ಯುಗಾದಿ ಎಂಬುದು ಸಂಸ್ಕೃತದ ಪದ, ಯುಗಾದಿ ಎಂದರೆ ಹೊಸ ಯುಗ ಆರಂಭ
ಬಾಗೇಪಲ್ಲಿ ಪಟ್ಟಣದಲ್ಲಿರುವ ಶ್ರೀ ಕೋದಂಡರಾಮಸ್ವಾಮಿ ದೇವಾಲಯದಲ್ಲಿ ಏ.2 ರಿಂದ 6ನೇ ತಾರೀಖುವರೆಗೆ ಶ್ರೀರಾಮನವಮಿ ಹಬ್ಬದ ಪ್ರಯುಕ್ತ ಐದು ದಿನಗಳ ಶ್ರೀರಾಮನಾಮ ಕೋಟಿ ಜಪಯಜ್ಞ ಕಾರ್ಯಕ್ರಮ ಹಾಗೂ ಏ 6 ರಂದು ಶ್ರೀ ಸೀತರಾಮ ಕಲ್ಯಾಣೋತ್ಸವ ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನೇರವೇರಿಸಲಾಗುತ್ತದೆ

ಯುಗಾದಿ ಹಬ್ಬ ಬ್ರಹ್ಮನಿಗೆ ಸಂಬAಧಿಸದ ಹಬ್ಬವೆಂದು ಹಿಂದೂ ಪುರಾಣಗಳಲ್ಲಿ ತಿಳಿಸಿದ್ದು, ಯುಗಾದಿಯನ್ನು ಬ್ರಹ್ಮಾಂಡದ ಸೃಷ್ಠಿಯ ಪ್ರಕ್ರಿಯೆಯ ಮೊದಲ ದಿನವೆಂದು ಪರಿಗಣಿಸಲಾಗಿದ್ದು ಭಾರತದ ದೇಶದ ಹೊಸ ವರ್ಷದ ಹಬ್ಬವಾಗಿದೆ ಎಂದು ಪಂಡಿತ್ ಶೇಷ ಕುಮಾರ್ ತಿಳಿಸಿದರು.

ಬಾಗೇಪಲ್ಲಿ: ಯುಗಾದಿ ಹಬ್ಬ ಬ್ರಹ್ಮನಿಗೆ ಸಂಬಂಧಿಸದ ಹಬ್ಬವೆಂದು ಹಿಂದೂ ಪುರಾಣಗಳಲ್ಲಿ ತಿಳಿಸಿದ್ದು, ಯುಗಾದಿಯನ್ನು ಬ್ರಹ್ಮಾಂಡದ ಸೃಷ್ಠಿಯ ಪ್ರಕ್ರಿಯೆಯ ಮೊದಲ ದಿನವೆಂದು ಪರಿಗಣಿಸ ಲಾಗಿದ್ದು ಭಾರತದ ದೇಶದ ಹೊಸ ವರ್ಷದ ಹಬ್ಬವಾಗಿದೆ ಎಂದು ಪಂಡಿತ್ ಶೇಷ ಕುಮಾರ್ ತಿಳಿಸಿದರು.ಬಾಗೇಪಲ್ಲಿ ಪಟ್ಟಣದ ಹಳೇ ಎಸ್‌ಬಿಎಂ ರಸ್ತೆಯಲ್ಲಿರುವ ಶ್ರೀಕೋದಂಡರಾಮಸ್ವಾಮಿ ದೇವಾ ಲಯದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಶ್ರೀರಾಮ, ಲಕ್ಷ್ಮಣ, ಸೀತೆ, ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಪಂಡಿತ್ ಶೇಷ ಕುಮಾರ್ ನೇತೃತ್ವದಲ್ಲಿ ಪಂಚಾಂಗ ಶ್ರವಣ ಕಾರ್ಯಕ್ರಮ ನೇರವೇರಿಸಿ ಭಕ್ತಾದಿಗಳಿಗೆ ಬೇವು, ಬೆಲ್ಲ ಹಂಚಿ ಯುಗಾದಿ ಹಬ್ಬವನ್ನು ಆಚರಿಸಿ ಮಾತನಾಡಿ, ಶೃಂಗೇರಿಯ ಜದ್ಗುರು ಭಾರತೀಯ ತೀರ್ಥ ಮಹಾಸ್ವಾಮಿಗಳು 75 ವರ್ಷ ಪೂರ್ಣಗೊಳಿಸಿರುವ ಸತ್ಸಂಗ ಹಿನ್ನಲೆಯಲ್ಲಿ ಹೊಸ ವರ್ಷದ ಯುಗಾದಿ ಹಬ್ಬದ ಪಂಚಾಂಗ ಶ್ರವಣ ನೆರವೇರಿಸಿದ್ದೇವೆ, ಯುಗಾದಿ ಎಂಬುದು ಸಂಸ್ಕೃತದ ಪದವಾಗಿದ್ದು ಯುಗಾದಿ ಎಂದರೆ ಹೊಸ ಯುಗ ಆರಂಭ ಎಂದು ಅರ್ಥ, ಯುಗಾದಿ ಹಬ್ಬ ನಾಡಿನ ಜನತೆಗೆ ಹೊಸ ತನದ ಜತೆಗೆ ಕಷ್ಟ, ಸುಖಗಳನ್ನು ಸಮಾನವಾಗಿ ಸ್ವೀಕರಿಸಿ ಎಂಬ ಸಂದೇಶ ನೀಡಿ ಬೇವು, ಬೆಲ್ಲ ಸವಿಯುವುದರ ಮೂಲಕ ಸೂಚಿಸುತ್ತದೆ ಎಂದರು.
ಇದನ್ನೂ ಓದಿ: Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ
ಬಾಗೇಪಲ್ಲಿ ಪಟ್ಟಣದಲ್ಲಿರುವ ಶ್ರೀ ಕೋದಂಡರಾಮಸ್ವಾಮಿ ದೇವಾಲಯದಲ್ಲಿ ಏ.2 ರಿಂದ 6ನೇ ತಾರೀಖುವರೆಗೆ ಶ್ರೀರಾಮನವಮಿ ಹಬ್ಬದ ಪ್ರಯುಕ್ತ ಐದು ದಿನಗಳ ಶ್ರೀರಾಮನಾಮ ಕೋಟಿ ಜಪಯಜ್ಞ ಕಾರ್ಯಕ್ರಮ ಹಾಗೂ ಏ 6 ರಂದು ಶ್ರೀ ಸೀತರಾಮ ಕಲ್ಯಾಣೋತ್ಸವ ಮಹಾ ಮಂಗಳಾ ರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನೇರವೇರಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಬಾಗೇ ಪಲ್ಲಿ, ಚೇಳೂರು, ಗುಡಿಬಂಡೆ ತಾಲೂಕು ವ್ಯಾಪ್ತಿಯ 120ಕ್ಕೂ ಹೆಚ್ಚು ಭಜನಾ ಮಂಡಳಿ ತಂಡಗಳ ಸದಸ್ಯರು ಹಾಗೂ ಪತಾಂಜಲಿ ಯೋಗ ಶಿಕ್ಷಣ ಸಮಿತಿ, ಗೀತಾ ಪರಿವಾರ, ಭಾಗವತ ಸತ್ಸಂಗ ಸಮಿತಿ, ಆರ್ಯವೈಶ್ಯ ಮಂಡಳಿ ಸದಸ್ಯರು ಭಾಗವಹಿಸಲಿದ್ದಾರೆಂದು ಸಮಿತಿಯ ಸದಸ್ಯರು ಕರಪತ್ರಗಳನ್ನು ಬಿಡುಗಡೆಗೊಳಿಸಿ ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀಕೋದಂಡರಾಮಸ್ವಾಮಿ ದೇವಾಲಯ ಸೇವಾ ಸಮಿತಿ ಸದಸ್ಯರಾದ ವೈ.ಶ್ರೀನಿವಾಸರೆಡ್ಡಿ, ಡಾ.ರವೀಂಧ್ರ, ಜೆ.ಎನ್.ನಂಜಪ್ಪ, ಎಸ್.ಮುನಿರಾಮಯ್ಯ, ಕೆ.ನರಸಿಂಹಪ್ಪ, ಕೃಷ್ಣಪ್ಪ, ನಂಜುಂಡಪ್ಪ, ಕೇಶವರೆಡ್ಡಿ, ಗುಡಿಬಂಡೆ ಅಶ್ವತ್ಥಪ್ಪ, ವೆಂಕಟರವಣಪ್ಪ ಹಾಗೂ ಭಕ್ತಾಧಿಗಳು ಇದ್ದರು.