Waqf bill: ವಕ್ಫ್ ತಿದ್ದುಪಡಿ ಮಸೂದೆಗೆ ಮೋದಿ ಸರ್ಕಾರದ ಮಾಸ್ಟರ್ ಪ್ಲ್ಯಾನ್ ಹೇಗಿತ್ತು? ಇಲ್ಲಿದೆ ಡಿಟೇಲ್ಸ್
1995 ರ ವಕ್ಫ್ ಕಾಯ್ದೆ(Waqf bill)ಯನ್ನು ತಿದ್ದುಪಡಿ ಮಾಡುವುದು ಮತ್ತು 1923 ರ ಮುಸಲ್ಮಾನ್ ವಕ್ಫ್ ಕಾಯ್ದೆಯನ್ನು ರದ್ದುಗೊಳಿಸುವುದು ಬಿಜೆಪಿಯ ಸೈದ್ಧಾಂತಿಕ ಕಾರ್ಯಸೂಚಿಯ ಭಾಗವಾಗಿದೆ. ಇದು ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದು ಮತ್ತು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ನಡೆಯಷ್ಟೇ ಸೂಕ್ಷ್ಮವಾದ ಮತ್ತು ಕೋಲಾಹಲವನ್ನೇ ಸೃಷ್ಟಿಸಿರುವ ಸಂಗತಿಯಾಗಿದೆ. ವಾಸ್ತವವಾಗಿ, ಇದು ಮೋದಿ ಸರ್ಕಾರ 3.0 ಅಡಿಯಲ್ಲಿ ಇದುವರೆಗಿನ ಅತಿದೊಡ್ಡ ನಡೆಯಾಗಿದೆ.


ನವದೆಹಲಿ: ಇಂದು ಲೋಕಸಭೆಯಲ್ಲಿ ಬಹುಚರ್ಚಿತ ವಕ್ಫ್ ತಿದ್ದುಪಡಿ ಮಸೂದೆ(Waqf bill) ಮಂಡನೆಯಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಇಂದು ಅಕ್ಷರಶಃ ಅಗ್ನಿಪರೀಕ್ಷೆಯಂತಿದೆ. 1995 ರ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡುವುದು ಮತ್ತು 1923 ರ ಮುಸಲ್ಮಾನ್ ವಕ್ಫ್ ಕಾಯ್ದೆಯನ್ನು ರದ್ದುಗೊಳಿಸುವುದು ಬಿಜೆಪಿಯ ಸೈದ್ಧಾಂತಿಕ ಕಾರ್ಯಸೂಚಿಯ ಭಾಗವಾಗಿದೆ. ಇದು ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಪಡಿಸುವುದು ಮತ್ತು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ನಡೆಯಷ್ಟೇ ಸೂಕ್ಷ್ಮವಾದ ಮತ್ತು ಕೋಲಾಹಲವನ್ನೇ ಸೃಷ್ಟಿಸಿರುವ ಸಂಗತಿಯಾಗಿದೆ. ವಾಸ್ತವವಾಗಿ, ಇದು ಮೋದಿ ಸರ್ಕಾರ 3.0 ಅಡಿಯಲ್ಲಿ ಇದುವರೆಗಿನ ಅತಿದೊಡ್ಡ ನಡೆಯಾಗಿದೆ. ಕಳೆದ ವರ್ಷ ಜೂನ್ 9 ರಂದು ಅಧಿಕಾರಕ್ಕೆ ಬಂದ ತಕ್ಷಣ ಸರ್ಕಾರವು ವಕ್ಫ್ ಕಾನೂನುಗಳನ್ನು ನಿಭಾಯಿಸುವಲ್ಲಿ ವೇಗವಾಗಿ ಕಾರ್ಯನಿರ್ವಹಿಸುತ್ತು. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ನೇತೃತ್ವದಲ್ಲಿ ಈ ಕಾರ್ಯ ಆರಂಭಗೊಂಡಿದ್ದು, ಸಚಿವಾಲಯವು ಸೌದಿ ಅರೇಬಿಯಾ, ಈಜಿಪ್ಟ್, ಕುವೈತ್, ಓಮನ್, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಟರ್ಕಿಯಂತಹ ದೇಶಗಳಲ್ಲಿ ಯಾವ ರೀತಿಯಲ್ಲಿ ವಕ್ಫ್ ಬೋರ್ಡ್ ನಿರ್ವಹಣೆಯ ಮಾಡಲಾಗುತ್ತದೆ ಎಂಬುದನ್ನು ಅಧ್ಯಯನ ನಡೆಸಿತ್ತು.
ಇದಾದ ಎರಡು ತಿಂಗಳೊಳಗೆ, ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮತ್ತು ಮುಸಲ್ಮಾನ್ ವಕ್ಫ್ ಕಾಯ್ದೆಯನ್ನು ರದ್ದುಗೊಳಿಸುವ ಮಸೂದೆಗಳನ್ನು ಆಗಸ್ಟ್ 8, 2024 ರಂದು ಸಂಸತ್ತಿನಲ್ಲಿ ಮಂಡಿಸಲಾಯಿತು. ಮುಂದಿನ ಐದು ತಿಂಗಳ ಕಾಲ ಮಸೂದೆಗಳನ್ನು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಪ್ರಕ್ರಿಯೆಗೆ ಒಳಪಡಿಸಲಾಯಿತು. "ಜೆಡಿಯು, ಟಿಡಿಪಿ, ಎಲ್‌ಜೆಪಿ (ರಾಮ್ ವಿಲಾಸ್) ಮತ್ತು ಆರ್‌ಎಲ್‌ಡಿ ನಂತಹ ಮುಸ್ಲಿಂ ಮತ ಬ್ಯಾಂಕ್‌ಗಳನ್ನು ಹೊಂದಿರುವ ತನ್ನ ಮಿತ್ರಪಕ್ಷಗಳ ಯಾವುದೇ ಕಳವಳಗಳನ್ನು ಜೆಪಿಸಿ ಪರಿಹರಿಸಬೇಕೆಂದು ಬಿಜೆಪಿ ಬಯಸಿತು" ಎಂದು ಬಿಜೆಪಿ ಮೂಲವೊಂದು ತಿಳಿಸಿದೆ.
ಇದರ ನಡುವೆ, ಕಳೆದ ನವೆಂಬರ್‌ನಲ್ಲಿ, ಮಹಾರಾಷ್ಟ್ರದಲ್ಲಿ ದೊಡ್ಡ ಗೆಲುವಿನ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು "ವಕ್ಫ್ ಕಾಂಗ್ರೆಸ್‌ನ ತುಷ್ಟೀಕರಣ ರಾಜಕೀಯದ ಕ್ರಿಯೆಯಾಗಿದೆ ಮತ್ತು ಸಂವಿಧಾನದಲ್ಲಿ ಅದಕ್ಕೆ ಯಾವುದೇ ಸ್ಥಾನವಿಲ್ಲ" ಎಂದು ಹೇಳುವ ಮೂಲಕ ತಮ್ಮ ಪಕ್ಷದ ಉದ್ದೇಶಗಳನ್ನು ಸ್ಪಷ್ಟಪಡಿಸಿದರು. ಇದೇ ಜನವರಿಯಲ್ಲಿ ಜೆಪಿಸಿ ವರದಿಯನ್ನು ಸಲ್ಲಿಸಲಾಯಿತು. ಬಜೆಟ್‌ಗೆ ಸಂಬಂಧಿಸಿದ ಶಾಸನಗಳನ್ನು ಅಂಗೀಕರಿಸಿದ ನಂತರ ಈ ಅವಳಿ ಮಸೂದೆಗಳನ್ನು ಸಂಸತ್ತಿನ ಬಜೆಟ್ ಅಧಿವೇಶನದ ಕೊನೆಯ ವಾರಕ್ಕೆ ನಿಗದಿಪಡಿಸಲಾಗಿತ್ತು. ಸರ್ಕಾರವು ಏಪ್ರಿಲ್ 4 ರೊಳಗೆ ಎರಡೂ ಮಸೂದೆಗಳನ್ನು ಅಂಗೀಕರಿಸಲು ಮುಂದಾಗಿದೆ.
ಮುಸಲ್ಮಾನ್ ವಕ್ಫ್ ಕಾಯ್ದೆ, 1923, ವಸಾಹತುಶಾಹಿ ಯುಗದ ಶಾಸನವಾಗಿದ್ದು, ಇದು ಆಧುನಿಕ ಭಾರತದಲ್ಲಿ ವಕ್ಫ್ ಆಸ್ತಿಗಳನ್ನು ನಿರ್ವಹಿಸುವಷ್ಟು ಸಬಲವಾಗಿಲ್ಲ. ಅಲ್ಲದೇ ಇದು ಅಸಮರ್ಪಕವೂ ಆಗಿದೆ. ವಕ್ಫ್ ಕಾಯ್ದೆ, 1954 ಅನ್ನು 1995 ರಲ್ಲಿ ತಿದ್ದುಪಡಿ ಮಾಡಲಾಯಿತು ಮತ್ತು ಮುಸ್ಲಿಮರಿಗೆ ಇನ್ನಷ್ಟು ಅನುಕೂಲಕರವಾಗಿಸಿತು. ಇದೀಗ ಮೋದಿ ಸರ್ಕಾರದ ತಿದ್ದುಪಡಿ ಮಾಡಲಾದ ವಕ್ಫ್ ಮಸೂದೆಯು ಭಾರಿ ರಾಜಕೀಯ ವಿವಾದವನ್ನು ಹುಟ್ಟು ಹಾಕಿದೆ. ವಿಪಕ್ಷಗಳು ಇದನ್ನು ಅಸಂವಿಧಾನಿಕ ಎಂದು ಕರೆದರೆ, ಆಡಳಿತ ಪಕ್ಷದ ನಾಯಕರು ಇದನ್ನು ವಕ್ಫ್ ಸ್ವತ್ತುಗಳನ್ನು ಅನುಚಿತ ಬಳಕೆಯಿಂದ ರಕ್ಷಿಸಲು ಅಗತ್ಯ ಕ್ರಮ ಎಂದು ಸಮರ್ಥಿಸಿಕೊಂಡಿದ್ದಾರೆ.
14 ಪ್ರಮುಖ ಬದಲಾವಣೆಗಳಿಗೆ ಅನುಮೋದನೆ
ಇತ್ತೀಚೆಗೆ ಕೇಂದ್ರ ಸಚಿವ ಸಂಪುಟವು ವಿವಾದಾತ್ಮಕ ವಕ್ಫ್ ತಿದ್ದುಪಡಿ ಮಸೂದೆಯಲ್ಲಿ 14 ಪ್ರಮುಖ ಬದಲಾವಣೆಗಳಿಗೆ ಅನುಮೋದನೆ ನೀಡಿತ್ತು. ಜಂಟಿ ಸನದ ಸಮಿತಿ (JPC)ಯಲ್ಲಿ ವಿಪಕ್ಷ ನಾಯಕರು ಸೂಚಿಸಿದ್ದ ಒಟ್ಟು 23 ಬದಲಾವಣೆಗಳ ಪೈಕಿ,14 ಬದಲಾವಣೆಗಳಿಗೆ ಕೇಂದ್ರ ಸಚಿವ ಸಂಪುಟ ಅಸ್ತು ಎಂದಿತ್ತು. ಈ ಬೆಳವಣಿಗೆಯು ವಕ್ಫ್ ಆಸ್ತಿಗಳ ನಿರ್ವಹಣೆಯನ್ನು ನಿಯಂತ್ರಿಸುವ ಕಾನೂನುಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲಿದೆ.