IND-W vs WI-W: ನಾಳೆ ಭಾರತ-ವಿಂಡೀಸ್ ಮೊದಲ ಮಹಿಳಾ ಟಿ20
IND-W vs WI-W: ಯುವ ಆಟಗಾರ್ತಿಯರಾದ ಪ್ರತಿಕಾ ರಾವಲ್ ಮತ್ತು ತನುಜಾ ಕನ್ವರ್ ಭಾರತದ ಏಕದಿನ ತಂಡದಲ್ಲಿ ಮೊದಲ ಬಾರಿ ಸ್ಥಾನ ಸಂಪಾದಿಸಿದ್ದಾರೆ. ಟಿ20 ತಂಡದಲ್ಲಿ ಆಲ್ರೌಂಡರ್ ರಾಘ್ವಿ ಬಿಷ್ಟ್ ಮತ್ತು ನಂದಿನಿ ಕಶ್ಯಪ್ ರಾಷ್ಟ್ರೀಯ ತಂಡದ ಪರ ಚೊಚ್ಚಲ ಕರೆ ಪಡೆದಿದ್ದಾರೆ.
Abhilash BC
Dec 14, 2024 9:43 AM
ಮುಂಬಯಿ: ಪ್ರವಾಸಿ ವೆಸ್ಟ್ ಇಂಡೀಸ್(IND-W vs WI-W) ವಿರುದ್ಧದ ಮಹಿಳೆಯರ ಸೀಮಿತ ಓವರ್ ಕ್ರಿಕೆಟ್ ಸರಣಿ ನಾಳೆಯಿಂದ(ಭಾನುವಾರ) ಆರಂಭವಾಗಲಿದೆ. ಮುಂಬೈನಲ್ಲಿ 3 ಪಂದ್ಯಗಳ ಟಿ20 ಸರಣಿ (ಡಿ.15, 17, 19 ನಡೆಯುವುದರೊಂದಿಗೆ ಭಾರತ-ವಿಂಡೀಸ್ ಸರಣಿ ಶುರುವಾಗಲಿದ್ದು, ಡಿಸೆಂಬರ್ 22, 24, 27ರಂದು ವಡೋದರದಲ್ಲಿ ಏಕದಿನ ಸರಣಿಯ 3 ಪಂದ್ಯಗಳು ನಡೆಯಲಿವೆ.
ಯುವ ಆಟಗಾರ್ತಿಯರಾದ ಪ್ರತಿಕಾ ರಾವಲ್ ಮತ್ತು ತನುಜಾ ಕನ್ವರ್ ಭಾರತದ ಏಕದಿನ ತಂಡದಲ್ಲಿ ಮೊದಲ ಬಾರಿ ಸ್ಥಾನ ಸಂಪಾದಿಸಿದ್ದಾರೆ. ಟಿ20 ತಂಡದಲ್ಲಿ ಆಲ್ರೌಂಡರ್ ರಾಘ್ವಿ ಬಿಷ್ಟ್ ಮತ್ತು ನಂದಿನಿ ಕಶ್ಯಪ್ ರಾಷ್ಟ್ರೀಯ ತಂಡದ ಪರ ಚೊಚ್ಚಲ ಕರೆ ಪಡೆದಿದ್ದಾರೆ.
ಕಳೆದ ಆಸ್ಟ್ರೆಲಿಯಾ ಪ್ರವಾಸದ ಏಕದಿನ ಸರಣಿಯಿಂದ ಹೊರಬಿದ್ದಿದ್ದ ಶೆಫಾಲಿ ವರ್ಮ ಟಿ20 ಸರಣಿಗೂ ತಂಡದಲ್ಲಿ ಸ್ಥಾನ ಪಡೆದಿಲ್ಲ. ರನ್ಬರದಿಂದಾಗಿ ಶೆಫಾಲಿಯನ್ನು ಸಂಪೂರ್ಣವಾಗಿ ಕಡೆಗಣಿಸಿದಂತಾಗಿದೆ. ಯಸ್ತಿಕಾ ಭಾಟಿಯಾ, ಪ್ರಿಯಾ ಪೂನಿಯಾ ಮತ್ತು ಕನ್ನಡತಿ ಶ್ರೇಯಾಂಕಾ ಪಾಟೀಲ್ ಗಾಯದಿಂದಾಗಿ ಎರಡೂ ತಂಡಗಳಲ್ಲಿ ಸ್ಥಾನ ಪಡೆದಿಲ್ಲ.
https://twitter.com/BCCIWomen/status/1867579482795913337
ಇದನ್ನೂ ಓದಿ IND vs AUS: ಆಸೀಸ್ ವಿರುದ್ಧ ವಿಶೇಷ ದಾಖಲೆ ಬರೆದ ವಿರಾಟ್ ಕೊಹ್ಲಿ
ಟಿ20 ತಂಡ: ಹರ್ಮಾನ್ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದನಾ (ಉಪನಾಯಕಿ), ನಂದಿನಿ ಕಶ್ಯಪ್, ಜೆಮೀಮಾ ರೋಡ್ರಿಗಸ್, ರಿಚಾ ಘೋಷ್ (ವಿ.ಕೀ), ಉಮಾ ಛೇಟ್ರಿ (ವಿ.ಕೀ), ದೀಪ್ತಿ ಶರ್ಮ, ಸಜನಾ ಸಜೀವನ್, ರಾಘ್ವಿ ಬಿಷ್ಟ್, ರೇಣುಕಾ ಸಿಂಗ್, ಪ್ರಿಯಾ ಮಿಶ್ರಾ, ಟಿಟಾಸ್ ಸಾಧು, ಸೈಮಾ ಠಾಕೂರ್, ಮಿನ್ನು ಮಣಿ, ರಾಧಾ ಯಾದವ್.
ಏಕದಿನ ತಂಡ: ಹರ್ಮಾನ್ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದನಾ (ಉಪನಾಯಕಿ), ಪ್ರತಿಕಾ ರಾವಲ್, ಜೆಮೀಮಾ ರೋಡ್ರಿಗಸ್, ಹರ್ಲೀನ್ ಡಿಯೋಲ್, ರಿಚಾ ಘೋಷ್ (ವಿ.ಕೀ), ಉಮಾ ಛೇಟ್ರಿ (ವಿ.ಕೀ), ತೇಜಲ್ ಹಸಬ್ನಿಸ್, ದೀಪ್ತಿ ಶರ್ಮ, ಮಿನ್ನು ಮಣಿ, ಪ್ರಿಯಾ ಮಿಶ್ರಾ, ತನುಜಾ ಕನ್ವರ್, ಟಿಟಾಸ್ ಸಾಧು, ಸೈಮಾ ಠಾಕೂರ್, ರೇಣುಕಾ ಸಿಂಗ್.
https://www.youtube.com/watch?v=cdOlzIdEqs0