ಮೊಹಮ್ಮದ್ ಸಿರಾಜ್- ಹರ್ಷಿತ್ ರಾಣಾ ನಡುವೆ ಉತ್ತಮ ವೇಗಿಯನ್ನು ಆರಿಸಿದ ಪಾರ್ಥಿವ್ ಪಟೇಲ್!
Parthiv Patel on Mohammed Siraj: ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅನುಭವಿ ವೇಗಿ ಮೊಹಮ್ಮದ್ ಸಿರಾಜ್ ಬದಲಿಗೆ ಯುವ ವೇಗಿ ಹರ್ಷಿತ್ ರಾಣಾಗೆ ಸ್ಥಾನ ನೀಡಲು ಕಾರಣವೇನೆಂದು ಖ್ಯಾತ ಕ್ರಿಕೆಟ್ ವಿಶ್ಲೇಷಕ ಪಾರ್ಥೀವ್ ಪಟೇಲ್ ವಿಶ್ಲೇಷಿಸಿದ್ದಾರೆ. ತಮ್ಮ ಪದಾರ್ಪಣೆ ಪಂದ್ಯದಲ್ಲೇ ಹರ್ಷಿತ್ ರಾಣಾ ಮೂರು ವಿಕೆಟ್ ಪಡೆದು ಗಮನ ಸೆಳೆಯುವುದರ ಜೊತೆಗೆ ಹಲವು ದಾಖಲೆ ಬರೆದಿದ್ದರು.
![Harshit Rana-Mohammed Siraj](https://cdn-vishwavani-prod.hindverse.com/media/images/Harshit_Rana-Mohammed_Siraj.max-1280x720.jpg)
![Profile](https://vishwavani.news/static/img/user.png)
ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನ ಯುವ ವೇಗಿ ಹರ್ಷಿತ್ ರಾಣಾ (Harshit Rana) ಸಾಕಷ್ಟು ಪರಿಣಾಮಕಾರಿ ಬೌಲಿಂಗ್ ಪ್ರದರ್ಶನ ತೋರಿ ಗಮನ ಸೆಳೆದಿದ್ದಾರೆ. ಟೆಸ್ಟ್ ಹಾಗೂ ಟಿ20ಐನ ತಮ್ಮ ಮೊದಲ ಪಂದ್ಯದಲ್ಲೇ ಮೂರು ವಿಕೆಟ್ ಪಡೆದು ಮಿಂಚಿದ್ದ ರಾಣಾ, ಇಂಗ್ಲೆಂಡ್ ವಿರುದ್ಧ ನಾಗ್ಪುರದಲ್ಲಿ ನಡೆದಿದ್ದ ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲೂ 3 ವಿಕೆಟ್ ಸಾಧನೆ ಮೂಲಕ ದಾಖಲೆ ಬರೆದಿದ್ದರು.
ಏಕದಿನ ಕ್ರಿಕೆಟ್‌ನಲ್ಲಿ ಅನುಭವಿ ವೇಗಿ ಮೊಹಮ್ಮದ್ ಸಿರಾಜ್ (Mohammad Siraj)ಬದಲಿಗೆ ಯುವ ವೇಗಿ ಹರ್ಷಿತ್ ರಾಣಾ ಅವರನ್ನು ಬಿಸಿಸಿಐ ಮಣೆ ಹಾಕಿದೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಸಿರಾಜ್ ಬದಲಿಗೆ ಹರ್ಷಿತ್ ರಾಣಾಗೆ ಸ್ಥಾನ ನೀಡಿದ್ದೇಕೆ ಎಂಬುದನ್ನು ನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ.
ಇಂಗ್ಲೆಂಡ್ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ತಂಡದ ಆಯ್ಕೆ ಪ್ರಕ್ರಿಯೆಗೂ ಮುನ್ನ ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿಟ್ ಮ್ಯಾನ್ ರೋಹಿತ್ ಶರ್ಮಾ, ಇಂಗ್ಲೆಂಡ್ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಮೊಹಮ್ಮದ್ ಸಿರಾಜ್ ಅವರನ್ನು ಆಯ್ಕೆ ಮಾಡದೆ ಇರಲು ಕಾರಣವೇನೆಂದು ತಿಳಿಸಿದ್ದರು.
IND vs ENG: ಶುಭಮನ್ ಗಿಲ್ ಅಲ್ಲ! ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಲು ಚಿಂತನೆ!
"ಸಿರಾಜ್ ಹಳೆ ಚೆಂಡಿನಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಕಳೆದುಕೊಂಡಿದ್ದಾರೆ, ಅಲ್ಲದೆ ಅವರಿಂದ ಸ್ಥಿರ ಪ್ರದರ್ಶನ ಮೂಡಿಬರುತ್ತಿಲ್ಲ. ಪಂದ್ಯ ಗೆಲ್ಲಲು ನಮಗೆ ಹೊಸ ಚೆಂಡು, ಮಧ್ಯಮ ಹಾಗೂ ಅಂತಿಮ ಓವರ್‌ಗಳಲ್ಲಿ ವಿಕೆಟ್ ತೆಗೆದುಕೊಳ್ಳುವ ಸಾಮರ್ಥ್ಯವಿರುವ ಬೌಲರ್‌ಗಳ ಅವಶ್ಯಕತೆ ಇದೆ," ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಹರ್ಷಿತ್ ರಾಣಾ ಉತ್ತಮ ಬೌಲರ್: ಪಾರ್ಥೀವ್ ಪಟೇಲ್
ಭಾರತ ಹಾಗೂ ಇಂಗ್ಲೆಂಡ್ ತಂಡಗಳ ಮೊದಲ ಏಕದಿನ ಪಂದ್ಯದ ವೇಳೆ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಮಾಜಿ ಕ್ರಿಕೆಟಿಗ ಪಾರ್ಥೀವ್ ಪಟೇಲ್ ಉತ್ತರಿಸಿದ್ದಾರೆ.
"ಮೊಹಮ್ಮದ್ ಸಿರಾಜ್‌ಗಿಂತ ಹರ್ಷಿತ್ ರಾಣಾ ಉತ್ತಮ ಬೌಲರ್ ಆಗಿದ್ದಾರೆ. ಚೆಂಡು ಹೊಳಪು ಕಳೆದುಕೊಳ್ಳುತ್ತಿದ್ದಂತೆ ಸಿರಾಜ್ ತಮ್ಮ ಬೌಲಿಂಗ್ ಮೊನಚು ಕಳೆದುಕೊಳ್ಳುತ್ತಾರೆ. ಆದರೆ ರಾಣಾ ಹಳೆ ಚೆಂಡಿನಲ್ಲೂ ಪರಿಣಾಮಕಾರಿ ಬೌಲಿಂಗ್ ಪ್ರದರ್ಶಿಸಿ ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಆದ್ದರಿಂದಲೇ ಅವರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ," ಎಂದು ಪಾರ್ಥೀವ್ ಪಟೇಲ್ ಹೇಳಿದ್ದಾರೆ.
𝗠. 𝗢. 𝗢. 𝗗! ☺️👌
— BCCI (@BCCI) February 6, 2025
First ODI wicket for Harshit Rana ✅
First catch in ODIs for Yashasvi Jaiswal ✅
Follow The Match ▶️ https://t.co/lWBc7oPjmF#TeamIndia | #INDvENG | @IDFCFIRSTBank pic.twitter.com/ii2GO6uWOm
ದಾಖಲೆ ಬರೆದಿದ್ದ ಹರ್ಷಿತ್ ರಾಣಾ
ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆ ಮಾಡಿದ ಹರ್ಷಿತ್ ರಾಣಾ ಮೂರು ವಿಕೆಟ್ ಪಡೆದರೆ, ಇಂಗ್ಲೆಂಡ್ ವಿರುದ್ಧ ನಡೆದಿದ್ದ ನಾಲ್ಕನೇ ಟಿ20ಐ ಪಂದ್ಯದಲ್ಲಿ ಬದಲಿ ಆಟಗಾರನಾಗಿ ಅಖಾಡಕ್ಕಿಳಿದು ಮೂರು ವಿಕೆಟ್ ಪಡೆದಿದ್ದರು. ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲೂ ಕೂಡ ತಮ್ಮ ಪದಾರ್ಪಣೆ ಪಂದ್ಯದಲ್ಲಿ 3 ವಿಕೆಟ್ ಪಡೆದು ವಿಶಿಷ್ಟ ದಾಖಲೆ ಬರೆದಿದ್ದರು. ಅಲ್ಲದೇ ಒಂದೇ ಓವರ್‌ನಲ್ಲಿ 26 ರನ್ ಬಿಟ್ಟುಕೊಟ್ಟು ಅನಗತ್ಯ ದಾಖಲೆಯನ್ನೂ ತಮ್ಮ ಹೆಗಲೇರಿಸಿಕೊಂಡಿದ್ದರು.