಸಕರ ಹಾಗೂ ಮುಖಂಡರ ಸಹಕಾರದಿಂದ ನಡೆಯಲಿವೆ ಎಂದರು.

ಈ ಸಂದರ್ಭದಲ್ಲಿ ಪೂಜಾರ್ ಕರಿಯಪ್ಪ, ಯಲಿಯೂರು ಗ್ರಾಮ ಪಂಚಾಯಿತಿ ಸದಸ್ಯರಾದ ವೈ.ಟಿ. ನವೀನ್, ಸತೀಶ್ ಕುಮಾರ್, ಭಾಗ್ಯಮ್ಮ ರಂಗನಾಥ್, ಆಶಾ ಲೋಹಿತ್, ಮುಖಂಡರಾದ ಕಾಂತಣ್ಣ, ಜಗದೀಶ್, ಸರಸ್ಪತಮ್ಮ, ನಾಗರಾಜಪ್ಪ, ಶಿವಮ್ಮ, ವೈ.ಟಿ.ಬಾಬು, ವೈ. ಎಲ್. ಶ್ರೀನಿವಾಸ್, ವೈ .ಎಚ್. ತಿಮ್ಮಪ್ಪ, ವೈ. ಎಸ್. ಬಸವರಾಜು ತ್ಯಾಗರಾಜು, ಯೋಗೀಶ್ ಮೇಸ್ಟ್ರು, ಮೊಹನ್, ನಾಗಪ್ಪ, ದಿಲೀಪ್, ಲೋಹಿತ್, ವೆಂಕಟೇಶ್, ಜಯಣ್ಣ, ಕುಮಾರ್, ದೇವರಾಜ್, ಲಿಂಗರಾಜು ಸೇರಿದಂತೆ ಸಮುದಾ ಯದ ಮುಖಂಡರು ಹಾಜರಿದ್ದರು.