IND vs ENG: ಶತಕ ಕಳೆದುಕೊಂಡ ಬಗ್ಗೆ ಶುಭಮನ್ ಗಿಲ್ ಪ್ರತಿಕ್ರಿಯೆ!
Shubman Gill on his hundred missed: ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಫೆಬ್ರವರಿ 6 (ಗುರುವಾರ) ಇಂಗ್ಲೆಂಡ್ ವಿರುದ್ಧ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ ಶುಭಮನ್ ಗಿಲ್ 87 ರನ್‌ಗೆ ವಿಕೆಟ್ ಒಪ್ಪಿಸಿದ್ದರು. ಈ ಕುರಿತು ಮಾತನಾಡಿದ ಟೀಮ್ ಇಂಡಿಯಾದ ಉಪ ನಾಯಕ, ನಾನು ಶತಕದ ಬಗ್ಗೆ ಯೋಚಿಸಿಯೇ ಇರಲಿಲ್ಲ ಎಂದಿದ್ದಾರೆ.
![Shubman Gill](https://cdn-vishwavani-prod.hindverse.com/media/images/Shubman_Gill.max-1280x720.jpg)
![Profile](https://vishwavani.news/static/img/user.png)
ನಾಗ್ಪುರ: ಇಂಗ್ಲೆಂಡ್ ವಿರುದ್ಧ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ ಶುಭಮನ್ ಗಿಲ್ (Shubman Gill) ಪಂದ್ಯ ಶ್ರೇಷ್ಠ ಪ್ರದರ್ಶನ ತೋರಿದ್ದರು. ಇದರ ಹೊರತಾಗಿಯೂ 87 ರನ್ ಗಳಿಸಿದ್ದ ಗಿಲ್, ಶತಕ ವಂಚಿತರಾಗಿದ್ದರು. ಕೇವಲ 13 ರನ್‌ಗಳಿಂದ ಶತಕ ಕಳೆದುಕೊಂಡ ಬಗ್ಗೆ ನನಗೆ ಯಾವುದೇ ಬೇಸರವಿಲ್ಲ ಎಂದು ಯುವ ಬ್ಯಾಟ್ಸ್‌ಮನ್ ತಿಳಿಸಿದ್ದಾರೆ.
ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದಿದ್ದ ಮೊದಲನೇ ಏಕದಿನ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಶುಭಮನ್ ಗಿಲ್ ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದ್ದರು. ಶ್ರೇಯಸ್ ಅಯ್ಯರ್ ಔಟಾದ ನಂತರ ಅವರು ತಮ್ಮ ರನ್ ವೇಗವನ್ನು ಹೆಚ್ಚಿಸಿದರು ಈ ಪಂದ್ಯದಲ್ಲಿ ಯುವ ಆಟಗಾರ ಶತಕ ಸಿಡಿಸುತ್ತಾರೆ ಎಂದು ಹಲವು ಮಾಜಿ ಕ್ರಿಕೆಟಿಗರು ಲೆಕ್ಕಾಚಾರ ಹಾಕಿದ್ದರು. ಆದರೆ ಗಿಲ್ 87 ರನ್ ಗಳಿಸಿ ಸಾಕಿಬ್ ಮಹಮೂದ್ ಎಸೆತದಲ್ಲಿ ಜೋಸ್ ಬಟ್ಲರ್‌ಗೆ ಕ್ಯಾಚ್ ನೀಡಿ ಏಕದಿನ ಸ್ವರೂಪದಲ್ಲಿ ಏಳನೇ ಶತಕದಿಂದ ವಂಚಿತರಾದರು.
IND vs ENG: ಇಂಗ್ಲೆಂಡ್ ವಿರುದ್ಧ ಗೆದ್ದು ಏಕದಿನ ಸರಣಿಯಲ್ಲಿ ಶುಭಾರಂಭ ಕಂಡ ಭಾರತ!
ಶತಕದ ಕುರಿತು ಚಿಂತಿಸಿರಲಿಲ್ಲ: ಶುಭಮನ್ ಗಿಲ್
ಪಂದ್ಯದಲ್ಲಿ ನಾನು ಶತಕ ಸಿಡಿಸುವ ಕುರಿತು ಯೋಚಿಸಿಯೇ ಇರಲಿಲ್ಲ, ಬದಲಿಗೆ ಎದುರಾಳಿ ತಂಡದ ಬೌಲರ್‌ಗಳ ವಿರುದ್ಧ ಪ್ರಾಬಲ್ಯ ಸಾಧಿಸಲು ಚಿಂತಿಸಿದ್ದೆ ಎಂದು ಶುಭಮನ್ ಗಿಲ್ ಹೇಳಿದ್ದಾರೆ.
"ಪಂದ್ಯದಲ್ಲಿ ಶತಕ ಸಿಡಿಸುವುದು ನನ್ನ ಗುರಿಯಾಗಿರಲಿಲ್ಲ, ಬದಲಿಗೆ ಎದುರಾಳಿ ತಂಡದ ಬೌಲರ್‌ಗಳ ವಿರುದ್ಧ ಪ್ರಾಬಲ್ಯ ಮೆರೆಯಲು ಹೊರಟಿದ್ದೆ. ಪಂದ್ಯ ಗೆಲ್ಲಲು ತಂಡಕ್ಕೆ 40-50 ರನ್‌ಗಳ ಅವಶ್ಯಕತೆ ಇರುವ ಸಮಯದಲ್ಲೂ ಕೂಡ ನಾನು ಇದೇ ರೀತಿಯ ಆಟ ಪ್ರದರ್ಶಿಸುತ್ತಿದ್ದೆ. ದೇಶಕ್ಕೆ ಪಂದ್ಯ ಗೆದ್ದುಕೊಟ್ಟಾಗ ನಮ್ಮಲ್ಲಿ ಉತ್ತಮ ಭಾವನೆ ಮೂಡುತ್ತದೆ," ಎಂದು ಟೀಮ್ ಇಂಡಿಯಾದ ಉಪನಾಯಕ ತಿಳಿಸಿದ್ದಾರೆ.
IND vs ENG: ಶುಭಮನ್ ಗಿಲ್ ಅಲ್ಲ! ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಲು ಚಿಂತನೆ!
ಶ್ರೇಯಸ್ ಅಯ್ಯರ್‌ಗೆ ಗಿಲ್ ಪ್ರಶಂಸೆ
ಸುದೀರ್ಘ ಕಾಲದ ನಂತರ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ ಪಂದ್ಯದಲ್ಲೇ 36 ಎಸೆತಗಳಲ್ಲೇ 59 ರನ್ ಸಿಡಿಸಿದ ಶ್ರೇಯಸ್ ಅಯ್ಯರ್ ಆಟವನ್ನು ಶುಭಮನ್ ಗಿಲ್ ಗಿಲ್ ಗುಣಗಾನ ಮಾಡಿದ್ದಾರೆ.
"ಅವರು (ಶ್ರೇಯಸ್ ಅಯ್ಯರ್) ತನ್ನ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ್ದರಿಂದ ನಾನು ಆಂಕರ್ (ನಿಧಾನಗತಿ) ಪಾತ್ರ ನಿಭಾಯಿಸಿದ್ದೆ. ಕ್ರೀಸ್‌ನ ಮತ್ತೊಂದು ತುದಿಯಲ್ಲಿರುವ ಬ್ಯಾಟರ್ ಆಕ್ರಮಣಕಾರಿ ಹೋರಾಟ ತೋರುತ್ತಿದ್ದರೆ, ಅವರಿಗೆ ಮತ್ತೊಬ್ಬ ಆಟಗಾರ ಬೆಂಬಲಿಸಬೇಕು. ಯಾವಾಗ ಶ್ರೇಯಸ್ ಅಯ್ಯರ್ ವಿಕೆಟ್ ಒಪ್ಪಿಸಿದರೋ, ಆಗ ಪಂದ್ಯ ಗೆಲ್ಲಿಸುವ ಜವಾಬ್ದಾರಿ ನನ್ನ ಮೇಲೆ ಬಿತ್ತು," ಎಂದು ಶುಭಮನ್ ಗಿಲ್ ಹೇಳಿದ್ದಾರೆ.
For his impressive 8⃣7⃣-run knock in the chase, vice-captain Shubman Gill bags the Player of the Match award! 👍 👍
— BCCI (@BCCI) February 6, 2025
Scorecard ▶️ https://t.co/lWBc7oPRcd#TeamIndia | #INDvENG | @IDFCFIRSTBank pic.twitter.com/7ERlZcopxR
ಭಾರತಕ್ಕೆ 1-0 ಮುನ್ನಡೆ
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 4 ವಿಕೆಟ್ ಗೆಲುವು ಸಾಧಿಸಿದ ಟೀಮ್ ಇಂಡಿಯಾ 1-0 ಮುನ್ನಡೆ ಸಾಧಿಸಿದೆ. 96 ಎಸೆತಗಳಲ್ಲಿ 14 ಬೌಂಡರಿ ಸಹಿತ 87 ರನ್ ಸಿಡಿಸಿದ ಶುಭಮನ್ ಗಿಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.