Theft case: ಮನೆ, ದೇವಾಲಯಗಳಲ್ಲಿ ಕಳವು: ಇಬ್ಬರ ಬಂಧನ, 20 ಗ್ರಾಂ ಚಿನ್ನ, 2.63 ಕೆಜಿ ಬೆಳ್ಳಿ ವಶ
Theft case: ಹಲವು ದೇವಾಲಯಗಳು ಮತ್ತು ಮನೆಯೊಂದರಲ್ಲಿ ಚಿನ್ನ, ಬೆಳ್ಳಿ ಸಾಮಗ್ರಿ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಪಾವಗಡ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಅವರಿಂದ 2 ಕೆಜಿ 630 ಗ್ರಾಂ ಬೆಳ್ಳಿ ಹಾಗೂ 20 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ.


ಪಾವಗಡ: ತಾಲೂಕಿನ ಹಲವು ದೇವಾಲಯಗಳು ಮತ್ತು ಮನೆಯೊಂದರಲ್ಲಿ ಚಿನ್ನ, ಬೆಳ್ಳಿ ಸಾಮಗ್ರಿ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಪಾವಗಡ ಗ್ರಾಮಾಂತರ ಪೊಲೀಸರು ಬಂಧಿಸಿದ್ದು, ಅವರಿಂದ 2 ಕೆಜಿ 630 ಗ್ರಾಂ ಬೆಳ್ಳಿ ಹಾಗೂ 20 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳು ಆಂಧ್ರಪ್ರದೇಶದ ಬದಲಾಪುರ ಗ್ರಾಮದ ನರಸಿಂಹ ಮತ್ತು ಪಾವಗಡ ತಾಲೂಕಿನ ಕ್ಯಾತಗಾನಚರ್ಲು ಗ್ರಾಮದ ತಿಪ್ಪೇಸ್ವಾಮಿ ಎಂದು ಗುರುತಿಸಲಾಗಿದೆ. ಇನ್ನಿಬ್ಬರು ಆರೋಪಿ ಪರಾರಿಯಾಗಿದ್ದಾರೆ. ಉಪ್ಪಾರಹಳ್ಳಿ ಕಾಳಿಕಾ ದೇವಸ್ಥಾನ, ಸೇವಾಲಾಲ್ ಪುರ ಗ್ರಾಮದ ಕರಿಯಮ್ಮನ ದೇವಸ್ಥಾನ, ಫ್ರೆಂಡ್ಲಿಜೀವಿ ಆಂಜನೇಯ ಸ್ವಾಮಿ ದೇವಸ್ಥಾನ, ರಾಯಚರ್ಲು ಅಕ್ಕಮ್ಮ ದೇವಸ್ಥಾನ, ರಂಗಸಮುದ್ರ ಗ್ರಾಮದ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ ಹಾಗೂ ಕ್ಯಾತಗಾನಚರ್ಲು ಗ್ರಾಮದ ಮನೆಯೊಂದರಲ್ಲಿ ಕಳ್ಳತನ ನಡೆದಿತ್ತು.
ಪೊಲೀಸರ ಈ ಭರ್ಜರಿ ಕಾರ್ಯಾಚರಣೆಗೆ ತುಮಕೂರು ಜಿಲ್ಲಾ ಎಸ್‌ಪಿ ಕೆ.ವಿ. ಅಶೋಕ್, ಎಎಸ್ಪಿ ಮರಿಯಪ್ಪ, ಅಬ್ದುಲ್ ಖಾದರ್ ಮಾರ್ಗದರ್ಶನ ನೀಡಿದ್ದಾರೆ. ಡಿವೈಎಸ್ಪಿ ಮಂಜುನಾಥ್ ನೇತೃತ್ವದಲ್ಲಿ ಪಾವಗಡ ಗ್ರಾಮಾಂತರ ಸಿಪಿಐ ಗಿರೀಶ್, ಪಿಎಸ್ಐ ಮಾಳಪ್ಪ ನಾಯ್ಕೋಡಿ, ಲಕ್ಷ್ಮಣ್, ಸಿಬ್ಬಂದಿ ಗೋವಿಂದರಾಜು, ಸೋಮು, ಧರ್ಮನಾಯ್ಕ್, ಶ್ರೀಕಾಂತ್ ನಾಯ್ಕ್, ನಟೇಶ್, ಕೇಶವ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಬಂಧಿತರನ್ನು ಪೊಲೀಸರು ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ | Bhagappa Harijan Murder Case: ʼಅಣ್ಣನ ಹೆಂಡತಿಯನ್ನು ಕಳಿಸುʼ ಎಂದಿದ್ದಕ್ಕೇ ಬಾಗಪ್ಪ ಹರಿಜನ ಫಿನಿಶ್! ನಾಲ್ವರ ಬಂಧನ
ನನ್ನ ಮರ್ಡರ್ ಮಾಡಿಸುತ್ತಿಯಾ? ನನಗೆ ತೊಂದರೆಯಾದ್ರೇ ಶಾಸಕ ಸುರೇಶ್ಗೌಡ ಕಾರಣ: ಮಾಜಿ ಶಾಸಕ ಗೌರಿಶಂಕರ್

ತುಮಕೂರು: ನನ್ನ ಮರ್ಡರ್ ಮಾಡಿಸುತ್ತಿಯಾ? ನನಗೆ ಏನಾದರೂ ಆದರೆ ಅದಕ್ಕೆ ಬಿಜೆಪಿ ಶಾಸಕ ಸುರೇಶ್ಗೌಡ ಕಾರಣ ಎಂದು ಮಾಜಿ ಶಾಸಕ ಡಿಸಿ ಗೌರಿಶಂಕರ್ (D C Gowrishankar) ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಗೃಹ ಸಚಿವರನ್ನು ಭೇಟಿ ಮಾಡಿ ರಕ್ಷಣೆ ಕೋರುತ್ತೇನೆ. ರಾಜಕೀಯ ಲಾಭಕ್ಕಾಗಿ ನಿಮ್ಮಿಷ್ಟ ಬಂದಂಗೆ ಹೋರಾಟ ಮಾಡಿಕೊಂಡರೆ ಅದಕ್ಕೆಲ್ಲಾ ನಾವು ಸೊಪ್ಪು ಹಾಕಲ್ಲ ಎಂದು ಕಿಡಿಕಾರಿದ್ದಾರೆ. ನನ್ನ ಕ್ಷೇತ್ರದಲ್ಲಿ ಒಂದೇ ಒಂದು ರಸ್ತೆ ಗುಂಡಿ ಬಿದ್ದಿಲ್ಲ ಎಂದಿದ್ದಾರೆ. ಆದರೆ, ಹಿರೇಹಳ್ಳಿಯಿಂದ ಹರಳೂರು ರಸ್ತೆ ಸಂಪೂರ್ಣ ಹದಗೆಟ್ಟಿದೆ. ಎಷ್ಟು ಕಮಿಷನ್ ಪಡೆದುಕೊಂಡಿದ್ದೀರಿ. ಅಧಿಕಾರ ಸಿಗುತ್ತೆ ಅಂದರೆ ಯಾರ ಮನೆಗೆ ಬೇಕಾದರೂ ಹೋಗುತ್ತಾನೆ. ನಾನು, ನಂದು ಎಂದವರು ಮಣ್ಣಾಗಿ ಹೋಗಿದ್ದಾರೆ. ನಾನು ಚುನಾವಣೆ ಎದುರಿಸಿದ್ದೇನೆ, ಶಾಸಕನಾಗಿದ್ದೇನೆ ಎಂದರು.
ನನ್ನ ಮೇಲೆ ಕೇಸ್ ಹಾಕಿದ್ದೇನೆ ಎಂದು ಹೇಳಿದ್ದಾನೆ, ಕೋರ್ಟ್ನಲ್ಲಿದ್ದಾಗ ಮಾತನಾಡಬಾರದು ಎಂಬ ಅರಿವಿಲ್ಲದ ಅಜ್ಞಾನಿ. ಸ್ನೇಹಿತ ಎಂದು ಹೇಳಿದವನು, ಡೆಲ್ಲಿಗೆ ಹೋಗಿ ಬಂದ್ಮೇಲೆ ಇಂಜೆಕ್ಷನ್ ಕೊಟ್ಟವರು ಯಾರು? ಪಟ್ಟಿ ಮಾಡಿಕೊಂಡು ಬಂದು ಹೇಳಿಕೆ ಕೊಟ್ಟಿದ್ದಿಯಲ್ಲ ಯಾರು ನಿನಗೆ ಹೇಳಿಕೊಟ್ಟವರು? ಸುರೇಶ್ ಗೌಡರೇ ನಿಮ್ಮ ತಲೆಯಲ್ಲಿ ಬಿಳಿಕೂದಲು ಇವೆ. ನೀವು ಅವಮಾನ ಮಾಡಿದ್ದು, ಹಾಲಪ್ಪನಿಗೆ ಅಲ್ಲ ಕುಂಚಿಟಿಗ ಸಮಾಜದವರಿಗೆ ನಿಂದಿಸುತ್ತಿದ್ದೀರಾ. ಡಾ. ಜಿ ಪರಮೇಶ್ವರ್ಗೆ ನಿಂದಿಸಿದರೆ ಅದು ದಲಿತ ಸಮಾಜಕ್ಕೆ ನಿಂದಿಸಿದಂತೆ. ರಾಜಣ್ಣ ಬಗ್ಗೆ ಮಾತನಾಡಿದ್ದರೆ ನಾಯಕ ಸಮಾಜಕ್ಕೆ ಅಗೌರವ ಕೊಟ್ಟಂತೆ. ನನ್ನ ತಂದೆ ಬಗ್ಗೆ ಮಾತನಾಡಿದ ನಿನ್ನ ಮೇಲೂ ನಾನು ಮಾನನಷ್ಟ ಮೊಕದ್ದಮೆ ಹೂಡಬಹುದು ಎಂದು ಕೆಡಿಕಾರಿದರು.
ಈ ಸುದ್ದಿಯನ್ನೂ ಓದಿ | Hyderabad Horror: ವ್ಯಾಲೆಂಟೆನ್ಸ್ ಡೇ ದಿನವೇ ಯುವತಿ ಮೇಲೆ ಆಸಿಡ್ ದಾಳಿ ಮಾಡಿದ ಸೈಕೋ ಪ್ರೇಮಿ!
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಗೌಡ, ಮುಖಂಡ ಮುರುಳೀಧರ ಹಾಲಪ್ಪ ಇದ್ದರು.