ಉತ್ತಮ ಸಮಾಜ ನಿರ್ಮಾಣಕ್ಕೆ ಮೌಲ್ಯಯುತ ಶಿಕ್ಷಣ ಅಗತ್ಯ: ಡಾ.ಪಿ.ಹೆಚ್.ಮಹೇಂದ್ರಪ್ಪ
ಒಂದು ಶಾಲೆ ಎಂದರೆ ಅಲ್ಲಿ ಮಕ್ಕಳ ಸುರಕ್ಷತೆ ಮತ್ತು ಸರ್ವತೋಮುಖ ಪ್ರಗತಿ ಬಹಳ ಮುಖ್ಯ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸುರಕ್ಷತೆಯೊಂದಿಗೆ ಪ್ರಗತಿ ಹಾಗೂ ಪೋಷಕರ ಸಕ್ರಿಯ ಪಾಲ್ಗೊಳ್ಳು ವಿಕೆಗೆ ಆದ್ಯತೆ ನೀಡುತ್ತಿರುವುದರಿಂದ ಗ್ಲೋಬಲ್ ಕಿಡ್ಸ್ ಶಾಲೆ ಒಂದು ಆಶಾಕಿರಣವಾಗಿ ಹೊರಹೊಮ್ಮುತ್ತಿದೆ ಎಂದ ಅವರು ಮಗುವಿನ ಶಿಕ್ಷಣ ಮತ್ತು ಮೌಲ್ಯ ವೃದ್ಧಿಯಲ್ಲಿ ಪೋಷಕರ ಪಾತ್ರವೂ ಮುಖ್ಯ

ಶಿರಾ ಕೇಶವನಗರದಲ್ಲಿರುವ ಗ್ಲೋಬಲ್ ಕಿಡ್ಸ್ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರತಿಭಾವಂತ ಮಕ್ಕಳನ್ನು ಅಭಿನಂದಿಸಲಾಯಿತು.

ಶಿರಾ: ಉತ್ತಮ ಸಮಾಜ ನಿರ್ಮಾಣಕ್ಕೆ ಶಾಲೆ ಮತ್ತು ಶಿಕ್ಷಣದ ಪಾತ್ರ ಮಹತ್ತರವಾದುದು, ಪೂರ್ವ ಪ್ರಾಥಮಿಕ ಹಂತದಿಂದಲೇ ಮಕ್ಕಳಲ್ಲಿ ಮೌಲ್ಯಯುತ ಶಿಕ್ಷಣಕ್ಕೆ ಆದ್ಯತೆ ನೀಡಿದರೆ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದು ನಿವೃತ್ತ ಪ್ರಾಂಶುಪಾಲರು ಹಾಗೂ ರಾಜಯೋಗಿ ಗಳಾದ ಡಾ.ಪಿ.ಎಚ್.ಮಹೇಂದ್ರಪ್ಪ ತಿಳಿಸಿದರು. ಅವರು ಶಿರಾ ಕೇಶವನಗರದಲ್ಲಿರುವ ಗ್ಲೋಬಲ್ ಕಿಡ್ಸ್ ಶಾಲೆಯ 7ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸದೃಢ ಸಮಾಜ ನಿರ್ಮಾಣವಾಗ ಬೇಕೆಂದರೆ ಮೌಲ್ಯಯುತ ವ್ಯಕ್ತಿಗಳ ನಿರ್ಮಾಣ ಅಗತ್ಯ. ಪ್ರಾರಂಭಿಕ ಕಲಿಕಾ ಪೂರ್ವ ಹಂತದಿಂದಲೇ ಮಕ್ಕಳಿಗೆ ಜಾಗತಿಕ ಸಂಸ್ಕೃತಿ, ಪರಂಪರೆ, ವೈಜ್ಞಾನಿಕತೆಗೆ ಹೊಂದಿ ಕೊಳ್ಳುವ ಶಿಕ್ಷಣ. ಪಠ್ಯ ಮತ್ತು ಸಹಪಠ್ಯ ಚಟುವಟಿಕೆಗಳ ಸಮ್ಮಿಳಿತದ ಶಿಕ್ಷಣ ಕೊಡುವುದು ಮುಖ್ಯ. ಈ ಕೆಲಸವನ್ನು ಗ್ಲೋಬಲ್ ಕಿಡ್ಸ್ ಶಾಲೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಇದನ್ನೂ ಓದಿ: Tumul Election: ತುಮುಲ್ ಅಧ್ಯಕ್ಷ ಸ್ಥಾನ ದಲಿತರಿಗೆ ಕೊಟ್ಟಿದ್ದಕ್ಕೆ ಕೋಪವೇಕೆ?: ಎಂಎಲ್‌ಸಿ ರಾಜೇಂದ್ರ ಆಕ್ರೋಶ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಚಿದಾನಂದ ಕೆ.ಎಸ್ ಮಾತನಾಡಿ, ಒಂದು ಶಾಲೆ ಎಂದರೆ ಅಲ್ಲಿ ಮಕ್ಕಳ ಸುರಕ್ಷತೆ ಮತ್ತು ಸರ್ವತೋಮುಖ ಪ್ರಗತಿ ಬಹಳ ಮುಖ್ಯ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸುರಕ್ಷತೆಯೊಂದಿಗೆ ಪ್ರಗತಿ ಹಾಗೂ ಪೋಷಕರ ಸಕ್ರಿಯ ಪಾಲ್ಗೊಳ್ಳು ವಿಕೆಗೆ ಆದ್ಯತೆ ನೀಡುತ್ತಿರುವುದರಿಂದ ಗ್ಲೋಬಲ್ ಕಿಡ್ಸ್ ಶಾಲೆ ಒಂದು ಆಶಾಕಿರಣವಾಗಿ ಹೊರಹೊಮ್ಮುತ್ತಿದೆ ಎಂದ ಅವರು ಮಗುವಿನ ಶಿಕ್ಷಣ ಮತ್ತು ಮೌಲ್ಯ ವೃದ್ಧಿಯಲ್ಲಿ ಪೋಷಕರ ಪಾತ್ರವೂ ಮುಖ್ಯ.
ಮಕ್ಕಳ ಅಭ್ಯಾಸ, ಸ್ನೇಹಿತ ವರ್ಗ, ಮೊಬೈಲ್, ಟಿವಿ ಮಾಧ್ಯಮ ಬಳಕೆಯ ಕಡೆ ಜಾಗೃತಿ ವಹಿಸುವುದರೊಂದಿಗೆ, ಮಗುವಿನ ಯಾವುದೇ ಸಮಸ್ಯೆಗಳನ್ನು ಪೋಷಕರೊಂದಿಗೆ ಹಂಚಿಕೊಳ್ಳುವAತ ಮುಕ್ತತೆಯನ್ನು ಕಾಪಾಡುವುದು ಅಗತ್ಯ, ಇದರಿಂದ ಎಷ್ಟೋ ಅನಾಹುತಗಳನ್ನು ತಪ್ಪಿಸಬಹುದು ಎಂದು ಅಭಿಪ್ರಾಯಪಟ್ಟರು.
ರಂಗನಾಥ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಶಿವಕುಮಾರ್ ಅವರು ಮಾತನಾಡಿ ಶಿಕ್ಷಣ ಎಂಬುದು ಎಂದೂ ಕರಗದ ಆಸ್ತಿ ಇದ್ದ ಹಾಗೆ ಒಂದು ವೇಳೆ ನಾವು ಸಂಪಾದಿಸಿರುವ ಆಸ್ತಿ ಕರಗಬಹುದು ಆದರೆ ನಾವು ಪಡೆದಿರುವ ಶಿಕ್ಷಣ ಶಾಶ್ವತವಾಗಿರುತ್ತದೆ ಎಂದರು.
ಶಿರಾ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ದೇವರಾಜು. ಎನ್ ಮಾತನಾಡಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ, ಉತ್ತಮ ಗುಣಗಳನ್ನು ಹೇಳಿ ಕೊಡುವುದು ಅಗತ್ಯ ಅಂತಹ ಶಿಕ್ಷಣವನ್ನು ಗ್ಲೋಬಲ್ ಕಿಡ್ಸ್ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಶಿವರಾಜ್, ಸಂಸ್ಥೆಯ ಖಜಾಂಚಿ ಕೆ.ಎಸ್ ರಾಮ ಸ್ವಾಮಿ, ಸಂಸ್ಥೆಯ ಕಾರ್ಯದರ್ಶಿ ಹಾಗೂ ಶಾಲೆಯ ಮುಖ್ಯ ಶಿಕ್ಷಕಿ ಭಾರತಿ ವೈ.ಆರ್, ನಿರ್ದೇಶಕರಾದ ಭಾನುಪ್ರತಾಪ್, ಶಿಕ್ಷಕಿಯರಾದ ರೌಷಾನ್ ಫಿಜಾ, ರೇಖಾ, ಕವಿತಾ, ಶಿಕ್ಷಕಿ ಸುಚಿತ್ರಾ, ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು.