Vijayapura ( indi) News: ಬಿ.ಎಸ್ ಯಡಿಯೂರಪ್ಪ, ಬಿಜೆಪಿ ರಾಜಾಧ್ಯಕ್ಷ ವಿಜಯೇಂದ್ರ ವಿರುದ್ಧ ಪ್ರತಿಭಟನೆ
ತಾಲೂಕಿನ ಸಾತಲಗಾಂವ್ ಪಿ.ಆಯ್ ಗ್ರಾಮದಲ್ಲಿ ಬಸವನಗೌಡ ಪಾಟೀಲ ಯತ್ನಾಳ ಇವರನ್ನು ಪಕ್ಷ ದಿಂದ ಉಚ್ಛಾಟಿಸಿರುವ ಕ್ರಮ ಖಂಡಿಸಿ ನೂರಾರು ಹಿಂದೂಪರ ಸಂಘನೆಯ ಮುಖಂಡರು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜಾಧ್ಯಾಕ್ಷ ವಿಜಯೇಂದ್ರ ವಿರುದ್ಧ ಪ್ರತಿಭಟನೆ ಮಾಡಿದರು.


- ಸಾತಲಗಾಂವ್ ಪಿ.ಆಯ್ ಗ್ರಾಮದಲ್ಲಿ ಪ್ರತಿಭಟನೆ
ಇಂಡಿ: ತಾಲೂಕಿನ ಸಾತಲಗಾಂವ್ ಪಿ.ಆಯ್ ಗ್ರಾಮದಲ್ಲಿ ಬಸವನಗೌಡ ಪಾಟೀಲ ಯತ್ನಾಳ ಇವರನ್ನು ಪಕ್ಷದಿಂದ ಉಚ್ಛಾಟಿಸಿರುವ ಕ್ರಮ ಖಂಡಿಸಿ ನೂರಾರು ಹಿಂದೂಪರ ಸಂಘನೆಯ ಮುಖಂಡರು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜಾಧ್ಯಾಕ್ಷ ವಿಜಯೇಂದ್ರ ವಿರುದ್ಧ ಪ್ರತಿಭಟನೆ ಮಾಡಿದರು. ಡಾ. ಶಿವಕುಮಾರ ಸ್ವಾಮಿಜೀ, ಲೋಕಕಲ್ಯಾಣ ಸಂಸ್ಥೆ ಅಧ್ಯಕ್ಷ ರಮೇಶ. ವ್ಹಿ ಬಿರಾದಾರ ಮಾತನಾಡಿ ಬಸವನಗೌಡ ಪಾಟೀಲ ಅವರ ಉಚ್ಛಾಟನೆ ಯನ್ನು ಹಿಂಪಡೆಯಬೇಕು ಪಕ್ಷದ ರಾಜ್ಯಘಟಕದ ಅಧ್ಯಕ್ಷರಾಗಿ ನೇಮಕ ಮಾಡಬೇಕು ಎಂದು ಒತ್ತಾಯಿಸಿ ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಲಾ ಗುತ್ತದೆ ಎಂದರು.
ಇದನ್ನೂ ಓದಿ:Vijayapura News: ನೀರು ಕುಡಿಯಲು ಹೋಗಿ ಬಾವಿಗೆ ಬಿದ್ದ ಬಾಲಕ, ರಕ್ಷಿಸಲು ಹೋದ ಅಜ್ಜಿಯೂ ನೀರುಪಾಲು!
ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಶಿವುಕುಮಾರ ಬಿರಾದಾರ ,ಮಲ್ಲಪ್ಪ ಸಗರಗೊಂಡ , ಬಸವರಾಜ ತಾಬಸಿ, ವಿಠೋಬ ಬಿರಾದಾರ, ಶಶೀಕಾಂತ ಬಿರಾದಾರ ,ದೇವಾನಂದ ಪತ್ತಾರ, ಬಸು ಅರಳಿಚಂಡಿ, ರಮೇಶ ಭೋಗಶೇಟ್ಟಿ.ಪರ್ವತಯ್ಯಾ ಮಠಪತಿ, ಶರಣಪ್ಪ ಖಣದಾಳ, ಮಾಣಿಕ ಬಿರಾದಾರ, ಸನ್ನಪ್ಪ ಹಿಂದುರುಗಿ, ಸಿದ್ದಪ್ಪ ಹಿಕ್ಕನಗುತ್ತಿ, ಧಮಧರಾಯ ಬಿರಾದಾರ, ನಾಗಪ್ಪ ಖಣದಾಳ ಸೇರಿದಂತೆ ಅನೇಕ ಮುಖಂಡ ಪ್ರತಿಭಟನೆಯಲ್ಲಿದ್ದರು.
ಪೋಟೋಕ್ಯಾಪ್ಸನ್ ೨೯ ಇಂಡಿ೦೧- ತಾಲೂಕಿನ ಸಾತಲಗಾಂವ್ ಪಿ.ಆಯ್ ಗ್ರಾಮದಲ್ಲಿ ಬಸವನಗೌಡ ಪಾಟೀಲ ಯತ್ನಾಳ ಇವರನ್ನು ಪಕ್ಷದಿಂದ ಉಚ್ಛಾಟಿಸಿರುವ ಕ್ರಮ ಖಂಡಿಸಿ ನೂರಾರು ಹಿಂದೂಪರ ಸಂಘನೆಯ ಮುಖಂಡರು ಮಾಜಿ ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜಾಧ್ಯಾಕ್ಷ ವಿಜಯೇಂದ್ರ ವಿರುಧ್ಧಪ್ರತಿಭಟನೆ ಮಾಡುತ್ತಿರುವ ಚಿತ್ರ.