ರೈತರ ಸಹಭಾಗಿತ್ವ ದೊಂದಿಗೆ ಕೆರೆಗಳಲ್ಲಿನ ಹೂಳು ತೆಗೆದು ಪುನರುಜ್ಜೀವನ ಕಾರ್ಯ
ಮನುವಿಕಾಸ ಸಂಸ್ಥೆಯು ರಾಜ್ಯದ ವಿವಿಧ ಜಿಲ್ಲೆಗಳ ಆಯ್ದ ತಾಲೂಕುಗಳಲ್ಲಿ 1000 ಕೆರೆಗಳನ್ನು ಹೂಳೆತ್ತಿ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದ್ದು, ಕೆರೆಯಲ್ಲಿನ ಹೂಳು ತುಂಬಿದ ಮಣ್ಣನ್ನು ರೈತರ ಜಮೀನಿಗೆ ಹಾಕುವುದರಿಂದ ಫಲವತ್ತತೆ ಹೆಚ್ಚಿ ಸಾವಯವ ಕೃಷಿ ಪದ್ದತಿಗೆ ವಾಲುತ್ತಿದೆ. ಇದರ ಜೊತೆ ಜೊತೆಯಲಿ 10,000ಕ್ಕೂ ಅಧಿಕ ಕೃಷಿ ಹೊಂಡ ಗಳನ್ನು ನಿರ್ಮಾಣ ಮಾಡಿ ನೆರವಾಗುವ ಸಂಕಲ್ಪವನ್ನು ತೊಟ್ಟಿದೆ.

ಶಿರಸಿ: ಮನುವಿಕಾಸ ಎಂಬ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯು ಜಲ ಸಂರಕ್ಷಣೆ ಮಾಡುವ ಉದ್ದೇಶವನ್ನಿಟ್ಟುಕೊಂಡು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರೈತರ ಸಹಭಾಗಿತ್ವ ದೊಂದಿಗೆ ಕೆರೆಗಳಲ್ಲಿನ ಹೂಳು ತೆಗೆದು ಪುನರುಜ್ಜೀವನ ಕಾರ್ಯ ಮಾಡುತ್ತಿದೆ. ಈಗಾಗಲೇ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹಾಗೂ ಮುಂಡಗೋಡು ತಾಲೂಕಿನಲ್ಲಿ 85, ಹಾವೇರಿ ಜಿಲ್ಲೆಯ ಹಾನಗಲ್, ಬ್ಯಾಡಗಿ, ಶಿಗ್ಗಾವ್ , ಹಿರೇಕೆರೂರ್ , ಹಾವೇರಿ ತಾಲೂಕು ಗಳಲ್ಲಿ 121, ಧಾರವಾಡ ಜಿಲ್ಲೆಯ ಕಲಘಟಗಿ, ಹುಬ್ಬಳ್ಳಿ, ಕುಂದಗೋಳ, ಧಾರವಾಡ ತಾಲೂಕಿನಲ್ಲಿ 60, ಶಿವಮೊಗ್ಗ ಜಿಲ್ಲೆಯ ಸೊರಬ ಮತ್ತು ಶಿಕಾರಿಪುರ ತಾಲೂಕಿನಲ್ಲಿ 37 ಕೆರೆಗಳನ್ನು ಒಟ್ಟಾರೆ ಯಾಗಿ 303 ಕೆರೆಗಳನ್ನು ರೈತರ ಸಹಭಾಗಿತ್ವದೊಂದಿಗೆ ಅಭಿವೃದ್ಧಿ ಪಡಿಸಲಾಗಿದೆ.
ಇದನ್ನೂ ಓದಿ: Ravi Hunj Column: ಇನ್ನು ಕೆಲವೇ ವರ್ಷಗಳಲ್ಲಿ ವೀರಶೈವ ಎಂಬ ಪದ ನಿರ್ನಾಮವಾಗಲಿದೆಯೇ ?
*
ಮನುವಿಕಾಸ ಸಂಸ್ಥೆಯು ರಾಜ್ಯದ ವಿವಿಧ ಜಿಲ್ಲೆಗಳ ಆಯ್ದ ತಾಲೂಕುಗಳಲ್ಲಿ 1000 ಕೆರೆಗಳನ್ನು ಹೂಳೆತ್ತಿ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದ್ದು, ಕೆರೆಯಲ್ಲಿನ ಹೂಳು ತುಂಬಿದ ಮಣ್ಣನ್ನು ರೈತರ ಜಮೀನಿಗೆ ಹಾಕುವುದರಿಂದ ಫಲವತ್ತತೆ ಹೆಚ್ಚಿ ಸಾವಯವ ಕೃಷಿ ಪದ್ದತಿಗೆ ವಾಲುತ್ತಿದೆ. ಇದರ ಜೊತೆ ಜೊತೆಯಲಿ 10,000ಕ್ಕೂ ಅಧಿಕ ಕೃಷಿ ಹೊಂಡ ಗಳನ್ನು ನಿರ್ಮಾಣ ಮಾಡಿ ನೆರವಾಗುವ ಸಂಕಲ್ಪವನ್ನು ತೊಟ್ಟಿದೆ.
ಗಣಪತಿ ಭಟ್ಟ, ನಿರ್ದೇಶಕರು ಮನುವಿಕಾಸ
*
ಮನುವಿಕಾಸ ಸಂಸ್ಥೆಯು ರೈತಾಪಿ ವರ್ಗಕ್ಕೆ ನೀರು ಕೊಡುವ ಪುಣ್ಯದ ಕೆಲಸವನ್ನು ಮಾಡಿ ಕೊಟ್ಟಿದೆ. ಕೆರೆ ಹೂಳೆತ್ತುವದರಿಂದ ಜಮೀನಿನಲ್ಲಿನ ಬೋರವೆಲ್ ಗಳು ರೀಚಾರ್ಜ್ ಆಗು ತ್ತಿದ್ದು ಕೆರೆಯ ಮಣ್ಣನ್ನು ಜಮೀನಿಗೆ ಹಾಕಿಕೊಳ್ಳುತ್ತಿರುವದರಿಂದ ಇಳುವರಿ ಹೆಚ್ಚಿ ಕೃಷಿಗೆ ಮಾಡುವ ವೆಚ್ಚ ಕಡಿಮೆ ಆಗಿದೆ. ಇದು ರೈತರ ಆದಾಯ ಹೆಚ್ಚಳವಾಗಲು ಕಾರಣ ವಾಗಿದೆ.
ಶಶಿಧರ ಕಿರವಾಡಿ, ಹಾನಗಲ್ ತಾಲೂಕಿನ ರೈತ
*
ಸಂಸ್ಥೆಯ ಕೆರೆ ಪುನರುಜ್ಜೀವನ ಕಾರ್ಯಕ್ರಮಕ್ಕೆ ವಿವಿಧ ದಾನಿ ಸಂಸ್ಥೆಗಳು ಸಹಾಯ ಸಹಕಾರವನ್ನು ನೀಡಿದ್ದಾರೆ. ಅಂತೆಯೇ ರೈತಾಪಿ ವರ್ಗದವರು ಸಹ ಯೋಜನೆಯ ಅನುಷ್ಠಾನದಲ್ಲಿ ನಮ್ಮೊಟ್ಟಿಗೆ ಕೈ ಜೋಡಿಸಿದ್ದಾರೆ. ವಿವಿಧ ಸ್ತರದ ಸರ್ಕಾರಿ ಅಧಿಕಾರಿಗಳು ಸಾಮಾಜಿಕ ಕಾರ್ಯಕರ್ತರು ಸಹ ಕಾರ್ಯಕ್ರಮ ಅನುಷ್ಠಾನಗೊಳಿಸುವಲ್ಲಿ ಸಹಕಾರ ವನ್ನು ನೀಡಿದ್ದಾರೆ.